Independece Day: ಸಾಲು ಸಾಲು ರಜೆ, ವೀಕೆಂಡ್‌ಲ್ಲಿ ಬೆಂಗಳೂರಿನಿಂದ ಟ್ರಿಪ್ ಹೋಗೋಕೆ ಬೆಸ್ಟ್ ಜಾಗ ಯಾವ್ದು?

First Published | Aug 11, 2023, 11:50 AM IST

ಸ್ವಾತಂತ್ರ್ಯ ದಿನಕ್ಕೆ ಕೆಲವೇ ದಿನ ಬಾಕಿಯಿದೆ. ಮುಂದಿನ ಮಂಗಳವಾರವೇ ಇಂಡಿಪೆಂಡೆನ್ಸ್ ಡೇ. ಅಂದರೆ ಇದು ಲಾಂಗ್ ವೀಕೆಂಡ್‌. ನಾಳೆ ಶನಿವಾರ, ನಾಡಿದ್ದು ಭಾನುವಾರ. ಮಂಡೇ ಒಂದು ರಜೆ ತೆಗೆದುಕೊಂಡರೆ ಮಂಗಳವಾರ ಹಾಲಿಡೇ. ಇಷ್ಟು ಲಾಂಗ್ ವೀಕೆಂಡ್ ನೀವೇನು ಪ್ಲ್ಯಾನ್ ಮಾಡಿದ್ದೀರಿ. ಏನೂ ಇಲ್ಲ ಅಂದ್ರೆ  ದೀರ್ಘ ವಾರಾಂತ್ಯಕ್ಕಾಗಿ ಬೆಂಗಳೂರಿನ ಸಮೀಪವಿರುವ ಸುಂದರ ಸ್ಥಳಗಳ ಮಾಹಿತಿ ಇಲ್ಲಿದೆ.
 

ನಂದಿ ಹಿಲ್ಸ್‌
ಬೆಂಗಳೂರಿನಿಂದ ವೀಕೆಂಡ್ ಪ್ಲಾನ್ ಮಾಡುತ್ತಿದ್ದರೆ ನಂದಿ ಹಿಲ್ಸ್ ಖಂಡಿತವಾಗಿಯೂ ನಿಮ್ಮ ಲಿಸ್ಟ್‌ನಲ್ಲಿರಬೇಕು. ಈ ತಾಣವು ಪ್ರವಾಸಿಗರು ಮತ್ತು ನಗರದ ನಿವಾಸಿಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ಇಲ್ಲಿ ನೀವು ಅತ್ಯುತ್ತಮವಾಗಿ ಫ್ರೆಂಡ್ಸ್ ಅಥವಾ ಫ್ಯಾಮಿಲಿ ಜೊತೆ ಸಮಯವನ್ನು ಕಳೆಯಬಹುದು. ಕ್ಯಾಂಪಿಂಗ್ ಮತ್ತು ಸಾಹಸ ಕ್ರೀಡೆಗಳಲ್ಲಿ ತೊಡಗಿಕೊಳ್ಳಬಹುದು.

ಶಿವನಸಮುದ್ರ ಜಲಪಾತ
ನೀವು ಈ ವಾರಾಂತ್ಯವನ್ನು ರಿಫ್ರೆಶ್ ಮಾಡಲು ಬಯಸಿದರೆ ಶಿವನಸಮುದ್ರ ಜಲಪಾತಕ್ಕೆ ಭೇಟಿ ನೀಡಬಹುದು. ಇಲ್ಲಿನ ಶಾಂತಿಯು ವಾತಾವರಣ, ಪ್ರಕೃತಿ ಸೌಂದರ್ಯ ಮನಸ್ಸಿಗೆ ಇಷ್ಟವಾಗುತ್ತದೆ. ಇದು 320 ಅಡಿ ಎತ್ತರದಿಂದ ಧುಮ್ಮಿಕ್ಕುವ ದೇಶದ ಎರಡನೇ ಅತಿ ದೊಡ್ಡ ಜಲಪಾತವಾಗಿದೆ. ಈ ಜಲಪಾತದ ಸೊಬಗು ನಿಮ್ಮ ಮನಸೂರೆಗೊಳಿಸೋದು ಖಂಡಿತ.

Tap to resize

ಊಟಿ
ಊಟಿಯು ದೇಶದ ಸುಂದರ ಗಿರಿಧಾಮಗಳಲ್ಲಿ ಒಂದಾಗಿದೆ, ಇದು ವರ್ಷವಿಡೀ ಆಹ್ಲಾದಕರ ವಾತಾವರಣವನ್ನು ಹೊಂದಿದೆ. ವಿಶಾಲವಾದ ಹಸಿರು ಪರಿಸರ, ಹೂ-ಹಣ್ಣುಗಳ ಗಿಡಗಳು ಮನಸ್ಸಿಗೆ ಮುದ ನೀಡುತ್ತದೆ. ಈ ಲಾಂಗ್ ವೀಕೆಂಡ್‌ನಲ್ಲಿ ನೀವು ಊಟಿಯ ಸುಂದರ ವಾತಾವರಣದಲ್ಲಿ ಸಮಯ ಕಳೆಯಬಹುದು.

Travel tips

ಕಬಿನಿ
ನೀವು ವನ್ಯಜೀವಿ ಪ್ರೇಮಿಯಾಗಿದ್ದರೆ ಮತ್ತು ಪ್ರಕೃತಿಯ ನಡುವೆ ಸ್ವಲ್ಪ ಸಮಯವನ್ನು ಕಳೆಯಲು ಬಯಸಿದರೆ, ಕಬಿನಿಯು ಉತ್ತಮ ಆಯ್ಕೆಯಾಗಿದೆ. ಕಬಿನಿಯು ಕರ್ನಾಟಕದ ಜನಪ್ರಿಯ ವನ್ಯಜೀವಿ ಅಭಯಾರಣ್ಯಗಳಲ್ಲಿ ಒಂದಾಗಿದೆ. ಈ ಸ್ಥಳವು ಬೆಂಗಳೂರಿಗೆ ಸಮೀಪದಲ್ಲಿದೆ. ಹೀಗಾಗಿ ವಾರಾಂತ್ಯದಲ್ಲಿ ಟ್ರಿಪ್ ಪ್ಲಾನ್ ಮಾಡಲು ಬೆಸ್ಟ್. ಅಲ್ಲಿ, ನೀವು ಸುಂದರವಾದ ಸೂರ್ಯಾಸ್ತಮಾನ, ಹಿನ್ನೀರು, ಕಪಿಲಾ ನದಿಯಲ್ಲಿ ಬೋಟಿಂಗ್‌ನ್ನು ಎಂಜಾಯ್ ಮಾಡಬಹುದು.

Travel tips

ಮಡಿಕೇರಿ
ಮಡಿಕೇರಿ, ದಕ್ಷಿಣ ಭಾರತದ ಅತ್ಯಂತ ಸುಂದರವಾದ ಗಿರಿಧಾಮಗಳಲ್ಲಿ ಒಂದಾಗಿದೆ. ಇದನ್ನು ಪ್ರೀತಿಯಿಂದ ಜನರು ಭಾರತದ ಸ್ಕಾಟ್ಲೆಂಡ್ ಅಥವಾ ಕೊಡಗು ಎಂದು ಕರೆಯುತ್ತಾರೆ. ಇಲ್ಲಿಯ ತಂಪಾದ ಹವಾಮಾನ ವಾರಾಂತ್ಯದಲ್ಲಿ ನಿಮ್ಮ ಸ್ನೇಹಿತರು ಅಥವಾ ಕುಟುಂಬದೊಂದಿಗೆ ವಿಶ್ರಾಂತಿ ಪಡೆಯಲು ಸೂಕ್ತವಾದ ಸ್ಥಳವಾಗಿದೆ.

ಬಿಆರ್ ಹಿಲ್ಸ್
ಬಿಳಿಗಿರಿರಂಗನ ಬೆಟ್ಟ ಅಥವಾ ಬಿಆರ್ ಹಿಲ್ಸ್ ಎಂದು ಕರೆಯಲ್ಪಡುವ ಬೆಟ್ಟಗಳ ಸಾಲು ಕರ್ನಾಟಕ-ತಮಿಳುನಾಡು ಗಡಿಯಲ್ಲಿದೆ. ಆಗ್ನೇಯ ಕರ್ನಾಟಕದಲ್ಲಿ ನೆಲೆಗೊಂಡಿರುವ BR ಹಿಲ್ಸ್ ಅಥವಾ ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ ವನ್ಯಜೀವಿ ಅಭಯಾರಣ್ಯವು ಎರಡೂ ಪರ್ವತ ಶ್ರೇಣಿಗಳಿಗೆ ವಿಶಿಷ್ಟವಾದ ಪರಿಸರ ವ್ಯವಸ್ಥೆಗಳಿಗೆ ನೆಲೆಯಾಗಿದೆ.  ಬಿಳಿ ಬಂಡೆಯ ಮೇಲಿರುವ ರಂಗಸ್ವಾಮಿ ದೇವಾಲಯದಿಂದ ಹಿಲ್ಸ್‌ಗೆ ಈ ಹೆಸರು ಬಂದಿದೆ ಎಂದು ಹೇಳಲಾಗ್ತಿದೆ. ಸಾಹಸಗಳನ್ನು ಇಷ್ಟಪಡುವವರಿಗೆ, BR ಹಿಲ್ಸ್ ಉತ್ತಮವಾಗಿದೆ. ಏಕೆಂದರೆ ಇದು ಟ್ರೆಕ್ಕಿಂಗ್ ಮತ್ತು ರಾಫ್ಟಿಂಗ್‌ಗೆ ಸಾಕಷ್ಟು ಅವಕಾಶವನ್ನು ಒದಗಿಸುತ್ತದೆ. 

ಚಿಕ್ಕಮಗಳೂರು
ಇದು ಕರ್ನಾಟಕದ ಜನಪ್ರಿಯ ಗಿರಿಧಾಮವಾಗಿದೆ. ಮುಳ್ಳಯ್ಯನಗಿರಿ ಶಿಖರದ ತಪ್ಪಲಿನಲ್ಲಿದೆ. ಇಲ್ಲಿ ಅನೇಕ ಸುಂದರ ದೇವಾಯಗಳು ಹಾಗೂ ಜಲಪಾತಗಳಿವೆ. ಅನೇಕ ದೃಶ್ಯವೀಕ್ಷಣೆಯ ಆಯ್ಕೆಗಳು, ಉತ್ತಮ ತಿನಿಸುಗಳು, ಸ್ಥಳೀಯ ಮಾರುಕಟ್ಟೆಗಳು ಪ್ರವಾಸಿಗರನ್ನು ಸೆಳೆಯುತ್ತದೆ. ಇದು ನಿಮ್ಮನ್ನು ರಿಫ್ರೆಶ್ ಮಾಡುತ್ತದೆ ಮತ್ತು ಆರಾಮವಾಗಿರಿಸುತ್ತದೆ.

Latest Videos

click me!