ದಕ್ಷಿಣ ಭಾರತದ ಅದ್ಭುತ ತಾಣಗಳಿವು… ಮಿಸ್ ಮಾಡದೇ ಒಂದ್ಸಲನಾದ್ರೂ ಹೋಗಿ ಬನ್ನಿ

First Published | Aug 4, 2023, 6:16 PM IST

ದಕ್ಷಿಣ ಭಾರತ ಪ್ರಾಕೃತಿಕ ಸೌಂದರ್ಯಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಅದೆಷ್ಟೋ ಸುಂದರ ತಾಣಗಳಿವೆ. ಇಲ್ಲಿ ಯಾವ ಕಾಲದಲ್ಲೂ ನೀವು ಎಂಜಾಯ್ ಮಾಡಬಹುದು. ಇಲ್ಲಿ ಪರ್ವತಗಳೂ ಇವೆ, ಹಿಲ್ ಸ್ಟೇಶನ್ ಗಳೂ ಸಹ ಇವೆ, ಸಮುದ್ರಗಳು ಹೀಗೆ ಸಾಕಷ್ಟು ತಾಣಗಳಿವೆ. ನೀವು ನೋಡಲೇಬೇಕಾದ ಸುಂದರ ತಾಣಗಳ ಬಗ್ಗೆ ನೋಡೋಣ. 
 

ವಯನಾಡ್  (Wayanad):
ಕೇರಳದ ಅತ್ಯಂತ ಸುಂದರ ಜಿಲ್ಲೆ ವಯನಾಡ್. ಇದು ಬೆಟ್ಟ ಗುಡ್ಡಗಳಿಂದ ಆವೃತವಾದ ಹಚ್ಚ ಹಸಿರಿನ ಸುಂದರ ನಗರ. ಈ ಸುಂದರ ತಾಣದಲ್ಲಿ ನೋಡಬಹುದಾದ ಸಾಕಷ್ಟು ತಾಣಗಳಿವೆ. ಬಾಣಾಸುರ ಡ್ಯಾಂ, ಚೆಂಬರ ಪೀಕ್, ಎಡಕಲ್ ಗುಹೆ, ಸೂಚಿಪಾರ ಫಾಲ್ಸ್, ಮೀಮುಟ್ಟಿ ಫಾಲ್ಸ್, ಬಾನಾಸುರ ಪರ್ವತ, ಪೂಕೂಟ್ ಲೇಕ್, ವಯನಾಡು ಅಭಯಾರಣ್ಯ. 

ಕೂರ್ಗ್ (Coorg) :
ಕರ್ನಾಟಕದ ಕೂರ್ಗ್ ಬಗ್ಗೆ ಕನ್ನಡಿಗರಿಗೆ ಹೇಳಲೇಬೇಕಾಗಿಲ್ಲ. ಕರ್ನಾಟಕದ ಕಾಶ್ಮೀರ್ ಎಂದೇ ಪ್ರಸಿದ್ಧ ತಾಣ. ಇಲ್ಲಿ ನೀವು ಅಬ್ಬಿ ಫಾಲ್ಸ್, ಕಾವೇರಿ ನಿಸರ್ಗಧಾಮ, ರಾಜಾಸೀಟ್, ಗೋಲ್ಡನ್ ಟೆಂಪಲ್ ಮೊದಲಾದ ಅದ್ಭುತವಾದ ತಾಣಗಳನ್ನು ನೋಡಬಹುದು.

Tap to resize

ಕರೈ ಕುಡಿ (Karaikudi):
ಇದು ತಮಿಳುನಾಡಿನ ಸುಂದರ ತಾಣ. ಇಲ್ಲಿನ ಕರೈ ವೀಡು ತುಂಬಾ ಫೇಮಸ್. ಜೊತೆಗೆ ಕುರುಕಲು ತಿಂಡಿ, ಶಾಪಿಂಗ್ ಗೂ ಇದು ಹೆಸರುವಾಸಿ. ನೀವು ತಮಿಳಿನ ಕಂಡುಕೊಂಡೈನ್ ಕಂಡುಕೊಂಡೈನ್ ಚಿತ್ರ ನೋಡಿದ್ರೆ ಅದರಲ್ಲಿ ಸಾವಿರ ಕಿಟಕಿಗಳನ್ನು ಹೊಂದಿರುವ ಬೃಹತ್ ಕರೈ ವೀಡು ಅಂದರೆ ಮನೆಯನ್ನು ಕಾಣಬಹುದು. 

ವರ್ಕಲ (Varkala):
ಇದನ್ನ ಬೀಚ್ ಸಿಟಿ ಎನ್ನಬಹುದು. ಹೆಚ್ಚಿನ ಜನರು ಸದ್ಯ ಪ್ರವಾಸಕ್ಕಾಗಿ ವರ್ಕಲಕ್ಕೆ ಹೋಗೋದು ಸಾಮಾನ್ಯ. ನೀವಿಲ್ಲಿ ವರ್ಕಲ ಬೀಚ್, ಜನಾರ್ಧನ ಸ್ವಾಮಿ ದೇವಸ್ಥಾನ, ಕಾಪ್ಪಿಲ್ ಬೀಚ್, ಅಂಜೆಂಗೋ ಕೋಟೆ ಮತ್ತು ಲೈಟ್ ಹೌಸ್, ವರ್ಕಲ ಕಲ್ಚರ್ ಸೆಂಟರ್ ಮೊದಲಾದ ಕಡೆಗಳಲ್ಲಿ ನೀವು ಎಂಜಾಯ್ ಮಾಡಬಹುದು.

ಗೋಕರ್ಣ (Gokarna) :
ಬೀಚ್ ಟ್ರಾವೆಲ್ ಎಂಜಾಯ್ ಮಾಡೋರಿಗೆ ಗೋಕರ್ಣ ಬೀಚ್ ಖಂಡಿತಾ ಇಷ್ಟವಾಗದೇ ಇರದು. ಇನ್ನು ಗೋಕರ್ಣ ಹಿಂದೂಗಳ ಧಾರ್ಮಿಕ ತಾಣವೂ ಹೌದು. ಓಂ ಬೀಚ್, ಮಹಬಲೇಶ್ವರ ದೇಗುಲ, ಕೂಡ್ಲೇ ಬೀಚ್, ಪಾರಡೈಸ್ ಬೀಚ್, ಬೀಚ್ ಸ್ಪೋರ್ಟ್ಸನ್ನು ಇಲ್ಲಿ ಸಖತ್ತಾಗಿ ಎಂಜಾಯ್ ಮಾಡಬಹುದು. ಗೋಕರ್ಣದ ಹತ್ತಿರವೂ ನೀವು ಎಂಜಾಯ್ ಮಾಡಬಹುದಾದ ಹಲವು ತಾಣಗಳಿವೆ. 

ಉಡುಪಿ (Udupi) :
ಉಡುಪಿ ಶ್ರೀಕೃಷ್ಣ ದೇಗುಲಕ್ಕೆ ಖ್ಯಾತಿಪಡೆದಿದೆ. ಅಲ್ಲದೇ ಇಲ್ಲ ಬೀಚ್ ಗಳು, ನದಿಗಳಲ್ಲಿ ಕಯಾಕಿಂಗ್, ಮಲ್ಪೆ ಬೀಚ್, ಮರವಂತೆ ಬೀಚ್, ಕೋಡೀ ಬೀಚ್ ಮೊದಲಾದ ಹಲವಾರು ಬೀಚ್ ಗಳು ಇಲ್ಲಿ ಬಹಳಷ್ಟು ಜನಪ್ರಿಯತೆ ಪಡೆದಿದೆ. 

 ಅಲೆಪ್ಪಿ (Alleppey) :
ದೇವರ ನಾಡು ಅಲೆಪ್ಪಿಯಲ್ಲಿ ನೀವು ಅದ್ಭುತ ತಾಣಗಳನ್ನು ಕಾಣಬಹುದು. ಮುಖ್ಯವಾಗಿ ಇದು ಬ್ಯಾಕ್ ವಾಟರ್, ಬೋಟ್ ಹೌಸ್ ಮತ್ತು ಸೀ ಫುಡ್ ಗಳಿಂದ ಖ್ಯಾತಿ ಪಡೆದಿದೆ. ಅಷ್ಟೇ ಅಲ್ಲದೇ ಬಸುಂದರ ಬೀಚ್, ಸರೋವರಗಳು ಸಹ ಇಲ್ಲಿ ಖ್ಯಾತಿ ಪಡೆದಿದೆ. 

ಪಾಂಡಿಚೇರಿ (Pondicherry) :
ಇದು ಕೂಡ ನೀವು ನೋಡಲೇಬೇಕಾದ ಅದ್ಭುತ ತಾಣ. ಇಲ್ಲಿ ನೀವು ಪ್ಯಾರಡೈಸ್ ಬೀಚ್, ರಾಕ್ ಬೀಚ್, ಔರೋ ವಿಲ್ಲಾ, ಅರಬಿಂದೋ ಆಶ್ರಮ್, ಫ್ರೆಂಚ್ ಕಾಲನಿ ಮೊದಲಾದ ಸುಂದರ ತಾಣಗಳಲ್ಲಿ ನೀವು ಸಖತ್ತಾಗಿ ಎಂಜಾಯ್ ಮಾಡಬಹುದು. 

ಚಿಕ್ಕಮಗಳೂರು (Chikmagalur) :
ಇದು ಕೂಡ ಆಕಾಶದೆತ್ತರಕ್ಕೆ ಬೆಳೆದಿರುವ ಬೆಟ್ಟ ಗುಡ್ಡಗಳಿಂದ ಆವೃತವಾದ ಸುಂದರ ತಾಣ. ಇದೊಂದು ಹಿಲ್ ಸ್ಟೇಷನ್ ಆಗಿದ್ದು, ಕಾಫಿ ನಾಡು ಕೂಡ ಆಗಿದೆ. ಇಲ್ಲಿನ ಲೆಕ್ಕವಿಲ್ಲದಷ್ಟು ಜಲಪಾತಗಳು, ಶಿಖರಗಳು, ಸರೋವರಗಳು ಖಂಡಿತಾ ಎಲ್ಲರಿಗೂ ಇಷ್ಟವಾಗುತ್ತೆ.

Latest Videos

click me!