ಜೀವನದಲ್ಲಿ ಒಮ್ಮೆಯಾದರೂ ಪ್ಯಾರಿಸ್‌ಗೆ ಹೋಗಿ ಐಫೆಲ್ ಟವರ್ ನೋಡಬೇಕು ಅನ್ನೋ ಆಸೆ ತುಂಬಾ ಜನರಿಗೆ ಇರುತ್ತೆ. ಆದರೆ, ನಮ್ಮ ದೇಶದಲ್ಲೇ ಒಂದು 'ಮಿನಿ ಪ್ಯಾರಿಸ್' ಇದೆ ಅನ್ನೋದು ನಿಮಗೆ ಗೊತ್ತಾ? ಆ ಸುಂದರ ನಗರ ಯಾವುದು ಅಂತ ಇಲ್ಲಿ ತಿಳಿಯಿರಿ.
ಪ್ಯಾರಿಸ್ ಅಂದಾಕ್ಷಣ ಐಫೆಲ್ ಟವರ್, ಸುಂದರವಾದ ಕಟ್ಟಡಗಳು ಹಾಗೂ ಅಗಲವಾದ ರಸ್ತೆಗಳು ನಮ್ಮ ಕಣ್ಮುಂದೆ ಬರುತ್ತವೆ. ಪ್ರಪಂಚದ ಅತ್ಯಂತ ಸುಂದರ ನಗರಗಳಲ್ಲಿ ಪ್ಯಾರಿಸ್ ಕೂಡ ಒಂದು. ಆದರೆ, ಇದೆಲ್ಲವನ್ನೂ ನೋಡಲು ನೀವು ಪ್ಯಾರಿಸ್‌ಗೆ ಹೋಗಬೇಕಿಲ್ಲ. ನಮ್ಮ ದೇಶದಲ್ಲೇ ಇಂಥದ್ದೊಂದು ನಗರವಿದೆ. ರಾಜಸ್ಥಾನದ ರಾಜಧಾನಿ ಜೈಪುರವನ್ನು 'ಪ್ಯಾರಿಸ್ ಆಫ್ ಇಂಡಿಯಾ' ಅಂತ ಕರೆಯುತ್ತಾರೆ.
23
ಜೈಪುರಕ್ಕೆ ‘ಪ್ಯಾರಿಸ್ ಆಫ್ ಇಂಡಿಯಾ’ ಅನ್ನೋ ಹೆಸರು ಬಂದಿದ್ದು ಹೇಗೆ?
ಜೈಪುರ ನೋಡಲು ತುಂಬಾ ಸುಂದರವಾಗಿದೆ. ಇಲ್ಲಿ ಯಾರು ಬೇಕಾದರೂ ಇಷ್ಟಬಂದಂತೆ ಕಟ್ಟಡ ಕಟ್ಟುವಂತಿಲ್ಲ. ಒಂದು ಪಕ್ಕಾ ಮಾಸ್ಟರ್ ಪ್ಲಾನ್ ಪ್ರಕಾರ ಈ ನಗರವನ್ನು ಕಟ್ಟಿದ್ದಾರೆ. 18ನೇ ಶತಮಾನದಲ್ಲಿ ಮಹಾರಾಜ ಸವಾಯಿ ಜೈಸಿಂಗ್ II ಈ ನಗರವನ್ನು ವಿನ್ಯಾಸ ಮಾಡಿದರು. ಅಗಲವಾದ ರಸ್ತೆಗಳು, ಒಂದಕ್ಕೊಂದು ಸೇರುವ ಬೀದಿಗಳು ಹಾಗೂ ಸುಂದರವಾದ ಕಟ್ಟಡಗಳಿಂದ ಜೈಪುರ ಕಂಗೊಳಿಸುತ್ತದೆ.
ಜೈಪುರವನ್ನು ಪಿಂಕ್ ಸಿಟಿ ಅಂತ ಯಾಕೆ ಕರೆಯುತ್ತಾರೆ?
1876ರಲ್ಲಿ ವೇಲ್ಸ್ ಯುವರಾಜ ಆಲ್ಬರ್ಟ್ ಎಡ್ವರ್ಡ್ ಭೇಟಿ ನೀಡಿದಾಗ ಇಡೀ ನಗರಕ್ಕೆ ಗುಲಾಬಿ ಬಣ್ಣ ಬಳಿಯಲಾಗಿತ್ತು. ಅಂದಿನಿಂದ ಜನರು ಇದನ್ನು 'ಪಿಂಕ್ ಸಿಟಿ' ಅಂತಲೂ ಕರೆಯುತ್ತಾರೆ. ಜೈಪುರದ ಅಂದ ಕೇವಲ ಬಣ್ಣಕ್ಕೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿನ ಅದ್ಭುತ ಕಟ್ಟಡಗಳು ನಗರದ ರಾಜಗಾಂಭೀರ್ಯವನ್ನು ಹೆಚ್ಚಿಸಿವೆ.
33
ಜೈಪುರದಲ್ಲಿ ಖಂಡಿತ ನೋಡಲೇಬೇಕಾದ ಜಾಗಗಳು...
ಹವಾ ಮಹಲ್: ಜೈಪುರ ಅಂದಾಕ್ಷಣ ಟಕ್ ಅಂತ ನೆನಪಾಗುವುದೇ ಹವಾ ಮಹಲ್. ನೂರಾರು ಸಣ್ಣ ಕಿಟಕಿಗಳಿರುವ ಈ ಅರಮನೆಯಿಂದಲೇ ಅಂದು ರಾಜಮನೆತನದ ಮಹಿಳೆಯರು ಬೀದಿ ಉತ್ಸವಗಳನ್ನು ನೋಡುತ್ತಿದ್ದರು.
ಜೈಪುರ ಕೇವಲ ಕೋಟೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿನ ಹಳೆಯ ಬಜಾರ್‌ಗಳಲ್ಲಿ ಬಣ್ಣಬಣ್ಣದ ರಾಜಸ್ಥಾನಿ ಬಟ್ಟೆಗಳು, ಕರಕುಶಲ ವಸ್ತುಗಳು ಹಾಗೂ ಆಭರಣಗಳು ಪ್ರವಾಸಿಗರನ್ನು ಸೆಳೆಯುತ್ತವೆ. ರುಚಿಯಾದ ರಾಜಸ್ಥಾನಿ ಊಟ ಈ ಪ್ರವಾಸದ ಮಜಾವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇಲ್ಲಿಗೆ ಬರುವ ಪ್ರತಿಯೊಬ್ಬರಿಗೂ ಭಾರತದ ಇತಿಹಾಸ, ಸಂಸ್ಕೃತಿ ಹಾಗೂ ವಾಸ್ತುಶಿಲ್ಪ ಒಟ್ಟಿಗೆ ನೋಡಿದ ಅನುಭವವಾಗುತ್ತದೆ. ಪ್ಯಾರಿಸ್‌ಗೆ ಐಫೆಲ್ ಟವರ್ ಎಷ್ಟು ಫೇಮಸ್ಸೋ, ಜೈಪುರಕ್ಕೆ ಹವಾ ಮಹಲ್ ಅಷ್ಟೇ ಫೇಮಸ್.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.