ಬರೀ ಲಿಫ್ಟ್ ಪಡೆದೇ 20 ಸಾವಿರ ಕಿಲೋ ಮೀಟರ್ ಸಂಚರಿಸಿದ ವಿದೇಶಿ ಪ್ರಜೆ

Published : Aug 13, 2023, 11:26 AM ISTUpdated : Aug 13, 2023, 11:38 AM IST

ಬೆಂಗಳೂರು/ಮೈಸೂರು:  ರಸ್ತೆ ಬದಿ ಸಾರ್ವಜನಿಕ ಸಾರಿಗೆ ವಾಹನಗಳಿಗಾಗಿ ಕಾದು ಕಾದು ವಾಹನಗಳ್ಯಾವುದು ನಿಲ್ಲಿಸದೇ ಹೋದಾಗ ಕಾದು ಕಾದು ಸುಸ್ತಾದಾಗ ಜನ ಲಿಫ್ಟ್‌ ಕೇಳ್ತಾರೆ. ಆದ್ರೆ ಇಲ್ಲೊಬ್ಬ ವಿದೇಶಿ ಪ್ರಜೆ ಬರೀ ಲಿಫ್ಟ್‌ ಪಡೆದೇ  20 ಸಾವಿರ ಕಿಲೋ ಮೀಟರ್‌ಗೂ ಅಧಿಕ ದೂರ ಪ್ರಯಾಣಿಸಿದ್ದಾನೆ. ಆತನ ಡಿಟೇಲ್ ಇಲ್ಲಿದೆ.

PREV
111
ಬರೀ ಲಿಫ್ಟ್ ಪಡೆದೇ 20 ಸಾವಿರ ಕಿಲೋ ಮೀಟರ್ ಸಂಚರಿಸಿದ ವಿದೇಶಿ ಪ್ರಜೆ
solo traveler Lukas Wennar

ಬರೀ ಲಿಫ್ಟ್ ಪಡೆದೇ ಊರೂರು ಸಂಚರಿಸಿದ ಈ ವಿದೇಶಿ ಕಿಲಾಡಿ ಹೆಸರು ಲುಕಾಸ್ ವೆನ್ನಾರ್‌ (Lukas Wennar),  ಹಣ ಖರ್ಚಾಗುವ ಚಿಂತೆಯೂ ಇಲ್ಲ, ಉಚಿತ ಪ್ರಯಾಣದ ಜೊತೆ ಹೊಸ ಜನರ ಪರಿಚಯವೂ ಆಗುತ್ತೆ ಎಂಬ ಯೋಚನೆ ಈತನದ್ದು, 

211
solo traveler Lukas Wennar

ಲಿಫ್ಟ್ ಪಡೆದೇ ಪ್ರಪಂಚ ಪರ್ಯಟನೆ ಮಾಡುವ ಗುರಿ ಹೊಂದಿರುವ ಈತ ಇದುವರೆಗೆ ಬರೋಬ್ಬರಿ 20 ಸಾವಿರ ಕಿಲೋಮೀಟರ್‌ ದೂರ ಸಂಚರಿಸಿದ್ದಾನೆ. 

311
solo traveler Lukas Wennar

ಬರೀ ಲಿಫ್ಟ್ ಪಡೆದೇ ಬೇರೆ ಬೇರೆ ಸುತ್ತುವ ಫ್ರಾನ್ಸ್‌ ಮೂಲದ ಲುಕಾಸ್ ವೆನ್ನಾರ್‌ ಪ್ರಸ್ತುತ ಭಾರತ ಪರ್ಯಟನೆಯಲ್ಲಿದ್ದಾನೆ. 

411
solo traveler Lukas Wennar

ಫೆಬ್ರವರಿ 4 ರಂದು ಫ್ರಾನ್ಸ್ ನಿಂದ ಪ್ರಯಾಣ ಆರಂಭಿಸಿರುವ  23 ವರ್ಷದ ಲುಕಾಸ್ ವೆನ್ನಾರ್‌ ಇದುವರೆಗೆ 20 ಸಾವಿರ ಕಿಲೋ ಮೀಟರ್ ಬರೀ ಲಿಫ್ಟ್ ಪಡೆದೇ ಸಂಚರಿಸಿದ್ದಾನೆ ಎಂದರೆ ಅದೊಂದು ಸಾಧನೆಯೇ ಸರಿ. 

511
solo traveler Lukas Wennar

ಈತ ತನ್ನ ಪ್ರಯಾಣಕ್ಕಾಗಿ ಎಲ್ಲಿಯೂ  ಟಿಕೇಟ್ ಖರೀದಿದಿಸಿಲ್ಲ,  ಬಸ್‌ ಹತ್ತಿಲ್ಲ, ರೈಲನ್ನೂ ಏರಿಲ್ಲ, ವಿಮಾನದಲ್ಲಂತೂ ಪ್ರಯಾಣಿಸಿಯೇ ಇಲ್ಲ,  ಏನಿದ್ದರೂ ಅಪರಿಚಿತರ ಬೈಕ್ ಕಾರುಗಳೇ ಈತನ ಗುರಿ. 

611
solo traveler Lukas Wennar

ಇದುವರೆಗೆ ಈತ ಹಡಗು ಸೇರಿ ಕಾರು, ಬೈಕ್, ಟ್ರಕ್‌ಗಳ ಮೂಲಕ ಪ್ರಯಾಣ ಮಾಡಿ  20 ಸಾವಿರ ಕಿಲೋ ಮೀಟರ್ ದೂರ ಕ್ರಮಿಸಿರುವ ಈತನಿಗಿನ್ನೂ ಬರೀ 23 ವರ್ಷ ವಯಸ್ಸು

711
solo traveler Lukas Wennar

ಫ್ರಾನ್ಸ್‌ನಿಂದ ಆರಂಭಿಸಿ ಆಫ್ರಿಕಾ, ಚೈನಾ, ಟಿಬೇಟ್, ಖಜಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾದೇಶ ಸೇರಿ 14 ಕ್ಕೂ ಹೆಚ್ಚು ದೇಶಗಳಲ್ಲಿ ಈತ ಸಂಚರಿಸಿದ್ದಾನೆ. 

811
solo traveler Lukas Wennar

ಅದರಲ್ಲೂ ಈತ ಭಾರತದಲ್ಲಿ ಒಟ್ಟು ಎರಡು ತಿಂಗಳ ಕಾಲ ಬರೀ ಲಿಫ್ಟ್‌ ಪಡೆದೇ ಸಂಚರಿಸಿದ್ದಾನೆ. ಪ್ರಸ್ತುತ ಅರಮನೆ ನಗರಿ ಮೈಸೂರಿನಲ್ಲಿರು ಈತ ಮುಂದೆ ಶ್ರೀಲಂಕಾಗೆ ತೆರಳುವ ಗುರಿ ಹೊಂದಿದ್ದಾನೆ.

911
solo traveler Lukas Wennar

ಇಲ್ಲಿಂದ ಮುಂದೆ ಆತ ಸ್ವಿಜರ್ಲೆಂಡ್ವರೆಗೂ ಬರೀ ಲಿಫ್ಟ್  ಪಡೆದೇ  ಸಂಚರಿಸುವ ಗುರಿ ಹೊಂದಿದ್ದು,  ಅಲ್ಲಿವರೆಗೆ ಆತನಿಗೆ ಯಾರೂ ಲಿಫ್ಟ್ ನೀಡುವರೋ ಗೊತ್ತಿಲ್ಲ, 

1011
solo traveler Lukas Wennar

ಪ್ರಸ್ತುತ ಅರಮನೆ ನಗರಿ ಮೈಸೂರಿನಲ್ಲಿರುವ ಈತ ಅರಮನೆ ನಗರಿ ನೋಡಿ ಬಹಳ ಖುಷಿ ಪಟ್ಟಿದ್ದು, ಇನ್ನಷ್ಟು ದೇಶಗಳನ್ನು ಸುತ್ತುವ ಗುರಿ ಹೊಂದಿದ್ದಾನೆ. 

1111
solo traveler Lukas Wennar

ಹೇಗಿದೆ ನೋಡಿ ಈತನ ಸಾಹಸ ಊರು ಕೇರಿ ಗೊತ್ತಿಲ್ಲದ ಗುರುತು ಪರಿಚಯವಿಲ್ಲದ ಊರಲ್ಲಿ  ಒಬ್ಬಂಟಿಯಾಗಿ ಅಪರಿಚಿತರ ಬಳಿ ಲಿಫ್ಟ್ ಪಡೆದು ತಿರುಗುತ್ತಿರುವ ಈತನಿಗೊಂದು  ಹ್ಯಾಟ್ಸಾಪ್ ಹೇಳಲೇಬೇಕು ಅಲ್ವಾ? 

Read more Photos on
click me!

Recommended Stories