ಸಿಬ್ಬಂದಿ ಹೇಳಲ್ಲ, ಹೆಚ್ಚಿನವರಿಗೆ ತಿಳಿದಿಲ್ಲ; ವಿಮಾನ ಪ್ರಯಾಣದಲ್ಲಿದೆ 7 ಉಚಿತ ಸೌಲಭ್ಯ

Published : Apr 28, 2025, 04:04 PM ISTUpdated : Apr 28, 2025, 04:18 PM IST

ವಿಮಾನ ಪ್ರಯಾಣದಲ್ಲಿ ಪ್ರಯಾಣಿಕರಿಗೆ ಹಲವು ಉಚಿತ ಸವಲತ್ತುಗಳು ಸಿಗುತ್ತವೆ, ಸಾಮಾನ್ಯವಾಗಿ ವಿಮಾನ ಸಿಬ್ಬಂದಿಗಳು ಈ ಕುರಿತು ಹೇಳುವುದಿಲ್ಲ, ಬಹುತೇಕರಿಗೆ ಗೊತ್ತಿಲ್ಲ. ಹೀಗೆ ವಿಮಾನ ಪ್ರಯಾಣದಲ್ಲಿರುವ ಕೆಲ ಸೌಲಭ್ಯಗಳ ಕುರಿತು ಮಾಹಿತಿ ಇಲ್ಲಿದೆ. 

PREV
17
ಸಿಬ್ಬಂದಿ ಹೇಳಲ್ಲ, ಹೆಚ್ಚಿನವರಿಗೆ ತಿಳಿದಿಲ್ಲ; ವಿಮಾನ ಪ್ರಯಾಣದಲ್ಲಿದೆ 7 ಉಚಿತ ಸೌಲಭ್ಯ
ಉಚಿತ ಸೀಟ್ ಅಪ್‌ಗ್ರೇಡ್

ವಿಮಾನದಲ್ಲಿ ಖಾಲಿ ಸೀಟುಗಳಿದ್ದರೆ ಮತ್ತು ನೀವು ಸಮಯಕ್ಕೆ ಸರಿಯಾಗಿ ಚೆಕ್-ಇನ್ ಮಾಡಿದರೆ, ಉಚಿತವಾಗಿ ಬಿಸಿನೆಸ್ ಕ್ಲಾಸ್ ಅಥವಾ ಪ್ರೀಮಿಯಂ ಎಕಾನಮಿಗೆ ಅಪ್‌ಗ್ರೇಡ್ ಪಡೆಯಬಹುದು. ಇದು ನಿಮ್ಮ ಟಿಕೆಟ್ ಕ್ಲಾಸ್ ಅನುಗುಣವಾಗಿ ಮಾಡಬೇಕು. ಒಂದು ಕ್ಲಾಸ್‌ನಿಂದ ಮತ್ತೊಂದು ಕ್ಲಾಸ್‌ಗೆ ಉದಾಹರಣೆಗೆ ಎಕಾನಿಮಿಯಿಂದ ಬ್ಯೂಸಿನೆಸ್ ಕ್ಲಾಸ್ ಸಾಧ್ಯವಿಲ್ಲ.

27
ಉಚಿತ ತಿಂಡಿ ಮತ್ತು ಪಾನೀಯಗಳು

ದೊಡ್ಡ ವಿಮಾನಗಳಲ್ಲಿ ಉಚಿತ ತಿಂಡಿ ಮತ್ತು ಪಾನೀಯಗಳು ಸಿಗುತ್ತವೆ. ಸಿಬ್ಬಂದಿಯನ್ನು ಕೇಳಿ ಪಡೆಯಿರಿ. ಎಕಾನಾಮಿ ಕ್ಲಾಸ್ ಪ್ರಯಾಣದಲ್ಲಿ ಟಿಕೆಟ್ ಬುಕಿಂಗ್ ವೇಳೆ ತಿನಿಸು, ಪಾನಿಯಾ ಬುಕ್ ಮಾಡಿ ಪಾವತಿಸಬೇಕು. ಆದರೆ ಬ್ಯೂಸಿನೆಸ್ ಹಾಗೂ ಪ್ರೀಮಿಯಂ ಕ್ಲಾಸ್‌ ಪ್ರಯಾಣದಲ್ಲಿ ತಿಂಡಿ ಉಚಿತವಾಗಿದೆ. 

37
ವಿಮಾನ ಮನರಂಜನೆ

ಚಲನಚಿತ್ರಗಳು, ಸಂಗೀತ ಮತ್ತು ಆಟಗಳಂತಹ ಮನರಂಜನಾ ಸೌಲಭ್ಯಗಳನ್ನು ಆನಂದಿಸು ಸಾಧ್ಯವಿದೆ.ವಿಮಾನ ಪ್ರಯಾಣದಲ್ಲಿ ಕೆಲ ಮನೋರಂಜನೆಗಳನ್ನು ಒದಗಿಸಲಾಗುತ್ತದೆ. ಇತ್ತೀಚೆಗೆ ಹಲವು ವಿಮಾನಗಳು ಈ ಸೇವೆ ನೀಡುತ್ತಿದೆ. ಕಡಿಮೆ ಪ್ರಯಾಣದ ವಿಮಾನಗಳಲ್ಲಿ ಈ ಸೌಲಭ್ಯಗಳು ಇರುವುದಿಲ್ಲ. 

47
ಉಚಿತ ವೈ-ಫೈ

ಕೆಲವು ವಿಮಾನಯಾನಗಳು ಉಚಿತ ವೈ-ಫೈ ನೀಡುತ್ತವೆ. ಲಭ್ಯತೆಯನ್ನು ಪರಿಶೀಲಿಸಿ. ದೂರ ಪ್ರಯಾಣ ನೀಡುವ ಬಹುತೇಕ ವಿಮಾನಗಳು ವೈಫೈ ಸೌಲಭ್ಯ ನೀಡುತ್ತದೆ. ಇತ್ತೀಚೆಗೆ ವಿಮಾನದಲ್ಲಿ ವೈಫ್ ಸೌಲಭ್ಯ ಸುಲಭ ಹಾಗೂ ಪರಿಣಾಮಕಾರಿ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. 

57
ನೈರ್ಮಲ್ಯ ಕಿಟ್‌ಗಳು

ಕೆಲವು ವಿಮಾನಯಾನಗಳು ಮಾಸ್ಕ್, ಸ್ಯಾನಿಟೈಸರ್ ಇತ್ಯಾದಿಗಳನ್ನು ಒಳಗೊಂಡ ನೈರ್ಮಲ್ಯ ಕಿಟ್‌ಗಳನ್ನು ಒದಗಿಸುತ್ತವೆ.ವಿಮಾನ ಪ್ರವೇಶಕ್ಕೂ ಮುನ್ನ ಅಥವಾ ತಿನಿಸುಗಳನ್ನು ನೀಡುವಾಗ ಕೈಗಳನ್ನು ಸ್ವಚ್ಚಗೊಳಿಸಲು ಸ್ಯಾನಿಟೈಸರ್ ಒದಗಿಸುತ್ತದೆ 

67
ಪ್ರಾಥಮಿಕ ವೈದ್ಯಕೀಯ ನೆರವು

ವಿಮಾನದಲ್ಲಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಪ್ರಾಥಮಿಕ ವೈದ್ಯಕೀಯ ನೆರವು ಲಭ್ಯವಿದೆ. ತಲೆನೋವು, ಜ್ವರ, ಶೀತ ಸೇರಿದಂತೆ ಇತರ ಪ್ರಾಥಮಿಕ ಆರೋಗ್ಯ ಸಮಸ್ಯೆಗಳಿಗೆ ಔಷಧಿಗಳು ಲಭ್ಯವಿರುತ್ತದೆ. 

77
ಉಚಿತ ವಿಮಾನ ನಿಲ್ದಾಣ ಲೌಂಜ್

ಕೆಲವು ಪ್ರೀಮಿಯಂ ಟಿಕೆಟ್‌ಗಳೊಂದಿಗೆ ಉಚಿತ ವಿಮಾನ ನಿಲ್ದಾಣ ಲೌಂಜ್ ಪ್ರವೇಶ ಸಿಗುತ್ತದೆ. ಇದು ಆಯ್ಕೆ ಟಿಕೆಟ್‌ಗಳಿಗೆ ಅಥವಾ ಇತರ ಸೌಲಭ್ಯಗಳ ಕಾರ್ಡ್ ಮೂಲಕ ಟಿಕೆಟ್ ಬುಕಿಂಗ್ ಮಾಡುವರಿಗೆ ಲಭ್ಯವಾಗಲಿದೆ. 

Read more Photos on
click me!

Recommended Stories