ಪ್ರೇಮಿಗಳ ದಿನ ಸೆಲಬ್ರೇಟ್ ಮಾಡೋಕೆ ಕಡಿಮೆ ಬಜೆಟ್‌ನಲ್ಲಿ ಈ ದೇಶಗಳಿಗೆ ಹೋಗ್ಬೋದು

First Published | Feb 13, 2024, 1:31 PM IST

ಪ್ರೇಮಿಗಳ ದಿನವನ್ನು ಸ್ಪೆಷಲ್ ಆಗಿ ಸೆಲಬ್ರೇಟ್ ಮಾಡಬೇಕೆಂದು ಎಲ್ಲಾ ಲವರ್ಸ್ ಬಯಸ್ತಾರೆ. ಯಾವುದಾದರೂ ಸುಂದರವಾದ ಜಾಗಕ್ಕೆ ವಿಸಿಟ್ ಮಾಡ್ಬೇಕು ಅಂತ ಪ್ಲಾನ್ ಮಾಡ್ತಾರೆ. ಆದ್ರೆ ಅಲ್ಲಿ ಇಲ್ಲಿ ಹೋಗೋದು ಯಾಕೆ, ಕಡಿಮೆ ಬಜೆಟ್‌ನಲ್ಲಿ ನೀವು ಫಾರಿನ್ ಟ್ರಿಪ್‌ಗೇ ಹೋಗಿ ಬರ್ಬೋದು.

ಥಾಯ್ಲೆಂಡ್
ಥಾಯ್ಲೆಂಡ್‌ ಬ್ಯಾಕಾಂಕ್‌ನಲ್ಲಿ ಸುಂದರವಾದ ಬೀಚ್‌ ಅತ್ಯಾಕರ್ಷಣೆಯಾಗಿದೆ. ಮಾತ್ರವಲ್ಲ ಇಲ್ಲಿನ ನೈಟ್‌ಫುಲ್‌ ಅದ್ಭುತಾಗಿರುತ್ತದೆ. ಸ್ಟ್ರೀಟ್‌ಫುಡ್‌ ಸವಿಯುವ ಮಜಾನೇ ಬೇರೆ. ನೀವು ಈ ಬಾರಿಯ ವ್ಯಾಲೆಂಟೈನ್‌ ಡೇಗೆ ನಿಮ್ಮ ಪಾರ್ಟ್‌ನರ್ ಜೊತೆ ಥಾಯ್ಲೆಂಡ್‌ನಲ್ಲಿ ಸಮಯ ಕಳೆಯಬಹುದು.

ಶ್ರೀಲಂಕಾ
ವ್ಯಾಲೆಂಟೈನ್ಸ್ ಡೇಗೆ ಪ್ರೇಮಿಗಳು ಕಡಿಮೆ ಬಜೆಟ್‌ನಲ್ಲಿ ವಿಸಿಟ್ ಮಾಡಬಹುದಾದ ಇನ್ನೊಂದ ಜಾಗಗಳಲ್ಲೊಂದು ಶ್ರೀಲಂಕಾ. ಅನುರಾಧಪುರ ಹಾಗೂ ಸಿಗಿರಿಯಾದಲ್ಲಿ ಶ್ರೀಲಂಕಾದ ಸಾಂಪ್ರದಾಯಿಕ ವೈಭವವನ್ನು ಕಣ್ತುಂಬಿಕೊಳ್ಳಬಹುದು.

Tap to resize

ನೇಪಾಳ
ನೇಪಾಳ ಬಜೆಟ್‌ ಫ್ಲೆಂಡ್ಲೀ ನಗರವಾಗಿದ್ದು, ಪ್ರೇಮಿಗಳು ಕಡಿಮೆ ಬಜೆಟ್‌ನಲ್ಲಿ ಇಲ್ಲಿಗೆ ಹೋಗಲು ಪ್ಲಾನ್ ಮಾಡಬಹುದು. ಕಾಠ್ಮಂಡುವಿನಲ್ಲಿ ಸುಂದರವಾದ ಟ್ರಕ್ಕಿಂಗ್ ಅನುಭವ ಪಡೆಯಬಹುದು. ಅದ್ಭುತವಾದ ರೆಸ್ಟೋರೆಂಟ್‌ಗಳು ಸಹ ಇಲ್ಲಿವೆ.

ಇಂಡೋನೇಷ್ಯಾ
ಕಡಿಮೆ ಬಜೆಟ್‌ನಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ಸ್ಟ್ರೀಟ್ ಫುಡ್‌, ಮನ ಮುಟ್ಟುವಂತಹ ಸುಂದರ ಪ್ರಕೃತಿಯ ದೃಶ್ಯಾವಳಿಯನ್ನು ನೋಡಬಹುದು. ಪ್ರೇಮಿಗಳು ಕಡಿಮೆ ಬಜೆಟ್‌ನಲ್ಲಿ ಇಂಡೋನೇಷ್ಯಾಗೆ ಹೋಗಿ ಬರಬಹುದು.

ವಿಯೆಟ್ನಾಂ
ಪ್ರೇಮಿಗಳು ಸಮಯ ಕಳೆಯಲು ವಿಯೆಟ್ನಾಂದ ಹಸಿರು ಪರಿಸರ ಅತ್ಯುತ್ತಮ ಜಾಗ. ಹನೋಯ್‌ನ ಸ್ಟ್ರೀಟ್‌, ಹಾಲ್‌ ಅನ್‌ನ ಸ್ಮಾರಕ ಕಣ್ಮನ ಸೆಳೆಯುವಂತಿದೆ. ಕಡಿಮೆ ಬಜೆಟ್‌ನಲ್ಲಿ ಪ್ರೇಮಿಗಳು ಇಲ್ಲಿಗೆ ವಿಸಿಟ್ ಮಾಡಬಹುದು.

ಮಲೇಷ್ಯಾ
ಪ್ರೇಮಿಗಳು ಮಲೇಷ್ಯಾಗೆ ಕೇವಲ 50000 ರೂ. ಖರ್ಚು ಮಾಡಿ ಹೋಗಿ ಬರಬಹುದು. ಇಲ್ಲಿನ ಕುವಾಲಾ ಲುಂಫೂರ್‌ನ ಸ್ಟ್ರೀಟ್‌ನಲ್ಲಿ ವಿಹರಿಸಿ ಖುಷಿಯಿಂದ ಸಮಯ ಕಳೆಯಬಹುದು. ಯುನೆಸ್ಕೋದಿಂದ ಹೆಸರು ಪಡೆದ ಚಾರ್ಜ್ ಟೌನ್‌ಗೂ ಭೇಟಿ ನೀಡಬಹುದು

ಭೂತಾನ್‌
ಸುಂದರವಾದ ಪ್ರಕೃತಿ, ಸಂಸ್ಕೃತಿಯನ್ನು ಬಿಂಬಿಸುವ ಸ್ಥಳಗಳನ್ನು ಹೊಂದಿರುವ ದೇಶ ಭೂತಾನ್‌. ಪ್ರೇಮಿಗಳು ಕಡಿಮೆ ಬಜೆಟ್‌ನಲ್ಲಿ ವ್ಯಾಲೆಂಟೈನ್ಸ್‌ ಡೇಗೆ ಇಲ್ಲಿ ವಿಸಿಟ್ ಮಾಡುತ್ತಾರೆ. 

Latest Videos

click me!