ಯಶವಂತಪುರ-ವಿಜಯಪುರ ಮತ್ತು ಯಶವಂತಪುರ-ಸಿಂಧನೂರು ಎಕ್ಸ್‌ಪ್ರೆಸ್ ರೈಲುಗಳಿಗೆ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಹೆಚ್ಚುವರಿ ಕೋಚ್‌ಗಳನ್ನು ಅಳವಡಿಸಲಾಗುತ್ತಿದೆ. ಮೇ 8 ರಿಂದ ಜಾರಿಗೆ ಬರುವ ಈ ಸೌಲಭ್ಯದಲ್ಲಿ ಮೂರನೇ ದರ್ಜೆ ಎ.ಸಿ, ಸ್ಲೀಪರ್ ಹಾಗೂ ಸಾಮಾನ್ಯ ದರ್ಜೆಯ ಬೋಗಿಗಳು ಸೇರಲಿವೆ.
ಹೊಸಪೇಟೆ ಮಾರ್ಗವಾಗಿ ವಿಜಯಪುರ ತಲುಪುವ ಎಕ್ಸ್‌ಪ್ರೆಸ್ ರೈಲು ಪ್ರಯಾಣಿಕರಿಗೆ ಸಂತಸದ ಸುದ್ದಿ ಬಂದಿದೆ. ಈ ರೈಲಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದ್ದು, ಮೇ 8ರಿಂದಲೇ ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. ಹೆಚ್ಚಾಗುತ್ತಿರುವ ಸಂಚಾರ ದಟ್ಟಣೆಯಿಂದಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
24
ಗಾಡಿ ಸಂಖ್ಯೆ :16547/48
ಹೆಚ್ಚಾಗುತ್ತಿರುವ ಸಂಚಾರ ದಟ್ಟಣೆಯಿಂದಾಗಿ ಹೊಸಪೇಟೆ ಮಾರ್ಗವಾಗಿ ಸಂಚರಿಸುವ ಯಶವಂತಪುರ- ವಿಜಯಪುರ (ಗಾಡಿ ಸಂಖ್ಯೆ :16547/48) ಹಾಗೂ ಯಶವಂತಪುರ- ಸಿಂಧನೂರು (ಗಾಡಿ ಸಂಖ್ಯೆ:16545/46) ಈ ರೈಲುಗಳಿಗೆ ಹೆಚ್ಚುವರಿಯಾಗಿ ಮೂರನೇ ದರ್ಜೆ ಎ.ಸಿ, ಸ್ಲೀಪರ್ ಹಾಗೂ ಸಾಮಾನ್ಯ ದರ್ಜೆಯ ಕೋಚ್‌ಗಳನ್ನು ಅಳವಡಿಸಲಾಗಿದೆ.
34
ಒಟ್ಟು 10 ಬೋಗಿ ಅಳವಡಿಕೆ
ಎರಡು ರೈಲುಗಳಿಗೆ ಪ್ರತ್ಯೇಕವಾಗಿ ಒಂದು ಮೂರನೇ ದರ್ಜೆ ಎಸಿ, ಮೂರು ಸ್ಲೀಪರ್ ಬೋಗಿಗಳು ಹಾಗೂ ಒಂದು ಸಾಮಾನ್ಯ ದರ್ಜೆಯ ಬೋಗಿಗಳನ್ನು ಹೀಗೆ ಎರಡು ರೈಲುಗಳಿಗೆ ಒಟ್ಟು 10 ಬೋಗಿಗಳನ್ನು ಅಳವಡಿಸಲಾಗುತ್ತದೆ. ಈ ಸೌಲಭ್ಯದಿಂದ ಮುಂಗಡವಾಗಿ ಟಿಕೆಟ್ ಕಾಯ್ದಿರಿಸುವಿಕೆಯ ಪ್ರಮಾಣ ಕಡಿಮೆಯಾಗಿ ನಿಗಧಿತ ದಿನಾಂಕದೊಳಗೆ ಬೆಂಗಳೂರಿಗೆ ಹೋಗಲು ಅನುಕೂಲವಾಗುತ್ತದೆ.
ಈ ಸೌಲಭ್ಯವು ಮೇ 8ರಿಂದ ಯಶವಂತಪುರದಿಂದ ಹೊರಡುವ ರೈಲುಗಳಿಂದ ಜಾರಿಗೆ ಬರಲಿದೆ. ಪ್ರಯಾಣಿಕರ ಅನುಕೂಲಕ್ಕೆ ಹೆಚ್ಚುವರಿ ಕೋಚ್‌ಗಳ ಸೌಲಭ್ಯ ಒದಗಿಸಿದ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಅಭಿನಂದನೆ ಸಲ್ಲಿಸಿರುವ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಹಿರಿಯ ಸದಸ್ಯ ಬಾಬುಲಾಲ್ ಜೈನ್‌ರವರು ಆದಷ್ಟು ಬೇಗನೆ ರೈಲುಗಳ ಹಳೇ ಕೋಚ್‌ಗಳನ್ನು ಬದಲಿಸಿ ಆಧುನಿಕ ಮೂಲಸೌಲಭ್ಯಗಳಿರುವ ಎಲ್.ಎಚ್.ಬಿ. ಕೋಚ್‌ಗಳಿಗೆ ಪರಿವರ್ತಿಸಬೇಕೆಂದು ಒತ್ತಾಯಿಸಿದ್ದಾರೆ ಎಂದು ವಿಜಯನಗರ ರೈಲ್ವೆ ಬಳಿಕೆದಾರರ ಸಲಹಾ ಸಮಿತಿ ಕಾರ್ಯದರ್ಶಿ ಮಹೇಶ್ ಕುಡುತಿನಿ ತಿಳಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.