ಬೆಂಗಳೂರಿನಿಂದ ಹಂಪಿಗೆ ನೇರ ಪಲ್ಲಕ್ಕಿ ಬಸ್; ಒಂದು ದಿನದ ಟ್ರಿಪ್‌ಗೆ ಬೆಸ್ಟ್ ಆಯ್ಕೆ

Published : May 09, 2026, 11:09 AM IST

ಬೆಂಗಳೂರಿನಿಂದ ಹಂಪಿಗೆ ಪ್ರವಾಸ ಯೋಜಿಸುತ್ತಿರುವವರಿಗೆ ಕೆಎಸ್‌ಆರ್‌ಟಿಸಿ ನೇರ ಬಸ್ ಸೌಲಭ್ಯವನ್ನು ಒದಗಿಸಿದೆ. ರಾತ್ರಿ ಬೆಂಗಳೂರಿನಿಂದ ಹೊರಡುವ ಈ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್, ಮರುದಿನ ಬೆಳಗ್ಗೆ ಹಂಪಿ ತಲುಪಲಿದ್ದು, ಅದರ ಸಮಯ, ದರ ಮತ್ತು ಬುಕ್ಕಿಂಗ್ ವಿವರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

PREV
15
ಬೆಂಗಳೂರು ನಗರದಿಂದ ಹಂಪಿಗೆ ನೇರ ಬಸ್

ಬೇಸಿಗೆ ರಜೆಗೆ ಹಂಪಿಗೆ ಹೋಗಲು ಬಯಸುತ್ತಿದ್ದೀರಾ? ಬೆಂಗಳೂರು ನಗರದಿಂದ ನೇರ ಬಸ್ ಸೌಲಭ್ಯವಿದೆ. ರಾತ್ರಿ ಬೆಂಗಳೂರಿನಿಂದ ಹೊರಟರೆ ಬೆಳಗ್ಗೆ ಹಂಪಿ ತಲುಪುಬಹುದು. ಇಡೀ ದಿನವೆಲ್ಲಾ ಹಂಪಿ ವೈಭೋಗ ನೋಡಿ ಸಂಜೆ ಇದೇ ಬಸ್‌ನಿಂದ ಮತ್ತೆ ಬೆಂಗಳೂರಿಗೆ ಬರಬಹುದಾಗಿದೆ. ಈ ಬಸ್ ಟೈಮಿಂಗ್, ದರ ಸೇರಿದಂತೆ ಇನ್ನುಳಿದ ಎಲ್ಲಾ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

25
ಬೆಂಗಳೂರು To ಹಂಪಿ PALLAKKI (NON AC SLEEPER) 2259BNGHMP

ನಾನ್ ಎಸಿ ಸ್ಲೀಪರ್ ಪಲ್ಲಕ್ಕಿ ಬಸ್ ಪ್ರತಿದಿನ ರಾತ್ರಿ 10.59ಕ್ಕೆ ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣದಿಂದ ತನ್ನ ಪ್ರಯಾಣ ಆರಂಭಿಸುತ್ತದೆ. ಮರುದಿನ ಬೆಳಗ್ಗೆ 6ಕ್ಕೆ ಹೊಸಪೇಟೆ ಮತ್ತು 6.30ರ ವೇಳೆಗೆ ಹಂಪಿಯನ್ನು ತಲುಪಲಿದೆ. ಈ ಬಸ್ ವಾರದ ಏಳು ದಿನವೂ ಸಂಚರಿಸುತ್ತದೆ. ಒಂದು ಟಿಕೆಟ್ ಬೆಲೆ 832 ರೂ. ಆಗಿದೆ.

35
ಎಲ್ಲೆಲ್ಲಿ ನಿಲುಗಡೆ?

ಮೆಜೆಸ್ಟಿಕ್‌ನ ಬಿಎಸ್ ಟರ್ಮಿನಲ್ 1ರಿಂದ ಪ್ರಯಾಣ ಆರಂಭಿಸುವ ಈ ಬಸ್, ನವರಂಗ ಪಾರ್ಕ್, ಯಶವಂತಪುರ ಗೋವರ್ಧನ್ ಥಿಯೇಟರ್, ಗೊರಗುಂಟೆಪಾಳ್ಯ ಕೆಎಲ್‌ಟಿ ಡೆಂಟಲ್ ಕಾಲೇಜ್, ಜಾಲಹಳ್ಳಿ ಕ್ರಾಸ್ ಮತ್ತು ನೆಲಮಂಗಲ ಕುಣಿಗಲ್ ಬೈಪಾಸ್‌ನಲ್ಲಿ ನಿಲುಗಡೆಯನ್ನು ಹೊಂದಿದೆ. ಚಿತ್ರದುರ್ಗ, ಕೂಡ್ಲಗಿ ಮಾರ್ಗವಾಗಿ ಹಂಪಿಯನ್ನು ತಲುಪುತ್ತದೆ.

45
ಹಂಪಿ To ಬೆಂಗಳೂರು 2001HMPBNG

ಹಂಪಿ ನಿಲ್ದಾಣದಿಂದ ರಾತ್ರಿ 8 ಗಂಟೆಗೆ ಪ್ರಯಾಣ ಆರಂಭಿಸುವ ಪಲ್ಲಕ್ಕಿ ಬಸ್ ಹೊಸಪೇಟೆ ನಿಲ್ದಾಣದಲ್ಲಿ ನಿಲುಗಡೆಯನ್ನು ಹೊಂದಿದೆ. 8.30ಕ್ಕೆ ಹೊಸಪೇಟೆಯಿಂದ ಹೊರಟ ಬಸ್ ಮರುದಿನ ಬೆಳಗಿನ ಜಾವ 4.30ಕ್ಕೆ ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣ ತಲುಪಲಿದೆ. ಇಲ್ಲಿಂದ ಶಾಂತಿನಗರ ನಿಲ್ದಾಣ ತಲುಪಿ ತನ್ನ ಪ್ರಯಾಣವನ್ನು ಮುಕ್ತಾಯಗೊಳಿಸುತ್ತದೆ.

ಇದನ್ನೂ ಓದಿ: ಗೋವಾ ಟ್ರಿಪ್‌ಗೆ ಹೋಗಬೇಕಾದ್ರೆ ಹುಡುಗಿಯರು ಮಾಡಬೇಕು ಸ್ಮಾರ್ಟ್‌ ಪ್ಲಾನಿಂಗ್! ಇಲ್ಲಿದೆ ಟಿಪ್ಸ್

55
ಬುಕ್ಕಿಂಗ್ ಹೇಗೆ?

ಪ್ರಯಾಣಿಕರು ಕೆಎಸ್‌ಆರ್‌ಟಿಸಿ ವೆಬ್‌ಸೈಟ್ ಮೂಲಕ ಟಿಕೆಟ್ ಕಾಯ್ದಿರಿಸಬಹುದಾಗಿದೆ. ಈ ಬಸ್ ಹೊರತುಪಡಿಸಿದ್ರೆ ಪ್ರಯಾಣಿಕರು ಹೊಸಪೇಟೆಗೆ ತೆರಳಿ ಅಲ್ಲಿಂದ ಹಂಪಿಗೆ ಹೋಗಬಹುದಾಗಿ. ಬೆಂಗಳೂರಿನಿಂದ ಹೊಸಪೇಟೆಗೆ ಹಲವು ಸಾರಿಗೆ ಬಸ್‌ಗಳಿವೆ. ಹೆಚ್ಚಿನ ಮಾಹಿತಿಗಾಗಿ ಸಾರಿಗೆ ಸಂಸ್ಥೆಯ ವೆಬ್‌ಸೈಟ್‌ಗೆ https://ksrtc.in/ ಭೇಟಿ ನೀಡಿ.

ಇದನ್ನೂ ಓದಿ: ಬೆಂಗಳೂರಿನಿಂದ ವಿಜಯಪುರಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ಯಾವಾಗ? ಸಂಸದರ ಉತ್ತರ ಏನು?

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories