Janvi statement on Rakshitha: ಬಿಗ್‌ಬಾಸ್ ನಾಮಿನೇಷನ್ ಪ್ರಕ್ರಿಯೆಯಲ್ಲಿ, ತನ್ನನ್ನು ಅಂಡರ್‌ಎಸ್ಟಿಮೇಟ್ ಮಾಡಿ ನೀಡಿದ್ದ ಹಳೆಯ ಹೇಳಿಕೆಗಾಗಿ ರಕ್ಷಿತಾ ಶೆಟ್ಟಿ, ಜಾನ್ವಿಯನ್ನು ಪ್ರಶ್ನಿಸಿದ್ದಾರೆ. ರಕ್ಷಿತಾ ಅವರ ಖಡಕ್ ಉತ್ತರಕ್ಕೆ ಮನೆಯ ಸದಸ್ಯರೆಲ್ಲರೂ ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದ್ದಾರೆ.
ರಕ್ಷಿತಾ ಶೆಟ್ಟಿ ತಮ್ಮ ಅಭಿಪ್ರಾಯಗಳನ್ನು ಎಲ್ಲರ ಮುಂದೆ ಇರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿ ತಮ್ಮನ್ನು ಮನೆಯಿಂದ ಹೊರ ಹಾಕಲು ಜಾನ್ವಿ ನೀಡಿದ ಕಾರಣಕ್ಕೆ ರಕ್ಷಿತಾ ಶೆಟ್ಟಿ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ತಪ್ಪು ತಪ್ಪಾಗಿ ಮಾತನಾಡಿ ರಕ್ಷಿತಾ ಶೆಟ್ಟಿ ಬಿಗ್‌ಬಾಸ್ ಮನೆಗೆ ಬಂದಿದ್ದಾರೆ ಎಂದು ಜಾನ್ವಿ ಅಂಡರ್‌ಎಸ್ಟಿಮೇಟ್ ಮಾಡಿದ್ದರು.
25
ರಕ್ಷಿತಾ ಶೆಟ್ಟಿ ಪ್ರಶ್ನೆ
ನಾಮಿನೇಷನ್ ಪ್ರಕ್ರಿಯೆ ಸಂದರ್ಭದಲ್ಲಿ ಜಾನ್ವಿಯವರನ್ನು ನಾಮಿನೇಟ್ ಮಾಡಿರುವ ರಕ್ಷಿತಾ ಶೆಟ್ಟಿ, ಅದಕ್ಕೆ ಬಿಗ್‌ಬಾಸ್ ಸೂಚನೆಯಂತೆ ಸೂಕ್ತ ಕಾರಣ ನೀಡಿದ್ದಾರೆ. ತಪ್ಪು ತಪ್ಪು ಮಾತಾಡಿ ನಾನು ಇಲ್ಲಿಗೆ ಬಂದಿದ್ದೀನಿ ಅಂತ ಹೇಳಿದ್ದೀರಿ. ನಿಮಗೆ ನನ್ನ ಹಿನ್ನಲೆ ಏನು ಅಂತ ಗೊತ್ತಿಲ್ಲದೇ ಮಾತನಾಡೋದು ಎಷ್ಟು ಸರಿ ಎಂದು ರಕ್ಷಿತಾ ಶೆಟ್ಟಿ ಪ್ರಶ್ನೆ ಮಾಡಿದ್ದಾರೆ.
35
ಮನೆ ಮಂದಿಯಿಂದ ಚಪ್ಪಾಳೆ
ರಕ್ಷಿತಾ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಜಾನ್ವಿ, ಅದು ನನ್ನ ಅಭಿಪ್ರಾಯವಾಗಿತ್ತು ಎಂದಿದ್ದಾರೆ. ತಪ್ಪು ತಪ್ಪು ಮಾತನಾಡಿ ನೀವು ಕೂಡ ವೈರಲ್ ಆಗಬಹುದು. ಈ ರೀತಿ ಮಾತನಾಡೋದು ಸಹ ಒಂದು ಟ್ಯಾಲೆಂಟ್. ಅದು ನಿಮ್ಮಲ್ಲಿದೆಯಾ ಎಂದು ರಕ್ಷಿತಾ ಶೆಟ್ಟಿ ಕೇಳಿದ್ದಾರೆ. ಹಗ್ಗ ಸಡಿಲಿಸಿ ಜಾನ್ವಿಯನ್ನು ಬಿಗಿಯಾಗಿ ಹಿಡಿದ ರಕ್ಷಿತಾ ಮಾತುಗಳಿಗೆ ಮನೆ ಮಂದಿಯೆಲ್ಲಾ ಚಪ್ಪಾಳೆ ತಟ್ಟಿದ್ದಾರೆ. ನೀವು ಗೌರವ ನೀಡಿ ಮಾತನಾಡಿ ಎಂದು ರಕ್ಷಿತಾ ಸಲಹೆ ನೀಡಿದ್ದಾರೆ.
ಈ ಹಿಂದಿನ ಸಂಚಿಕೆಯಲ್ಲಿಯೂ ಗಾಂಚಾಲಿ ಪದ ಬಳಕೆಗೆ ರಕ್ಷಿತಾ ಶೆಟ್ಟಿ ಗೊಂದಲಕ್ಕೀಡಾಗಿದ್ರು. ನೀವು ಬಳಸುವ ಪದದ ಅರ್ಥ ಹೇಳಿ ಜಗಳ ಮುಂದುವರಿಸಿ ಎಂದಿದ್ದರು. ರಕ್ಷಿತಾ ಶೆಟ್ಟಿ ಒಂಟಿಯಾಗಿದ್ರೂ ಜಂಟಿಗಳ ಜೊತೆಯಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ.
ಬಿಗ್‌ಬಾಸ್ ಮನೆ ಪ್ರವೇಶಿಸಿದ ಕೆಲವೇ ಗಂಟೆಗಳಲ್ಲಿ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿ ಹೊರ ಬಂದು, ಒಂದು ವಾರ ಸೀಕ್ರೆಟ್ ರೂಮ್‌ನಲ್ಲಿದ್ದರು. ಮನೆಗೆ ಮತ್ತೆ ಹಿಂದಿರುಗುವ ಮುನ್ನ ಸುದೀಪ್ ಮುಂದೆ, ನನ್ನನ್ನು ನಾಮಿನೇಟ್ ಮಾಡಿದವರಿಗೆ ಪ್ರಾಪರ್ ರೀಸನ್ ಕೇಳುತ್ತೇನೆ ಎಂದಿದ್ದರು. ಇದೀಗ ಹಂತ ಹಂತವಾಗಿ ರಕ್ಷಿತಾ ಶೆಟ್ಟಿ ಪ್ರಶ್ನೆ ಮಾಡುತ್ತಿದ್ದಾರೆ.