ಪ್ರತಿ ಚಳಿಗಾಲದಲ್ಲಿ ಬೆಂಗಳೂರು 'ಪಿಂಕ್ ಪ್ಯಾರಡೈಸ್' ಆಗಿ ಬದಲಾಗುತ್ತದೆ. ಈ ಮರಗಳನ್ನು ಜಪಾನ್‌ನ ಸಕುರಾ ಚೆರ್ರಿ ಹೂವುಗಳು ಎಂದು ತಪ್ಪಾಗಿ ಗ್ರಹಿಸಲಾಗಿದೆ. ಆದರೆ ಅಲ್ಲ ಇವು ದಕ್ಷಿಣ ಅಮೆರಿಕಾದ ಟಬೆಬುಯಾದಿಂದ ಹುಟ್ಟಿಕೊಂಡಿವೆ.
ಬೆನ್ನಿಗಾನಹಳ್ಳಿ ಕೆರೆ, ಕಬ್ಬನ್ ಪಾರ್ಕ್, ಮತ್ತು ಜಯನಗರ 4 ನೇ ಬ್ಲಾಕ್ ಈ ಸುಂದರವಾದ ದೃಶ್ಯವನ್ನು ಅನುಭವಿಸುವ ಬೆಂಗಳೂರಿನ ಪ್ರಸಿದ್ಧ ಸ್ಥಳಗಳಾಗಿದೆ.
ನಾಗರೀಕರು, ಪ್ರವಾಸಿಗರು ಮತ್ತು ಬೀದಿಗಳಲ್ಲಿ ಹಾದುಹೋಗುವ ಪ್ರತಿಯೊಬ್ಬರೂ ಕೂಡ ವರ್ಷದ ಈ ಸಮಯದಲ್ಲಿ ಬೆಂಗಳೂರು 'ಜಸ್ಟ್ ಲುಕಿಂಗ್ ವಾವ್' ಎಂದು ಹೇಳುತ್ತಾರೆ.
ಬೆಂಗಳೂರಿನ ಗ್ರಿಡ್‌ಲಾಕ್‌ನ ಬಗ್ಗೆ ಆಗಾಗ್ಗೆ ಬೈದುಕೊಳ್ಳುವ ನಾಗರಿಕರು ಈಗ ಸಿಲಿಕಾನ್ ಸಿಟಿಯ ಬೀದಿಗಳಲ್ಲಿ ಬಿದ್ದ ಪಿಂಕ್ ಬಣ್ಣದ ಹೂವುಗಳಿಗೆ ಮಾರು ಹೋಗಿದ್ದಾರೆ.
ಇನ್ನು ಇಷ್ಟು ಮಾತ್ರವಲ್ಲ ಏಪ್ರಿಲ್, ಮೇ, ಜೂನ್ ಮತ್ತು ಜುಲೈನಲ್ಲಿ ಡೆಲೋನಿಕ್ಸ್ ರೆಜಿಯಾ, ಗುಲ್ಮೊಹರ್ ಮರದ ಹೂವುಗಳು, ಮೇ ಫ್ಲವರ್ ಗಳು ನೋಡಬಹುದು. ಕೆಂಪು ಹೂ ಗೊಂಚಲುಗಳು ಮರವನ್ನು ಶೃಂಗರಿಸಿದಂತೆ ಕಾಣುತ್ತದೆ.
ಟಬೆಬುಯಾ ರೋಸಿಯಾ ಎಂದು ಕರೆಯಲ್ಪಡುವ ಪಿಂಕ್ ಹೂವು ಬೆಂಗಳೂರಿನ ಬೀದಿ ಬೀದಿಗಳಲ್ಲಿ ಅರಳಿ ನಿಂತಿದೆ. ಹಿಂದಿಯಲ್ಲಿ ಇದನ್ನು 'ಬಸಂತ್ ರಾಣಿ' ಎಂದು ಕರೆಯಲಾಗುತ್ತದೆ.
ಟಬೆಬುಯಾ ರೋಸಿಯಾ ಸಸ್ಯಗಳು ಶೀಘ್ರವಾಗಿ ಬೆಳೆಯುತ್ತವೆ. ಜನವರಿ, ಫೆಬ್ರವರಿ, ಮಾರ್ಚ್, ಏಪ್ರಿಲ್ ಸಾಮಾನ್ಯವಾಗಿ ಹೂಬಿಡುವ ಅವಧಿಯಾಗಿದೆ.
ಬೆಂಗಳೂರು ಸೇರಿದಂತೆ ಭಾರತಕ್ಕೆ ನೂರಾರು ಹೊಸ ಪ್ರಭೇದ ಮತ್ತು ತಳಿಯ ಸಸ್ಯಗಳನ್ನು ಪರಿಚಯಿಸಿದವರು ಜಿ.ಎಚ್.ಕೃಂಬಿಗಲ್. ಟಬೆಬುಯಾ ರೋಸಿಯಾ ಹೂವನ್ನೂ ಅವರೇ ಬೆಂಗಳೂರಿನ ಅಂದ ಹೆಚ್ಚಿಸಲು ನೆಟ್ಟಿದ್ದರು ಎನ್ನಲಾಗುತ್ತದೆ.
ಜಿ.ಎಚ್.ಕೃಂಬಿಗಲ್ ಬೆಂಗಳೂರಿನಲ್ಲಿರುವ ಲಾಲ್ ಬಾಗ್ ಸಸ್ಯೋದ್ಯಾನದ ಕ್ಯುರೇಟರ್ ಆಗಿ ಸೇವೆ ಸಲ್ಲಿಸಿದ್ದರು. ಅವರ ನೆನಪಿಗಾಗಿ ಲಾಲ್ ಬಾಗ್ ಉದ್ಯಾನವನದ ಪಕ್ಕದಲ್ಲಿ ರಾಷ್ಟ್ರೀಯ ವಿದ್ಯಾಶಾಲೆಯ ಮುಂದೆ ಸಾಗುವ ರಸ್ತೆಗೆ ಕೃಂಬಿಗಲ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ.