Travel Tips: ಹೋಟೆಲ್ ಕೋಣೆಗೆ ಕಾಲಿಟ್ಟ ಕೂಡಲೇ ನಾವು ಅತಿ ಹೆಚ್ಚಾಗಿ ಬಳಸುವ ಒಂದು ವಸ್ತು ನಿಮ್ಮ ಆರೋಗ್ಯಕ್ಕೆ ಕಂಟಕವಾಗಬಹುದು ಎಂಬ ಸತ್ಯ ನಿಮಗೆ ಗೊತ್ತೇ? ಅಂತಾರಾಷ್ಟ್ರೀಯ ಹೋಟೆಲ್ ತಜ್ಞರು ನೀಡಿರುವ ಈ ಆಘಾತಕಾರಿ ಮಾಹಿತಿ ಕೇಳಿದರೆ ನೀವು ಮುಂದಿನ ಬಾರಿ ಇದನ್ನು ಮುಟ್ಟಲು ಸಹ ಹೆದರುತ್ತೀರಿ.
ಹೋಟೆಲ್ ಮ್ಯಾನೇಜ್‌ಮೆಂಟ್ ತಜ್ಞ ಹೇಳಿದ್ದೇನು? ಹೋಟೆಲ್ ರೂಂಗಳಲ್ಲಿ ಬೆಡ್, ಟಿವಿ ಜೊತೆಗೆ ನಮಗೆ ಬೆಳಗ್ಗೆ ಎದ್ದ ತಕ್ಷಣ ಚಹಾ ಅಥವಾ ಕಾಫಿ ತಯಾರಿಸಿಕೊಳ್ಳಲು 'ಎಲೆಕ್ಟ್ರಿಕ್ ಕೆಟಲ್' ಸೌಲಭ್ಯ ನೀಡಲಾಗುತ್ತದೆ. ಪ್ರವಾಸದ ಆಯಾಸದ ನಡುವೆ ಒಂದು ಕಪ್ ಬಿಸಿ ಚಹಾ ಕುಡಿದರೆ ಎಷ್ಟು ನೆಮ್ಮದಿ ಅನಿಸುತ್ತದೆ ಅಲ್ವೇ? ಆದರೆ ಪ್ರಖ್ಯಾತ ಹೋಟೆಲ್ ಮ್ಯಾನೇಜ್‌ಮೆಂಟ್ ತಜ್ಞ ವಿಲಿಯಂ ಹ್ಯಾನ್ಸನ್ ನೀಡಿರುವ ಮಾಹಿತಿ ಪ್ರಕಾರ, ಈ ಕೆಟಲ್‌ಗಳು ಹೋಟೆಲ್‌ನಲ್ಲಿರುವ ಅತ್ಯಂತ ಅಶುದ್ಧ ವಸ್ತುಗಳಲ್ಲಿ ಒಂದು!
24
ಕೆಟಲ್‌ನಲ್ಲಿ ಒಳ ಉಡುಪುಗಳ ತೊಳೆಯುತ್ತಾರೆ
ಕೆಟಲ್‌ನಲ್ಲಿ ಒಳ ಉಡುಪುಗಳ ತೊಳೆಯುತ್ತಾರೆ ಕೇಳಲು ವಿಚಿತ್ರ ಮತ್ತು ಅಸಹ್ಯ ಎನಿಸಿದರೂ ಇದು ಕಟು ಸತ್ಯ. ಒಂದು ಜಾಗತಿಕ ಸಮೀಕ್ಷೆಯ ಪ್ರಕಾರ, ಸುಮಾರು ಶೇ. 23ರಷ್ಟು ಪ್ರವಾಸಿಗರು ಹೋಟೆಲ್ ರೂಮ್‌ನಲ್ಲಿರುವ ಎಲೆಕ್ಟ್ರಿಕ್ ಕೆಟಲ್‌ಗಳನ್ನು ತಮ್ಮ 'ಒಳ ಉಡುಪುಗಳನ್ನು' (Undergarments) ಅಥವಾ ಸಾಕ್ಸ್ ಅನ್ನು ತೊಳೆಯಲು ಮತ್ತು ಅವುಗಳನ್ನು ಕ್ರಿಮಿಮುಕ್ತಗೊಳಿಸಲು ಬಳಸುತ್ತಿದ್ದಾರಂತೆ! ಬಿಸಿನೀರಿನಲ್ಲಿ ಹಾಕಿದರೆ ಬ್ಯಾಕ್ಟೀರಿಯಾ ಸಾಯುತ್ತದೆ ಎಂಬ ಭ್ರಮೆಯಲ್ಲಿ ಅನೇಕರು ತಮ್ಮ ಗಲೀಜು ಬಟ್ಟೆಗಳನ್ನು ಈ ಕೆಟಲ್‌ನೊಳಗೆ ಹಾಕಿ ಕುದಿಸುತ್ತಾರೆ.
34
ತೊಳೆದರೂ ಹೋಗಲ್ಲ ಕೊಳೆ
ತೊಳೆದರೂ ಹೋಗಲ್ಲ ಕೊಳೆ ಇಷ್ಟೇ ಅಲ್ಲದೆ, ಅನೇಕರು ಮ್ಯಾಗಿ ನೂಡಲ್ಸ್ ಅಥವಾ ಇತರ ಆಹಾರ ಪದಾರ್ಥಗಳನ್ನು ನೇರವಾಗಿ ಈ ಕೆಟಲ್‌ನಲ್ಲೇ ಬೇಯಿಸುತ್ತಾರೆ. ಇದರಿಂದಾಗಿ ಪಾತ್ರೆಯ ಅಡಿಭಾಗದಲ್ಲಿ ಆಹಾರದ ಅವಶೇಷಗಳು ಉಳಿದು ಬ್ಯಾಕ್ಟೀರಿಯಾಗಳ ಹಾವಳಿ ಹೆಚ್ಚಾಗುತ್ತದೆ. ಹೋಟೆಲ್ ಸಿಬ್ಬಂದಿ ಮೇಲೆ ಮೇಲೆ ಇವುಗಳನ್ನು ತೊಳೆದರೂ, ಒಳಗಿನ ಅಸಹ್ಯಗಳು ಸಂಪೂರ್ಣವಾಗಿ ಹೋಗಿರುವುದಿಲ್ಲ.
ಬಳಸಲೇಬೇಕಾದ ಅನಿವಾರ್ಯತೆ ಇದ್ದರೆ ಏನು ಮಾಡಬೇಕು? ಒಂದು ವೇಳೆ ನೀವು ಕೆಟಲ್ ಬಳಸಲೇಬೇಕಿದ್ದರೆ ತಜ್ಞರು ಈ ಕೆಳಗಿನ ಟಿಪ್ಸ್ ನೀಡಿದ್ದಾರೆ: ಮೊದಲು ಕೆಟಲ್‌ಗೆ ಪೂರ್ತಿಯಾಗಿ ನೀರು ತುಂಬಿಸಿ ಚೆನ್ನಾಗಿ ಕುದಿಸಿ. ಆ ಕುದಿದ ನೀರನ್ನು ಸಂಪೂರ್ಣವಾಗಿ ಹೊರಚೆಲ್ಲಿ ಮತ್ತು ಪಾತ್ರೆಯನ್ನು ಮತ್ತೊಮ್ಮೆ ತೊಳೆದುಕೊಳ್ಳಿ. ಆ ನಂತರ ಹೊಸ ನೀರನ್ನು ಹಾಕಿ ಕಾಯಿಸಿ ನಿಮ್ಮ ಪಾನೀಯ ತಯಾರಿಸಿಕೊಳ್ಳಿ. ಹೀಗೆ ಮಾಡುವುದರಿಂದ ಒಳಗಿರುವ ಬ್ಯಾಕ್ಟೀರಿಯಾಗಳು ಅಥವಾ ಕಲ್ಮಶಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತವೆ.
ಯಾವುದೇ ಹೋಟೆಲ್‌ಗೆ ಹೋದಾಗ ಅಲ್ಲಿನ ಸೌಲಭ್ಯಗಳನ್ನು ಬಳಸುವ ಮೊದಲು ನಮ್ಮ ಸುರಕ್ಷತೆ ನಮಗೆ ಮುಖ್ಯ. ಹಾಗೆಯೇ ಹೋಟೆಲ್ ಸಿಬ್ಬಂದಿಯೊಂದಿಗೆ ಮರ್ಯಾದೆಯಿಂದ ವರ್ತಿಸುವುದು ಕೂಡ ಒಳ್ಳೆಯ ಸೇವೆಯನ್ನು ಪಡೆಯಲು ಸಹಾಯ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.