ರೈಲು, ದೂರದ ಊರಿಗೆ ಆರಾಮವಾಗಿ ಪ್ರಯಾಣ ಮಾಡಲು ಅವಕಾಶಮಾಡಿಕೊಡುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಸಾಕಷ್ಟು ವ್ಯವಸ್ಥೆಗಳನ್ನು ಜಾರಿಗೆ ತಂದಿದೆ. ಪ್ರಯಾಣಿಕರು ಯಾವ ಬರ್ತ್ ನಲ್ಲಿ ಪ್ರಯಾಣ ಬೆಳೆಸಲು ಹೆಚ್ಚು ಇಷ್ಟಪಡ್ತಾರೆ ಎಂಬುದು ನಿಮಗೆ ಗೊತ್ತಾ?
ರೈಲು ಪ್ರಯಾಣ ಅತ್ಯಂತ ಆರಾಮದಾಯಕ. ಸುಖಕರ. ಯಾವುದೇ ಹೆಚ್ಚಿನ ಸಮಸ್ಯೆ ಇಲ್ಲದೆ ಗಮ್ಯ ಸ್ಥಾನವನ್ನು ತಲುಪಬಹುದು. ರೈಲಿನಲ್ಲಿ ಬೇರೆ ಬೇರೆ ಕೋಚ್ ಗಳಿರುತ್ತವೆ. ಸ್ಲೀಪರ್ ಕೋಚ್, ಎಸಿ ಕೋಚ್, ಸಾಮಾನ್ಯ ಕೋಚ್. ಈ ಕೋಚ್ ನಲ್ಲಿ ಐದು ವಿಧದ ಬರ್ತ್ಗಳು ಲಭ್ಯವಿದೆ. ಕೆಳಗಿನ ಬರ್ತ್, ಮಧ್ಯಮ ಬರ್ತ್, ಮೇಲಿನ ಬರ್ತ್, ಸೈಡ್ ಲೋವರ್ ಬರ್ತ್ ಮತ್ತು ಸೈಡ್ ಅಪ್ಪರ್ ಬರ್ತ್. ಇವುಗಳಲ್ಲಿ ಒಂದು ಬರ್ತ್ ಗೆ ಅತೀ ಹೆಚ್ಚಿನ ಬೇಡಿಕೆ ಇದೆ.
26
ಜನರು ಇಷ್ಟಪಡುವ ಬರ್ತ್
ಮೇಲಿನ ಬರ್ತ್ ನಲ್ಲಿ ಯಾರ ಕಿರಿಕಿರಿ ಇರೋದಿಲ್ಲ. ಹಾಗಾಗಿ ಹೆಚ್ಚಿನ ಜನರು ಮೇಲಿನ ಬರ್ತ್ ಆಯ್ಕೆ ಮಾಡಿಕೊಳ್ತಾರೆ ಅಂದ್ಕೊಂಡ್ರೆ ನಿಮ್ಮ ನಂಬಿಕೆ ಸುಳ್ಳು. ಪ್ರಯಾಣಿಕರಿಗೆ ಇಷ್ಟವಾಗೋದು ಕೆಳಗಿನ ಬರ್ತ್. ಮೇಲಿನ ಬರ್ತ್ ನಲ್ಲಿ ಹತ್ತೋದು, ಇಳಿಯೋದು ಕಷ್ಟ. ಆದ್ರೆ ಕೆಳ ಬರ್ತ್ ನಲ್ಲಿ ಇದ್ಯಾವ ಸಮಸ್ಯೆ ಇಲ್ಲ. ಹತ್ತುವುದು ಮತ್ತು ಇಳಿಯುವುದು ಸುಲಭ. ವಯಸ್ಸಾದ ಜನರು, ಗರ್ಭಿಣಿಯರು, ಚಿಕ್ಕ ಮಕ್ಕಳಿರುವ ತಾಯಂದಿರು ಮತ್ತು ದೈಹಿಕವಾಗಿ ಅಶಕ್ತ ಪ್ರಯಾಣಿಕರು ಕೆಳಗಿನ ಬರ್ತ್ ಗೆ ಆದ್ಯತೆ ನೀಡ್ತಾರೆ.
36
ಅತ್ಯಂತ ಆರಾಮದಾಯಕ ಬರ್ತ್
ಹಗಲಿನಲ್ಲಿ, ಕೆಳ ಬರ್ತ್ ಅತ್ಯಂತ ಆರಾಮದಾಯಕ ಬರ್ತ್ ಆಗಿದೆ. ಮಧ್ಯ ಮತ್ತು ಮೇಲಿನ ಬರ್ತ್ಗಳಲ್ಲಿರುವ ಪ್ರಯಾಣಿಕರು ಸಹ ಅದರ ಮೇಲೆ ಕುಳಿತು, ಊಟ ಮಾಡುತ್ತಾರೆ. ಕಿಟಕಿ ಮೂಲಕ ಹೊರ ಪ್ರಪಂಚವನ್ನು ನೋಡಿ ಎಂಜಾಯ್ ಮಾಡ್ತಾರೆ. ಉತ್ತಮವಾದ ಗಾಳಿ ಕೆಳ ಬರ್ತ್ ನಲ್ಲಿ ಲಭ್ಯವಿರುತ್ತದೆ. ಪದೇ ಪದೆ ಹತ್ತಿ – ಇಳಿಯುವ ತೊಂದ್ರೆ ಇಲ್ಲ.
ಕೆಳ ಬರ್ತ್ ಅನ್ನು ಲಗೇಜ್ ಸಂಗ್ರಹಿಸಲು ಸುರಕ್ಷಿತ ಸ್ಥಳವೆಂದು ಪರಿಗಣಿಸಲಾಗಿದೆ. ಪ್ರಯಾಣಿಕರು ತಮ್ಮ ಲಗೇಜ್ ಅನ್ನು ನೇರವಾಗಿ ಕೆಳಗೆ ಇರಿಸಿ ಅದರ ಮೇಲೆ ಕಣ್ಣಿಡಬಹುದು. ಆದ್ರೆ ಮೇಲಿನ ಬರ್ತ್ನಲ್ಲಿ ಕಳ್ಳತನ ಅಥವಾ ನಷ್ಟದ ಅಪಾಯವಿದೆ.
56
ನೆರವಿನ ಅಗತ್ಯವಿಲ್ಲ
ಕೆಳ ಬರ್ತ್ ನಲ್ಲಿ ಮಲಗಲು ನಿಮಗೆ ಯಾರ ಸಹಾಯದ ಅಗತ್ಯವಿಲ್ಲ. ಸುಲಭವಾಗಿ ಮಲಗಬಹುದು. ಸುಲಭವಾಗಿ ಬೆಡ್ ಸಿದ್ಧಪಡಿಸಿಕೊಳ್ಳಬಹುದು. ರೈಲ್ವೆ ಇಲಾಖೆಯು ವೃದ್ಧರಿಗೆ 60 ವರ್ಷ ಮೇಲ್ಪಟ್ಟ ಪುರುಷರು ಮತ್ತು 58 ವರ್ಷ ಮೇಲ್ಪಟ್ಟ ಮಹಿಳೆಯರು ಹಾಗೂ 45 ವರ್ಷ ಮೇಲ್ಪಟ್ಟ ಮಹಿಳೆಯರು, ವಿಕಲಾಂಗರು, ಗರ್ಭಿಣಿಯರಿಗೆ ಲೋವರ್ ಬರ್ತ್ಗಳಿಗೆ ಆದ್ಯತೆ ನೀಡುತ್ತದೆ.
66
ಮೊದಲು ಫುಲ್ ಆಗುತ್ತೆ ಈ ಬರ್ತ್
ತುರ್ತು ಸಮಯದಲ್ಲಿ ಕೆಳಗಿಳಿಯೋದು ಕೂಡ ಈ ಬರ್ತ್ ನಲ್ಲಿ ಸುಲಭ. ಹಾಗಾಗಿಯೇ ಈ ಬರ್ತ್ಗಳು ಮೊದಲು ತುಂಬುತ್ತದೆ. ಟಿಕೆಟ್ ಬುಕಿಂಗ್ ಸಮಯದಲ್ಲಿ ಕೆಳ ಬರ್ತ್ ಅತಿ ಬೇಗ ಫುಲ್ ಆಗುತ್ತದೆ. ಸ್ಲೀಪರ್ ಕೋಚ್ಗಳಲ್ಲಿ ಲೋವರ್ ಬರ್ತ್ಗಳು ಇಂದಿಗೂ ಹೆಚ್ಚು ಬೇಡಿಕೆಯ ಬರ್ತ್ ಆಗಿದೆ. ಆರಾಮ, ಸುರಕ್ಷತೆ, ಅನುಕೂಲತೆ ಮತ್ತು ಆದ್ಯತೆ ಎಲ್ಲವೂ ಇದಕ್ಕೆ ಕಾರಣವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.