ಅಗ್ನಿ ಸಾಕ್ಷಿ, ಸೀತಾ ರಾಮ ಸೀರಿಯಲ್ ನಟಿ ವೈಷ್ಣವಿ ಗೌಡ ಮದುವೆಯಾಗಿ ನಾಲ್ಕು ತಿಂಗಳು ತುಂಬಿದ್ದು, ಪತಿ ಅನುಕೂಲ್ ಮಿಶ್ರಾ ಪತ್ನಿ ಜೊತೆಗಿನ ಮುದ್ದಾದ ಫೋಟೊ ಶೇರ್ ಮಾಡಿ, ಅಷ್ಟೇ ಮುದ್ದಾದ ಕ್ಯಾಪ್ಶನ್ ಬರೆದು ವಿಶ್ ಮಾಡಿದ್ದಾರೆ, ಇದನ್ನು ನೋಡಿ ಅಭಿಮಾನಿಗಳು ಜೆಂಟಲ್ ಮ್ಯಾನ್ ಎನ್ನುತ್ತಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಅಗ್ನಿ ಸಾಕ್ಷಿಯ ಸನ್ನಿಧಿಯಾಗಿ, ಸೀತಾ ರಾಮಾ ಧಾರಾವಾಹಿಯ ಸೀತಾ ಆಗಿ ಮಿಂಚಿದವರು ವೈಷ್ಣವಿ ಗೌಡ, ಸದ್ಯ ಜೀವನದ ಹೊಸ ಅಧ್ಯಾಯ ಶುರು ಮಾಡಿದ್ದು, ಅದರಲ್ಲೆ ಬ್ಯುಸಿಯಾಗಿದ್ದಾರೆ.
27
ಪತಿ ಅನುಕೂಲ್ ಮಿಶ್ರಾ
ವೈಷ್ಣವಿ ಗೌಡ ಸೀತಾ ರಾಮ ಧಾರಾವಾಹಿ ಮುಗಿಯುತ್ತಿದ್ದಂತೆ ಏರ್‌ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಅನುಕೂಲ್ ಮಿಶ್ರಾ ಅವರೊಂದಿಗೆ ಜೂ.4ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಈ ಜೋಡಿಯ ವಿವಾಹ ಅದ್ಧೂರಿಯಾಗಿ ನಡೆದಿತ್ತು.
37
ನಾಲ್ಕು ತಿಂಗಳು ತುಂಬಿದ ದಾಂಪತ್ಯ
ವೈಷ್ಣವಿ ಗೌಡ ಮತ್ತು ಅನುಕೂಲ್ ಮಿಶ್ರಾ ದಾಂಪತ್ಯ ಜೀವನಕ್ಕೆ ಇದೀಗ ನಾಲ್ಕು ತಿಂಗಳು ತುಂಬಿದ್ದು, ಈ ಹಿನ್ನೆಲೆಯಲ್ಲಿ ಪತಿ ವೈಷ್ಣವಿ ಗೌಡ ಜೊತೆಗಿರುವ ಮುದ್ದಾದ ಫೋಟೊ ಒಂದನ್ನು ಶೇರ್ ಮಾಡಿ ಶುಭ ಕೋರಿದ್ದಾರೆ. ಅವರು ಬರೆದಿರುವ ಕ್ಯಾಪ್ಶನ್ ಸದ್ಯ ವೈರಲ್ ಆಗಿದೆ.
ಓಹ್ ನೀವು ವೈಷ್ಣವಿ ಗಂಡನಾ… ಎಂದು ಜನ ಕೇಳಿದ್ರೆ, ನನ್ನ ಮುಖದಲ್ಲಿ ನನ್ನ ಜೀವನದ ಅತಿ ದೊಡ್ಡ ನಗುವನ್ನು ಕಾಣುವಿರಿ. ನಾಲ್ಕನೇ ತಿಂಗಳ ಆನಿವರ್ಸರಿ ಶುಭಾಶಯಗಳು ವೈಷ್ ಎಂದು ಬರೆದುಕೊಂಡಿದ್ದಾರೆ. (They said, ‘Oh you’re Vaishnavi’s husband!’ — and I’ve never smiled wider in my life.” Happy 4th month anniversary Vaissh).
57
ಖುಷಿಯಾದ ಫ್ಯಾನ್ಸ್
ವೈಷ್ಣವಿ ಗಂಡನ ಪೋಸ್ಟ್ ನೋಡಿ ಫ್ಯಾನ್ಸ್ ತುಂಬಾನೆ ಖುಷಿ ಪಟ್ಟಿದ್ದು, ನಿಜವಾಗ್ಲೂ ನಿಮಗೆ ಜೆಂಟಲ್ ಮ್ಯಾನ್ ಸಿಕ್ಕಿದ್ದಾರೆ, ವೈಷ್ಣವಿ ನೀವು ತುಂಬಾನೆ ಲಕ್ಕಿ ಇಂತಹ ಗಂಡನನ್ನು ಪಡೆಯೋಕೆ ಎಂದಿದ್ದಾರೆ.
67
ವಿವಾದಕ್ಕೆ ಸಿಲುಕ್ಕಿದ್ದ ನಟಿ
ವೈಷ್ಣವಿ ಗೌಡ ಮದುವೆಯಾದ ಬಳಿಕ ತಾಳಿ ಹಾಕದೆ ಕಾಣಿಸಿಕೊಂಡಿದ್ದಕ್ಕೆ ಜನ ಟ್ರೋಲ್ ಮಾಡಿದ್ದರು. ಆದರೆ ಬಳಿಕ ವೈಷ್ಣವಿ ತಾವೇ ಖುದ್ದಾಗಿ ವಿಡೀಯೋ ಮಾಡಿ ನನ್ನ ಗಂಡನ ಕಡೆಯಲ್ಲಿ ತಾಳೀ ಹಾಕುವ ಸಂಪ್ರದಾಯ ಇಲ್ಲ, ಸಿಂಧೂರ, ಕಾಲುಂಗುರ, ಗಾಜಿನ ಬಳೆ , ದಾರ ಇದ್ರೆ ಸಾಕು, ಅದೆಲ್ಲವನ್ನೂ ನಾನು ಹಾಕುತ್ತಿದ್ದೇನೆ ಎಂದಿದ್ದರು.
77
ಮದುವೆ ಬಳಿಕ ಮತ್ತೆ ನಟಿಸಿದ ವೈಷ್ಣವಿ
ಮದುವೆಯಾದ ಬಳಿಕ ಸೀರಿಯಲ್ ನಿಂದ ದೂರ ಉಳಿದಿದ್ದರೂ ಸಹ, ವೈಷ್ಣವಿ ಗೌಡ, ಮಿನಿ ಸೀರೀಸ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದರು. ಆ ಸೀರೀಸ್ ಯಾವುದು? ಯಾವಾಗ ರಿಲೀಸ್ ಎನ್ನುವ ಕುರಿತು ಮಾಹಿತಿ ಲಭ್ಯವಿಲ್ಲ.