ವಿಲನ್ ಜೈದೇವ್‌ನನ್ನು ಬಂಧಿಸಲು ಮಲ್ಲಿ ಮತ್ತು ಭೂಮಿಕಾ ಹೂಡಿದ ಹನಿಟ್ರ್ಯಾಪ್ ವಿಫಲವಾಗಿದೆ. ಪೊಲೀಸ್ ಅಧಿಕಾರಿ ಮಧುರಾಳ ಒಂದು ಸಣ್ಣ ಅಜಾಗರೂಕತೆಯಿಂದಾಗಿ, ಆಕೆಯ ನಿಜಬಣ್ಣ ಜೈದೇವ್‌ಗೆ ತಿಳಿದುಹೋಗಿದ್ದು, ಇಡೀ ಯೋಜನೆ ತಲೆಕೆಳಗಾಗಿದೆ.
ಅಮೃತಧಾರೆ ಸೀರಿಯಲ್ ವಿಲನ್ ಆಗಿರೋ ಜೈದೇವ್ ಬಂಧನಕ್ಕೆ ಮಲ್ಲಿ ಮತ್ತು ಭೂಮಿಕಾ ಅತ್ಯಂತ ಜಾಣ್ಮೆಯಿಂದ ಹನಿಟ್ರ್ಯಾಪ್ ಜಾಲ ಬೀಸಿದ್ದರು. ಇದಕ್ಕಾಗಿ ಪೊಲೀಸ್ ಆಗಿದ್ದ ಮಧುರಾಳನ್ನು ಮಲ್ಲಿ ನೇಮಿಸಿದ್ದಳು. ಎಲ್ಲದಕ್ಕೂ ಮಲ್ಲಿ ಸಹಾಯ ಕೇಳುವ ಮೂಲಕ ಪೆದ್ದಿ ಅನ್ನಿಸಿಕೊಂಡಿದ್ದ ಮಧುರಾ, ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾಳೆ.
25
ಮಧುರಾ ರಚಿಸಿದ ವ್ಯೂಹ
ಹೌದು, ಜೈದೇವ್ ವಿಶ್ವಾಸ ಗಳಿಸಲು ಆತನ ಮನೆಯಲ್ಲಿ ಮಧುರಾ ಆಶ್ರಯ ಪಡೆದುಕೊಂಡಿದ್ದಳು. ಜೈದೇವ್‌ಗಾಗಿ ಹಬ್ಬ ಆಚರಿಸಿ ರುಚಿಯಾದ ಅಡುಗೆ ಮಾಡಿದ್ದಳು. ಇನ್ನೇನು ಮಧುರಾ ರಚಿಸಿದ ವ್ಯೂಹದಲ್ಲಿ ಜೈದೇವ್ ಸಿಲುಕುತ್ತಾನೆ ಅನ್ನೋವಷ್ಟರಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ತನ್ನ ಮನೆಯಲ್ಲಿರೋದು ಮಧುರಾ, ಪೊಲೀಸ್ ಅನ್ನೋ ಸತ್ಯ ಜೈದೇವ್‌ಗೆ ಗೊತ್ತಾಗಿದೆ.
35
ಪೆದ್ದಿ ಮಧುರಾ
ಪೆದ್ದಿ ಮಧುರಾ, ತನ್ನ ಮೊಬೈಲ್ ಬೆಡ್ ಮೇಲೆಯೇ ಇಟ್ಟು ರೂಮ್ ಬಾಗಿಲು ಹಾಕಿಕೊಳ್ಳದೇ ಎಲ್ಲೋ ಹೋಗಿದ್ದಾಳೆ. ಈ ವೇಳೆ ಮಧುರಾಗೆ ಮಲ್ಲಿ ಕಾಲ್ ಮಾಡಿದ್ದಾಳೆ. ಮೊಬೈಲ್ ರಿಂಗ್ ಆಗುತ್ತಿರೋದನ್ನು ನೋಡಿದ ಜೈದೇವ್‌ಗೆ, ಈ ನಂಬರ್ ಎಲ್ಲೋ ನೋಡಿದ ನೆನಪು ಆಗಿ ಚೆಕ್ ಮಾಡಿದಾಗ, ಅದು ತನ್ನ ಮಾಜಿ ಪತ್ನಿ, ಐಪಿಎಸ್ ಮಲ್ಲಿ ಎಂದು ಗೊತ್ತಾಗಿದೆ. ಮತ್ತೆ ಕಾಲ್ ರೆಕಾರ್ಡ್ ಚೆಕ್ ಮಾಡಿದಾಗ ಜೀವಾ ಮತ್ತು ಭೂಮಿಕಾ ಜೊತೆಯಲ್ಲಿಯೂ ಮಧುರಾ ಮಾತನಾಡಿರುವ ವಿಷಯ ಜೈದೇವ್ ಮುಂದೆ ಬಯಲಾಗಿದೆ.
ಇಷ್ಟಕ್ಕೆ ಸುಮ್ಮನಾಗದ ಮಧುರಾಳ ಮೊಬೈಲ್‌ನಲ್ಲಿ ಮತ್ತಷ್ಟು ಹುಡುಕಾಟ ನಡೆಸಿದಾಗ, ತನ್ನ ಮಾತುಗಳೆಲ್ಲಾ ರೆಕಾರ್ಡ್ ಮಾಡಿಕೊಂಡಿರುವ ಸೀಕ್ರೆಟ್ ಸಹ ತಿಳಿದಿದೆ. ಹಾಗಾದ್ರೆ ಈ ಮಧುರಾ ಯಾರು ಎಂದು ಆಕೆ ಬ್ಯಾಗ್ ತಡಕಾಡಿದಾಗ ಆಕೆಯ ಪೊಲೀಸ್ ಐಡೆಂಟಿಟಿ ಕಾರ್ಡ್ ಜೈದೇವ್‌ಗೆ ಸಿಕ್ಕಿದೆ. ಇಲ್ಲಿಗೆ ತನ್ನನ್ನು ಟ್ರ್ಯಾಪ್ ಮಾಡಲು ಮಲ್ಲಿ ಮಾಡಿರೋ ಪ್ಲಾನ್ ರಿವೀಲ್ ಆಗಿದೆ.
55
ತಾಳ್ಮೆ ಅನ್ನೋದೇ ಇಲ್ಲ
ಇಂದಿನ ಪ್ರೋಮೋ ನೋಡಿದ ವೀಕ್ಷಕರು, ಮಧುರಾ ಪೆದ್ದಿ ಅನ್ನೋದು ಗೊತ್ತಾಗಿತ್ತು. ಈ ಮಲ್ಲಿ ಮತ್ತು ಭೂಮಿಕಾಗೂ ಕೊಂಚ ತಾಳ್ಮೆ ಅನ್ನೋದೇ ಇಲ್ಲ. ಪದೇ ಪದೇ ಕಾಲ್ ಮಾಡೋದ್ಯಾಕೆ ಎಂದು ಬೇಸರ ಹೊರ ಹಾಕಿದ್ದಾರೆ. ಈಗ ನೋಡಿ ಇಷ್ಟು ದಿನ ಮಾಡಿದ ಪ್ಲಾನ್ ಎಲ್ಲಾ, ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ ಆಯ್ತು ಅಂತಾ ಮಾತನಾಡಿಕೊಳ್ಳುತ್ತಿದ್ದಾರೆ. ಮುಂದೆ ಮಧುರಾ ಹೇಗೆ ಜೈದೇವ್‌ನಿಂದ ಎಸ್ಕೇಪ್ ಆಗ್ತಾಳೆ ಅನ್ನೋದರ ಬಗ್ಗೆ ಕುತೂಹಲ ಮೂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.