ನಾನು ಮೂರು ವಿಷಯಗಳಲ್ಲಿ ಸಿಕ್ಕಾಪಟ್ಟೆ ವೀಕ್; ಬಿಗ್‌ಬಾಸ್‌ಗೆ ಹೋಗಲ್ಲ ಎಂದ ಜಿಮ್ ಸೀನ

Published : Jun 08, 2026, 01:18 PM IST

ಕನ್ನಡ ಬಿಗ್‌ಬಾಸ್ ಸೀಸನ್ 13ರ ಸ್ಪರ್ಧಿಗಳ ಲಿಸ್ಟ್‌ನಲ್ಲಿ 'ಅಣ್ಣಯ್ಯ' ಸೀರಿಯಲ್ ಖ್ಯಾತಿಯ ನಟ ಸುಷ್ಮಿತ್ ಜೈನ್ ಹೆಸರು ಕೇಳಿಬಂದಿದೆ. ಈ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ಮೂರು ಕಾರಣಗಳಿಂದ ಶೋಗೆ ಹೋಗುವುದಿಲ್ಲ ಎಂದಿದ್ದಾರೆ. 

PREV
16
ಕನ್ನಡ ಬಿಗ್‌ಬಾಸ್ ಸೀಸನ್ 13

ಕನ್ನಡ ಬಿಗ್‌ಬಾಸ್ ಸೀಸನ್ 13ರ ಪ್ರೋಮೋ ಬಿಡುಗಡೆಯಾಗ್ತಿದ್ದಂತೆ ಈ ಬಾರಿ ಯಾರೆಲ್ಲಾ ಸ್ಪರ್ಧಿಗಳಾಗಿ ಬರಬಹುದು ಎಂಬ ಕುತೂಹಲದ ಪರದೆ ತೆರೆದುಕೊಂಡಿದೆ. ಈಗಾಗಲೇ ಒಂದಿಷ್ಟು ಹೆಸರು ಮುನ್ನಲೆಗೆ ಬಂದಿವೆ. ಇದೀಗ ತಮ್ಮ ಹೆಸರು ಕೇಳಿ ಬಂದ ಹಿನ್ನೆಲೆ ನಟ ಸುಷ್ಮಿತ್ ಜೈನ್ ಸ್ಪಷ್ಟನೆ ನೀಡಿದ್ದಾರೆ. ಹಾಗೆಯೇ ಮೂರು ಕಾರಣಗಳಿಂದ ತಾವು ಬಿಗ್‌ಬಾಸ್ ರಿಯಾಲಿಟಿ ಶೋಗೆ ಹೋಗಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

26
ಅಣ್ಣಯ್ಯ ಸೀರಿಯಲ್‌ನ ಜಿಮ್ ಸೀನ

ಸುಷ್ಮಿತ್ ಜೈನ್ ಸದ್ಯ ಜೀ ಕನ್ನಡ ವಾಹಿನಿಯ ಅಣ್ಣಯ್ಯ ಸೀರಿಯಲ್‌ನಲ್ಲಿ ಜಿಮ್ ಸೀನನಾಗಿ ನಟಿಸುತ್ತಿದ್ದಾರೆ. ಜಿಮ್ ಸೀನ್ ಪಾತ್ರ ಜನಪ್ರಿಯವಾಗಿದ್ದು, ಸೀರಿಯಲ್‌ನ ಪ್ರಮುಖ ಭಾಗವಾಗಿದೆ. ಈ ನಡುವೆ ಸೀರಿಯಲ್‌ನಿಂದ ಹೊರಬಂದು ಬಿಗ್‌ಬಾಸ್‌ಗೆ ಹೋಗ್ತಾರೆ ಎಂಬ ವದಂತಿಗೆ ನಟ ಸುಷ್ಮಿತ್ ಜೈನ್ ಅವರು ಯುಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ.

36
ಬಿಗ್‌ಬಾಸ್ ಆಟ ಹೇಗೆ ಇರುತ್ತೆ?

ಸೀಸನ್ 12ರ ವೇಳೆಯೂ ನನ್ನ ಹೆಸರು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬಂದಿತ್ತು. ಇದನ್ನು ನೋಡಿದ ಗೆಳೆಯರು ನನಗೆ ವಿಶ್ ಮಾಡಿದ್ದರು. ಏನೋ ಒಂದು ಕೆಲಸ ಮಾಡಿಕೊಂಡಿದ್ದೇನೆ. ನಾನು ಯಾವುದೇ ಶೋಗೆ ಹೋಗ್ತಿಲ್ಲ ಎಂದು ಎಲ್ಲರಿಗೂ ಹೇಳಿದೆ ಎಂದ ಸುಷ್ಮಿತ್ ಜೈನ್, ಮುಂದುವರಿದು ಬಿಗ್‌ಬಾಸ್ ಆಟ ಹೇಗೆ ಎಂಬುದರ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

46
ನಾನು ತುಂಬಾ ಕೋಪಿಷ್ಟ

ನನಗೆ ಬಿಗ್‌ಬಾಸ್‌ ಶೋಗೆ ಹೋಗಲು ಭಯ. ನಾನು ತುಂಬಾ ಕೋಪಿಷ್ಟ. (Short Tempered) ನಾನು ಎಲ್ಲಾ ಕಡೆ ಮತ್ತು ಎಲ್ಲಾ ಸಂದರ್ಭಗಳಲ್ಲಿ ಇಷ್ಟೊಂದು ತಾಳ್ಮೆಯಿಂದಿರಲ್ಲ. ಬಿಗ್‌ಬಾಸ್‌ಗೆ ಹೋಗಬೇಕೆಂದ್ರೆ ಕೈ ಮತ್ತು ಬಾಯಿಯನ್ನು ಕಟ್ಟಿಟ್ಟು, ನಮ್ಮ ಬುದ್ದಿಯನ್ನು ಹೆಚ್ಚು ಮಾಡಬೇಕು. ಆದ್ರೆ ನಾನು ಈ ಮೂರು ವಿಷಯದಲ್ಲಿಯೂ ವೀಕ್. ಹಾಗಾಗಿ ಬಿಗ್‌ಬಾಸ್‌ಗೆ ಹೋಗಲು ನನಗೆಯೇ ಭಯ ಎಂದು ಸುಷ್ಮಿತ್ ಜೈನ್ ಹೇಳಿಕೊಂಡಿದ್ದಾರೆ.

56
ನಾನು ಒಂದು ದಿನವೂ ಬಿಗ್‌ಬಾಸ್ ಮನೆಯಲ್ಲಿರಲ್ಲ

ನನ್ನ ಅಮ್ಮಾ ಮತ್ತು ಫ್ರೆಂಡ್ಸ್, ನೀನು ಒಂದು ದಿನವೂ ಬಿಗ್‌ಬಾಸ್ ಮನೆಯಲ್ಲಿರಲ್ಲ. ಸುದೀಪ್ ಸರ್ ನಿನ್ನನ್ನು ಹೊಡೆದು ಹೊರಗೆ ಹಾಕ್ತಾರೆ ಎಂದು ಹೇಳುತ್ತಾರೆ. ನಿನಗಿರೋ ಕೋಪಕ್ಕೆ ಅಲ್ಲಿ ಯಾರಿಗೋ ನೀನು ಹೊಡಿತೀಯಾ? ಅವರು ಹೊರಗೆ ಬಂದು ನಿನ್ನನ್ನು ಹೊಡಿತಾರೆ ಎಂದು ಮನೆಯವರು ಹೇಳ್ತಾರೆ. ನನಗೆ ಕೋಪ ಬಂದ್ರೆ ನನ್ನ ಕೈ-ಬಾಯಿ ಹತೋಟಿಯಲ್ಲಿರಲ್ಲ ಎಂದರು.

ಇದನ್ನೂ ಓದಿ: ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್ ಮನೆಯಲ್ಲಿ ಸಂಭ್ರಮ; ಹಳ್ಳಿಕಾರ್ ಹಸುವಿಗೆ ಅದ್ದೂರಿ ಸೀಮಂತ ಶಾಸ್ತ್ರ!

66
ಒಳ್ಳೆ ಸಂಭಾವನೆ ಸಿಕ್ಕರೆ ಟ್ರೈ ಮಾಡಬಹುದು

ಇದೇ ಸಂದರ್ಶನದಲ್ಲಿ ಒಂದೊಳ್ಳೆಯ ಸಂಭಾವನೆ ನೀಡಿದ್ರೆ ಟ್ರೈ ಮಾಡಬಹುದು. ಅದೊಂದು ವಿಭಿನ್ನ ಮತ್ತು ವಿಶೇಷ ಕ್ಷೇತ್ರವಾಗಿದೆ. ಈಗ ಸದ್ಯಕ್ಕೆ ಯಾವುದೇ ಆಫರ್‌ಗಳು ಬಂದಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಗ್‌ಬಾಸ್‌ ಗೆ ಹೋಗುವ ಇಂಗಿತವನ್ನು ಜಿಮ್ ಸೀನ್ ವ್ಯಕ್ತಪಡಿಸಿದರು. ಕನ್ನಡ ಬಿಗ್‌ಬಾಸ್ ಸೀಸನ್ 13ರ ಪ್ರೋಮೋ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಕೆಲವೇ ದಿನಗಳಲ್ಲಿ ಆರಂಭವಾಗುವ Bigg Boss Kannada 13 ಶೋಗಾಗಿ, ಅಂತ್ಯ ಆಗುವ 3 ಧಾರಾವಾಹಿಗಳು ಯಾವುವು?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories