Budget travel India: ಪ್ರವಾಸ ಮಾಡುವುದೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಆದರೆ ಕೈಯಲ್ಲಿ ಹೆಚ್ಚಿನ ಹಣವಿಲ್ಲ ಎಂಬ ಕಾರಣಕ್ಕೆ ಅನೇಕರು ತಮ್ಮ ಪ್ರವಾಸದ ಯೋಜನೆಯನ್ನು ಮುಂದೂಡುತ್ತಾರೆ. ಆದರೆ ನೆನಪಿಡಿ, ಭಾರತದ ಸೌಂದರ್ಯವನ್ನು ಸವಿಯಲು ಯಾವಾಗಲೂ ಲಕ್ಷಾಂತರ ರೂಪಾಯಿಗಳ ಅಗತ್ಯವಿಲ್ಲ.
ಬಜೆಟ್ ಕೇವಲ 10,000 ರೂಪಾಯಿ ಮಾತ್ರ ಇದೆ ಎಂದು ಪ್ರವಾಸದ ಪ್ಲಾನ್ ಕೈಬಿಡುತ್ತಿದ್ದೀರಾ? ಇಷ್ಟು ಕಡಿಮೆ ಹಣದಲ್ಲಿ ಭಾರತ ಸುತ್ತುವುದು ಕಷ್ಟ ಎಂದು ನೀವು ಭಾವಿಸಿರಬಹುದು. ಆದರೆ ಸರಿಯಾದ ಯೋಜನೆ ಮತ್ತು ಚಾಣಾಕ್ಷತನದಿಂದ ಖರ್ಚು ಮಾಡಿದ್ರೆ ಭಾರತದ ಅದ್ಭುತ ತಾಣಗಳನ್ನು ಆರಾಮಾಗಿ ನೋಡಿ ಬರಬಹುದು. ಬಜೆಟ್ ಸ್ನೇಹಿ ಪ್ರವಾಸ ಮಾಡಲು ಬಯಸುವವರಿಗಾಗಿ ಇಲ್ಲಿವೆ ಕೆಲವು ಅತ್ಯುತ್ತಮ ಆಯ್ಕೆಗಳು ಮತ್ತು ಪ್ರವಾಸದ ಟಿಪ್ಸ್.
29
ಗೋವಾ
ಇದು ಭಾರತದ ಪ್ರಸಿದ್ಧ ಪಾರ್ಟಿ ಡೆಸ್ಟಿನೇಶನ್. ಆದರೆ ಇದನ್ನು ಈ ಬಜೆಟ್‌ನಲ್ಲಿ ಎಂಜಾಯ್ ಮಾಡಬಹುದು. ಬಸ್ ಮೂಲಕ ಕೇವಲ 800 ರೂಪಾಯಿಯಲ್ಲಿ ಗೋವಾ ತಲುಪಬಹುದು. ದಕ್ಷಿಣ ಗೋವಾದಲ್ಲಿ ಸ್ನೇಹಿತರೊಂದಿಗೆ ಸಮುದ್ರ ತೀರದ ಮೋಜು ಸವಿಯಬಹುದು.
39
ವರ್ಕಲಾ (ಕೇರಳ)
ಸುಂದರ ಸಮುದ್ರ ತೀರಗಳನ್ನು ಹೊಂದಿರುವ ಕರಾವಳಿ ಪಟ್ಟಣವಿದು. ತಿರುವನಂತಪುರಂನಿಂದ ಇಲ್ಲಿಗೆ ಕೇವಲ 50 ರೂಪಾಯಿ ರೈಲು ದರವಿದೆ. ಇಲ್ಲಿ ಅಗ್ಗದ ಹೋಮ್‌ಸ್ಟೇ ಆಯ್ಕೆಗಳು ಲಭ್ಯವಿವೆ.
ಸಂಸ್ಕೃತಿ ಮತ್ತು ಪರಂಪರೆಗೆ ಈ ಜಾಗ ಹೆಸರುವಾಸಿ. 3 ದಿನಗಳ ಪ್ರವಾಸವನ್ನು ಸುಮಾರು 5,500 ರೂಪಾಯಿಯಲ್ಲಿ ಪೂರ್ಣಗೊಳಿಸಬಹುದು. ರೈಲು ಪ್ರಯಾಣದ ಮೂಲಕ ಹಣ ಉಳಿಸಬಹುದು ಮತ್ತು ಇಲ್ಲಿನ ಸುಂದರ ಕೋಟೆ ಹಾಗೂ ಮರುಭೂಮಿಯನ್ನು ಆನಂದಿಸಬಹುದು.
59
ತವಾಂಗ್ (ಅರುಣಾಚಲ ಪ್ರದೇಶ)
ಇದು ಅತ್ಯಂತ ಶಾಂತ ಮತ್ತು ಸುಂದರವಾದ ಗಿರಿಧಾಮ. ಇಲ್ಲಿನ ನೈಸರ್ಗಿಕ ಸೌಂದರ್ಯ ಮನಮೋಹಕವಾಗಿದೆ. ಅಸ್ಸಾಂನ ತೇಜಪುರ ರೈಲ್ವೆ ನಿಲ್ದಾಣದಿಂದ ಬಸ್ ಮೂಲಕ ಕೇವಲ 200 ರೂಪಾಯಿಯಲ್ಲಿ ಇಲ್ಲಿಗೆ ತಲುಪಬಹುದು. ಇಲ್ಲಿ ಉಳಿದುಕೊಳ್ಳಲು ಮತ್ತು ಊಟಕ್ಕೆ ಸುಮಾರು 3,000 ರೂಪಾಯಿ ಸಾಕು.
69
ಕೌಸಾನಿ (ಉತ್ತರಾಖಂಡ)
ಹಿಮಾಲಯದ ತಪ್ಪಲಿನಲ್ಲಿರುವ ಈ ಪುಟ್ಟ ಹಳ್ಳಿ ಪೋಸ್ಟ್ ಕಾರ್ಡ್‌ನಂತೆ ಸುಂದರವಾಗಿದೆ. ದೆಹಲಿಯಿಂದ ಇಲ್ಲಿಗೆ ಪ್ರಯಾಣಿಸುವುದು ಸುಲಭ. ದಿನವೊಂದಕ್ಕೆ ಇಲ್ಲಿ ಸುಮಾರು 1,500 ರೂಪಾಯಿ ಖರ್ಚಾಗುತ್ತದೆ. ಯಾವುದೇ ಟೂರ್ ಪ್ಯಾಕೇಜ್ ಇಲ್ಲದೆ ನೀವೇ ಸ್ವತಃ ಆನ್‌ಲೈನ್ ಮಾಹಿತಿ ಪಡೆದು ಇಲ್ಲಿ ಸುತ್ತಾಡಬಹುದು.
79
ಹೇಮಿಸ್ (ಲಡಾಖ್)
ಲೇಹ್ ತಹಸಿಲ್‌ನಲ್ಲಿರುವ ಈ ತಾಣ ಸರಳತೆ ಮತ್ತು ಸೌಂದರ್ಯಕ್ಕೆ ಹೆಸರುವಾಸಿ. ಮನಾಲಿ ಟ್ರಕ್ ಮೂಲಕ ಕೇವಲ 500 ರೂಪಾಯಿಯಲ್ಲಿ ಲೇಹ್ ತಲುಪಬಹುದು. ಇಲ್ಲಿ ಊಟ ಮತ್ತು ವಸತಿ ವೆಚ್ಚ ಅತ್ಯಂತ ಕಡಿಮೆ ಇರುವುದರಿಂದ ಸಾಹಸ ಪ್ರಿಯರಿಗೆ ಇದು ಸೂಕ್ತ ಜಾಗ.
89
ಕುಲ್ಲು (ಹಿಮಾಚಲ ಪ್ರದೇಶ)
ನಾಲ್ಕು ದಿನಗಳ ಪ್ರವಾಸಕ್ಕೆ ಇದು ಹೇಳಿ ಮಾಡಿಸಿದ ಜಾಗ. ಕೇವಲ 5,000 ರೂಪಾಯಿಯಲ್ಲಿ 4 ದಿನಗಳ ಟ್ರಿಪ್ ಮುಗಿಸಬಹುದು. ಇಲ್ಲಿಗೆ ಹತ್ತಿರದಲ್ಲಿರುವ ರಶೋಲ್ ಮತ್ತು ಕಸೋಲ್ ತಾಣಗಳಿಗೂ ಭೇಟಿ ನೀಡಬಹುದು.
99
ಟಿಪ್
ಪ್ರವಾಸದ ವೇಳೆ ಹೆಚ್ಚು ಹಣ ಉಳಿಸಲು ಯಾವಾಗಲೂ ಸಾರ್ವಜನಿಕ ಸಾರಿಗೆ (ಬಸ್ ಅಥವಾ ರೈಲು) ಬಳಸಿ ಮತ್ತು ಸ್ಥಳೀಯ ಹೋಮ್‌ಸ್ಟೇಗಳಲ್ಲಿ ವಾಸ್ತವ್ಯ ಹೂಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.