ಪ್ರಧಾನಿ ಭೇಟಿ ನಂತರ MakeMyTripನಲ್ಲಿ ಲಕ್ಷದ್ವೀಪ ಸರ್ಚ್‌ನಲ್ಲಿ 3,400% ಏರಿಕೆ: ನೂತನ ಅಭಿಯಾನ ಪ್ರಾರಂಭ!

First Published Jan 8, 2024, 7:11 PM IST

ಮಾಲ್ಡೀವ್ಸ್‌ ವಿವಾದದ ನಡುವೆ ಜನಪ್ರಿಯ ಟ್ರಾವೆಲ್ ವೇದಿಕೆ ಮೇಕ್‌ ಮೈ ಟ್ರಿಪ್‌ (Make My Trip) ನಲ್ಲಿ ದ್ವೀಪಸಮೂಹ ಲಕ್ಷದ್ವೀಪಕ್ಕಾಗಿ ಹುಡುಕಾಟದಲ್ಲಿ ಭಾರಿ ಹೆಚ್ಚಳವಾಗಿದೆ ಎಂದು ಹೇಳಿದೆ.

ಆನ್‌ಲೈನ್‌ನಲ್ಲಿ ಲಕ್ಷದ್ವೀಪ ವರ್ಸಸ್‌ ಮಾಲ್ಡೀವ್ಸ್‌ (Lakshadweep vs Maldives) ಚರ್ಚೆ ಜೋರಾಗಿದೆ. ಮಾಲ್ಡೀವ್ಸ್‌ನ ಸಚಿವರಾದ ಮಲ್ಶಾ ಶರೀಫ್, ಮರಿಯಮ್ ಶಿಯುನಾ ಮತ್ತು ಅಬ್ದುಲ್ಲಾ ಮಹಜೂಮ್ ಮಜೀದ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತದ ವಿರುದ್ಧ ಮಾಡಿದ ಟೀಕೆಗೆ ಪ್ರತಿಕ್ರಿಯೆಗಾಗಿ ಮಾಲ್ಡೀವ್ಸ್‌ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. 
 

ಉಪ ಸಚಿವೆಯೊಬ್ಬರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ "ವಿದೂಷಕ", "ಭಯೋತ್ಪಾದಕ" ಮತ್ತು "ಇಸ್ರೇಲ್‌ನ ಕೈಗೊಂಬೆ" ಎಂದು ಕರೆದಿದ್ದರು. ಅಲ್ಲದೆ, ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದ ಮೋದಿ ವಿಡಿಯೋ, ಫೋಟೋಗಳಿಗೂ ಟೀಕೆ ಮಾಡಿದ್ದರು. ಮಾಲ್ಡೀವ್ಸ್‌ ಸಚಿವರ ಈ ಆಕ್ರೋಶ ಸ್ಥಳೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲಿದ್ದು, ಮಾಲ್ಡೀವ್ಸ್‌ನ ಉತ್ತರದಲ್ಲಿರೋ ಭಾರತದ ಲಕ್ಷದ್ವೀಪದ ದ್ವೀಪಗಳಿಗೂ ಜನರ ಕ್ರೇಜ್‌ ಹೆಚ್ಚಾಗಿದೆ.

Latest Videos


ಮಾಲ್ಡೀವ್ಸ್ ಸಚಿವರ ಈ ಪೋಸ್ಟ್‌ಗಳ ಬಳಿಕ #BoycottMaldives ಎಂಬ ಹ್ಯಾಶ್‌ಟ್ಯಾಗ್‌ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಟ್ರೆಂಡ್ ಆಗಿದೆ. ಕೆಲವು ಸೆಲೆಬ್ರಿಟಿಗಳು ಸೇರಿದಂತೆ ಅನೇಕ ಭಾರತೀಯರು ಭಾರತದ ದೇಶೀಯ ಸ್ಥಳಗಳನ್ನು, ಪ್ರಮುಖವಾಗಿ ಬೀಚ್‌ಗಳನ್ನು ಪ್ರಚಾರ ಮಾಡುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.

ಇನ್ನು, ಈ ವಿವಾದದ ನಡುವೆ ಜನಪ್ರಿಯ ಟ್ರಾವೆಲ್ ವೇದಿಕೆ ಮೇಕ್‌ ಮೈ ಟ್ರಿಪ್‌ (Make My Trip) ನಲ್ಲಿ ದ್ವೀಪಸಮೂಹ ಲಕ್ಷದ್ವೀಪಕ್ಕಾಗಿ ಹುಡುಕಾಟದಲ್ಲಿ ಭಾರಿ ಹೆಚ್ಚಳವಾಗಿದೆ ಎಂದು ಹೇಳಿದೆ.

3400% ಹೆಚ್ಚಳ
ಗೌರವಾನ್ವಿತ ಪ್ರಧಾನಿಯವರ ಭೇಟಿಯ ನಂತರ ಲಕ್ಷದ್ವೀಪಕ್ಕೆ ಆನ್ - ಪ್ಲಾಟ್‌ಫಾರ್ಮ್ ಹುಡುಕಾಟಗಳಲ್ಲಿ 3400% ಹೆಚ್ಚಳವನ್ನು ನಾವು ಗಮನಿಸಿದ್ದೇವೆ. ಭಾರತೀಯ ಕಡಲತೀರಗಳ ಮೇಲಿನ ಈ ಆಸಕ್ತಿಯು ದೇಶದ ಬೆರಗುಗೊಳಿಸುವ ಕಡಲತೀರಗಳನ್ನು ಅನ್ವೇಷಿಸಲು ಭಾರತೀಯ ಪ್ರಯಾಣಿಕರನ್ನು ಉತ್ತೇಜಿಸಲು ಕೊಡುಗೆಗಳು ಮತ್ತು ರಿಯಾಯಿತಿಗಳೊಂದಿಗೆ ಪ್ಲಾಟ್‌ಫಾರ್ಮ್‌ನಲ್ಲಿ 'Beaches of India'  ಅಭಿಯಾನವನ್ನು ಪ್ರಾರಂಭಿಸಲು ನಮಗೆ ಸ್ಫೂರ್ತಿ ನೀಡಿದೆ. ಈ ಜಾಗವನ್ನು ವೀಕ್ಷಿಸುತ್ತಿರಿ!  ಎಂದು ಮೇಕ್‌ ಮೈ ಟ್ರಿಪ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ಮೋದಿ ಭೇಟಿಯ ನಂತರ ಲಕ್ಷದ್ವೀಪ ಆದ್ಯತೆಯ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ. ಹಲವಾರು ಜನರು ಭಾರತೀಯ ದ್ವೀಪವನ್ನು ಮಾಲ್ಡೀವ್ಸ್ ಮತ್ತು ಸೀಶೆಲ್ಸ್‌ನಂತಹ ಜಾಗತಿಕವಾಗಿ ಬೇಡಿಕೆಯಿರುವ ಬೀಚ್ ತಾಣಗಳೊಂದಿಗೆ ಹೋಲಿಸಲು ಪ್ರಾರಂಭಿಸಿದ್ದಾರೆ.

ಈ ಮಧ್ಯೆ, ಭಾರತದಲ್ಲಿರುವ ಮಾಲ್ಡೀವ್ಸ್ ರಾಯಭಾರಿಯನ್ನು ಸೋಮವಾರ ವಿದೇಶಾಂಗ ಸಚಿವಾಲಯಕ್ಕೆ ಕರೆಸಲಾಯಿತು ಮತ್ತು ಮಾಲ್ಡೀವ್ಸ್‌ನ ಹಲವಾರು ಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಟೀಕೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದು ಟ್ರಾವೆಲ್ ವೆಬ್‌ಸೈಟ್, EaseMyTrip ಮಾಲ್ಡೀವ್ಸ್‌ಗೆ ಎಲ್ಲಾ ವಿಮಾನ ಮತ್ತು ಹೋಟೆಲ್ ಬುಕಿಂಗ್  ಸ್ಥಗಿತಗೊಳಿಸಿರುವುದಾಗಿ ಘೋಷಿಸಿದೆ. 

click me!