ಮಳೆಗಾಲದಲ್ಲಿ ಟ್ರಾವೆಲ್ ಮಾಡಲು ಬೆಸ್ಟ್ ತಾಣಗಳಿವು….ಜುಲೈನಲ್ಲಿ ಮಿಸ್ ಮಾಡದೇ ಭೇಟಿ ನೀಡಿ

Published : Jul 01, 2026, 05:59 PM IST

Monsoon Travel:ಜುಲೈನಲ್ಲಿ ನಿಮ್ಮ ಸ್ನೇಹಿತರು ಅಥವಾ ಸಂಗಾತಿಯೊಂದಿಗೆ ಟ್ರಾವೆಲ್ ಮಾಡಲು ಪ್ಲ್ಯಾನ್ ಮಾಡಿದ್ದರೆ, ನಿಮ್ಮ ಟಿಕೆಟ್‌ಗಳನ್ನು ಈಗಲೇ ಬುಕ್ ಮಾಡಿ ಮತ್ತು ಈ ಸುಂದರ ಮಾನ್ಸೂನ್ ತಾಣಗಳನ್ನು ಆನಂದಿಸಲು ರೆಡಿಯಾಗಿ. ಇಲ್ಲಿದೆ ಭಾರತದ ಅತ್ಯಂತ ಸುಂದರ ತಾಣಗಳ ಮಾಹಿತಿ. 

PREV
16
ಜುಲೈನಲ್ಲಿ ಭಾರತದಲ್ಲಿ ಭೇಟಿ ನೀಡಲೇಬೇಕಾದ 5 ಅದ್ಭುತ ಸ್ಥಳಗಳು

ಮಳೆಗಾಲ ಹೇಗೂ ಆರಂಭವಾಗಿದೆ. ನೀವು ಪ್ರವಾಸ ಮಾಡಲು ಯೋಚನೆ ಮಾಡಿದ್ದರೆ, ಜುಲೈ ತಿಂಗಳು ಬೆಸ್ಟ್. ಈ ಸಮಯದಲ್ಲಿ ಭಾರತದ ಕೆಲವು ಸ್ಥಳಗಳು ತುಂಬಾ ಸುಂದರವಾಗುತ್ತವೆ, ಅವು ಸ್ವರ್ಗದಂತೆ ಭಾಸವಾಗುತ್ತವೆ. ಹಚ್ಚ ಹಸಿರಿನ ಹುಲ್ಲು, ಧುಮ್ಮಿಕ್ಕುವ ಜಲಪಾತಗಳು ಮತ್ತು ಮೋಡಗಳಿಂದ ಆವೃತವಾದ ಹಾದಿಗಳು ನಯನ ಮನೋಹರವಾಗಿರುತ್ತದೆ. ನೀವು ಈ ಜುಲೈನಲ್ಲಿ ಟ್ರಾವೆಲ್ ಪ್ಲ್ಯಾನ್ ಮಾಡುತ್ತಿದ್ದರೆ ನಿಮ್ಮ ಜೀವನದ ಅತ್ಯುತ್ತಮ ಅನುಭವಗಳನ್ನು ನೀಡುವ ಭಾರತದ ಐದು ಅದ್ಭುತ ಸ್ಥಳಗಳ ಕುರಿತು ಇಲ್ಲಿದೆ ಮಾಹಿತಿ.

26
ವ್ಯಾಲಿ ಆಫ್ ಫ್ಲವರ್, ಉತ್ತರಾಖಂಡ್

ನೀವು ಹೂವುಗಳನ್ನು ಉದ್ಯಾನಗಳಲ್ಲಿ ಮಾತ್ರ ಚೆನ್ನಾಗಿ ಕಾಣುತ್ತದೆ ಎಂದು ಭಾವಿಸಿದರೆ ಅದು ತಪ್ಪು, ಒಮ್ದು ಸಲ ಉತ್ತರಾಖಂಡದ ವ್ಯಾಲಿ ಆಫ್ ಫ್ಲವರ್ ಗೆ ಭೇಟಿ ನೀಡಿ. ಜುಲೈನಲ್ಲಿ ಲಕ್ಷಾಂತರ ವರ್ಣರಂಜಿತ ಕಾಡು ಹೂವುಗಳು ಇಲ್ಲಿ ಅರಳುತ್ತವೆ.ಈ ಹೂವುಗಳ ಮೇಲೆ ಮಳೆಹನಿಗಳು ಬಿದ್ದಾಗ, ಇಡೀ ಕಣಿವೆಯ ಸುವಾಸನೆಯಿಂದ ಕೂಡುತ್ತದೆ, ಜೊತೆಗೆ ಅಲ್ಲಿನ ಸೌಂದರ್ಯ ನಯನ ಮನೋಹರವಾಗಿರುತ್ತದೆ. ಒಬ್ಬ ವರ್ಣಚಿತ್ರಕಾರನು ನೆಲದ ಮೇಲೆ ಸುಂದರವಾದ ಬಣ್ಣಗಳನ್ನು ಚಿತ್ರಿಸಿದಂತೆ ತೋರುತ್ತದೆ. ಈ ಸ್ಥಳವು ಚಾರಣ ಪ್ರಿಯರಿಗೆ ಸೂಕ್ತವಾಗಿದೆ.

36
ಮುನ್ನಾರ್, ಕೇರಳ

ಕೇರಳವನ್ನು ದೇವರ ಸ್ವಂತ ನಾಡು ಎಂದು ಸರಿಯಾಗಿಯೇ ಕರೆಯಲಾಗುತ್ತದೆ, ಜುಲೈನಲ್ಲಿ, ಮುನ್ನಾರ್‌ನ ಸೌಂದರ್ಯವು ಇಮ್ಮಡಿಗೊಳ್ಳುತ್ತದೆ. ವಿಶಾಲವಾದ ಚಹಾ ತೋಟಗಳ ಮೇಲೆ ಮಳೆ ಬಿದ್ದು ಮಂಜು ಆವರಿಸಿದಾಗ, ಅದನ್ನು ಇಷ್ಟ ಪಡದೇ ಇರೋದೆ ಕಷ್ಟ.ಅಟ್ಟುಕಲ್ ಮತ್ತು ಲಕ್ಕಂ ಜಲಪಾತಗಳು ಈ ಋತುವಿನಲ್ಲಿ ಪೂರ್ಣ ವೇಗದಲ್ಲಿ ಹರಿಯುತ್ತವೆ. ಕೈಯಲ್ಲಿ ಒಂದು ಕಪ್ ಬಿಸಿ ಚಹಾ ಹಿಡಿದು ಮೋಡಗಳ ಹಿಂದಿನಿಂದ ಇಣುಕುತ್ತಿರುವ ಪರ್ವತಗಳನ್ನು ನೀವು ವೀಕ್ಷಿಸಬಹುದು. ಇದು ನಿಜವಾಗಿಯೂ ವಿಶ್ರಾಂತಿ ನೀಡುವ ಅನುಭವ.

46
ಚಿರಾಪುಂಜಿ, ಮೇಘಾಲಯ

ಮೋಡಗಳ ನಾಡು ಮೇಘಾಲಯದಲ್ಲಿ ನೀವು ನಿಜವಾದ ಮಳೆಯನ್ನು ಅನುಭವಿಸಬಹುದು. ಜುಲೈನಲ್ಲಿ ಚಿರಾಪುಂಜಿಗಿಂತ ಉತ್ತಮವಾದ ಸ್ಥಳ ಇನ್ನೊಂದಿಲ್ಲ. ಇಲ್ಲಿನ ನದಿಗಳು ಮತ್ತು ಜಲಪಾತಗಳು ಪೂರ್ಣವಾಗಿ ತುಂಬಿ ಹರಿಯುತ್ತದೆ.ಮಳೆಯ ಸಮಯದಲ್ಲಿ ಲಿವಿಂಗ್ ರೂಟ್ ಸೇತುವೆ ಇನ್ನಷ್ಟು ಮಾಂತ್ರಿಕವಾಗಿ ಕಾಣುತ್ತದೆ. ಇದಲ್ಲದೆ, ನೋಹ್ಕಾಲಿಕೈ ಜಲಪಾತವನ್ನು ವೀಕ್ಷಿಸುವುದು ರೋಮಾಂಚಕ ಅನುಭವ ನೀಡುತ್ತದೆ.

56
ಲೋನಾವಾಲ, ಮಹಾರಾಷ್ಟ್ರ

ಮುಂಬೈ ಮತ್ತು ಪುಣೆ ನಿವಾಸಿಗಳಿಗೆ, ಲೋನಾವಾಲವು ಮಳೆಗಾಲದ ಫಸ್ಟ್ ಲವ್. ಜುಲೈ ತಿಂಗಳಲ್ಲಿ, ವಾರಾಂತ್ಯದಲ್ಲಿ ಇದು ಜನದಟ್ಟಣೆಯಿಂದ ಕೂಡಿರುತ್ತದೆ, ನಿಲ್ಲಲು ಸ್ಥಳವಿಲ್ಲ, ಆದರೂ ಅದರ ಸೌಂದರ್ಯವು ಎಲ್ಲರನ್ನೂ ಆಕರ್ಷಿಸುತ್ತದೆ. ಭೂಶಿ ಅಣೆಕಟ್ಟಿನ ಉಕ್ಕಿ ಹರಿಯುವ ನೀರು, ರಾಜ್‌ಮಾಚಿ ಪಾಯಿಂಟ್‌ನ ಹಸಿರು ಮತ್ತು ಟೈಗರ್ ಪಾಯಿಂಟ್‌ನಲ್ಲಿ ಬಿಸಿ ಕಾಂಡ ಭಜಿಯಾಗಳು ಮತ್ತು ಜೋಳ! ಮಳೆಗಾಲದಲ್ಲಿ ಲೋನಾವಾಲಕ್ಕೆ ಭೇಟಿ ನೀಡುವುದು ನಿಜಕ್ಕೂ ಅದ್ಭುತ.

66
ಕೊಡಗು, ಕರ್ನಾಟಕ

ಕೊಡಗು ಭಾರತದ ಸ್ಕಾಟ್ಲೆಂಡ್. ಜುಲೈ ಮಳೆಯು ಅದರ ಕಾಫಿ ತೋಟಗಳು ಮತ್ತು ದಟ್ಟವಾದ ಕಾಡುಗಳನ್ನು ರೋಮಾಂಚಕವಾಗಿಸುತ್ತದೆ. ಜೊತೆಗೆ ಅಲ್ಲಿನ ದಟ್ಟ ಹಸಿರು ಮನೋಹರವಾಗಿರುತ್ತದೆ. ನೀವು ಶಾಂತಿ ಮತ್ತು ಪ್ರಕೃತಿಯನ್ನು ಇಷ್ಟಪಡುವವರಾಗಿದ್ದರೆ, ಕೊಡಗು ನಿಮಗೆ ಸೂಕ್ತವಾಗಿದೆ. ಈ ಋತುವಿನಲ್ಲಿ ಅಬ್ಬೆ ಜಲಪಾತ ಮತ್ತು ಇರುಪ್ಪು ಜಲಪಾತಗಳು ನೋಡುವುದೇ ಚಂದ. ಕಾಫಿಯ ಸುವಾಸನೆ ಮತ್ತು ಮಳೆಯ ಕಾಂಬಿನೇಶನ್ ಅದ್ಬುತವಾಗಿರುತ್ತದೆ,

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories