Travel Guide: ಜನವರಿ - ಡಿಸೆಂಬರ್… ಯಾವ ತಿಂಗಳು, ಯಾವ ತಾಣ ಟ್ರಾವೆಲ್ ಮಾಡಲು ಬೆಸ್ಟ್?

Published : Feb 16, 2026, 04:42 PM IST

Travel Guide: ನೀವು ಟ್ರಾವೆಲ್ ಪ್ರಿಯರಾಗಿದ್ದು, ಜನವರಿಯಿಂದ ಹಿಡಿದು, ಡಿಸೆಂಬರ್ ವರೆಗೂ ನೀವು ಯಾವುದೇ ತಾಣಕ್ಕೆ ಹೋಗಲು ಈವಾಗಲೇ ಪ್ಲ್ಯಾನ್ ಮಾಡುತ್ತಿದ್ದರೆ. ಈ ಲೇಖನ ನಿಮಗಾಗಿ. ಯಾವ ತಿಂಗಳು ಯಾವ ಪ್ರದೇಶಕ್ಕೆ ಹೋಗಲು ಬೆಸ್ಟ್ ಎನ್ನುವ ಸಂಪೂರ್ಣ ವರದಿ ಇಲ್ಲಿದೆ. 

PREV
16
ಜನವರಿ- ಫೆಬ್ರವರಿ

ಜನವರಿ

  • ರಾಜಸ್ಥಾನ: ಪರ್ಫೆಕ್ಟ್ ಹವಾಮಾನ, ಮರುಭೂಮಿಯಲ್ಲಿನ ಉತ್ಸವ ಹಾಗೂ ಜೈಸಲ್ಮೇರ್ ಉತ್ಸವದಲ್ಲಿ ನಿಮ್ಮನ್ನು ನೀವು ಮರೆಯಬಹುದು
  • ಗುಜರಾತ್: ಕಛ್ ನ ರಣ್ ಉತ್ಸವ ನೋಡೋದೆ ಚೆಂದ
  • ಕೇರಳ: ತಂಪಾದ ವಾತಾವರಣದ ಜೊತೆಗೆ ಪ್ರಕೃತಿ ಸೌಂದರ್ಯವನ್ನು ಎಂಜಾಯ್ ಮಾಡಬಹುದು.

ಫೆಬ್ರವರಿ

  • ಗೋವಾ: ಸುಂದರವಾದ ಬೀಚ್ ಹಾಗೂ ತಂಪಾದ ವಾತಾವರಣ ಜೊತೆಗೆ ಪಾರ್ಟಿ ಮಾಡಿ
  • ರಾಜಸ್ಥಾನ: ಉದಯಪುರದಲ್ಲಿ ರೋಮ್ಯಾಂಟಿಕ್ ಸೀಸನ್ ಎಂಜಾಯ್ ಮಾಡಿ
  • ಅಸ್ಸಾಂ : ಫೆಬ್ರವರಿ ಕಾಜಿರಂಗ ಸಫಾರಿ ಮಾಡಲು ಅತ್ಯುತ್ತಮ ಸಮಯ ಮಿಸ್ ಮಾಡ್ಬೇಡಿ.
26
ಮಾರ್ಚ್- ಎಪ್ರಿಲ್

ಮಾರ್ಚ್

  • ಉತ್ತರಪ್ರದೇಶ: ಮಥುರ,ಬೃಂದಾವನದಲ್ಲಿ ಹೋಲಿ ಬಣ್ಣಗಳಲ್ಲಿ ಮಿಂದೇಳಿ.
  • ಸಿಕ್ಕಿಂ: ತಂಪಾದ ವಾತಾವರಣ ಹಾಗೂ ಬಣ್ಣ ಬಣ್ಣದ ಹೂವುಗಳ ಲೋಕದಲ್ಲಿ ಕಳೆದು ಹೋಗಿ
  • ಹಂಪಿ: ಐತಿಹಾಸಿಕ ತಾಣಗಳನ್ನು ಕಣ್ತುಂಬಿಕೊಳ್ಳಲು ಮಾರ್ಚ್ ಬೆಸ್ಟ್.

ಏಪ್ರಿಲ್

  • ಹಿಮಾಚಲ್ ಪ್ರದೇಶ: ಬೇಸಿಗೆಯ ಬಿಸಿಲನ್ನು ದೂರ ಮಾಡಲು ಬೆಸ್ಟ್ ಸ್ಥಳ
  • ಪಶ್ಚಿಮ ಬಂಗಾಳ: ಪ್ರಕೃತಿ ಸೌಂದರ್ಯವನ್ನು ತುಂಬಿಕೊಂಡಿರುವ ಡಾರ್ಜಿಲಿಂಗ್ ಭೇಟಿ ನೀಡದೇ ಇದ್ದರೆ ಹೇಗೆ?
  • ತಮಿಳುನಾಡು: ಊಟಿ ಕೊಡೈಕೆನಲ್ ಹೂರಾಶಿಯನ್ನು ಮಿಸ್ ಮಾಡದೇ ನೋಡಿ.
36
ಮೇ-ಜೂನ್

ಮೇ

  • ಲಡಾಕ್: ಲಡಾಕ್ ರಸ್ತೆಯಲ್ಲಿ ಬೈಕ್ ರೈಡ್ ಮಾಡೋದೆ ಚಂದ.
  • ಉತ್ತರಖಂಡ್: ಮಸೂರಿ ಮೊದಲಾದ ಸುಂದರ ತಾಣಗಳನ್ನು ವೀಕ್ಷಿಸಿ.
  • ಅರುಣಾಚಲ ಪ್ರದೇಶ: ನಗರದ ಸೌಂದರ್ಯವನ್ನು ಸವಿಯಲು ಮೇ ಪರ್ಫೆಕ್ಟ್ ತಿಂಗಳು.

ಜೂನ್

  • ಕರ್ನಾಟಕ: ಆಗಷ್ಟೇ ಮಳೆ ಆರಂಭವಾದ ಸಮಯದಲ್ಲಿ ಕೂರ್ಗ್ ವೆದರ್, ಪ್ರಕೃತಿ ಎಂಜಾಯ್ ಮಾಡಬಹುದು
  • ಮೇಘಾಲಯ: ಜಲಪಾತಗಳನ್ನ ಕಣ್ತುಂಬಿಕೊಳ್ಳಬಹುದು ಜೂನ್ ಸರಿಯಾದ ತಿಂಗಳು
  • ರಾಜಸ್ಥಾನ: ಮೌಂಟ್ ಅಬು ಭೇಟಿ ನೀಡಿ,ಇದು ರಾಜಸ್ಥಾನದ ಅದ್ಭುತ ಲೋಕ.
46
ಜುಲೈ-ಆಗಸ್ಟ್

ಜುಲೈ

ಕೇರಳದ ಮುನ್ನಾರ್ ನ ಹಚ್ಚಹಸಿರಿನ ತಾಣಗಳನ್ನು, ಉತ್ತರಕಾಂಡ ವ್ಯಾಲ್ಯೂ ಆಫ್ ಫ್ಲವರ್ಸ್ ಕಣ್ತುಂಬಿಕೊಳ್ಳಬಹುದು. ಜೊತೆಗೆ ಮಹಾರಾಷ್ಟ್ರದ ಕೊಂಕಣ್ ವಾಟರ್ ಫಾಲ್ಸ್ ಗಳನ್ನು ನೋಡುತ್ತಾ ಕಳೆದು ಹೋಗಬಹುದು.

ಆಗಸ್ಟ್

  • ಕೇರಳ: ಓಣಂ ಹಾಗೂ ಬೋಟ್ ರೇಸ್ ನಡೆಯುತ್ತದೆ , ಹಬ್ಬವನ್ನು, ಓಣಂ ಸಾದ್ಯವನ್ನು ಎಂಜಾಯ್ ಮಾಡಬಹುದು.
  • ಹಿಮಾಚಲ ಪ್ರದೇಶ: ಸ್ಪಿಟಿ ವ್ಯಾಲಿಯಲ್ಲಿ ಬೆಸ್ಟ್ ಸಮಯ ಕಳೆಯಬಹುದು.
  • ರಾಜಸ್ಥಾನ: ಮಾನ್ಸೂನ್ ನೋಡಲು ಇದು ಬೆಸ್ಟ್ ಸಮಯವಾಗಿದೆ, ಮಿಸ್ ಮಾಡ್ಬೇಡಿ.
56
ಸೆಪ್ಟೆಂಬರ್ - ಅಕ್ಟೋಬರ್

ಸೆಪ್ಟೆಂಬರ್

  • ಅರುಣಾಚಲ ಪ್ರದೇಶ: ಜೈರೋ ವ್ಯಾಲಿಗೆ ಭೇಟಿ ನೀಡಿ, ಬೇರೆ ಲೋಕಕ್ಕೆ ಎಂಟ್ರಿ ಕೊಟ್ಟಂತಾಗುತ್ತದೆ.
  • ಮಹಾರಾಷ್ಟ್ರ: ಲೋನಾವಲದಲ್ಲಿ ಕೊಂಚ ಚಳಿ ಮಳೆ ಎರಡನ್ನೂ ಎಂಜಾಯ್ ಮಾಡಬಹುದು.
  • ಗೋವಾ: ಮಳೆಗಾಲ ಹಾಗೂ ಹಸಿರನ್ನ ಎರಡೂ ಸಖತ್ತಾಗಿದೆ. ಉತ್ತರ-ದಕ್ಷಿಣ ಗೋವಾ ಎರಡನ್ನೂ ಎಕ್ಸ್ ಪ್ಲೋರ್ ಮಾಡಿ.

ಅಕ್ಟೋಬರ್

  • ಉತ್ತರಪ್ರದೇಶ: ವಾರಣಾಸಿಯಲ್ಲಿ ಭಕ್ತಿಯಲ್ಲಿ ಮೈಮರೆಯಲ್ಲೂ ಉತ್ತಮ ತಿಂಗಳು
  • ಕೇರಳ: ಬ್ಯಾಕ್ ವಾಟರ್ ಹಾಗೂ ಹಿಲ್ ಸ್ಟೇಷನ್ ಭೇಟಿ ನೀಡಿ.
  • ಪಶ್ಚಿಮ ಬಂಗಾಲ: ದುರ್ಗಾ ಪೂಜೆಯಲ್ಲಿ ಕಳೆದು ಹೋಗಬಹುದು. ಪೂಜೆ, ಭಕ್ತಿ, ಊಟ ಎಲ್ಲವೂ ಸೂಪರ್.
66
ನವಂಬರ್ -ಡಿಸೆಂಬರ್

ನವೆಂಬರ್

  • ಪಂಜಾಬ್: ಗೋಲ್ಡನ್ ಟೆಂಪಲ್ ಜೊತೆಗೆ ಅಲ್ಲಿನ ಸುಂದರವಾದ ಹವಾಮಾನವನ್ನು ಎಂಜಾಯ್ ಮಾಡಬಹುದು.
  • ರಾಜಸ್ಥಾನ: ಈ ಸಮಯದಲ್ಲಿ ಪುಷ್ಕರ ಮೇಳ ಶುರುವಾಗುತ್ತದೆ. ಮಿಸ್ ಮಾಡ್ಭೇಡಿ.
  • ಗುಜರಾತ್ : ಎಷ್ಟೊಂದು ಪ್ರವಾಸಿ ತಾಣಗಳಿವೆ. ಹಲವು ಸ್ಥಳಗಳಲ್ಲಿ ಎಂಜಾಯ್ ಮಾಡಬಹುದು

ಡಿಸೆಂಬರ್

ಚಳಿಗಾಲವಾಗಿದ್ದು ಜೊತೆಗೆ ರಜೆ ತಿಂಗಳು ಕೂಡ ಆಗಿದೆ. ಈ ಸಮಯದಲ್ಲಿ ನೀವು ಉತ್ತರಖಂಡದಲ್ಲಿ ಎಂಜಾಯ್ ಮಾಡುತ್ತಾ, ಗೋವಾದಲ್ಲಿ ಕ್ರಿಸ್ಮಸ್ ಹಾಗೂ ಪಾರ್ಟಿ ಮಾಡುತ್ತಾ, ಅಥವಾ ಅಂಡಮಾನ್ ನಲ್ಲಿ ಸುಂದರ ಹವಾಮಾನದಲ್ಲಿ ಸಖತ್ ಆಗಿ ಎಂಜಾಯ್ ಮಾಡಬಹುದು. ಯಾವುದನ್ನು ಆಯ್ಕೆ ಮಾಡ್ತೀರಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories