Suniel Shetty Rich Story: 'ಸೀತಾ ರಾಮ' ಖ್ಯಾತಿಯ ನಟ ಗಗನ್ ಚಿನ್ನಪ್ಪ, 'ದಢಕನ್' ಚಿತ್ರದ ಪ್ರಸಿದ್ಧ ಡೈಲಾಗ್ ಕೇಳಿ ಅಚ್ಚರಿಗೊಂಡಿದ್ದಾರೆ. 50 ರೂ.ನಿಂದ 500 ಕೋಟಿ ಸಂಪಾದಿಸಿದ ಸುನಿಲ್ ಶೆಟ್ಟಿ ಪಾತ್ರದ ಕಥೆಗೆ ಅವರು ತಮಾಷೆಯಾಗಿ ಪ್ರತಿಕ್ರಿಯಿಸಿದ ವಿಡಿಯೋ ವೈರಲ್ ಆಗಿದೆ.
ಸೀತಾ ರಾಮ, ಮಂಗಳ ಗೌರಿ ಸೂಪರ್ ಹಿಟ್ ಸೀರಿಯಲ್ ನೀಡಿರುವ ಗಗನ್ ಚಿನ್ನಪ್ಪ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ 50 ರಿಂದ 500 ಕೋಟಿ ರೂ. ಹೇಗೆ ಸಂಪಾದಿಸೋದನ್ನು ಕಲಿತು ಪಾಯಿಂಟ್ಸ್ ನೋಟ್ ಮಾಡಿಕೊಂಡಿದ್ದಾರೆ.
26
ಸೂಪರ್ ಹಿಟ್ ಸಿನಿಮಾ ದಢಕನ್
ಶಿಲ್ಪಾ ಶೆಟ್ಟಿ, ಸುನಿಲ್ ಶೆಟ್ಟಿ ಮತ್ತು ಅಕ್ಷಯ್ ಕುಮಾರ್ ನಟನೆಯ ತ್ರಿಕೋನ ಪ್ರೇಮಕಥೆ ಹೊಂದಿರುವ ಸೂಪರ್ ಹಿಟ್ ಸಿನಿಮಾ 'ದಢಕನ್'. ಶ್ರೀಮಂತ ಕುಟುಂಬದ ಅಂಜಲಿಯಾಗಿ ಶಿಲ್ಪಾ ಶೆಟ್ಟಿ, ಬಡಕುಟುಂಬದ ದೇವ್ ಪಾತ್ರದಲ್ಲಿ ಸುನಿಲ್ ಶೆಟ್ಟಿ ನಟಿಸಿದ್ದಾರೆ. ಇಂದಿಗೂ ಅಂಜಲಿ ಮತ್ತು ದೇವ್ ಜೋಡಿ ಟ್ರೆಂಡಿಂಗ್‌ನಲ್ಲಿರುತ್ತದೆ. ದೇವ್ ಬಡವ ಎಂಬ ಕಾರಣಕ್ಕೆ ಅಂಜಲಿ ಮದುವೆ ರಾಮ್ (ಅಕ್ಷಯ್ ಕುಮಾರ್) ಜೊತೆ ನಡೆಯುತ್ತದೆ
36
ಕೈ ಮುಗಿದ ಗಗನ್ ಚಿನ್ನಪ್ಪ
ಕೆಲ ವರ್ಷಗಳ ನಂತರ ದೇವ್ ಶ್ರೀಮಂತ ವ್ಯಕ್ತಿಯಾಗಿ ಅಂಜಲಿ ಗಂಡ ರಾಮ್‌ನನ್ನು ಬಡವನನ್ನಾಗಿ ಮಾಡುತ್ತಾನೆ. ಈ ಸಂದರ್ಭದಲ್ಲಿ ಅಂಜಲಿ ಮತ್ತು ದೇವ್ ಮುಖಾಮಖಿಯಾಗುತ್ತಾರೆ. ಆಗ ತಾಯಿ ನಿಧನದ ಬಳಿಕ ತಾನು ಹೇಗೆ ಶ್ರೀಮಂತನಾದೆ ಎಂದು ಅಂಜಲಿಗೆ ದೇವ್ ಹೇಳುತ್ತಾನೆ. ದೇವ್ ಹೇಳುವ ಡೈಲಾಗ್ ನ್ನು ಕೇಳಿ ಗಗನ್ ಚಿನ್ನಪ್ಪ ಕೈ ಮುಗಿದಿದ್ದಾರೆ.
ತಾಯಿ ನಿಧನದ ಬಳಿಕ ಪ್ರತಿ ಕ್ಷಣ, ಪ್ರತಿ ದಿನ ನೆನಪಿನಲ್ಲಿ ನಾನು ಬದುಕು ನಡೆಸಿದೆ. ನೀನು ಬಿಟ್ಟು ಹೋದಾಗ ನನ್ನ ಜೇಬಿನಲ್ಲಿ 50 ರೂ.ಯೂ ಇರಲಿಲ್ಲ. ಇಂದು ನನ್ನ ಬಳಿಯಲ್ಲಿ 500 ಕೋಟಿ ಇದೆ. 50 ರೂ.ಯಿಂದ 500 ಕೋಟಿಯ ನನ್ನ ಪಯಣ ಹೇಗಿತ್ತು ಅಂತಾ ನಿನಗೆ ಗೊತ್ತಾ ಅಂಜಲಿ? ನಿನ್ನಿಂದ ಅದನ್ನು ಊಹೆಯೂ ಮಾಡಿಕೊಳ್ಳಲು ಸಾಧ್ಯವಿಲ್ಲ.
56
50 ರಿಂದ 500 ಕೋಟಿಯ ಪಯಣದ ಗುರಿ
ನಾನು ಪ್ರತಿದಿನ ನಡೆಯುತ್ತಿದ್ದೆ. ನಡೆದು ನಡೆದು ದಣಿವು ಆಗುತ್ತಿತ್ತು. ಬೀಳುತ್ತಿದ್ದೆ, ಏಳುತ್ತಿದೆ, ಗಾಯಗೊಳ್ಳುತ್ತಿದ್ದೆ. ಸೂರ್ಯನ ಕಿರಣದಂತೆ ನಿನ್ನ ಧ್ವನಿ ನನ್ನ ಹೃದಯ ಮತ್ತು ಮನಸ್ಸಿಗೆ ತಲುಪಿ ದೇವ್ ಇನ್ನೊಂದು ಹೆಜ್ಜೆ ಅಂತ ಹೇಳುತ್ತಿತ್ತು. ಹೆಜ್ಜೆಗೆ ಹೆಜ್ಜೆ ಸೇರಿಸಿ 50 ರಿಂದ 500 ಕೋಟಿಯ ಪಯಣದ ಗುರಿ ತಲುಪಿದೆ ಎಂದು ದೇವ್ ಹೇಳುತ್ತಾನೆ. ಚಿತ್ರದಲ್ಲಿ ಬ್ರೇಕಪ್ ಬಳಿಕ ದೇವ್, ಶ್ರೀಮಂತ ಕುಟುಂಬದ ಯುವತಿಯನ್ನು ಮದುವೆಯಾಗುತ್ತಾನೆ.
ಸುನಿಲ್ ಶೆಟ್ಟಿ ಶ್ರೀಮಂತನಾದ ಕಥೆಯನ್ನು ಕೇಳಿ ಗಗನ ಚಿನ್ನಪ್ಪ ಕೈ ಮುಗಿದಿದ್ದಾರೆ. ಸದ್ಯ ಗಗನ್ ಚಿನ್ನಪ್ಪ ಅವರ ತಮಾಷೆಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋಗೆ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿ ಹೆಜ್ಜೆ ಹೆಜ್ಜೆಗೆ ಸೇರಿಸಿ ಕೋಟ್ಯಧಿಪತಿಯಾದ್ರೆ ಎಷ್ಟು ಚೆಂದ ಅಲ್ಲವಾ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.