ಬಿಗ್‌ಬಾಸ್ 12ರ ಮೊದಲ ವಾರದ ಎಲಿಮಿನೇಷನ್ ಬಗ್ಗೆ ಬಿಗ್‌ಬಾಸ್ 11ರ ಸ್ಪರ್ಧಿ ಐಶ್ವರ್ಯ ಸಿಂಧೋಗಿ ಬೇಸರ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣವಿಲ್ಲದೆ ಸ್ಪರ್ಧಿಗಳನ್ನು ಹೊರಹಾಕುವುದು ಅನ್ಯಾಯ ಎಂದಿರುವ ಅವರು, ತಮ್ಮ ಸೀಸನ್‌ನ ಅನುಭವವನ್ನೂ ಹಂಚಿಕೊಂಡಿದ್ದಾರೆ.
ಬಿಗ್‌ಬಾಸ್ 12 (Bigg Boss Kannada 12) ಆರಂಭವಾದ ಕೆಲವೇ ದಿನಗಳಲ್ಲಿ ಇಬ್ಬರು ಎಲಿಮಿನೇಟ್ ಆಗಿ ಹೊರಕ್ಕೆ ಬಂದಿದ್ದಾರೆ. ಆರ್.ಜೆ.ಅಮಿತ್ ಹಾಗೂ ಕರಿಬಸಪ್ಪಾ ಇಬ್ಬರೂ ಕೂಡ ಮೊದಲನೇ ವಾರವೇ ಎಲಿಮಿನೇಟ್ ಆಗಿದ್ದಾರೆ. ಮೊದಲ ಒಂದಷ್ಟು ವಾರ ಎಲಿಮಿನೇಟ್ ಮಾಡುವುದಕ್ಕಾಗಿಯೇ ಯಾವುದೇ ಹೆಚ್ಚು ಕಾಂಟ್ರವರ್ಸಿ ಇಲ್ಲದ ಒಂದಷ್ಟು ಮಂದಿಯನ್ನು ಮನೆಯೊಳಕ್ಕೆ ಕಳುಹಿಸಲಾಗುತ್ತದೆ ಎನ್ನುವ ವಿಷ್ಯ ಇದಾಗಲೇ ಪ್ರತಿಬಾರಿಯೂ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿರುವ ನಡುವೆಯೇ, ವೋಟಿಂಗ್ ಕಡಿಮೆ ಇದೆ ಎನ್ನುವ ಕಾರಣ ನೀಡಿ ಇವರಿಬ್ಬರನ್ನೂ ಮನೆಗೆ ಕಳುಹಿಸಲಾಗುತ್ತಿದೆ.
27
ರೀಸನ್ನೇ ಇರಲ್ಲ, ಎಲಿಮಿನೇಟ್ ಆಗ್ತಾರೆ
ಬಿಗ್‌ಬಾಸ್ ಮನೆಯಿಂದ ಮೊದಲನೇ ದಿನವೇ ಔಟ್ ಆಗಿದ್ದ ರಕ್ಷಿತಾ ಶೆಟ್ಟಿ, ಬಿಗ್‌ಬಾಸ್ ಮನೆಗೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಹೀಗೆ ಮೊದಲ ವಾರದ ಎಲಿಮೇಷನ್ ಬಗ್ಗೆ ಬಿಗ್‌ಬಾಸ್ 11ರ ಸ್ಪರ್ಧಿ ಐಶ್ವರ್ಯ ಸಿಂಧೋಗಿ (Aishwarya Sindhogi) ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ. ಮೊದಲ ವಾರದ ಎಲಿಮಿನೇಷನ್ ಆಗುವುದು ನಿಜಕ್ಕೂ unfortunate ಎಂದಿದ್ದಾರೆ. ಅದಕ್ಕೆ ರೀಸನ್ನೇ ಇರಲ್ಲ, ಆದರೂ ಎಲಿಮಿನೇಟ್ ಆಗೋದೇ ತುಂಬಾ ಬೇಸರದ ಸಂಗತಿ ಎಂದಿದ್ದಾರೆ.
37
ನಮ್ ಸೀಸನ್ನಲ್ಲೂ ಹೀಗೆಯೇ ಆಯ್ತು
ನಮ್ಮ ಸೀಸನ್ನಲ್ಲಿ ಯಮುನಾ ಮೇಡಂ ಒಂದೇ ವಾರದಲ್ಲಿ ಎಲಿಮಿನೇಟ್ ಆದರು. ಅವರಿಗೆ ಆಟವಾಡಲು ಛಾನ್ಸೇ ಸಿಕ್ಕಿರಲಿಲ್ಲ. ಅವರು ಎಲಿಮಿನೇಟ್ ಆಗಲು ಯಾವುದೇ ಕಾರಣವನ್ನೂ ಕೊಟ್ಟಿರಲಿಲ್ಲ. ಒಂದೇ ವಾರದಲ್ಲಿ ಯಾರು ಹೇಗೆ ಎಂದು ನೋಡಲು ಏನು ರೀಸನ್ ಕೊಡ್ತೀರಾ ಎಂದು ಐಶ್ವರ್ಯ ಪ್ರಶ್ನಿಸಿದ್ದಾರೆ.
ಒಂದು ವಾರದಲ್ಲಿ ಯಾವುದೇ ವ್ಯಕ್ತಿಯನ್ನು ಅಳೆಯುವುದಕ್ಕೂ ಆಗುವುದಿಲ್ಲ. ಟಾಸ್ಕ್ ಆಡಲು ಸಿಕ್ಕೇ ಇರುವುದಿಲ್ಲ. ಯಮುನಾ ಅವರಿಗೂ ಹೀಗೆಯೇ ಆಯ್ತು. ಯಾಕೋ ಗೊತ್ತಿಲ್ಲ. ಆದರೆ ತುಂಬಾ ಅನ್ಫಾರ್ಚುನೇಟ್ ಇದು ಎಂದಿದ್ದಾರೆ. ಅಮಿತ್ ಅವರು ತುಂಬಾ ಫೆಂಟಾಸ್ಟಿಕ್ ಮನುಷ್ಯ. ಅವರ ಜೊತೆ ಇಂಟರ್ವ್ಯೂ ಮಾಡಿದ್ದೇನೆ. ಅವರಿಗೂ ಏನೂ ಛಾನ್ಸೇ ಸಿಗದೇ ಹೊರಗೆ ಬರುತ್ತಿದ್ದಾರೆ. ಇದು ತುಂಬಾ ಬೇಸರದ ಸಂಗತಿ ಎಂದಿದ್ದಾರೆ ಐಶ್ವರ್ಯ.
57
ಬಿಗ್‌ಬಾಸ್ ಮನೆಮಗಳು
ಇನ್ನು ನಟಿಯ ಕುರಿತು ಹೇಳುವುದಾದರೆ, ಬಿಗ್‌ಬಾಸ್ ಕನ್ನಡ 11ರ ಪಯಣದ ಕುರಿತು ಹೇಳುವುದಾದರೆ, ಉತ್ತಮ ರೀತಿಯಲ್ಲಿ ಭಾವಪೂರ್ಣವಾಗಿ ಅಷ್ಟೇ ಭಾವುಕ ಎನ್ನಿಸುವಂತೆ ಮನೆಯಿಂದ ಹೊರಕ್ಕೆ ಬಂದವರು ಐಶ್ವರ್ಯಾ ಸಿಂಧೋಗಿ. ಬಿಗ್ ಬಾಸ್ ಪತ್ರ ಬರೆಯುವ ಮೂಲಕ ಐಶ್ವರ್ಯಗೆ ಗುಡ್ಬೈ ಹೇಳಿದ್ದ ದೃಶ್ಯ ಕೆಲ ಕಾಲ ಮನೆಯಲ್ಲಿ ಭಾವುಕ ಸನ್ನಿವೇಶಕ್ಕೆ ಕಾರಣವಾಗಿತ್ತು. ಆಕೆಯನ್ನು ಮಗಳೇ ಎಂದು ಪತ್ರದಲ್ಲಿ ಬರೆದಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. 'ಪ್ರೀತಿಯ ಐಶ್ವರ್ಯ 13 ವಾರಗಳ ಕಾಲ ಒಬ್ಬ ಪ್ರಬಲ ಸ್ಪರ್ಧಿಯಾಗಿ ಈ ಮನೆಯಿಂದ ಜೀವಿಸಿರುವುದು ಸಂತೋಷಕರ ವಿಷಯ. ತುಸು ಬೇಸರವಿದ್ದರೂ ನಗು ದುಃಖ, ಕೋಪ, ತುಂಟಾಟ ಹೀಗೆ ನಿಮ್ಮ ಭಾವನೆಗಳಿಗೆ ಸಾಕ್ಷಿಯಾಗಿರುವ ಈ ಮನೆಯಿಂದ ಈಗ ನಿಮ್ಮನ್ನು ಕಳುಹಿಸಿಕೊಡಲೇಬೇಕಾಗಿದೆ' ಎಂದು ಅದರಲ್ಲಿ ಬರೆಯಲಾಗಿತ್ತು. ಈ ಮೂಲಕ, 13ನೇ ವಾರದಲ್ಲಿ ಅವರು ಬಿಗ್ ಬಾಸ್ ಶೋನಿಂದ ಹಲವು ವೀಕ್ಷಕರ ನೆಚ್ಚಿನ ಐಶ್ವರ್ಯ ಹೊರಕ್ಕೆ ಬಂದಿದ್ದರು.
67
ಸೀರಿಯಲ್ನಲ್ಲೂ ಮಿಂಚಿಂಗ್
ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಮಿಂಚಿದ ಬ್ಯೂಟಿ ಐಶ್ವರ್ಯ ಸಿಂಧೋಗಿ ಬಿಗ್ ಬಾಸ್ ಮನೆಮಗಳು ಎಂದೇ ಕರೆಯಲ್ಪಟ್ಟವರು. ಬಿಗ್ ಬಾಸ್ ನಿಂದ ಬಂದ ಬಳಿಕ ಸಿನಿಮಾ, ಸೀರಿಯಲ್ ಎಂದು ಬ್ಯುಸಿಯಾಗಿರುವ ಐಶ್ವರ್ಯ, ಇದರ ಜೊತೆಗೆ ಟ್ರಾವೆಲ್ ಮಾಡೋದನ್ನು ಮಾತ್ರ ಮರೆತಿಲ್ಲ. ಹೆಚ್ಚಾಗಿ ಸುಂದರ ತಾಣಗಳಿಗೆ ಸ್ನೇಹಿತರ ಜೊತೆ ಟ್ರಾವೆಲ್ ಮಾಡಿ ಎಂಜಾಯ್ ಮಾಡುತ್ತಿದ್ದಾರೆ ಈ ಬ್ಯೂಟಿ.
77
ಮದುವೆಯ ಬಗ್ಗೆ ಐಶ್ವರ್ಯ
ಮದುವೆಯ ಬಗ್ಗೆ ಮಾತನಾಡಿದ್ದ ಐಶ್ವರ್ಯ, ನನಗೆ ಇನ್ನೂ ಮಾಡಬೇಕಾದದ್ದಷ್ಟು ಬಹಳ ಇದೆ. ಕರಿಯರ್ನಲ್ಲಿ ಮುಂದೆ ಹೋಗಬೇಕು ಎಂದು ಇದೆ. ಸದ್ಯ ಮದುವೆ ಇಲ್ಲ. ಆದರೆ ಮದುವೆ ಮತ್ತು ಲವ್ ಯಾವಾಗ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ. ಅದನ್ನು ನಾವಾಗಿಯೇ ಮಾಡಿಕೊಂಡು ಹೋಗುವುದಲ್ಲ, ತಂತಾನೆಯಾಗಿಯೇ ಆಗಿಬಿಡುತ್ತದೆ. ಅದಕ್ಕಾಗಿ ಇಷ್ಟು ವರ್ಷ ಅಂತೆಲ್ಲಾ ನಾನು ಹೇಳುವುದಿಲ್ಲ. ಆದರೆ ಒಳ್ಳೆಯ ಹುಡುಗ, ತುಂಬಾ ಕೇರಿಂಗ್ ಮಾಡುವವ ಇದ್ದರೆ ಮದುವೆಯಾಗುವೆ. ಅದಕ್ಕಿಂತ ಮುಖ್ಯವಾಗಿ ಗೌರವ ಕೊಡುವುದು ಆತನಿಗೆ ತಿಳಿದಿರಬೇಕು. ಹಾಗಿದ್ದರೆ ಮಾತ್ರ ದಾಂಪತ್ಯ ಜೀವನ ಚೆನ್ನಾಗಿ ನಡೆದುಕೊಂಡು ಹೋಗುತ್ತದೆ ಎಂದಿದ್ದಾರೆ ಐಶ್ವರ್ಯ. ಒಟ್ಟಿನಲ್ಲಿ ಐಶ್ವರ್ಯ ಅವರ ಮದುವೆ ಯಾವಾಗ ಎಂದು ಕಾಯುತ್ತಿದ್ದಾರೆ ಅವರ ಅಭಿಮಾನಿಗಳು.