ರೈಲ್ವೆ ಪ್ರಯಾಣಿಕರ ಹಲವು ಪ್ರಶ್ನೆಗಳಿಗೆ ಇನ್ಮುಂದೆ ಒಂದೇ ಉತ್ತರ, ಅದುವೇ Swarail App

Published : May 18, 2025, 02:38 PM IST

Indian Railways Passengers: ಭಾರತೀಯ ರೈಲ್ವೆ ಪ್ರಯಾಣಿಕರಿಗಾಗಿ Swarail App ಬಿಡುಗಡೆ ಮಾಡಿದೆ. ಈ ಆಪ್ ಮೂಲಕ ಟಿಕೆಟ್ ಬುಕಿಂಗ್, ರೈಲು ಮಾಹಿತಿ, ಊಟ, ಪ್ರವಾಸೋದ್ಯಮ ಪ್ಯಾಕೇಜ್‌ಗಳು ಮತ್ತು ಲೈವ್ ಟ್ರ್ಯಾಕಿಂಗ್ ಸೇರಿದಂತೆ ಹಲವು ಸೇವೆಗಳನ್ನು ಪಡೆಯಬಹುದು.

PREV
15
ರೈಲ್ವೆ ಪ್ರಯಾಣಿಕರ ಹಲವು ಪ್ರಶ್ನೆಗಳಿಗೆ ಇನ್ಮುಂದೆ ಒಂದೇ ಉತ್ತರ, ಅದುವೇ Swarail App

ರೈಲು ಪ್ರಯಾಣಿಕರ ಎಲ್ಲಾ ಪ್ರಶ್ನೆಗಳಿಗೆ Swarail App ಉತ್ತರ ನೀಡಲಿದೆ. IRCTC ಪ್ರಯಾಣಿಕರಿಗಾಗಿ Swarail App ಬಿಡುಗಡೆ ಮಾಡಿದೆ. ಇದನ್ನು ಸೂಪರ್ ಆಪ್ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. Swarail App ಹೇಗೆ ಡೌನ್‌ಲೌಡ್ ಮಾಡಿಕೊಳ್ಳುವುದು? ಈ ಆಪ್‌ನಿಂದ ಪ್ರಯಾಣಿಕರಿಗೆ ಯಾವೆಲ್ಲಾ ಲಾಭಗಳಿವೆ ಎಂಬುದನ್ನು ನೋಡೋಣ ಬನ್ನಿ. 

25

ಒಂದು ಕೈಯಲ್ಲಿ ಲಗೇಜ್, ಮತ್ತೊಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ರೈಲು ಯಾವಾಗ ಬರುತ್ತೆ? ಯಾವ ಪ್ಲಾಟ್‌ಫಾರಂ? ನಮ್ಮ ಕೋಚ್ ಎಲ್ಲಿರುತ್ತೆ ಎಂದು ಹುಡುಕುತ್ತಿರುತ್ತಾರೆ. ಇನ್ನು ಕೆಲವರು ನಿಲ್ದಾಣದಲ್ಲಿ ರೆಸ್ಟ್ ರೂಮ್ ಎಲ್ಲಿದೆ ಅಂತಾನೂ ಸರ್ಚ್ ಮಾಡುತ್ತಿರುತ್ತಾರೆ. ಇದಕ್ಕಾಗಿ ಎರಡ್ಮೂರು ಅಪ್ಲಿಕೇಶನ್ ಬಳಕೆ ಮಾಡಬೇಕಾಗುತ್ತದೆ. 

35

ಇದೀಗ ಭಾರತೀಯ ಈ ಎಲ್ಲಾ ಪ್ರಶ್ನೆಗಳಿಗಹೆ ಉತ್ತರ ಕೊಡುವ ಒಂದೇ ಆಪ್ ಪರಿಚಯಿಸಿದೆ. ಎಲ್ಲಾ ಸೇವೆಗಳನ್ನು ಒಂದೇ ಆಪ್‌ನಡಿ ತೆಗೆದುಕೊಂಡು ಬರಲಾಗಿದೆ. ರೈಲ್ವೆ ಮಾಹಿತಿ ವ್ಯವಸ್ಥೆಗಳ ಕೇಂದ್ರ (CRIS) Swarail ಎಂಬ ಹೊಸ ಮೊಬೈಲ್ ಅಪ್ಲಿಕೇಶನ್ ಪರಿಚಯಿಸಿದೆ. ಗೂಗಲ್ ಪ್ಲೇ ಸ್ಟೋರ್ ಮೂಲಕ ಆಂಡ್ರಾಯ್ಡ್ ಬಳಕೆದಾರರು ಈ Swarail App ಡೌನ್‌ಲೌಡ್ ( ವರ್ಷನ್ v127) ಮಾಡಿಕೊಳ್ಳಬಹುದು. ಸದ್ಯ ಆಪಲ್ ಆಪ್ ಸ್ಟೋರ್‌ನಲ್ಲಿ Swarail App ಲಭ್ಯವಿಲ್ಲ. 

45
Indian Railways

ಟಿಕೆಟ್ ಕಾಯ್ದಿರಿಸುವಿಕೆ ಮತ್ತು ರೈಲು ಮಾಹಿತಿಯಿಂದ ಹಿಡಿದು ಊಟ, ಪ್ರವಾಸೋದ್ಯಮ ಪ್ಯಾಕೇಜ್‌ಗಳು ಮತ್ತು ಲೈವ್ ಟ್ರ್ಯಾಕಿಂಗ್‌ವರೆಗೆ ಎಲ್ಲಾ ಮಾಹಿತಿಯನ್ನು ಈ ಸೂಪರ್ ಆಪ್ ಒಳಗೊಂಡಿದೆ. ಎರಡ್ಮೂರು ಆಪ್‌ ಬಳಕೆ ಮಾಡುವ ತೊಂದರೆಯನ್ನು Swarail App ತಪ್ಪಿಸಲಿದೆ. IRCTC  ಲಾಗಿನ್ ಜೊತೆ ಈ ಅಪ್ಲಿಕೇಷನ್ ಬಳಕೆಗೆ ಅನುಮತಿಸಲಾಗುತ್ತದೆ.

55
Indian Railways

PNR ಸ್ಟೇಟಸ್, ಊಟ ಬುಕಿಂಗ್, ಪ್ಲಾಟ್‌ಫಾರಂ ಟಿಕೆಟ್, ರೈಲು ಆಗಮನ ಮತ್ತು ನಿರ್ಗಮನ ಸಮಯದ ಮಾಹಿತಿಯನ್ನು Swarail App ನಿಖರವಾಗಿ ಒದಗಿಸುತ್ತದೆ. ರೈಲಿನ ಲೈವ್ ಟ್ರ್ಯಾಕಿಂಗ್ ಸಹ ಪರಿಶೀಲಿಸುವ ಆಯ್ಕೆಯನ್ನು ಬಳಕೆದಾರರಿಗೆ ನೀಡಲಾಗಿದೆ. 

Read more Photos on
click me!

Recommended Stories