Karna ಸೀರಿಯಲ್​ಗೂ ಎಂಟ್ರಿ ಕೊಟ್ಟ ಜೋಗತವ್ವ! ತಲೆಗೆ ಹುಳು ಬಿಡೋ ಇವರು ತ್ರಿಕಾಲ ಜ್ಞಾನಿಗಳಾ?

Published : Oct 06, 2025, 03:50 PM IST

ಕನ್ನಡ ಧಾರಾವಾಹಿಗಳಲ್ಲಿ ಜೋಗತವ್ವನ ಪ್ರವೇಶ ಸಾಮಾನ್ಯವಾಗಿದ್ದು, ಇದೀಗ 'ಕರ್ಣ' ಸೀರಿಯಲ್​ನಲ್ಲಿ ದೊಡ್ಡ ತಿರುವು ಸಿಕ್ಕಿದೆ. ನಿಧಿಯನ್ನು ಪ್ರೀತಿಸಿದ ಕರ್ಣ, ಅನಿರೀಕ್ಷಿತವಾಗಿ ನಿತ್ಯಾಗೆ ತಾಳಿ ಕಟ್ಟಿದ್ದು, ಆಕೆ ಗರ್ಭಿಣಿ ಎಂಬ ಸತ್ಯವೂ ಬಹಿರಂಗವಾಗಿದೆ.  

PREV
16
ಪ್ರತಿ ಸೀರಿಯಲ್​ನಲ್ಲೂ ಜೋಗತವ್ವ

ಸೀರಿಯಲ್​ನಲ್ಲಿ ಇನ್ನೇನು ಟ್ವಿಸ್ಟ್​ ಬರುತ್ತದೆ, ಮುಂದೇನು ಆಗುತ್ತದೆ ಎಂದು ವೀಕ್ಷಕರು ತಲೆ ಕೆರೆದುಕೊಳ್ತಿರೋ ನಡುವೆಯೇ, ಬಹುತೇಕ ಧಾರಾವಾಹಿಗಳಲ್ಲಿ ಕೊರವಂಜಿ ಅರ್ಥಾತ್​ ಜೋಗತವ್ವನ ಎಂಟ್ರಿ ಆಗುತ್ತದೆ. ಮುಂದೇನಾಗುತ್ತದೆ ಎಂದು ಸೀರಿಯಲ್​​ ಕಥೆಯನ್ನು ಹೇಳುವ ಮೂಲಕ, ವೀಕ್ಷಕರ ತಲೆಗೆ ಹುಳು ಬಿಡುತ್ತಾರೆ. ವಾಹಿನಿಗಳು ಬೇರೆ ಬೇರೆಯಾದರೂ, ಧಾರಾವಾಹಿಗಳ ವಿಷ್ಯವೇ ವಿಭಿನ್ನವಾಗಿದ್ದರೂ ಇವರು ಇರಲೇಬೇಕು.

26
ಪ್ರತಿ ಸೀರಿಯಲ್​ಗಳೂ ಬೇಕು

ಜೊತೆ ಜೊತೆಯಲಿ ಸೀರಿಯಲ್​ನಿಂದ ಹಿಡಿದು ಪುಟ್ಟಕ್ಕನ ಮಕ್ಕಳವರೆಗೆ ಅದೆಷ್ಟೋ ಸೀರಿಯಲ್​​ಗಳಲ್ಲಿ ಇದಾಗಲೇ ಜೋಗತವ್ವ ಎಂಟ್ರಿ ಕೊಟ್ಟಾಗಿದೆ. ಮುಂದೇನಾಗುತ್ತದೆ ಎಂದು ಗೂಡಾರ್ಥದಲ್ಲಿ ಹೇಳುವ ಮೂಲಕ ವೀಕ್ಷಕರು ಮತ್ತೆ ಸೀರಿಯಲ್​ ನೋಡುವಂತೆ ಮಾಡುತ್ತಾರೆ. ಒಂದರ್ಥದಲ್ಲಿ ಕಥೆ ಮೊದಲೇ ತಿಳಿದರೂ, ಅದು ಹೇಗೆ ಸಂಭವಿಸುತ್ತದೆ ಎನ್ನುವುದನ್ನು ತಿಳಿಯಲು ಉತ್ಸುಕರಾಗಿರುತ್ತಾರೆ. ಇವರೇನು ತ್ರಿಕಾಲ ಜ್ಞಾನಿಗಳಾ ಎಂದು ಪ್ರಶ್ನಿಸುತ್ತಲೇ ಇರುತ್ತಾರೆ.

36
ಕರ್ಣ ಸೀರಿಯಲ್​ಗೂ ಎಂಟ್ರಿ

ಕರ್ಣ ಧಾರಾವಾಹಿ (Karna Serial) ಈಗ ರೋಚಕ ಘಟ್ಟವನ್ನು ತಲುಪಿದೆ. ನಿಧಿ ಮತ್ತು ಕರ್ಣ ಮದುವೆಯಾಗುವ ಕನಸು ಕಂಡಿದ್ದರೆ, ಕೊನೆಗೆ ನಿತ್ಯಾ ಜೊತೆ ಮದುವೆಯಾಗಿದೆ. ಈ ಅನಿರೀಕ್ಷಿತ ತಿರುವು ನೋಡಿ ಇದಾಗಲೇ ವೀಕ್ಷಕರಂತೂ ಗರಂ ಆಗಿಬಿಟ್ಟಿದ್ದಾರೆ. ಇನ್ನು ಮುಂದೆ ಸೀರಿಯಲ್ ನೋಡೋದೆ ಇಲ್ಲ ಎಂದಿದ್ದಾರೆ. ನಿಧಿ ಹಾಗೂ ಕರ್ಣ ಮಧ್ಯೆ ಪ್ರೀತಿ ಮೂಡಿದಾಗಲೇ ಇವರಿಬ್ಬರು ಕಷ್ಟಪಟ್ಟಾದರೂ ಒಂದಾಗುತ್ತಾರೆ ಎಂದುಕೊಂಡವರೇ ಹೆಚ್ಚು. ಕರ್ಣ ಡಾಕ್ಟರ್ ಆದರೆ, ನಿಧಿ ಸ್ಟೂಡೆಂಟ್. ನಿತ್ಯಾ ಮೊದಲು ಕರ್ಣನಿಗೆ ಪ್ರಪೋಸ್ ಮಾಡಿದ್ದಳು. ಆದರೆ ಅದನ್ನು ಆತ ಒಪ್ಪಿಕೊಳ್ಳಲೇ ಇಲ್ಲ. ಆದರೆ, ಮಾರಿಗುಡಿಗೆ ಹೋಗಿ ಬರುವ ವೇಳೆಗೆ ಇಬ್ಬರ ಮಧ್ಯೆ ಪ್ರೀತಿ ಮೂಡಿತ್ತು. ಇದನ್ನು ನೋಡಿದಾಗ ವೀಕ್ಷಕರು ಸಕತ್​ ಖುಷಿ ಪಟ್ಟುಕೊಂಡಿದ್ದರು. ಹೀಗಿರುವಾಗಲೇ ಧಾರಾವಾಹಿಯಲ್ಲಿ ದೊಡ್ಡ ತಿರುವು ಬಂದಿದೆ.

46
ನಿತ್ಯಾಗೆ ತಾಳಿ ಕಟ್ಟಿದ ಕರ್ಣ

ಇನ್ನೇನು ಇವರಿಬ್ಬರೂ ಮದುವೆಯಾಗುತ್ತಾರೆ ಎಂದುಕೊಂಡಾಗಲೇ ಟ್ವಿಸ್ಟ್​ ಸಿಕ್ಕಿದೆ. ಕರ್ಣ ಹಾಗೂ ನಿಧಿಯ ಮದುವೆ ಬದಲು, ಕರ್ಣ ಹಾಗೂ ನಿತ್ಯಾಳ ಮದುವೆ ನೆರವೇರಿದೆ. ಈ ಸಂದರ್ಭದ ಪ್ರೋಮೋನ ಜೀ ಕನ್ನಡ ವಾಹಿನಿಯು ಹಂಚಿಕೊಂಡಾಗಲೇ ವೀಕ್ಷಕರು ಭಾರಿ ಅಸಮಾಧಾನ ಹೊರಹಾಕಿದ್ದರು. ಅದ್ದೂರಿಯಾಗಿ ವಿವಾಹ ಸಮಾರಂಭ ನಡೆದಿದ್ದು, ನಿಧಿ ಬದಲು, ನಿತ್ಯಾಗೆ ಕರ್ಣ ತಾಳಿ ಕಟ್ಟಿದ್ದಾನೆ.

56
ಕೊನೆ ಕ್ಷಣದಲ್ಲಿ ಮದುವೆ ಕ್ಯಾನ್ಸಲ್​

ನಿತ್ಯಾಗೆ ಈಗಾಗಲೇ ತೇಜಸ್​ ಜೊತೆ ಮದುವೆ ಫಿಕ್ಸ್ ಆಗಿದ್ದರಿಂದ ನಿತ್ಯಾ ಮತ್ತು ಕರ್ಣ ಮದುವೆಯಾಗುವುದಿಲ್ಲ. ಕರ್ಣ ಏನಿದ್ದರೂ ನಿಧಿಗೇ ಎಂದುಕೊಂಡಿದ್ದೆಲ್ಲಾ ಉಲ್ಟಾ ಪಲ್ಟಾ ಆಗೋಯ್ತು. ಸಪ್ತಪದಿ ತುಳಿಯುವಾಗಲೇ ನಿತ್ಯಾ ಪ್ರೆಗ್ನೆಂಟ್ ಎಂಬ ವಿಚಾರವೂ ತಿಳಿದಿದೆ. ‘ನಿತ್ಯಾ ಒಡಲಲ್ಲಿ ಅಡಗಿದ ಸತ್ಯಕ್ಕೆ ನಾಡಿ ಬಡಿತವೇ ಸಾಕ್ಷಿ’ ಎಂದು ಪ್ರೋಮೋದಲ್ಲಿ ಹೇಳಲಾಗಿತ್ತು. ಈ ಮೂಲಕ ಆಕೆ ಪ್ರೆಗ್ನೆಂಟ್ ಎಂಬ ವಿಚಾರ ರಿವೀಲ್ ಆಗಿದೆ.

66
ಮುಂದೆ ಆಗೋದೇ ಬೇರೆ

ಹಾಗಿದ್ದರೆ ಮದುವೆ ಆಗಿರೋದು ನಿತ್ಯಾ ಜೊತೆ ಆದರೆ ಸಂಸಾರ ಮಾಡೋದು ನಿಧಿ ಜೊತೆ ಫಿಕ್ಸ್ ಎಂದು ನೆಟ್ಟಿಗರು ಖುಷಿ ಪಟ್ಟುಕೊಂಡಿದ್ದಾರೆ. ಮನುಷ್ಯರು ಮಾಡಿದ ಜೋಡಿ ತಾತ್ಕಾಲಿಕ, ದೇವರು ಮಾಡಿದ ಜೋಡಿ ಶಾಶ್ವತ ಎಂದು ಕೊರವಂಜಿ ಹೇಳಿದರೆ ನೆಟ್ಟಿಗರು, ಡೈರೆಕ್ಟರ್​ ಮಾಡಿದ ಜೋಡಿ ತಾತ್ಕಾಲಿಕ, ವೀಕ್ಷಕರು ಮಾಡಿದ ಜೋಡಿ ಶಾಶ್ವತ ಎನ್ನುತ್ತಿದ್ದಾರೆ.

Read more Photos on
click me!

Recommended Stories