ಪ್ರಯಾಣಿಕರಿಗೆ ಗುಡ್ ನ್ಯೂಸ್! ಇನ್ಮುಂದೆ ಈ ರೈಲುಗಳಲ್ಲಿ ವಿಶೇಷ ಸೌಲಭ್ಯ! ಈ ಅವಕಾಶ ಮಿಸ್ ಮಾಡ್ಕೋಬೇಡಿ

Published : Feb 14, 2026, 09:11 AM IST

ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಐಆರ್‌ಸಿಟಿಸಿ ಈಗ 25 ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಇ-ಪ್ಯಾಂಟ್ರಿ ಸೇವೆಗಳನ್ನು ಆರಂಭಿಸಿದೆ. ಇದರಿಂದ ಪ್ರಯಾಣಿಕರು ಟಿಕೆಟ್ ಬುಕ್ ಮಾಡುವಾಗ ಅಥವಾ ನಂತರ ಆನ್‌ಲೈನ್‌ನಲ್ಲಿ ತಮಗೆ ಬೇಕಾದ ಊಟ ಮತ್ತು ನೀರನ್ನು ಮುಂಚಿತವಾಗಿ ಬುಕ್ ಮಾಡಬಹುದು.

PREV
16
ಈ-ಪ್ಯಾಂಟ್ರಿ ಸೇವೆಗಳು

ಐಆರ್‌ಸಿಟಿಸಿ ಮೊದಲು ವಿವೇಕ್ ಎಕ್ಸ್‌ಪ್ರೆಸ್‌ನಲ್ಲಿ ಈ ಸೇವೆಯನ್ನು ಪ್ರಾಯೋಗಿಕವಾಗಿ ಆರಂಭಿಸಿತ್ತು. ನಂತರ ಇದನ್ನು ಇತರ ರೈಲುಗಳಿಗೂ ವಿಸ್ತರಿಸಿದೆ. ಐಆರ್‌ಸಿಟಿಸಿ ಪ್ರಕಾರ, ಟಿಕೆಟ್ ದರದಲ್ಲಿ ಊಟದ ವೆಚ್ಚ ಸೇರಿರದ ರೈಲುಗಳಿಗೆ ಮಾತ್ರ ಈ ಸೌಲಭ್ಯ ಅನ್ವಯಿಸುತ್ತದೆ. 

26
ಡಿಜಿಟಲ್ ಫುಡ್ ಆರ್ಡರಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಈ ಸೇವೆ ಲಭ್ಯ

ಈ ವ್ಯವಸ್ಥೆಯು ಪ್ರಯಾಣಿಕರು ಪ್ಯಾಂಟ್ರಿ ಸಿಬ್ಬಂದಿಯನ್ನು ಅವಲಂಬಿಸುವುದನ್ನು ತಪ್ಪಿಸಿ, ಮುಂಚಿತವಾಗಿಯೇ ಊಟ ಬುಕ್ ಮಾಡಲು ಸಹಾಯ ಮಾಡುತ್ತದೆ. ಐಆರ್‌ಸಿಟಿಸಿಯ ಟಿಕೆಟ್ ಬುಕ್ಕಿಂಗ್ ಸಿಸ್ಟಮ್ ಜೊತೆ ಲಿಂಕ್ ಆಗಿರುವ ಡಿಜಿಟಲ್ ಫುಡ್ ಆರ್ಡರಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಈ ಸೇವೆಗಳು ಲಭ್ಯವಿವೆ.

36
ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡುವುದು ಹೇಗೆ?

ಕನ್ಫರ್ಮ್ ಅಥವಾ RAC ಟಿಕೆಟ್ ಹೊಂದಿರುವ ಪ್ರಯಾಣಿಕರು ಕೂಡ ಮುಂಚಿತವಾಗಿ ಊಟ ಮತ್ತು ಪ್ಯಾಕೇಜ್ಡ್ ಕುಡಿಯುವ ನೀರನ್ನು ಬುಕ್ ಮಾಡಬಹುದು. ಪ್ರಯಾಣದ ಸಮಯದಲ್ಲಿ ಪ್ಯಾಂಟ್ರಿ ಕಾರ್ ಸಿಬ್ಬಂದಿ ನಿಮ್ಮ ಸೀಟಿಗೇ ಊಟವನ್ನು ತಂದುಕೊಡುತ್ತಾರೆ. ಪ್ಯಾಂಟ್ರಿ ಕಾರ್ ಸೌಲಭ್ಯ ಮಾತ್ರವಿರುವ ರೈಲುಗಳಲ್ಲಿ, ದೂರದ ಪ್ರಯಾಣದ ವೇಳೆ ಊಟದ ಸೇವೆಯನ್ನು ಹೆಚ್ಚು ಪಾರದರ್ಶಕವಾಗಿಸಲು ಈ ವ್ಯವಸ್ಥೆ ರೂಪಿಸಲಾಗಿದೆ ಎಂದು ಐಆರ್‌ಸಿಟಿಸಿ ಹೇಳಿದೆ. 

46
ಊಟ ಲಭ್ಯವಿಲ್ಲದಿದ್ದರೇ ಹಣ ರೀಫಂಡ್

ಟಿಕೆಟ್ ಬುಕ್ ಮಾಡುವಾಗ ಅಥವಾ ನಂತರ 'ಬುಕ್ಡ್ ಟಿಕೆಟ್ ಹಿಸ್ಟರಿ' ಮೂಲಕ ಆನ್‌ಲೈನ್‌ನಲ್ಲಿ ಊಟ ಆರ್ಡರ್ ಮಾಡಬಹುದು. ಕ್ಯಾಶ್‌ಲೆಸ್ ಪಾವತಿ ಮಾಡಿದ ನಂತರ, ನಿಮಗೆ SMS ಅಥವಾ ಇಮೇಲ್ ಮೂಲಕ ಮೀಲ್ ವೆರಿಫಿಕೇಶನ್ ಕೋಡ್ (MVC) ಬರುತ್ತದೆ. ಒಂದು ವೇಳೆ ಊಟ ಲಭ್ಯವಿಲ್ಲದಿದ್ದರೆ, ಹಣವನ್ನು ರೀಫಂಡ್ ಮಾಡಲಾಗುತ್ತದೆ.

56
ಪ್ರಯಾಣದ ಆಹಾರವನ್ನು ಹೇಗೆ ಬುಕ್ ಮಾಡಬೇಕು?
ನೀವು ಐಆರ್‌ಸಿಟಿಸಿ ವೆಬ್‌ಸೈಟ್ ಅಥವಾ ಆ್ಯಪ್‌ನಲ್ಲಿ ಟಿಕೆಟ್ ಬುಕ್ ಮಾಡುವಾಗ ಇ-ಪ್ಯಾಂಟ್ರಿ ಆಯ್ಕೆ ಕಾಣಿಸುತ್ತದೆ. ಆಗ ಆರ್ಡರ್ ಮಾಡದಿದ್ದರೆ, ನಂತರ 'ಬುಕ್ಡ್ ಟಿಕೆಟ್ ಹಿಸ್ಟರಿ' ವಿಭಾಗಕ್ಕೆ ಹೋಗಿ ಊಟ ಬುಕ್ ಮಾಡಬಹುದು. ಊಟ ಬುಕ್ ಮಾಡಿದ ನಂತರ, ಪ್ರಯಾಣಿಕರಿಗೆ ಕನ್ಫರ್ಮೇಷನ್ ಮೆಸೇಜ್ ಮತ್ತು MVC ಕೋಡ್ ಬರುತ್ತದೆ. ಡೆಲಿವರಿ ಸಮಯದಲ್ಲಿ, ಊಟ ತರುವ ಸಿಬ್ಬಂದಿಗೆ ಈ ಕೋಡ್ ತೋರಿಸಬೇಕು. ಪ್ರಯಾಣದ ದಿನದಂದು ಪ್ಯಾಂಟ್ರಿ ಸಿಬ್ಬಂದಿ ನಿಮ್ಮ ಸೀಟಿನ ಬಳಿಯೇ ಊಟವನ್ನು ತಲುಪಿಸುತ್ತಾರೆ.
66
ಎಷ್ಟು ಟ್ರೈನ್‌ನಲ್ಲಿ ಈ ಸೌಲಭ್ಯವಿದೆ?

ಸದ್ಯಕ್ಕೆ, 25 ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಇ-ಪ್ಯಾಂಟ್ರಿ ಸೇವೆಗಳು ಲಭ್ಯವಿದೆ. ಇವುಗಳಲ್ಲಿ ವಿವೇಕ್ ಎಕ್ಸ್‌ಪ್ರೆಸ್, ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್, ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್, ಕಳಿಂಗ ಉತ್ಕಲ್ ಎಕ್ಸ್‌ಪ್ರೆಸ್ ಮತ್ತು ಪಶ್ಚಿಮ್ ಎಕ್ಸ್‌ಪ್ರೆಸ್‌ನಂತಹ ದೂರದ ಮತ್ತು ಹೆಚ್ಚು ಬೇಡಿಕೆಯಿರುವ ರೈಲುಗಳು ಸೇರಿವೆ. ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು, ಭವಿಷ್ಯದಲ್ಲಿ ಇನ್ನಷ್ಟು ರೈಲುಗಳಲ್ಲಿ ಈ ಸೇವೆಯನ್ನು ಪರಿಚಯಿಸಲಾಗುವುದು ಎಂದು ಐಆರ್‌ಸಿಟಿಸಿ ತಿಳಿಸಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories