ಬಿಗ್ ಬಾಸ್ ಮನೆಗೆ ಆಯ್ಕೆಯಾದ ನಂತರ ಸ್ಪರ್ಧಿಗಳು ತಮ್ಮ ಕೊನೆಯ 72 ಗಂಟೆಗಳನ್ನು ಹೇಗೆ ಕಳೆದರು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ. ಕೆಲವರು ಶಾಪಿಂಗ್, ಸಿನಿಮಾ ಮುಗಿಸಿದರೆ, ಇನ್ನು ಕೆಲವರು ಸುದ್ದಿ ಲೀಕ್ ಆಗುವ ಭಯದಲ್ಲಿ ನಿದ್ದೆಯಿಲ್ಲದೆ ಕಳೆದಿದ್ದಾರೆ.  

Bigg Boss 12ಕ್ಕೆ ಯಾರು ಬರ್ತಾರೆ ಎನ್ನುವ ಬಗ್ಗೆ ವೀಕ್ಷಕರಿಗೆ ಎಷ್ಟು ಕುತೂಹಲ ಇರುತ್ತೋ, ಅಲ್ಲಿ ಸೆಲೆಕ್ಟ್​ ಆಗುವ ಸ್ಪರ್ಧಿಗಳಿಗೂ ಅದು ಅನಿರೀಕ್ಷಿತವೇ. ನೀವು ಬಿಗ್​ಬಾಸ್​ಗೆ ಸೆಲೆಕ್ಟ್​ ಆಗಿದ್ದೀರಿ ಎಂದು ಹೇಳಿದ ತಕ್ಷಣ ಒಂದಿಷ್ಟು ನಿಯಮಗಳನ್ನು ಅವರು ಪಾಲಿಸಬೇಕಿರುತ್ತದೆ. ಅದರಲ್ಲಿಯೂ ಸೆಲೆಬ್ರಿಟಿಗಳೇ ಹೆಚ್ಚಾಗಿರುವ ಕಾರಣ, ಅವರು ತಮ್ಮ ಪ್ರಾಜೆಕ್ಟ್​ಗಳ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳಬೇಕಿರುತ್ತದೆ. ಮಾತ್ರವಲ್ಲದೇ ತಾವು ಸೆಲೆಕ್ಟ್​ ಆಗಿರುವುದು ಯಾರಿಗೂ ಹೇಳಬಾರದು ಎನ್ನುವ ನಿಯಮಗಳೂ ಇರುತ್ತವೆ. ಇವುಗಳ ಬಗ್ಗೆ ಈ ಬಾರಿಯ ಸ್ಪರ್ಧಿಗಳು ಏನು ಹೇಳಿದ್ದಾರೆ ನೋಡಿ...

ಎಮೋಷನಲ್​ ಡ್ರಾಮಾ- ಫೋನ್​ ಕೊಡೊದೇ ಟೆನ್ಷನ್​

ಫ್ರೆಂಡ್ಸ್​​ ಮೀಟ್​ ಮಾಡಿದೆ, ಅವರ ಜೊತೆ ಎಂಜಾಯ್​ ಮಾಡಿ ಇಲ್ಲಿಗೆ ಬಂದೆ ಎಂದು ಅಶ್ವಿನಿ ಎಸ್​.ಎನ್​ ಹೇಳಿದರೆ, ಡಬ್ಬಿಂಗ್​, ಸಿನಿಮಾ ಎಲ್ಲಾ ಮುಗಿಸಿದೆ. ಪರ್ಚೇಸ್​ ಅದೂ ಇದೂ ಅಂತ 72 ಗಂಟೆ ಕಳೆದೆ. ಸಲೂನ್​ಗೆ ಎಲ್ಲಾ ಹೋಗಿ, ಡ್ರೆಸ್​ ಟ್ರಯಲ್​ ಮಾಡಿ, ಕೊನೆಯ ಘಳಿಗೆಯಲ್ಲಿ ಮನೆಯಲ್ಲಿ ಎಮೋಷನಲ್​ ಡ್ರಾಮಾ ಮಾಡಿ ಸೀದಾ ಇಲ್ಲಿದೆ ಬಂದೆ ಎಂದಿದ್ದಾರೆ ಕಾಕ್ರೋಚ್​ ಸುಧಿ. ಸೆಲೆಕ್ಟ್​ ಆಗಿದ್ದು ಕೇಳಿ ಎಮೋಷನಲ್​ ಆದೆ. ಆಮೇಲೆ ಷಾಪಿಂಗ್​ ಮಾಡಿದೆ, ಪ್ಯಾಕಿಂಗ್​ ಮಾಡಿದೆ, ಕೊನೆಗೆ ಬೇಜಾರು, ಖುಷಿ ಎಲ್ಲವೂ ಆಯ್ತು ಎಂದು ಸ್ಪಂದನಾ ಹೇಳಿದರೆ, ಬಿಗ್​ಬಾಸ್​ ಆಫರ್​ ಕೇಳಿ ಆರಂಭದಲ್ಲಿ ತುಂಬಾ ಸ್ಟ್ರೆಸ್​ ಆಯ್ತು, ಏಕೆಂದರೆ, ಫೋನ್​ ಸಬ್​ಮಿಟ್​ ಮಾಡಬೇಕು. ಸೋ ಫೋನ್​ನಲ್ಲಿ ಎಲ್ಲಾ ಪರ್ಸನಲ್​ ಡಿಟೇಲ್ಸ್​ ತೆಗೆದು ಪ್ರಮೋಷನ್​ಗೆ ಬೇರೆಯವರಿಗೆ ಕೊಡಬೇಕಿತ್ತು ಎಂದು ಅಭಿಷೇಕ್​ ಹೇಳಿದರು.

ನಿದ್ದೆನೇ ಮಾಡಿಲ್ಲ-

ತುಂಬಾ ಪ್ರಿಪರೇಷನ್​ ಇತ್ತು. ಯಾವುದು ಕ್ಲಿಯರ್​ ಮಾಡಿಲ್ಲ, ಬ್ಯಾಲೆನ್ಸ್​ ಯಾವುದು ಇದೆ ಎಲ್ಲಾ ಕನ್​ಫ್ಯೂಸನ್​ ಇತ್ತು. ಇಲ್ಲಿಗೆ ಬಂದು ರೆಡಿಯಾಗಿ ಫ್ಲೋರ್​ಗೆ ಹೋಗುವವರೆಗೂ ಅದೇ ಕನ್​ಫ್ಯೂಷನ್​ ಇತ್ತು ಎಂದಿದ್ದಾರೆ ಕಾವ್ಯಾ ಶೈವ. ಇದೇ ವೇಳೆ ಧನುಷ್​, ಕೊನೆಯ 72 ಗಂಟೆ ನಿದ್ದೆನೇ ಇಲ್ಲ. ನನಗೆ ಎಲ್ಲಾ ಲಾಸ್ಟ್​ ಮೋಮೆಂಟ್​ನಲ್ಲಿ ಕೆಲಸ ಮಾಡೋನು ನಾನು, ಅದಕ್ಕೆ ಆರೇಳು ಗಂಟೆ ಮಾತ್ರ ನಿದ್ದೆ ಮಾಡ್ತಿದ್ದೆ, ತುಂಬಾ ಟೆನ್ಸ್​ ಆಗಿತ್ತು ಎಂದಿದ್ದಾರೆ.

ಲೀಕ್​ ಆದ್ರೆ ಎನ್ನೋ ಭಯ

ಟೆನ್ಷನ್​ಗೆ ನಿದ್ದೆನೇ ಬರ್ತಿರಲಿಲ್ಲ. ಸ್ಪರ್ಧಿಯಾಗಿ ಹೋಗೋದು ಲೀಕ್​ ಆದ್ರೆ ತೆಗೆದುಬಿಡ್ತಾರೆ ಅಂತ ಏನೇನೋ ಹೇಳ್ತಾ ಇದ್ರು. ಬಟ್ಟೆ ತೆಗೆದುಕೊಳ್ಳಲು ಷಾಪಿಂಗ್​ ಮಾಡುತ್ತಾ, ಯಾರ ಫೋನ್​ ರಿಸೀವ್​ ಮಾಡದೇ ಬಚ್ಚಿಟ್ಟುಕೊಂಡಿದ್ದೆ. ಆದರೂ ಒಂದಿಬ್ಬರು ಕೇಳಿದಾಗ ಭಯ ಆಗಿತ್ತು ಎಂಬ ಆತಂಕದಲ್ಲಿ ಇದ್ದರಂತೆ ಡಾಗ್​ ಸತೀಶ್​. ಆದರೆ ರಾಶಿಕಾ ಮಾತ್ರ, ಬಿಗ್​ಬಾಸ್​ಗೆ ಆಫರ್​ ಬಂದ ಮೇಲೆ ಖುಷಿಯಿಂದ ಇದ್ದೆ. ಡಾನ್ಸ್​ ಮಾಡಿದ್ದೇನೆ. ಕೊನೆಗೂ ಮನೆಯೊಳಗೆ ಬಂದೆ ಎಂದಿದ್ದಾರೆ.

ಎಲ್ಲಾ ಮೇಡಂ ನೋಡಿಕೊಂಡ್ರು

ಮಲ್ಲಮ್ಮ ಅವರು, ಬಿಗ್​ಬಾಸ್​ಗೆ ಬರುವ ಮುನ್ನ ಎಲ್ಲಾ ಚೆಕಪ್​ ಮಾಡಿದ್ರು, ಮೇಡಂ ಸೀರೆ ತಂದು blouse ಹೊಲೆಸಿದ್ರು. ಎಲ್ಲಾ ಅವರೇ ನೋಡಿಕೊಂಡರು ಎಂದಿದ್ದರೆ, ರಕ್ಷಿತಾ ಅವರು, ಒಂದೂವರೆ ದಿನ ಮುಂಚೆ ಇಲ್ಲಿಗೆ ಬಂದೆ. ಪ್ಯಾಕಿಂಗ್​ ಒಂದು ದಿನ ಮುಂಚೆನೇ ಮಾಡಿದೆ ಎಂದು ಅನುಭವ ಶೇರ್​ ಮಾಡಿದ್ದಾರೆ.

View post on Instagram