ನೋಡಲೇಬೇಕಾದ ಭಾರತದ 10 ಸುಂದರ ತಾಣಗಳಿವು.. ನೀವೇನಾದ್ರೂ ಹೋಗಿದ್ರಾ..?!

ಭಾರತದಲ್ಲಿ ನೋಡಲೇಬೇಕಾದ ಸುಂದರ ತಾಣಗಳು: ಭಾರತದ ಟಾಪ್ 10 ಪ್ರವಾಸಿ ತಾಣಗಳು! ತಾಜ್ ಮಹಲ್‌ನಿಂದ ಕೇರಳದ ಹಿನ್ನೀರಿನವರೆಗೆ, ಇಲ್ಲಿ ಏನಿದೆ ವಿಶೇಷ ಮತ್ತು ಈ ಸ್ಥಳಗಳು ಏಕೆ ಫೇಮಸ್ ಅಂತ ತಿಳಿಯಿರಿ.

Top 10 Must-Visit Indian Destinations: Explore India's Beauty
ತಾಜ್ ಮಹಲ್, ಆಗ್ರಾ

ತಾಜ್ ಮಹಲ್ ಭಾರತದ ಉತ್ತರ ಪ್ರದೇಶ ರಾಜ್ಯದ ಆಗ್ರಾ ನಗರದಲ್ಲಿದೆ. ಇದನ್ನು ಮೊಘಲ್ ಚಕ್ರವರ್ತಿ ಷಾಜಹಾನ್ ತನ್ನ ಪತ್ನಿ ಮುಮ್ತಾಜ್ ಮಹಲ್ ನೆನಪಿಗಾಗಿ ಕಟ್ಟಿಸಿದನು. ಈ ಜಾಗ ಅದರ ವಿನ್ಯಾಸಕ್ಕೆ ಫೇಮಸ್.

Top 10 Must-Visit Indian Destinations: Explore India's Beauty
ಜೈಪುರ, ರಾಜಸ್ಥಾನ

ಗುಲಾಬಿ ನಗರ ಅಂತ ಕರೆಯಲ್ಪಡುವ ಜೈಪುರ ತನ್ನ ಐತಿಹಾಸಿಕ ಅರಮನೆಗಳಿಗೆ ಫೇಮಸ್. ಇಲ್ಲಿನ ಹವಾ ಮಹಲ್ ಮತ್ತು ಸಿಟಿ ಪ್ಯಾಲೇಸ್ ಜೈಪುರವನ್ನು ಇನ್ನಷ್ಟು ಸುಂದರವಾಗಿಸುತ್ತವೆ.


ಕೇರಳ ಹಿನ್ನೀರು

ಕೇರಳ ಹಿನ್ನೀರು, ದಕ್ಷಿಣದ ವೆನಿಸ್ ಅಂತಾನೂ ಕರೆಯಲ್ಪಡುತ್ತದೆ. ಕೇರಳದ ಕರಾವಳಿ ತೀರದಲ್ಲಿರುವ ಸರೋವರಗಳು, ಕಾಲುವೆಗಳ ಜಾಲ ಅರಬ್ಬೀ ಸಮುದ್ರದ ತೀರಕ್ಕೆ ಸೇರುತ್ತದೆ.

ಲೇಹ್-ಲಡಾಖ್

ಮಂಜುಗಡ್ಡೆಯಿಂದ ಆವೃತವಾದ ಪರ್ವತಗಳು ಮತ್ತು ಬೆರಗುಗೊಳಿಸುವ ನೋಟಗಳಿಗೆ ಫೇಮಸ್ ಆದ ಲೇಹ್-ಲಡಾಖ್ ಭಾರತದ ಬೆಸ್ಟ್ ಟೂರಿಸ್ಟ್ ತಾಣಗಳಲ್ಲಿ ಒಂದು. ಈ ಜಾಗ ಪ್ರಕೃತಿ ಪ್ರಿಯರಿಗೆ ಸ್ವರ್ಗದಂತಿದೆ.

ಉದಯಪುರ, ರಾಜಸ್ಥಾನ

ಉದಯಪುರ, ರಾಜಸ್ಥಾನದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಸರೋವರಗಳ ನಗರ ಅಂತ ಕರೆಯಲ್ಪಡುವ ಉದಯಪುರ ತನ್ನ ಸುಂದರ ಸರೋವರಗಳು, ಸಿಟಿ ಪ್ಯಾಲೇಸ್‌ನಂತಹ ಅರಮನೆಗಳು ಮತ್ತು ರೊಮ್ಯಾಂಟಿಕ್ ವಾತಾವರಣಕ್ಕೆ ಫೇಮಸ್.

ಗೋವಾ

ಗೋವಾದಲ್ಲಿ ಹಲವಾರು ಸುಂದರ ಸಮುದ್ರ ತೀರಗಳ ಜೊತೆಗೆ ಸಾಂಸ್ಕೃತಿಕ ಅನುಭವಗಳ ಕಾಂಬಿನೇಷನ್ ಇದೆ. ಇದರ ಜೊತೆಗೆ ಗೋವಾದ ಕ್ಲಬ್, ಬಾರ್, ರೆಸ್ಟೋರೆಂಟ್ ಮತ್ತು ಕ್ಯಾಸಿನೊಗಳಿಗೆ ಸಹ ಫೇಮಸ್.

ವಾರಣಾಸಿ

ವಾರಣಾಸಿ ಪ್ರಪಂಚದ ಅತ್ಯಂತ ಹಳೆಯ ನಗರಗಳಲ್ಲಿ ಒಂದು. ಇದು ಗಂಗಾ ನದಿಯ ದಡದಲ್ಲಿರುವ ತನ್ನ ಘಾಟ್‌ಗಳು ಮತ್ತು ಸಮೃದ್ಧ ಆಧ್ಯಾತ್ಮಿಕ ವಾತಾವರಣಕ್ಕೆ ಹೆಸರುವಾಸಿಯಾಗಿದೆ.

ಶ್ರೀನಗರ, ಜಮ್ಮು ಮತ್ತು ಕಾಶ್ಮೀರ

ಶ್ರೀನಗರವನ್ನು ಭೂಮಿಯ ಸ್ವರ್ಗ ಅಂತ ಕರೆಯುತ್ತಾರೆ. ಇದು ಕಾಶ್ಮೀರ ಕಣಿವೆಯಲ್ಲಿ ಝೀಲಂ ನದಿಯ ದಡದಲ್ಲಿದೆ. ಇದು ಪ್ರಕೃತಿ ಪ್ರಿಯರಿಗೆ ಬೆಸ್ಟ್ ಆಯ್ಕೆಯಾಗಿದೆ.

ಹಂಪಿ, ಕರ್ನಾಟಕ

ಹಂಪಿ, ಕರ್ನಾಟಕ ರಾಜ್ಯದಲ್ಲಿರುವ ಒಂದು ಐತಿಹಾಸಿಕ ಸ್ಥಳ, ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಅಂತ ಗುರುತಿಸಿದೆ. ಹಂಪಿ ತನ್ನ ಪ್ರಾಚೀನ ದೇವಾಲಯಗಳು ಮತ್ತು ಅವಶೇಷಗಳಿಗೆ ಹೆಸರುವಾಸಿಯಾಗಿದೆ.

ರಣಥಂಬೋರ್ ನ್ಯಾಷನಲ್ ಪಾರ್ಕ್

ಈ ನ್ಯಾಷನಲ್ ಪಾರ್ಕ್ ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯಲ್ಲಿದೆ. ಇದು ಬಂಗಾಳ ಹುಲಿಗಳ ದರ್ಶನಕ್ಕೆ ಹೆಸರುವಾಸಿಯಾಗಿದೆ ಮತ್ತು ಇಲ್ಲಿನ ದಟ್ಟವಾದ ಕಾಡು, ಐತಿಹಾಸಿಕ ಕೋಟೆ ಮತ್ತು ಪ್ರಾಣಿ-ಪಕ್ಷಿಗಳು ಪ್ರಕೃತಿ ಪ್ರಿಯರಿಗೆ ಮತ್ತು ಛಾಯಾಗ್ರಾಹಕರಿಗೆ ಸ್ವರ್ಗದಂತಿವೆ.

Latest Videos

vuukle one pixel image
click me!