ರಾಜ್ಯದ ಜನರಿಗೆ ಗುಡ್​ ನ್ಯೂಸ್​: ಮೂರು ಡೆಮು ರೈಲುಗಳು ಕಾಯಂ- 6 ಜಿಲ್ಲೆಗಳ ಫುಲ್​ ಡಿಟೇಲ್ಸ್​ ಇಲ್ಲಿದೆ

Published : May 09, 2026, 01:01 PM IST

ಭಾರತೀಯ ರೈಲ್ವೆಯು ಉತ್ತರ ಮತ್ತು ಮಧ್ಯ ಕರ್ನಾಟಕದ ಜನರಿಗೆ ಅನುಕೂಲವಾಗುವಂತೆ ಮೂರು ಹೊಸ ಡೆಮು ರೈಲು ಸೇವೆಗಳನ್ನು ಕಾಯಂಗೊಳಿಸಿದೆ. ಈ ರೈಲುಗಳು ಬಳ್ಳಾರಿ-ದಾವಣಗೆರೆ, ಹೊಸಪೇಟೆ-ಬಳ್ಳಾರಿ, ಮತ್ತು ಹೊಸಪೇಟೆ-ಹುಬ್ಬಳ್ಳಿ ನಡುವೆ ಸಂಚರಿಸಲಿದ್ದು, ಪ್ರಯಾಣವನ್ನು ಸುಲಭಗೊಳಿಸಲಿವೆ.

PREV
16
ಮೂರು ಡೆಮು ರೈಲು

ಭಾರತೀಯ ರೈಲ್ವೆಯು ದೇಶದ ಹಲವಾರು ಭಾಗಗಳಲ್ಲಿ ಕಡಿಮೆ ಅಂತರದಲ್ಲಿ ಸಂಚರಿಸುವ ಡೆಮು (Diesel Electric Multiple Unit ) ರೈಲುಗಳನ್ನು ಈಗ ಕಾರ್ಯ ಮಾಡಿದೆ. ಇದರಿಂದ ಕೆಲವು ಭಾಗದ ಜನರಿಗೆ ತುಂಬಾ ಅನುಕೂಲ ಆಗಲಿದೆ. ಇಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ. ಆ ರೈಲುಗಳೆಂದರೆ ಬಳ್ಳಾರಿ-ದಾವಣಗೆರೆ, ಹೊಸಪೇಟೆ-ಬಳ್ಳಾರಿ ಹಾಗೂ ಹೊಸಪೇಟೆ-ಹುಬ್ಬಳ್ಳಿ ನಡುವೆ ಸಂಚರಿಸುವ 8 ಬೋಗಿಗಳ ಈ ರೈಲುಗಳು. ಈ ರೈಲು ಅಗತ್ಯವಿದ್ದಾಗ ಸಂಚಾರ ಮಾಡುತ್ತಿತ್ತು. ಆದರೆ ಇದನ್ನೀಗ ಕಾಯಂ ಮಾಡಿರುವ ಕಾರಣದಿಂದ ಉತ್ತರ ಮತ್ತು ಮಧ್ಯ ಕರ್ನಾಟಕದ ಜನರಿಗೆ ತುಂಬಾ ಪ್ರಯೋಜನ ಆಗಿದೆ.

26
ಬಳ್ಳಾರಿ - ದಾವಣಗೆರೆ - ಬಳ್ಳಾರಿ ಡೆಮು ರೈಲು
  • ರೈಲು ಸಂಖ್ಯೆ 76509 (ಬಳ್ಳಾರಿ - ದಾವಣಗೆರೆ): ಈ ರೈಲು ಬಳ್ಳಾರಿ ಜಂಕ್ಷನ್‌ನಿಂದ ಬೆಳಿಗ್ಗೆ 07:50ಕ್ಕೆ ಹೊರಟು, ಹೊಸಪೇಟೆ (09:30), ಕೊಟ್ಟೂರು (11:36), ಹರಪನಹಳ್ಳಿ (12:25) ಮಾರ್ಗವಾಗಿ ಮಧ್ಯಾಹ್ನ 1:30ಕ್ಕೆ ದಾವಣಗೆರೆ ತಲುಪಲಿದೆ.
  • ರೈಲು ಸಂಖ್ಯೆ 76510 (ದಾವಣಗೆರೆ - ಬಳ್ಳಾರಿ): ಈ ರೈಲು ದಾವಣಗೆರೆಯಿಂದ ಮಧ್ಯಾಹ್ನ 2:30ಕ್ಕೆ ಹೊರಟು, ಅದೇ ಮಾರ್ಗದಲ್ಲಿ ಹಿಂತಿರುಗಿ ರಾತ್ರಿ 8:00 ಗಂಟೆಗೆ ಬಳ್ಳಾರಿ ತಲುಪಲಿದೆ.
36
ಹೊಸಪೇಟೆ - ಬಳ್ಳಾರಿ - ಹೊಸಪೇಟೆ ರೈಲು
  • ರೈಲು ಸಂಖ್ಯೆ 76511 (ಹೊಸಪೇಟೆ - ಬಳ್ಳಾರಿ): ಹೊಸಪೇಟೆಯಿಂದ ಮುಂಜಾನೆ 06:00 ಗಂಟೆಗೆ ಹೊರಡುವ ಈ ರೈಲು, ತೋರಣಗಲ್ಲು (06:29) ಮಾರ್ಗವಾಗಿ ಬೆಳಿಗ್ಗೆ 07:40ಕ್ಕೆ ಬಳ್ಳಾರಿ ಜಂಕ್ಷನ್ ತಲುಪಲಿದೆ.
  • ರೈಲು ಸಂಖ್ಯೆ 76512 (ಬಳ್ಳಾರಿ - ಹೊಸಪೇಟೆ): ಬಳ್ಳಾರಿಯಿಂದ ರಾತ್ರಿ 20:10ಕ್ಕೆ ಹೊರಡುವ ಈ ರೈಲು, ರಾತ್ರಿ 21:50ಕ್ಕೆ ಹೊಸಪೇಟೆ ತಲುಪಲಿದೆ.
46
ಹೊಸಪೇಟೆ- ಹುಬ್ಬಳ್ಳಿ ರೈಲು
  • ರೈಲು ಸಂಖ್ಯೆ 76507 (ಹೊಸಪೇಟೆ - ಹುಬ್ಬಳ್ಳಿ): ಹೊಸಪೇಟೆಯಿಂದ ರಾತ್ರಿ 22:00 ಗಂಟೆಗೆ ಹೊರಟು, ಕೊಪ್ಪಳ (22:36), ಗದಗ (ರಾತ್ರಿ 11:32) ಮಾರ್ಗವಾಗಿ ಮಧ್ಯರಾತ್ರಿ 00:35ಕ್ಕೆ ಹುಬ್ಬಳ್ಳಿ ತಲುಪಲಿದೆ. (ಮೇ 16, 2026 ರಿಂದ ಅನ್ವಯ).
  • ರೈಲು ಸಂಖ್ಯೆ 76508 (ಹುಬ್ಬಳ್ಳಿ - ಹೊಸಪೇಟೆ): ಹುಬ್ಬಳ್ಳಿಯಿಂದ ರಾತ್ರಿ 23:30ಕ್ಕೆ ಹೊರಟು, ಮುಂಜಾನೆ 02:05ಕ್ಕೆ ಹೊಸಪೇಟೆ ತಲುಪಲಿದೆ. (ಮೇ 10, 2026 ರಿಂದ ಅನ್ವಯ).

ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್ www.enquiry.indianrail.gov.in ಗೆ ಭೇಟಿ ನೀಡಬಹುದು. ಅಥವಾ NTES ಆ್ಯಪ್ ಬಳಸಬಹುದು ಹಾಗೂ ಸಹಾಯವಾಣಿ ಸಂಖ್ಯೆ 139 ಗೆ ಕರೆ ಮಾಡಿ.

56
ಏನಿದು ಡೆಮು ರೈಲು

Diesel Electric Multiple Unit ಡೆಮು ರೈಲಿನ ಪೂರ್ಣರೂಪವಾಗಿದೆ. ಕಡಿಮೆ ದೂರದ ಪ್ರಯಾಣಕ್ಕೆ ಡೆಮು ರೈಲುಗಳನ್ನು ಬಳಕೆ ಮಾಡಲಾಗುತ್ತದೆ. ಇದರಲ್ಲಿಯೂ ಡೀಸೆಲ್ ಎಲೆಕ್ಟ್ರಿಕ್ ಡೆಮು, ಡೀಸೆಲ್ ಮೆಕ್ಯಾನಿಕಲ್ ಡೆಮು ಮತ್ತು ಡೀಸೆಲ್ ಹೈಡ್ರಾಲಿಕ್ ಡೆಮು ಎಂಬ ಮೂರು ವಿಧಗಳಿವೆ. ಗಂಟೆಗೆ 120 ಕಿಮೀ ವೇಗದಲ್ಲಿ ಚಲಿಸುವ ಸಾಮಾರ್ಥ್ಯವನ್ನು ಹೊಂದಿದ್ದು, ಪ್ರತಿ ಮೂರು ಬೋಗಿಗಳ ನಂತರ ಒಂದು ಪವರ್ ಕೋಚ್ ಇರುತ್ತದೆ.

66
ಸೌಲಭ್ಯಗಳೇನು?

ಈ ರೈಲುಗಳಲ್ಲಿ ಸ್ಲೀಪರ್‌ ಕೋಚ್, ಫಸ್ಟ್ ಎಸಿ, ಎಕ್ಸಿಕ್ಯೂಟಿವ್ ಕ್ಲಾಸ್ ಶ್ರೇಣಿಯ ಆಸನಗಳು ಲಭ್ಯ ಇವೆ. 120 ಕಿಮೀ ವೇಗದ ಸಾಮಾರ್ಥ್ಯ ಹೊಂದಿದ್ರೂ ನಿಧಾನವಾಗಿಯೇ ಚಲಿಸುತ್ತವೆ. ನಾನ್​-ಎಲೆಕ್ಟ್ರಿಫೈಡ್​ ಮಾರ್ಗದಲ್ಲಿ ಹೆಚ್ಚಾಗಿ ಈ ಡೆಮು ರೈಲುಗಳು ಸಂಚರಿಸುತ್ತವೆ. ಅಕ್ಟೋಬರ್ 23, 1994 ರಂದು ಜಲಂಧರ್ ಮತ್ತು ಹೋಶಿಯಾರ್‌ಪುರ ನಡುವೆ ಮೊದಲ ಡೆಮು ರೈಲು ಸಂಚರಿಸಿತ್ತು. ಗ್ರಾಮೀಣ ಅಥವಾ ಉಪನಗರಳಿಗೆ ಸಂಪರ್ಕ ಕಲ್ಪಿಸುತ್ತವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories