Naa Ninna Bidalaare: ಹಿತಾಳನ್ನು ಹಾರಿಸಿಕೊಂಡು ಹೋದ ರಕ್ಕಸ ಹದ್ದು- ಕಾಪಾಡ್ತಾಳಾ ದುರ್ಗಾ?

Published : Oct 07, 2025, 05:26 PM IST

ಶಕ್ತಿಗಾಗಿ ಹಿತಾಳನ್ನು ಬಲಿ ಕೊಡಲು ಮಾಳವಿಕಾ ಯೋಜಿಸುತ್ತಾಳೆ. ಮಾಂತ್ರಿಕ ಕಳುಹಿಸಿದ ರಕ್ಕಸ ಹದ್ದು ಹಿತಾಳನ್ನು ಹೊತ್ತೊಯ್ದಾಗ, ದುರ್ಗಾ ದೇವಿಯ ಅವತಾರ ತಾಳಿ ತ್ರಿಶೂಲದಿಂದ ಅದನ್ನು ಸಂಹರಿಸಿ ಮಗುವನ್ನು ಕಾಪಾಡುತ್ತಾಳೆ. ಈ ಘಟನೆಯಿಂದ ದುರ್ಗಾಳ ದೈವಿಕ ಶಕ್ತಿ ಎಲ್ಲರ ಮುಂದೆ ಅನಾವರಣಗೊಳ್ಳುತ್ತದೆ.

PREV
17
ಶಕ್ತಿಗಾಗಿ ಮಗುವಿನ ಸಂಹಾ*ರಕ್ಕೆ ಯತ್ನ

ಮಾಟ, ಮಂತ್ರ, ತಂತ್ರಗಳ ಕಥೆಯಾಗಿರುವ ಜೀ ಕನ್ನಡದ ನಾ ನಿನ್ನ ಬಿಡಲಾರೆ (Naa Ninna Bidalaare) ಈಗ ರೋಚಕ ಟ್ವಿಸ್ಟ್​ ಪಡೆದುಕೊಂಡಿದೆ. ಹಿತಾಳಿಗೆ ಏಳು ವರ್ಷ ಆಗಿರೋ ಹಿನ್ನೆಲೆಯಲ್ಲಿ ಆಕೆಯ ಬ*ಲಿಗೆ ಮಾಳವಿಕಾ ಸಿದ್ಧತೆ ನಡೆಸಿದ್ದಾಳೆ. ಆಕೆಯನ್ನು ಸಾಯಿಸಿದರೆ ತನಗೆ ಅಪಾರ ಶಕ್ತಿ ಬರುತ್ತದೆ ಎನ್ನುವ ಕಾರಣಕ್ಕೆ ಹಾಗೆ ಮಾಡಿದ್ದಾಳೆ.

27
ಹಿತಾಳ ಬ*ಲಿ ಪಡೆಯಲು ಸಿದ್ಧತೆ

ಇದೇ ಕಾರಣಕ್ಕೆ ಮಾಂತ್ರಿಕ ಹಿತಾಳ ಜೀವವನ್ನು ಬ*ಲಿ ಪಡೆಯುವುದಕ್ಕಾಗಿ ರಕ್ಕಸ ಹದ್ದೊಂದನ್ನು ಕಳುಹಿಸಿದ್ದಾನೆ. ಹುಟ್ಟುಹಬ್ಬದಂದು ದುರ್ಗಾ ಜೊತೆ ಹಿತಾ ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಹಿತಾಳನ್ನು ಬಲಿ ಪಡೆಯುವುದಕ್ಕಾಗಿ ಹದ್ದು ಹಾರಿ ಬಂದು ಹಿತಾಳನ್ನು ಮೇಲಕ್ಕೆ ಕರೆದುಕೊಂಡು ಹೋಗಿದೆ.

37
ಅಂಬಿಕಾಳನ್ನು ಕಟ್ಟಿ ಹಾಕಿದ ಮಾಂತ್ರಿಕ

ಆ ಸಂದರ್ಭದಲ್ಲಿ, ಅಂಬಿಕಾ ಮಗಳನ್ನು ಕಾಪಾಡುವುದಕ್ಕೆ ಮುಂದಾದಾಗ ಮಾಂತ್ರಿಕ ತನ್ನ ಶಕ್ತಿಯಿಂದ ಆಕೆಯನ್ನು ಕಟ್ಟಿಹಾಕಿದ್ದಾನೆ. ಅಲ್ಲಿಯೇ ಇದ್ದ ದುರ್ಗಾ ಮಗುವನ್ನು ಕಾಪಾಡಲು ನೋಡಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಆ ಹದ್ದುವಿನಿಂದ ಕಾಪಾಡಲು ಹೋದಾಗ, ದುರ್ಗಾ ಮತ್ತು ಹಿತಾ ಇಬ್ಬರನ್ನೂ ಮಗು ಬೀಳಿಸುತ್ತದೆ.

47
ದೇವಿಯ ಅವತಾರದಲ್ಲಿ ದುರ್ಗಾ

ಆ ಸಮಯದಲ್ಲಿ ಅವರನ್ನು ಕಾಪಾಡಲು ಅಂಬಿಕಾಗೂ ಸಾಧ್ಯವಾಗುವುದಿಲ್ಲ. ಅಂಬಿಕಾ ದೇವಿಯ ಮೊರೆ ಹೋದಾಗ, ದುರ್ಗಾಳೇ ದೇವಿಯ ಅವತಾರ ಎತ್ತುತ್ತಾಳೆ. ಅಲ್ಲಿಯೇ ಇದ್ದ ತ್ರಿಶೂಲವನ್ನು ತೆಗೆದುಕೊಂಡು ದೇವಿಯಾಗುತ್ತಾಳೆ ದುರ್ಗಾ.

57
ರಕ್ಕಸ ಪಕ್ಷಿಯ ಸಂಹಾರ

ಕೊನೆಗೆ ಆ ತ್ರಿಶೂಲದಿಂದ ಆ ರಕ್ಕಸ ಪಕ್ಷಿಯನ್ನು ಸಾಯಿಸುತ್ತಾಳೆ. ಹೀಗೆ ದುರ್ಗಾಳ ದುರ್ಗಾವತಾರದ ಅನಾವರಣಗೊಳ್ಳುತ್ತದೆ. ಇದನ್ನು ನೋಡಿದ ಮೇಲೆ ಮಾಳವಿಕಾ ದುರ್ಗಾಳಿಗೆ ಏನು ಮಾಡುತ್ತಾಳೆ ಅವಳ ಶಕ್ತಿ ಗೊತ್ತಾಗತ್ತಾ| ಇದರಿಂದ ಮತ್ತೆ ದುರ್ಗಾಗೆ ಸಮಸ್ಯೆ ತಂದೊಡ್ಡುತ್ತಾಳಾ ಎನ್ನುವುದು ಇನ್ನಷ್ಟೇ ಕಾದು ನೋಡಬೇಕಿದೆ.

67
ಮಾಯಾ ಪ್ಲ್ಯಾನ್​

ಅಷ್ಟಕ್ಕೂ ದುರ್ಗಾ ಮತ್ತು ಶರತ್​ನನ್ನು ದೂರ ಮಾಡಲು ಮಾಯಾ ಪ್ಲ್ಯಾನ್​ ಮಾಡುತ್ತಲೇ ಇದ್ದಾಳೆ. ಒಂದು ಹಂತದಲ್ಲಿ ಶರತ್​ ತಪ್ಪು ತಿಳಿವಳಿಕೆಯಿಂದ ದುರ್ಗಾಳನ್ನು ಮನೆಯಿಂದ ಹೊರಕ್ಕೆ ಹಾಕಿದಾಗ ಮಾಳವಿಕಾನೆ ಆಕೆಯನ್ನು ಒಳಗೆ ಕರೆದುಕೊಂಡು ಬರುತ್ತಾಳೆ.

77
ದುರ್ಗಾ ಮಾಳವಿಕಾಗೆ ಅನಿವಾರ್ಯ

ಅದಕ್ಕೆ ಕಾರಣವೂ ಇದೆ. ದುರ್ಗಾ ಮತ್ತು ಶರತ್​ ಮದುವೆಯಾದದ್ದು ಹೇಗೆ? ಅಂಬಿಕಾಗೂ ದುರ್ಗಾಗೂ ಏನು ಸಂಬಂಧ ಎನ್ನುವುದು ಅವಳಿಗೆ ಮುಖ್ಯವಾಗಿದೆ. ಅದನ್ನು ತಿಳಿದುಕೊಳ್ಳಬೇಕಿದ್ದರೆ ದುರ್ಗಾ ಆ ಮನೆಯಲ್ಲಿ ಇರುವುದು ಆಕೆಗೆ ಅನಿವಾರ್ಯವಾಗಿದೆ.

Read more Photos on
click me!

Recommended Stories