ಬನಾರಸ್‌ನಿಂದ ಬೆಂಗಳೂರಿಗೆ ಹೋಗಬೇಕಾ? ಕೆಲವು ಏರ್‌ಲೈನ್ಸ್‌ಗಳು ಭರ್ಜರಿ ಆಫರ್‌ಗಳನ್ನು ಕೊಡುತ್ತಿವೆ. ಈ ಹಿಂದೆ ಯಾವಾಗಲೂ ನಿರೀಕ್ಷೆ ಮಾಡದಷ್ಟು ಕಡಿಮೆ ಬೆಲೆಗೆ ಫ್ಲೈಟ್ ಟಿಕೆಟ್‌ಗಳು ಸಿಗುತ್ತಿವೆ. ರೈಲಿನ ಎಸಿ ಸೆಕೆಂಡ್ ಕ್ಲಾಸ್ ಟಿಕೆಟ್ ಬೆಲೆಯಲ್ಲಿ ವಿಮಾನದಲ್ಲಿಯೇ ಇದೀಗ ಬೆಂಗಳೂರಿಗೆ ಪ್ರಯಾಣ ಮಾಡಬಹುದು.
ಏರ್ ಇಂಡಿಯಾದಿಂದಲೂ ಅಗ್ಗದ ಟಿಕೆಟ್:
ಇದೇ ಜುಲೈ 1 ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಯಾನ ಸಂಸ್ಥೆಯಿಂದ ವಾರಣಾಸಿಯಿಂದ ಬೆಂಗಳೂರಿಗೆ ವಿಮಾನ ಅಗ್ಗದ ದರವನ್ನು ನೀಡಲಾಗುತ್ತಿದೆ. ಈ ವಿಮಾನ ಮಧ್ಯಾಹ್ನ 2.10ಕ್ಕೆ ಬನಾರಸ್‌ನಿಂದ ಹೊರಟು ಸಂಜೆ 5.05ಕ್ಕೆ ಬೆಂಗಳೂರು ತಲುಪುತ್ತದೆ. ಇದರ ಬೆಲೆ ಕೂಡ ₹4,250 ಆಗಿದೆ.
57
ಏರ್ ಇಂಡಿಯಾದಿಂದ 2ನೇ ವಿಮಾನ:
ಜುಲೈ 1 ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಯಾನ (Air India Express flight) ಸಂಸ್ಥೆಯಿಂದ 2ನೇ ವಿಮಾನ ರಾತ್ರಿ 8.35ಕ್ಕೆ ಬನಾರಸ್‌ನಿಂದ ಹೊರಟು ರಾತ್ರಿ 11.25ಕ್ಕೆ ಬೆಂಗಳೂರು ತಲುಪುತ್ತದೆ. ಇದರ ಬೆಲೆ ₹4,250 ಆಗಿದೆ.
67
ವಾರಣಾಸಿಯಿಂದ ಬೆಂಗಳೂರು ರೈಲು ಫಸ್ಟ್ ಕ್ಲಾಸ್ ಎಸಿ ಟಿಕೆಟ್ ₹6330
ಇದೇ ಜು.1ರಂದು ವಿಶೇಷ ರೈಲಿನ ಮೂಲಕ ಬರುವುದಾದರೆ ರೈಲು ಎಸಿ ಫಸ್ಟ್ ಕ್ಲಾಸ್ ಟಿಕೆಟ್ ಬೆಲೆ 6,330 ರೂ. ಇದೆ. ಇನ್ನು ಎಸಿ ಎರಡನೇ ದರ್ಜೆಯ ಟಿಕೆಟ್ ಬೆಲೆ 3900 ರೂ. ಜೊತೆಗೆ ಜಿಎಸ್‌ಟಿ ವಿಧಿಸಲಾಗುತ್ತದೆ. ಅಂದರೆ, ವಿಮಾನದ 2ನೇ ದರ್ಜೆಯ ಎಸಿ ಟಕೆಟ್ ದರದ ಹಣದಲ್ಲಿಯೇ ವಿಮಾನದ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣ ಮಾಡಬಹುದು.
77
ರೈಲಿನಲ್ಲಿ 2.5 ದಿನ; ವಿಮಾನದಲ್ಲಿ ಕೇವಲ 2.5 ಗಂಟೆ
ವಾರಣಾಸಿಯಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣ ಮಾಡಿದರೆ ನಿಮಗೆ 58 ಗಂಟೆಗಳಿಂದ 60 ಗಂಟೆಗಳು ಬೇಕಾಗುತ್ತದೆ. ಅಂದರೆ ಬರೋಬ್ಬರಿ ಎರಡೂವರೆ ದಿನಗಳು ಬೇಕಾಗುತ್ತದೆ. ಆದರೆ, ಅದೇ ಹಣದಲ್ಲಿ ವಿಮಾನದ ವಾರಣಾಸಿಯಿಂದ ಬೆಂಗಳೂರಿಗೆ ಬರಲು ಕೇವಲ 2 ಗಂಟೆ 30 ನಿಮಿಷಗಳಿಂದ 3 ಗಂಟೆಗಳು ಆಗುವುದು.