Goa Travel Tips: ಗೋವಾಗೆ ಹೋದ ಮೇಲೆ ನೀವು ಆರಾಮಾಗಿ ಮಜಾ ಮಾಡಬಹುದು. ಆದರೆ ಕೆಲವು ವಿಷಯಗಳ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು. ಹಾಗೆ ಮಾಡದಿದ್ದರೆ ನೀವು ಸಂಕಷ್ಟಕ್ಕೆ ಸಿಲುಕಬಹುದು ಮತ್ತು ಜೈಲಿಗೆ ಹೋಗಬೇಕಾದ ಸಂದರ್ಭ ಬರಬಹುದು.
ಬ್ಯಾಚುಲರ್ ಆಗಿರಲಿ ಅಥವಾ ದಂಪತಿಯಾಗಿರಲಿ, ಪ್ರತಿಯೊಬ್ಬರಿಗೂ ಗೋವಾ ನೆಚ್ಚಿನ ತಾಣವಾಗಿದೆ. ಇಲ್ಲಿನ ಪರಿಸರ ಜನರನ್ನು ತನ್ನತ್ತ ಸೆಳೆಯುತ್ತದೆ ಮತ್ತು ಮುಕ್ತವಾಗಿ ಬದುಕಲು ಅವಕಾಶ ನೀಡುತ್ತದೆ. ಗೋವಾದಲ್ಲಿ ಕ್ಯಾಸಿನೊಗಳಿಂದ ಹಿಡಿದು ಅಗ್ಗದ ಮದ್ಯದವರೆಗೆ ಮತ್ತು ಬೀಚ್‌ಗಳಲ್ಲಿ ಮೋಜು-ಮಸ್ತಿ ಎಲ್ಲವೂ ಇರುತ್ತದೆ. ಆದರೆ ಕೆಲವು ತಪ್ಪುಗಳನ್ನು ನೀವು ಮಾಡಿದರೆ, ಪಾರ್ಟಿ ಮಾಡುವ ಬದಲು ಗೋವಾದ ಯಾವುದಾದರೊಂದು ಜೈಲಿನಲ್ಲಿ ಇರಬೇಕಾಗುತ್ತದೆ. ಅಂತಹ ತಪ್ಪುಗಳನ್ನು ಮಾಡದಂತೆ ತಡೆಯಲು ಇಂದು ನಾವು ನಿಮಗೆ ಕೆಲವು ಪ್ರವಾಸದ ಸಲಹೆಗಳನ್ನು (Travel Tips) ನೀಡುತ್ತಿದ್ದೇವೆ.
28
ಮದ್ಯಪಾನದ ನಿಯಮಗಳು
ಗೋವಾದ ಬೀಚ್‌ಗಳಲ್ಲಿ ಪಾರ್ಟಿ ಮಾಡುವ ಸಂಸ್ಕೃತಿ ಬಹಳ ಜನಪ್ರಿಯವಾಗಿದೆ. ಇಲ್ಲಿ ಜನರು ಮದ್ಯ ಸೇವಿಸಿ ಕುಣಿದು ಕುಪ್ಪಳಿಸುತ್ತಾರೆ. ಆದರೆ ಕೆಲವು ಜನರು ಇದನ್ನು ವಿಭಿನ್ನವಾಗಿ ಮಾಡಲು ಹೋಗಿ, ಮದ್ಯ ಅಥವಾ ಬಿಯರ್ ಬಾಟಲಿಯನ್ನು ಹಿಡಿದುಕೊಂಡು ಫಿಲ್ಮಿ ಸ್ಟೈಲ್‌ನಲ್ಲಿ ಬೀಚ್‌ನಲ್ಲಿ ಅಡ್ಡಾಡಲು ಶುರು ಮಾಡುತ್ತಾರೆ. ಹೀಗೆ ಮಾಡುವುದರಿಂದ ನೀವು ಸಂಕಷ್ಟಕ್ಕೆ ಸಿಲುಕಬಹುದು ಮತ್ತು ಗೋವಾ ಪೊಲೀಸರ ಅತಿಥಿಯಾಗಬಹುದು. ಬೀಚ್‌ನಲ್ಲಿ ನೀವು ಬಹಿರಂಗವಾಗಿ ಮದ್ಯಪಾನ ಮಾಡುವಂತಿಲ್ಲ. ಅಲ್ಲಿನ ರೆಸ್ಟೋರೆಂಟ್‌ಗಳು ಅಥವಾ ಕೆಫೆಗಳಲ್ಲಿ ಕುಳಿತು ನೀವು ಬಿಯರ್ ಅಥವಾ ಮದ್ಯ ಸೇವಿಸಬಹುದು.
38
ಕಸ ಹಾಕಬೇಡಿ
ಗೋವಾ ಬೀಚ್‌ನಲ್ಲಿ ತಿರುಗಾಡುವಾಗ ಕಸವನ್ನು ನಿಮ್ಮೊಂದಿಗೇ ಕೊಂಡೊಯ್ಯುವುದನ್ನು ನೆನಪಿನಲ್ಲಿಡಿ. ನೀವು ಕಸ ಹರಡಿದರೆ ದಂಡ ತೆರಬೇಕಾಗಬಹುದು.
ಬೀಚ್ ಬದಿ Romance ಮಾಡುವುದು ತಪ್ಪಲ್ಲ, ಆದರೆ ನೀವು ಅಶ್ಲೀಲವಾಗಿ ವರ್ತಿಸುತ್ತಿರುವುದು ಕಂಡುಬಂದರೆ ನೇರವಾಗಿ ಜೈಲು ಸೇರಬೇಕಾಗುತ್ತದೆ.
58
ಫೋಟೋ ತೆಗೆಯುವ ಮುನ್ನ ಎಚ್ಚರ
ಅನೇಕ ಜನರು ಬೀಚ್‌ನಲ್ಲಿ ಕುಳಿತವರ ಆಕ್ಷೇಪಾರ್ಹ ಚಿತ್ರಗಳನ್ನು ತೆಗೆಯುತ್ತಾರೆ. ಹೀಗೆ ಮಾಡುವುದರಿಂದ ನೀವು ದೊಡ್ಡ ತೊಂದರೆಗೆ ಸಿಲುಕಬಹುದು.
68
ಅಸಭ್ಯ ವರ್ತನೆ
ಕೆಲವು ಯುವಕರು ಬೀಚ್‌ನಲ್ಲಿ ಕುಳಿತ ವಿದೇಶಿಯರ ಅಥವಾ ಮಹಿಳೆಯರ ಬಗ್ಗೆ ಅಸಭ್ಯವಾಗಿ ಕಾಮೆಂಟ್ ಮಾಡುತ್ತಾರೆ. ಹೀಗೆ ಮಾಡಿದರೂ ಜೈಲು ಹಕ್ಕಿ ಆಗಬೇಕಾಗುತ್ತದೆ.
78
ನ*ಗ್ನತೆಯ ಬಗ್ಗೆಯೂ ಇರಲಿ ಗಮನ
ಗೋವಾಗೆ ಹೋದಾಗ ಜನರು ಇತರ ನಗರಗಳಲ್ಲಿ ಧರಿಸಲು ಸಾಧ್ಯವಾಗದಂತಹ ಬಟ್ಟೆಗಳನ್ನು ಧರಿಸುತ್ತಾರೆ. ಆದರೆ ಕೆಲವು ಜನರು ಅತೀವ ಉತ್ಸಾಹದಿಂದ ಬಟ್ಟೆಗಳನ್ನು ಬಿಚ್ಚುತ್ತಾರೆ, ಇದು 'ನ*ಗ್ನತೆ' ವ್ಯಾಪ್ತಿಗೆ ಬರುತ್ತದೆ. ನೀವು ಪೊಲೀಸರಿಗೆ ಸಿಕ್ಕಿಬಿದ್ದರೆ ಮುಂದಿನ ಪಾರ್ಟಿಯನ್ನು ಜೈಲಿನಲ್ಲಿಯೇ ಮಾಡಬೇಕಾಗುತ್ತದೆ. ನೀವು ಕ್ಯಾಸಿನೊಗೆ ಹೋದಾಗ ಅಲ್ಲಿ ಸೋತ ನಂತರ ಗಲಾಟೆ ಮಾಡಲು ಪ್ರಯತ್ನಿಸಿದರೂ ಜೈಲಿಗೆ ಹೋಗಬೇಕಾಗುತ್ತದೆ. ಇದಲ್ಲದೆ, ಮದ್ಯಪಾನ ಮಾಡಿದ ನಂತರ ವಾಹನವನ್ನು ಅತಿ ವೇಗವಾಗಿ ಚಲಾಯಿಸಿದರೆ, ಅದು ನಿಮ್ಮನ್ನು ನೇರವಾಗಿ ಜೈಲಿಗೇ ಕರೆದೊಯ್ಯುತ್ತದೆ.
88
ನಿಯಮಗಳನ್ನು ಗೌರವಿಸಿ
ಗೋವಾದಲ್ಲಿ ಮಜಾ ಮಾಡಿ, ಆದರೆ ಅಲ್ಲಿನ ನಿಯಮಗಳನ್ನು ಗೌರವಿಸಿ. ನಿಮ್ಮ ಒಂದು ಸಣ್ಣ ತಪ್ಪು ಇಡೀ ಪ್ರವಾಸವನ್ನು ಹಾಳು ಮಾಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.