Nandagokula Serial: ಇದ್ದಕ್ಕಿದ್ದಂತೆ ಬದಲಾದ ಹಿರಿ ಸೊಸೆ… ಸೀರಿಯಲ್ ಅಂತ್ಯವಾಗುವ ಸೂಚನೇನಾ!

Published : Jun 08, 2026, 12:54 PM IST

Nandagokula: ನಂದಗೋಕುಲ ಧಾರಾವಾಹಿಯಲ್ಲಿ ಮನೆಯಲ್ಲಿ ಬಿರುಕು ಮೂಡಿಸಲು ಕಾರಣ ಹುಡುಕುತ್ತಿದ್ದ, ಹಿರಿಯ ಸೊಸೆ ಪ್ರಿಯಾ ಇದೀಗ ಗಿರಿಜಾ ಬಳಿ ಮೀನಾ ಮತ್ತು ಅಮ್ಮುವನ್ನು ಕ್ಷಮಿಸುವಂತೆ ಕೇಳಿದ್ದು, ಅತ್ತೆಯ ಮನಸು ಬದಲಾಯಿಸುವಂತೆ ಮಾಡಿದ ಸೊಸೆ ಮೇಲೆ ವೀಕ್ಷಕರಿಗ್ಯಾಕೋ ಅನುಮಾನ. 

PREV
16
ನಂದಗೋಕುಲ

ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ನಂದಗೋಕುಲ. ಕೂಡು ಕುಟುಂಬದ ಕಥೆಯಲ್ಲಿ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದ್ದು, ಇದನ್ನು ನೋಡಿದ ಮೇಲೆ ವೀಕ್ಷಕರಿಗೆ ಸೀರಿಯಲ್ ಮೇಲೆ ಹಾಗೂ ಸೀರಿಯಲ್ ಪಾತ್ರದ ಮೇಲೆ ಸಂಶಯ ಮೂಡಿದೆ. ಅಷ್ಟಕ್ಕೂ ಧಾರಾವಾಹಿಯಲ್ಲಿ ಅಂತದ್ದೇನು ಟ್ವಿಸ್ಟ್ ಸಿಕ್ಕಿದೆ? ವೀಕ್ಷಕರಿಗೆ ಬಂದಿರುವ ಸಂಶಯ ಏನು?

26
ಸೊಸೆಯಂದಿರ ಮೇಲೆ ಅತ್ತೆ ಗಿರಿಜಾ ಮುನಿಸು

ಸೊಸೆಯಂದಿರನ್ನು ಮಕ್ಕಳಿಗಿಂತ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದ ಅತ್ತೆ ಗಿರಿಜಾ ಬಳಿಯ ವಿಷಯ ಮುಚ್ಚಿಟ್ಟು, ಮೀನಾ ಮತ್ತು ಅಮ್ಮು ಪ್ಲ್ಯಾನ್ ಮಾಡಿ, ಅಮ್ಮು ಟ್ಯೂಶನ್ ಕೆಲಸಕ್ಕೆ ಹೋಗುವಂತೆ ಮಾಡಿದ್ದಾರೆ. ಅಮ್ಮು ಚಿಕ್ಕಪ್ಪನಿಗೆ ವಿಷಯ ಗೊತ್ತಾಗಿ, ಕೊನೆಗೆ ಇದರಿಂದ ನಂದನಿಗೆ ಅವಮಾನ ಆಗುವಂತೆ ಮಾಡಿದ್ದಾನೆ. ಇದರಿಂದಾಗಿ ಅತ್ತೆ ಗಿರಿಜಾ ಸೊಸೆಯಂದಿರ ಮೇಲೆ ಮುನಿಸಿಕೊಂಡಿದ್ದಾರೆ.

36
ಬದಲಾದ ಹಿರಿಯ ಸೊಸೆ ಪ್ರಿಯಾ

ಇಲ್ಲಿವರೆಗೆ ಮೀನಾ ಮತ್ತು ಅಮೂಲ್ಯ ಬಗ್ಗೆ ಯಾವುದೇ ಸುದ್ದಿ ಸಿಕ್ಕಿದರೂ ಅದನ್ನು ತಪ್ಪದೇ ಮಾವನಿಗೆ ತಲುಪಿಸಿ, ಮಾವ ಸೊಸೆಯಂದಿರು ಮತ್ತು ಮಕ್ಕಳ ಮೇಲೆ ಸಿಡುಕುವಂತೆ ಏನಾದರೊಂದು ಕಿತಾಪತಿ ಮಾಡುತ್ತಿದ್ದವಳು ಪ್ರಿಯಾ. ಆದರೆ ಮಾಧವನ ಜೊತೆ ಹನಿಮೂನ್ ಗೆ ಹೋಗಿ ಬರುತ್ತಿದ್ದಂತೆ ಪ್ರಿಯಾ ಸಂಪೂರ್ಣವಾಗಿ ಬದಲಾಗಿದ್ದಾಳೆ.

46
ಅತ್ತೆಯ ಮುಂದೆ ತಂಗಿಯರಿಗಾಗಿ ವಕಾಲತ್ತು

ಇದೀಗ ಗಿರಿಜಾ ಬಳಿ ಹೋಗಿ ಪ್ರಿಯಾ, ನಿಮ್ಮದು ಹಾಗೂ ಅಮ್ಮು-ಮೀನಾರದ್ದು ಅತ್ತೆ-ಸೊಸೆಯರಿಗಿಂತ ಸ್ನೇಹಿತರಂತಹ ಸಂಬಂಧ. ಈ ರೀತಿ ಮಾತು ಬಿಟ್ಟಿರುವುದು ಸರಿಯಲ್ಲ. ಈ ಒಂದು ಸಲ ಅವರನ್ನು ಕ್ಷಮಿಸಿ ಬಿಡಿ ಎಂದು ರಿಕ್ವೆಸ್ಟ್ ಮಾಡುತ್ತಾಳೆ. ಕೊನೆಗೂ ಪ್ರಿಯಾ ಮಾತಿಗೆ ಒಪ್ಪಿ ಅಮ್ಮು ಮತ್ತು ಮೀನಾ ಬಳಿ ಮಾತನಾಡಲು ಗಿರಿಜಾ ಒಪ್ಪಿಗೆ ಸೂಚಿಸಿದ್ದಾರೆ.

56
ಪ್ರಿಯಾ ಅಕ್ಕನಿಗೆ ತಂಗಿಯರ ಪ್ರೀತಿಯ ಅಪ್ಪುಗೆ

ಅತ್ತೆ ತಮ್ಮ ಬಳಿ ಮಾತನಾಡುವಂತೆ ಮಾಡಿದ ಪ್ರಿಯಾ ಅಕ್ಕನಿಗೆ ತಂಗಿಯರಿಬ್ಬರು ಖುಷಿಯಿಂದ ಅಪ್ಪಿಕೊಂಡಿದ್ದಾರೆ. ಪ್ರಿಯಾ ಕೂಡ ಸಂತೋಷದಿಂದ ಅವರಿಬ್ಬರನ್ನು ತನ್ನ ತೋಳುಗಳಿಂದ ಬಂಧಿಸಿದ್ದಾಳೆ. ಆದರೆ ಇದನ್ನೆಲ್ಲಾ ನೋಡುತ್ತಿರುವ ವೀಕ್ಷಕರಿಗೆ ಮಾತ್ರ ಒಂದು ಕಡೆ ಖುಷಿ, ಮತ್ತೊಂದು ಕಡೆ ಯಾಕೋ ಸಂಶಯ ಮೂಡಿದೆ.

66
ವೀಕ್ಷಕರು ಏನು ಹೇಳುತ್ತಿದ್ದಾರೆ?

ಬದಲಾದ ಪ್ರಿಯಾಳನ್ನು ನೋಡಿ ಒಂದಷ್ಟು ವೀಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಈಗ ಧಾರಾವಾಹಿಗೆ ನಂದಗೋಕುಲ ಎಂದು ಹೆಸರಿಟ್ಟದ್ದಕ್ಕೂ ಸಾರ್ಥಕ ಆಯ್ತು ಎಂದಿದ್ದಾರೆ. ಆದರೆ ಇನ್ನೂ ಕೆಲವರು ಪ್ರಿಯಾ ಬದಲಾವಣೆ ಯಾಕೋ ಮೋಸದಂತೆ ಕಾಣಿಸುತ್ತಿದೆ ಎಂದಿದ್ದಾರೆ. ಮತ್ತೆ ಕೆಲವರು ಎಲ್ಲಾ ಸರಿ ಆಗ್ತಿದೆ ಅಂದ್ರೆ, ಶೀಘ್ರದಲ್ಲೇ ನಂದಗೋಕುಲ ಧಾರಾವಾಹಿ ಮುಕ್ತಾಯವಾಗಲಿದೆ ಎಂದು ಅರ್ಥ ಅನ್ನೋದನ್ನು ಹೇಳಿದ್ದಾರೆ. ಇದರಲ್ಲಿ ಯಾವುದು ನಿಜಾ ಅನ್ನೋದು ಮಾತ್ರ ಗೊತ್ತಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories