Insurance Benefits: ಕೇವಲ 45 ಪೈಸೆಗೆ ಸಿಗುವ ರೈಲ್ವೆ ಪ್ರಯಾಣ ವಿಮೆ, ಅಪಘಾತವಾದರೆ ಸಾವು, ಅಂಗವೈಕಲ್ಯ ಮತ್ತು ಆಸ್ಪತ್ರೆ ಖರ್ಚಿಗೆ ಲಕ್ಷಾಂತರ ರೂಪಾಯಿ ಆರ್ಥಿಕ ಭದ್ರತೆ ಕೊಡುತ್ತದೆ. IRCTC ಯಲ್ಲಿ ಟಿಕೆಟ್ ಬುಕ್ ಮಾಡುವಾಗ ಈ ವಿಮೆಯನ್ನು ಸುಲಭವಾಗಿ ಆಯ್ಕೆ ಮಾಡಿಕೊಳ್ಳಬಹುದು.
ರೈಲ್ವೆ ಟಿಕೆಟ್ ಬುಕ್ ಮಾಡುವಾಗ, ಇನ್ಶೂರೆನ್ಸ್ ತೆಗೆದುಕೊಳ್ಳುವಂತೆ ನಮಗೆ ಸೂಚನೆ ಕಾಣಿಸುತ್ತದೆ. ಇದರಿಂದ ನಮಗಾಗುವ ಲಾಭಗಳೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
26
ಪ್ರಯಾಣ ವಿಮೆ ಯಾಕೆ ಬೇಕು?
ಕೇವಲ 45 ಪೈಸೆಗೆ, ಲಕ್ಷಾಂತರ ರೂಪಾಯಿ ಮೌಲ್ಯದ ಸುರಕ್ಷಾ ಕವಚ ನಿಮಗೆ ಸಿಗುತ್ತದೆ.
ಅಪಘಾತದಲ್ಲಿ ಸಾವು, ಶಾಶ್ವತ ಪೂರ್ಣ ಅಂಗವೈಕಲ್ಯ, ಭಾಗಶಃ ಅಂಗವೈಕಲ್ಯ ಮತ್ತು ಆಸ್ಪತ್ರೆ ಖರ್ಚುಗಳನ್ನು ಇದು ಒಳಗೊಳ್ಳುತ್ತದೆ.
ಅಪಘಾತವಾದರೆ ತಕ್ಷಣವೇ ಕಾನೂನುಬದ್ಧ ಪರಿಹಾರ ಪಡೆಯಲು ಇದು ನೆರವಾಗುತ್ತದೆ.
36
ರೈಲ್ವೆ ಪ್ರಯಾಣ ವಿಮೆಯಿಂದ ಎಷ್ಟು ಲಾಭ?
ಕೇವಲ 0.35-0.45 ಪೈಸೆಯ ಸಣ್ಣ ಪ್ರೀಮಿಯಂ ಕಟ್ಟಿ, ನಿಮ್ಮ ಮತ್ತು ನಿಮ್ಮ ಕುಟುಂಬದ ಆರ್ಥಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಬಹುದು. ಪ್ರಯಾಣದ ವೇಳೆ ದುರದೃಷ್ಟವಶಾತ್ ಮರಣ ಸಂಭವಿಸಿದರೆ, ನಿಮ್ಮ ನಾಮಿನಿಗೆ ₹10 ಲಕ್ಷದವರೆಗೆ ವಿಮಾ ರಕ್ಷಣೆ ಸಿಗುತ್ತದೆ.
ಅಪಘಾತದಿಂದ ಶಾಶ್ವತ ಪೂರ್ಣ ಅಂಗವೈಕಲ್ಯ ಉಂಟಾದರೆ, ಆಗಲೂ ₹10 ಲಕ್ಷದವರೆಗೆ ವಿಮಾ ರಕ್ಷಣೆ ಲಭ್ಯವಿದೆ.
ದೇಹದ ಕೆಲವು ಭಾಗಗಳಿಗೆ ಹಾನಿಯಾದರೆ, ಅಂದರೆ ಶಾಶ್ವತ ಭಾಗಶಃ ಅಂಗವೈಕಲ್ಯ ಉಂಟಾದರೆ, ₹7.5 ಲಕ್ಷದವರೆಗೆ ವಿಮಾ ರಕ್ಷಣೆ ಸಿಗುತ್ತದೆ.
ಆಸ್ಪತ್ರೆ ಚಿಕಿತ್ಸೆ ಅಥವಾ ಔಷಧಿ ವೆಚ್ಚಗಳಿಗಾಗಿ ₹2 ಲಕ್ಷದವರೆಗಿನ ಮೊತ್ತವನ್ನು ಸಹ ಕ್ಲೇಮ್ ಮಾಡಬಹುದು.
IRCTC ಯ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್‌ಗೆ ಲಾಗಿನ್ ಮಾಡಿ. ರೈಲು ಮತ್ತು ಪ್ರಯಾಣದ ದಿನಾಂಕವನ್ನು ನಮೂದಿಸಿ. ಪ್ರಯಾಣಿಕರ ಮಾಹಿತಿ ನೀಡಿದ ನಂತರ, ಪೇಮೆಂಟ್ ಪುಟಕ್ಕೆ ಹೋಗಿ. ಅಲ್ಲಿ 'ಟ್ರಾವೆಲ್ ಇನ್ಶೂರೆನ್ಸ್' ಆಯ್ಕೆ ಕಾಣಿಸುತ್ತದೆ. 'ಹೌದು' ಆಯ್ಕೆ ಮಾಡಿ ಅಥವಾ ಅದರ ಮುಂದೆ (✔) ಟಿಕ್ ಮಾಡಿ.
ನಿಮ್ಮ ಖಾತೆಯಿಂದ 35-45 ಪೈಸೆ ಕಡಿತಗೊಳ್ಳುತ್ತದೆ. ನಾಮಿನಿಯ ಹೆಸರು, ವಯಸ್ಸು ಮತ್ತು ಸಂಬಂಧದ ವಿವರಗಳೊಂದಿಗೆ ಫಾರ್ಮ್ ಭರ್ತಿ ಮಾಡಿ.
ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ ಪಾವತಿ ಪೂರ್ಣಗೊಳಿಸಿ. ಟಿಕೆಟ್ ಕನ್ಫರ್ಮ್ ಆದ ತಕ್ಷಣ ವಿಮೆ ತಾನಾಗಿಯೇ ಸಕ್ರಿಯಗೊಳ್ಳುತ್ತದೆ. ಪಾಲಿಸಿ ವಿವರಗಳು SMS ಅಥವಾ ಇಮೇಲ್ ಮೂಲಕ ನಿಮಗೆ ಬರುತ್ತವೆ.
56
ಅಪಘಾತವಾದರೆ ಕ್ಲೇಮ್ ಮಾಡುವುದು ಹೇಗೆ?
IRCTC ಮೂಲಕ ಆನ್‌ಲೈನ್‌ನಲ್ಲಿ (ಇ-ಟಿಕೆಟ್) ಟಿಕೆಟ್ ಬುಕ್ ಮಾಡಿರಬೇಕು. ಟ್ರಾವೆಲ್ ಇನ್ಶೂರೆನ್ಸ್ ಆಯ್ಕೆಯನ್ನು 'Yes' ಅಂತ ಕೊಟ್ಟಿರಬೇಕು. ನೀವು ಬುಕ್ ಮಾಡಿದ ಅದೇ ಟ್ರೇನ್ ಮತ್ತು ದಿನಾಂಕದಂದೇ ಅಪಘಾತ ಸಂಭವಿಸಿರಬೇಕು. SMS ಅಥವಾ ಇಮೇಲ್‌ನಲ್ಲಿ ಬಂದ ಇನ್ಶೂರೆನ್ಸ್ ಕಂಪನಿ ವಿವರಗಳನ್ನು ಸೇವ್ ಮಾಡಿಟ್ಟುಕೊಳ್ಳಿ.
ಪಾಲಿಸಿ ನಂಬರ್ ಮತ್ತು ಕ್ಲೇಮ್ ಹೆಲ್ಪ್‌ಲೈನ್ ನಂಬರ್ ನೋಟ್ ಮಾಡಿಕೊಳ್ಳಿ. ಆದಷ್ಟು ಬೇಗ ಇನ್ಶೂರೆನ್ಸ್ ಕಂಪನಿಗೆ ಫೋನ್, ಇಮೇಲ್ ಅಥವಾ ವೆಬ್‌ಸೈಟ್ ಮೂಲಕ ವಿಷಯ ತಿಳಿಸಿ.
ಮೆಡಿಕಲ್ ರಿಪೋರ್ಟ್, ಆಸ್ಪತ್ರೆ ಬಿಲ್, ಡಿಸ್ಚಾರ್ಜ್ ಸ್ಲಿಪ್‌ನಂತಹ ಎಲ್ಲಾ ಬೇಕಾದ ಡಾಕ್ಯುಮೆಂಟ್‌ಗಳನ್ನು ರೆಡಿ ಇಟ್ಟುಕೊಳ್ಳಿ. ಸಾವಿನ ಸಂದರ್ಭದಲ್ಲಿ, ಮರಣ ಪ್ರಮಾಣಪತ್ರ, ಪೋಸ್ಟ್‌ಮಾರ್ಟಮ್ ವರದಿ ಮತ್ತು GRP-ರೈಲ್ವೆ ಪೊಲೀಸ್ ವರದಿಯನ್ನು ಸಲ್ಲಿಸಬೇಕು. ರೈಲಿನ ನಂಬರ್ ಮತ್ತು ಅಪಘಾತದ ವಿವರಗಳೊಂದಿಗೆ ಇನ್ಶೂರೆನ್ಸ್ ಕಂಪನಿಯ ಕ್ಲೇಮ್ ಫಾರ್ಮ್ ತುಂಬಿ. ನೀವು ಡಾಕ್ಯುಮೆಂಟ್ಸ್ ಕೊಟ್ಟ ಮೇಲೆ, ಕಂಪನಿಯು ಕ್ಲೇಮ್ ಪರಿಶೀಲಿಸುತ್ತದೆ. ಹಣವನ್ನು ನೇರವಾಗಿ ನಾಮಿನಿಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
66
ರೈಲು ಟಿಕೆಟ್ ಬುಕ್ ಮಾಡುವಾಗ ಈ ಅಂಶಗಳನ್ನು ಗಮನದಲ್ಲಿಡಿ
IRCTC ಯಲ್ಲಿ ಟಿಕೆಟ್ ಬುಕ್ ಮಾಡುವಾಗ ಈ ವಿಮೆ ಕಡ್ಡಾಯವಲ್ಲ, ನಿಮ್ಮ ಆಯ್ಕೆಗೆ ಬಿಟ್ಟಿದ್ದು.
ಇದರ ಪ್ರೀಮಿಯಂ ಕೇವಲ 35 ರಿಂದ 45 ಪೈಸೆ ಮಾತ್ರ.
ರೈಲು ಟಿಕೆಟ್ ಬುಕ್ ಮಾಡುವಾಗ ಯಾವಾಗಲೂ ಟ್ರಾವೆಲ್ ಇನ್ಶೂರೆನ್ಸ್ ಆಯ್ಕೆ ಮಾಡಿಕೊಳ್ಳಿ.
ಅಪಘಾತವಾದರೆ, ಈ 45 ಪೈಸೆಯ ವಿಮೆಯೇ ಲಕ್ಷಾಂತರ ರೂಪಾಯಿಗಳ ರಕ್ಷಣೆ ನೀಡುತ್ತದೆ.
ನಿಮ್ಮ ಕುಟುಂಬದ ಸುರಕ್ಷತೆಗಾಗಿ ವಿಮೆ ಮಾಡಿಸಲು ಮರೆಯಬೇಡಿ; ಇದು ಸಣ್ಣ ಖರ್ಚು, ಆದರೆ ದೊಡ್ಡ ಭದ್ರತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.