ಗೋವಾ ಯಾಕೆ? ನಮ್ಮ ಪಕ್ಕದಲ್ಲೇ ಇದೆ 'ಆಂಧ್ರದ ಗೋವಾ'! ಬೆಂಗಳೂರು, ಕೋಲಾರದವರಿಗೆ ಕಡಿಮೆ ಬಜೆಟ್‌ಗೆ ಬೀಚ್ ಟ್ರಿಪ್‌!

Published : Oct 05, 2026, 02:39 PM IST

ಆಂಧ್ರಪ್ರದೇಶದ ಚೀರಾಲ್ ಬೀಚ್ ಅನ್ನು 'ಆಂಧ್ರದ ಗೋವಾ' ಎಂದು ಕರೆಯಲಾಗುತ್ತದೆ. ಇಲ್ಲಿ ಕಡಿಮೆ ಜನದಟ್ಟಣೆ, ವಾಟರ್ ಸ್ಪೋರ್ಟ್ಸ್, ತಾಜಾ ಸೀ ಫುಡ್, ಸುಂದರ ರೆಸಾರ್ಟ್‌ಗಳಿದ್ದು, ವೀಕೆಂಡ್ ಟ್ರಿಪ್‌ಗೆ ಹೇಳಿಮಾಡಿಸಿದ ಜಾಗವಾಗಿದೆ. ಕರ್ನಾಟಕದವರಿಗೂ ಈ ತಾಣ ಕಡಿಮೆ ಬಜೆಟ್ ಪ್ರವಾಸಿಗರಿಗೆ ಬೆಸ್ಟ್ ಆಯ್ಕೆಯಾಗಿದೆ.

PREV
17
ಆಂಧ್ರದ ಗೋವಾ: ವಾಟರ್ ಸ್ಪೋರ್ಟ್ಸ್, ಫ್ರೆಶ್ ಸೀ ಫುಡ್ ಟೂರ್ ಗೈಡ್

ವಿಶಾಲವಾದ ಸಮುದ್ರ ತೀರ, ಬಂಗಾರದ ಬಣ್ಣದ ಮರಳು, ಅಲೆಗಳ ಸದ್ದು, ತಣ್ಣನೆಯ ಗಾಳಿ.. ಇವೆಲ್ಲವನ್ನೂ ಎಂಜಾಯ್ ಮಾಡಲು ಪ್ರತಿ ಬಾರಿ ಗೋವಾಗೇ ಹೋಗಬೇಕಿಲ್ಲ. ಆಂಧ್ರಪ್ರದೇಶದ ಬಾಪಟ್ಲ ಜಿಲ್ಲೆಯಲ್ಲಿರುವ ಚೀರಾಲ್ ಕರಾವಳಿ (ವಾಡರೇವು, ರಾಮಪುರಂ) ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಗೋವಾದಷ್ಟೇ ಸುಂದರವಾದ ಹಾಗೂ ಪ್ರಶಾಂತವಾದ ವಾತಾವರಣ ಇರುವುದರಿಂದ ಪ್ರವಾಸಿಗರು ಇದನ್ನು ಪ್ರೀತಿಯಿಂದ 'ಆಂಧ್ರದ ಗೋವಾ' ಎಂದು ಕರೆಯುತ್ತಾರೆ. ಸಿಟಿ ಲೈಫ್‌ನ ಜಂಜಾಟದಿಂದ ರಿಲ್ಯಾಕ್ಸ್ ಆಗಲು ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಜೊತೆ ವೀಕೆಂಡ್ ಟ್ರಿಪ್ ಹೋಗಲು ಇದು ಬೆಸ್ಟ್ ಜಾಗ.

27
ಪ್ರಶಾಂತ ವಾತಾವರಣ, ಬಂಗಾರದ ಬಣ್ಣದ ಮರಳು

ಗೋವಾ ಅಥವಾ ಬೇರೆ ಫೇಮಸ್ ಬೀಚ್‌ಗಳಿಗೆ ಹೋಲಿಸಿದರೆ ಚೀರಾಲ್ ಬೀಚ್‌ನಲ್ಲಿ ಜನದಟ್ಟಣೆ ಕಡಿಮೆ. ಇಲ್ಲಿನ ಮೃದುವಾದ, ಬಂಗಾರದ ಬಣ್ಣದ ಮರಳು ಪ್ರವಾಸಿಗರನ್ನು ಸಖತ್ ಅಟ್ರಾಕ್ಟ್ ಮಾಡುತ್ತದೆ. ಬೆಳಗಿನ ಸೂರ್ಯೋದಯ ಹಾಗೂ ಸಂಜೆಯ ಸೂರ್ಯಾಸ್ತದ ಸಮಯದಲ್ಲಿ ಆಕಾಶ ಕಿತ್ತಳೆ ಮತ್ತು ಗುಲಾಬಿ ಬಣ್ಣಕ್ಕೆ ತಿರುಗುವ ದೃಶ್ಯ ಫೋಟೋಗ್ರಫಿಗೆ ಹೇಳಿಮಾಡಿಸಿದಂತಿದೆ. ಸಮುದ್ರದ ತೀರದಲ್ಲಿ ನಿಂತು ಅಲೆಗಳ ಸದ್ದು ಕೇಳುತ್ತಾ ವಾಕ್ ಮಾಡಿದರೆ ಮನಸ್ಸಿಗೆ ಸಿಕ್ಕಾಪಟ್ಟೆ ರಿಲ್ಯಾಕ್ಸ್ ಸಿಗುತ್ತದೆ.

37
ವಾಟರ್ ಸ್ಪೋರ್ಟ್ಸ್ ಹಾಗೂ ಬೀಚ್ ಆಕ್ಟಿವಿಟೀಸ್ ಥ್ರಿಲ್

ಸಮುದ್ರ ತೀರದಲ್ಲಿ ಸುಮ್ಮನೆ ವಾಕ್ ಮಾಡುವುದರ ಜೊತೆಗೆ, ಸ್ವಲ್ಪ ಅಡ್ವೆಂಚರ್ ಇಷ್ಟಪಡುವವರಿಗಾಗಿ ಇಲ್ಲಿ ಹಲವು ವಾಟರ್ ಸ್ಪೋರ್ಟ್ಸ್ ಇವೆ. ಎಟಿವಿ ರೈಡ್, ಜೆಟ್ ಸ್ಕೀ, ಸ್ಪೀಡ್ ಬೋಟಿಂಗ್, ಬನಾನಾ ಬೋಟ್ ರೈಡ್ ಹಾಗೂ ಬೀಚ್ ವಾಲಿಬಾಲ್ ಇಲ್ಲಿನ ಪ್ರಮುಖ ಆಕರ್ಷಣೆಗಳು. ಇವುಗಳ ಬೆಲೆ 500 ರಿಂದ 800 ರೂಪಾಯಿಗಳವರೆಗೆ ಇರುತ್ತದೆ. ಪ್ಯಾರಾಮೋಟರಿಂಗ್ ಮೂಲಕ ಚೀರಾಲ್ ಬೀಚ್ ಅನ್ನು ಮೇಲಿನಿಂದ ನೋಡುವ ಅವಕಾಶವೂ ಇದೆ. ಬೆಳಿಗ್ಗೆ ಮತ್ತು ಸಂಜೆ ಕುದುರೆ ಸವಾರಿ ಹಾಗೂ ಒಂಟೆ ಸವಾರಿ ಮಾಡುತ್ತಾ ಎಂಜಾಯ್ ಮಾಡಬಹುದು.

47
ಬೀಚ್ ರೆಸಾರ್ಟ್ ಹಾಗೂ ಕ್ಯಾಂಪ್‌ಫೈರ್ ನೈಟ್ ಲೈಫ್

ಪ್ರವಾಸಿಗರು ಉಳಿದುಕೊಳ್ಳಲು ಬೀಚ್ ಉದ್ದಕ್ಕೂ ಗೋವಾ ಸ್ಟೈಲ್‌ನ ಸುಂದರವಾದ ಪ್ರೈವೇಟ್ ರೆಸಾರ್ಟ್‌ಗಳು ಹಾಗೂ ಕಾಟೇಜ್‌ಗಳಿವೆ. "ಗೋಲ್ಡನ್ ಸ್ಯಾಂಡ್ಸ್ - ದಿ ಬೇ ರೆಸಾರ್ಟ್" ನಂತಹ ಬಜೆಟ್ ಹೋಟೆಲ್‌ಗಳಿಂದ ಹಿಡಿದು ಪ್ರೀಮಿಯಂ ಬೀಚ್ ರೆಸಾರ್ಟ್‌ಗಳವರೆಗೆ ಹಲವು ಆಯ್ಕೆಗಳಿವೆ. ರಾತ್ರಿ ಹೊತ್ತು ಸಮುದ್ರದ ಗಾಳಿ ಸವಿಯುತ್ತಾ ಓಪನ್ ಟಾಪ್ ಕ್ಯಾಂಪ್‌ಫೈರ್, ಮ್ಯೂಸಿಕ್ ನೈಟ್ಸ್ ಹಾಗೂ ಬೀಚ್ ಸೈಡ್ ಡಿನ್ನರ್ ಮೂಲಕ ಗೋವಾದ ನೈಟ್ ಲೈಫ್ ಫೀಲ್ ಅನ್ನು ಇಲ್ಲಿ ಎಂಜಾಯ್ ಮಾಡಬಹುದು.

57
ಬಾಯಲ್ಲಿ ನೀರೂರಿಸುವ ಫ್ರೆಶ್ ಸೀ ಫುಡ್

ಕರಾವಳಿ ಪ್ರದೇಶವಾಗಿರುವುದರಿಂದ ಚೀರಾಲ್ ಬೀಚ್ ಸುತ್ತಮುತ್ತ ಸಿಗುವ ಫ್ರೆಶ್ ಸೀ ಫುಡ್ ಊಟದ ಪ್ರಿಯರನ್ನು ಸಖತ್ ಸೆಳೆಯುತ್ತದೆ. ಮೀನುಗಾರರು ಪ್ರತಿದಿನ ಹಿಡಿದು ತರುವ ತಾಜಾ ಮೀನು, ಸೀಗಡಿ ಹಾಗೂ ಏಡಿಗಳಿಗೆ ಆಂಧ್ರದ ಮಸಾಲೆ ಬೆರೆಸಿ ಮಾಡುವ ಅಡುಗೆಗಳು ಬೀಚ್ ಶ್ಯಾಕ್ ಹಾಗೂ ರೆಸಾರ್ಟ್‌ಗಳಲ್ಲಿ ಸಿಗುತ್ತವೆ. ಅದರಲ್ಲೂ ಫಿಶ್ ಫ್ರೈ, ಪ್ರಾನ್ಸ್ ಫ್ರೈ ಹಾಗೂ ಸ್ಪೈಸಿ ಏಡಿ ಕರಿ ಇಲ್ಲಿನ ಸ್ಪೆಷಲ್.

ರಾಮಪುರಂ ಬೀಚ್ ಹಾಗೂ ಕೈಮಗ್ಗದ ಶಾಪಿಂಗ್

ಚೀರಾಲ್ ಹತ್ತಿರವಿರುವ ವಾಡರೇವು ಬೀಚ್‌ನಲ್ಲಿ ಮೀನುಗಾರರ ಜೀವನಶೈಲಿ ಹಾಗೂ ಬೆಳಗಿನ ಜಾವ ನಡೆಯುವ ಮೀನು ಹರಾಜು ಪ್ರಕ್ರಿಯೆಯನ್ನು ಕಣ್ಣಾರೆ ನೋಡಬಹುದು. ರಾಮಪುರಂ ಬೀಚ್ ತೆಂಗಿನ ಮರಗಳ ಸಾಲು ಹಾಗೂ ಪ್ರಶಾಂತ ವಾತಾವರಣದಿಂದಾಗಿ ರಿಲ್ಯಾಕ್ಸ್ ಆಗಲು ಬೆಸ್ಟ್ ಜಾಗ. ಹಾಗೆಯೇ 'ಮಿನಿ ಬಾಂಬೆ' ಎಂದೇ ಫೇಮಸ್ ಆಗಿರುವ ಚೀರಾಲ್ ಟೌನ್‌ನಲ್ಲಿ ಜಗತ್ಪ್ರಸಿದ್ಧ ರೇಷ್ಮೆ, ಕಾಟನ್ ಸೀರೆಗಳು ಹಾಗೂ ಕೈಮಗ್ಗದ ಬಟ್ಟೆಗಳನ್ನು ಕಡಿಮೆ ಬೆಲೆಗೆ ಶಾಪಿಂಗ್ ಮಾಡಬಹುದು.

67
ಕರ್ನಾಟಕದಿಂದ ಎಷ್ಟು ದೂರ?

ಬೆಂಗಳೂರಿನಿಂದ: ಸುಮಾರು 450-500 ಕಿ.ಮೀ ದೂರದಲ್ಲಿದೆ. ರೈಲು ಮಾರ್ಗದಲ್ಲಿ ಬೆಂಗಳೂರಿನಿಂದ ಚಿರಾಲಕ್ಕೆ ನೇರ ಸಂಪರ್ಕವಿದ್ದು, ರಾತ್ರಿಯ ಪ್ರಯಾಣದ ಬಳಿಕ ಮರುದಿನ ಬೆಳಿಗ್ಗೆ ಚಿರಾಲ ತಲುಪಬಹುದು. ರಸ್ತೆ ಮಾರ್ಗವಾಗಿ ತೆರಳುವವರು ಗುಂಟೂರು-ವಿಜಯವಾಡ ಮಾರ್ಗವಾಗಿ 9-10 ಗಂಟೆಗಳಲ್ಲಿ ತಲುಪಬಹುದು.

ಬಳ್ಳಾರಿಯಿಂದ: ಸುಮಾರು 400-450 ಕಿ.ಮೀ ದೂರವಿದೆ. ಬಳ್ಳಾರಿಯಿಂದ ರಾಯಚೂರು-ಗುಂಟೂರು ಮಾರ್ಗವಾಗಿ ತೆರಳುವುದು ಸುಲಭ. ಸ್ವಂತ ವಾಹನದಲ್ಲಿ ತೆರಳಲು ಇದು ಅತ್ಯುತ್ತಮ ಮಾರ್ಗ.

ಕೋಲಾರದಿಂದ: ಸುಮಾರು 420 ಕಿ.ಮೀ ದೂರವಿದ್ದು, ಚಿತ್ತೂರು-ನೆಲ್ಲೂರು ಮಾರ್ಗವಾಗಿ ತೆರಳಿದರೆ ಹಿತಕರವಾದ ಪ್ರಯಾಣ ಮಾಡಬಹುದು.

77
ಭೇಟಿ ನೀಡಲು ಬೆಸ್ಟ್ ಟೈಮ್ ಯಾವುದು?

ಅಕ್ಟೋಬರ್‌ನಿಂದ ಮಾರ್ಚ್ ತಿಂಗಳವರೆಗೆ ಇಲ್ಲಿನ ವಾತಾವರಣ ತುಂಬಾ ಆಹ್ಲಾದಕರವಾಗಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಭೇಟಿ ನೀಡುವುದು ಬೆಸ್ಟ್. ಹೈದರಾಬಾದ್, ವಿಜಯವಾಡ ಹಾಗೂ ಗುಂಟೂರಿನಿಂದ ಸುಲಭವಾಗಿ ತಲುಪಬಹುದಾದ ಈ 'ಆಂಧ್ರದ ಗೋವಾ', ಕಡಿಮೆ ಬಜೆಟ್‌ನಲ್ಲಿ ಫ್ಯಾಮಿಲಿ ಜೊತೆ ಟ್ರಿಪ್ ಹೋಗಲು ಒಂದು ಪರ್ಫೆಕ್ಟ್ ಆಪ್ಷನ್.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories