ಇಂದೋರ್, ಮಧ್ಯ ಪ್ರದೇಶ
ಇಂದೋರ್ ಭಾರತದ ಮಧ್ಯ ಪ್ರದೇಶದಲ್ಲಿರೋ ಸಿಟಿ. ಇಲ್ಲಿ ರಾಜವಾಡ, ಲಾಲ್ ಬಾಗ್ ಪ್ಯಾಲೇಸ್, ಖಜರಾನಾ ಗಣೇಶ ದೇವಸ್ಥಾನ, ಪಾತಾಳಪಾಣಿ ಜಲಪಾತ ಮತ್ತೆ ರಾಲಾಮಂಡಲ ಅಂತಾ ತುಂಬಾ ಪ್ಲೇಸ್ ಗಳಿವೆ.
ಸೂರತ್, ಗುಜರಾತ್
ಸೂರತ್ ನಲ್ಲಿ ತಿರುಗಾಡೋಕೆ ತುಂಬಾ ಒಳ್ಳೆ ಪ್ಲೇಸ್ ಗಳಿವೆ, ದುಮಾಸ್ ಬೀಚ್, ಹಜೀರಾ ಬೀಚ್, ಸುವಾಲಿ ಬೀಚ್, ಇಸ್ಕಾನ್ ದೇವಸ್ಥಾನ, ಇತರ ಕಡೆಗಳೂ ಇವೆ. ಭಾರತದ ವಜ್ರ ನಗರಿ" ಎಂದು ಕರೆಯಲ್ಪಡುವ ಸೂರತ್ ನಲ್ಲಿ ವಿಶ್ವದ ವಜ್ರ ಕತ್ತರಿಸುವುದು ಮತ್ತು ಹೊಳಪು ನೀಡುವ ಕೆಲಸ 90% ಇಲ್ಲಿ ನಡೆಯುತ್ತದೆ. ಇದು ಪ್ರಮುಖ ಜವಳಿ ಕೇಂದ್ರವಾಗಿದ್ದು, ಚೌಟಾ ಬಜಾರ್ ಮತ್ತು ಸಹಾರಾ ದರ್ವಾಜಾದಂತಹ ಮಾರುಕಟ್ಟೆಗಳು ಶಾಪಿಂಗ್‌ಗೆ ಜನಪ್ರಿಯವಾಗಿವೆ.
ಪಾಕಿಸ್ತಾನದ 10 ಅತಿ ಅಪಾಯಕಾರಿ ನಗರಗಳಿವು, ಟ್ರಾವೆಲ್ ಮಾಡೋರು ಇಲ್ಲಿಗೆ ಹೋಗೋದು ರಿಸ್ಕ್ ಗುರು!
ಅಂಬಿಕಾಪುರ್, ಛತ್ತೀಸ್‌ಗಢ
ಅಂಬಿಕಾಪುರ್, ಛತ್ತೀಸ್‌ಗಢದಲ್ಲಿ ತಿರುಗಾಡೋಕೆ ತುಂಬಾ ಚಂದದ ಮತ್ತೆ ಇಂಟರೆಸ್ಟಿಂಗ್ ಪ್ಲೇಸ್ ಗಳಿವೆ, ಮಹಾಮಾಯಾ ದೇವಸ್ಥಾನ, ಮೈನ್ಪಾಟ್ ಹಿಲ್ ಸ್ಟೇಷನ್, ಕೈಲಾಶ್ ಗುಹೆ, ಠಿನ್ಠಿನಿ ಕಲ್ಲು ಮತ್ತೆ ಸರ್ಗುಜಾ ಅರಮನೆ ಸೇರಿವೆ.
ವಿಜಯವಾಡ, ಆಂಧ್ರ ಪ್ರದೇಶ
ವಿಜಯವಾಡ ಆಂಧ್ರ ಪ್ರದೇಶದ ಕೃಷ್ಣಾ ಡಿಸ್ಟ್ರಿಕ್ಟ್ ನಲ್ಲಿ ಕೃಷ್ಣಾ ನದಿ ದಡದಲ್ಲಿರೋ ಫೇಮಸ್ ಟೂರಿಸ್ಟ್ ಪ್ಲೇಸ್. ಐತಿಹಾಸಿಕ ಸ್ಮಾರಕಗಳಿಗೆ ಹೆಸರುವಾಸಿಯಾಗಿದೆ. ಕನಕ ದುರ್ಗಾ ದೇವಸ್ಥಾನ ಇಲ್ಲಿ ಫೇಮಸ್
ಅಹಮದಾಬಾದ್, ಗುಜರಾತ್
ಅಹಮದಾಬಾದ್ ಕ್ಲೀನ್ ಆಗಿರೋದಕ್ಕೆ ಫೇಮಸ್. ಇಲ್ಲಿ ತಿರುಗಾಡೋಕೆ ತುಂಬಾ ಚಂದದ ಪ್ಲೇಸ್ ಗಳಿವೆ. ಶ್ರೀಮಂತ ಇತಿಹಾಸ, ಸಾಂಸ್ಕೃತಿಕ ಮಹತ್ವ, ಅಭಿವೃದ್ಧಿ ಹೊಂದುತ್ತಿರುವ ಜವಳಿ ಉದ್ಯಮ, ಮತ್ತು ನವರಾತ್ರಿಯಂತಹ ರೋಮಾಂಚಕ ಹಬ್ಬಗಳು, ಜೊತೆಗೆ ಭಾರತದ ಸ್ವಾತಂತ್ರ್ಯ ಚಳವಳಿಯ ಪ್ರಮುಖ ತಾಣವಾದ ಸಬರಮತಿ ಆಶ್ರಮದ ಸ್ಥಳವಾಗಿದೆ.
ಅತ್ಯಧಿಕ ಸಮಯ ಜನರು ಕೆಲಸ ಮಾಡುವ ಟಾಪ್-10 ದೇಶಗಳು: ಭಾರತಕ್ಕೆ ಎಷ್ಟನೇ ಸ್ಥಾನ?
ನವ ದೆಹಲಿ, ಭಾರತ ಸರ್ಕಾರದ ರಾಜಧಾನಿ. ಇಲ್ಲಿ ತಿರುಗಾಡೋಕೆ ತುಂಬಾ ಬೆಸ್ಟ್ ಪ್ಲೇಸ್ ಗಳಿವೆ. ಶ್ರೀಮಂತ ಇತಿಹಾಸ, ವೈವಿಧ್ಯಮಯ ಸಂಸ್ಕೃತಿ, ಕೆಂಪು ಕೋಟೆ, ಕುತುಬ್ ಮಿನಾರ್, ಹುಮಾಯೂನ್ ಸಮಾಧಿ ಮತ್ತು ಕಮಲ ದೇವಾಲಯ ಸೇರಿದಂತೆ ಹಲವಾರು ಐತಿಹಾಸಿಕ ಸ್ಮಾರಕಗಳಿವೆ
ಚಂದ್ರಪುರ್, ಮಹಾರಾಷ್ಟ್ರ
ಚಂದ್ರಪುರ್, ಮಹಾರಾಷ್ಟ್ರದಲ್ಲಿರೋ ಒಂದು ಸಿಟಿ. ಇಲ್ಲಿನ ಮಹಾಕಾಳಿ ದೇವಸ್ಥಾನ ತುಂಬಾ ಫೇಮಸ್. ಕೋಟೆ ನಗರ ಚಂದ್ರಾಪುರವು ಹಳೆಯ ಹತ್ತಿ ನೇಯ್ಗೆ ಉದ್ಯಮಕ್ಕೆ ಹೆಸರುವಾಸಿಯಾಗಿದೆ . ಈ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ಕಂಡುಬರುವ ಹೆಚ್ಚಿನ ಕರಕುಶಲ ವಸ್ತುಗಳು ಹತ್ತಿ ಬಟ್ಟೆಗಳಾಗಿದ್ದು, ಅವು ಶ್ರೇಷ್ಠತೆ ಮತ್ತು ಬಾಳಿಕೆಗೆ ವ್ಯಾಪಕ ಖ್ಯಾತಿಯನ್ನು ಹೊಂದಿವೆ.
ಖರಗೋಣ್, ಮಧ್ಯ ಪ್ರದೇಶ
ಖರಗೋಣ್, ಮಧ್ಯ ಪ್ರದೇಶದಲ್ಲಿ ತಿರುಗಾಡೋಕೆ ತುಂಬಾ ಚಂದದ ಮತ್ತೆ ಹಿಸ್ಟಾರಿಕಲ್ ಪ್ಲೇಸ್ ಗಳಿವೆ. ಇಲ್ಲಿನ ಕ್ಲೀನ್ ವಾತಾವರಣ ಇನ್ನೂ ಸ್ಪೆಷಲ್ ಆಗಿ ಮಾಡುತ್ತೆ. ನವಗ್ರಹ ದೇವಸ್ಥಾನ, ಹತ್ತಿ ಮತ್ತು ಮೆಣಸಿನಕಾಯಿ ಉತ್ಪಾದನೆ ಮತ್ತು ಅದರ ಕೃಷಿ ಉತ್ಪನ್ನ ಮಾರುಕಟ್ಟೆ. ಘಾಟ್‌ಗಳು ಮತ್ತು ಮಹೇಶ್ವರಿ ಸೀರೆಗಳಿಗೆ ಹೆಸರುವಾಸಿಯಾಗಿದೆ.