ವಿಶ್ವದಲ್ಲಿ ಪ್ರತಿಯೊಂದು ದೇಶವೂ ತನ್ನದೇ ಆದಾಯ ತೆರಿಗೆ ನೀತಿಯನ್ನು ಹೊಂದಿದೆ. ಕೆಲ ದೇಶಗಳಲ್ಲಿ ನೌಕರರು ಒಂದು ರೂಪಾಯಿಯನ್ನೂ ಆದಾಯ ತೆರಿಗೆ ರೂಪದಲ್ಲಿ ನೀಡೋದಿಲ್ಲ. ಆ ದೇಶಗಳ ಪಟ್ಟಿ ಇಲ್ಲಿದೆ.
ಆದಾಯ ತೆರಿಗೆಯಿಂದಾಗಿ ಟೇಕ್ ಹೋಮ್ ಸಂಬಳ ಕಡಿಮೆ ಆಗ್ತಿದೆ ಎನ್ನುವ ಆರೋಪ ಬಹುತೇಕ ಎಲ್ಲ ಉದ್ಯೋಗಿಗಳು ಮಾಡ್ತಾರೆ. ಹಣದುಬ್ಬರ ಮತ್ತು ಆಧುನಿಕತೆ ಈ ಕಾಲದಲ್ಲಿ ಜನರ ವೆಚ್ಚ ವೇಗವಾಗಿ ಹೆಚ್ಚಾಗಿದೆ. ತೆರಿಗೆಯಾಗಿ ಹಣ ನೀಡಲು ಎಲ್ಲರಿಗೂ ನೋವು. ವಿಶ್ವದ ಕೆಲ ದೇಶಗಳಲ್ಲಿ ಸಂಬಳವನ್ನು ಹಾಗೆಯೇ ಮನೆಗೆ ತೆಗೆದುಕೊಂಡು ಹೋಗ್ಬಹುದು. ಒಂದು ರೂಪಾಯಿ ಕೂಡ ತೆರಿಗೆ ಹೆಸರಿನಲ್ಲಿ ಕಡಿಮೆ ಆಗೋದಿಲ್ಲ.
28
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)
ಯುನೈಟೆಡ್ ಅರಬ್ ಎಮಿರೇಟ್ಸ್ ವಿಶ್ವದ ಅತ್ಯಂತ ಜನಪ್ರಿಯ ತೆರಿಗೆ ಮುಕ್ತ ದೇಶಗಳಲ್ಲಿ ಒಂದು. ವೈಯಕ್ತಿಕ ಸಂಬಳದ ಮೇಲೆ ಯಾವುದೇ ಆದಾಯ ತೆರಿಗೆ ವಿಧಿಸಲಾಗುವುದಿಲ್ಲ. ಆದ್ರೆ ನಿತ್ಯದ ಖರೀದಿ ಮೇಲೆ ಶೇಕಡಾ 5 ರಷ್ಟು ವ್ಯಾಟ್ ವಿಧಿಸಲಾಗುತ್ತದೆ. ಅಬಕಾರಿ ತೆರಿಗೆ ಹಾಗೂ ಕಾರ್ಪೊರೇಟ್ ತೆರಿಗೆ ಇಲ್ಲಿ ಜಾರಿಯಲ್ಲಿದ್ರೂ ಸಂಬಳದ ಮೇಲೆ ತೆರಿಗೆ ನೀತಿ ಇಲ್ಲ. ದುಬೈ ಮತ್ತು ಅಬುಧಾಬಿಯಂತಹ ನಗರಗಳಲ್ಲಿ ಕೆಲಸ ಮಾಡುವ ವಿದೇಶಿಗರು ತಮ್ಮ ಸಂಬಳವನ್ನು ತಮ್ಮ ದೇಶಕ್ಕೆ ತರಬಹುದು.
38
ಕುವೈತ್
ಕುವೈತ್ ತೈಲ ಸಮೃದ್ಧ ದೇಶವಾಗಿದೆ. ಇಲ್ಲಿನ ನಿವಾಸಿಗಳು ಯಾವುದೇ ಆದಾಯ ತೆರಿಗೆಯನ್ನು ಪಾವತಿಸುವುದಿಲ್ಲ. ಆದ್ರೆ ಇಲ್ಲಿ ಶಾಶ್ವತ ನಿವಾಸ ಅಥವಾ ಪೌರತ್ವವನ್ನು ಪಡೆಯುವುದು ಅತ್ಯಂತ ಕಷ್ಟಕರವಾಗಿದೆ. ಇದರ ಹೊರತಾಗಿಯೂ, ಜನಸಂಖ್ಯೆಯ ಮೂರನೇ ಎರಡರಷ್ಟು ಜನರು ವಲಸಿಗರು. ಅವರು ಹೆಚ್ಚಿನ ಸಂಬಳ ಮತ್ತು ಆಧುನಿಕ ಸೌಲಭ್ಯಗಳನ್ನು ಆನಂದಿಸುತ್ತಾರೆ.
48
ಮಾಲ್ಡೀವ್ಸ್
ಮಾಲ್ಡೀವ್ಸ್ ತೆರಿಗೆ ಮುಕ್ತ ದೇಶವಾಗಿದೆ. ಹೆಚ್ಚಿನ ನಿವಾಸಿಗಳಿಗೆ, ವಿಶೇಷವಾಗಿ ನಿರ್ದಿಷ್ಟ ಮಿತಿಗಿಂತ ಕಡಿಮೆ ಆದಾಯ ಹೊಂದಿರುವವರಿಗೆ ಯಾವುದೇ ಆದಾಯ ತೆರಿಗೆ ಇಲ್ಲ. ಪೌರತ್ವ ಸುನ್ನಿ ಮುಸ್ಲಿಮರಿಗೆ ಮಾತ್ರ ಲಭ್ಯವಿದೆ. ಇದು ಶಾಶ್ವತ ನಿವಾಸಕ್ಕಿಂತ ಹೆಚ್ಚಾಗಿ ಐಷಾರಾಮಿ ರಜಾದಿನಗಳಿಗೆ ಉತ್ತಮ ತಾಣವಾಗಿದೆ.
58
ಓಮನ್ ಮತ್ತು ಕತಾರ್
ಓಮನ್ ಮತ್ತು ಕತಾರ್ ಎರಡೂ, ಉದ್ಯೋಗಿಗಳ ಸಂಬಳಕ್ಕೆ ಆದಾಯ ತೆರಿಗೆಯನ್ನು ವಿಧಿಸುವುದಿಲ್ಲ. ಓಮನ್ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತಿದೆ ಮತ್ತು ಹೂಡಿಕೆದಾರರಿಗೆ ವೀಸಾಗಳನ್ನು ನೀಡುತ್ತಿದೆ. ಕತಾರ್ನಲ್ಲಿ ಭಾಷೆ ಮತ್ತು ಆರ್ಥಿಕ ಸ್ಥಿರತೆಯ ಅವಶ್ಯಕತೆಗಳಿಗೆ ಒಳಪಟ್ಟು 20 ವರ್ಷಗಳ ಕಾನೂನುಬದ್ಧ ನಿವಾಸದ ನಂತರ ಶಾಶ್ವತ ಪೌರತ್ವ ನೀಡಲಾಗುವುದು.
68
ಮೊನಾಕೊ
ಮೊನಾಕೊ ಕೂಡ ನೌಕರರಿಗೆ ಯಾವುದೇ ಆದಾಯ ತೆರಿಗೆ ವಿಧಿಸುವುದಿಲ್ಲ. ಇದು ವಿಶ್ವದ ಸುರಕ್ಷಿತ ಮತ್ತು ಅತ್ಯಂತ ಐಷಾರಾಮಿ ಸ್ಥಳಗಳಲ್ಲಿ ಒಂದಾಗಿದೆ. ನಿವಾಸ ಪರವಾನಗಿ ಪಡೆಯಲು, ಅರ್ಜಿದಾರರು ಕನಿಷ್ಠ €500,000 ಮೊನಾಕೊ ಬ್ಯಾಂಕಿನಲ್ಲಿ ಠೇವಣಿ ಇಡಬೇಕು ಮತ್ತು ಶಾಶ್ವತ ನಿವಾಸದ ಪುರಾವೆಯನ್ನು ಒದಗಿಸಬೇಕು. ಇದು ಬಿಲಿಯನೇರ್ ಮತ್ತು ಫಾರ್ಮುಲಾ ಒನ್ ಉತ್ಸಾಹಿಗಳಿಗೆ ನೆಚ್ಚಿನ ತಾಣವಾಗಿದೆ.
78
ಬ್ರೂನಿ - ಬರ್ಮುಡಾ
ಬ್ರೂನಿ ತೈಲ ಸಮೃದ್ಧ ದೇಶ. ಬ್ರೂನಿ ಮತ್ತು ಬರ್ಮುಡಾ ಕೂಡ ಉದ್ಯೋಗಿಗಳಿಗೆ ಆದಾಯ ತೆರಿಗೆ ವಿಧಿಸುವುದಿಲ್ಲ. ನಾಗರಿಕರು ಉಚಿತ ಆರೋಗ್ಯ ಮತ್ತು ಶಿಕ್ಷಣವನ್ನು ಪಡೆಯುತ್ತಾರೆ. ಆದ್ರೆ ಇಲ್ಲಿ ನೆಲೆಸುವುದು ಅತ್ಯಂತ ಕಷ್ಟಕರವಾಗಿದೆ. ಬರ್ಮುಡಾದಲ್ಲಿಉದ್ಯೋಗದಾತರು ವೇತನದಾರರ ತೆರಿಗೆಯನ್ನು ಪಾವತಿಸುತ್ತಾರೆ. ಇದನ್ನು ಕೆಲವೊಮ್ಮೆ ಉದ್ಯೋಗಿಗಳ ಸಂಬಳದಿಂದ ಕಡಿತಗೊಳಿಸಬಹುದು.
88
ಬಹಾಮಾಸ್ - ಬಹ್ರೇನ್
ಬಹಾಮಾಸ್, ಸುಂದರ ಕಡಲತೀರ, ಐಷಾರಾಮಿ ಅಪಾರ್ಟ್ಮೆಂಟ್ ಮತ್ತು ಶೂನ್ಯ ಆದಾಯ ತೆರಿಗೆಯನ್ನು ಹೊಂದಿದೆ. ಬಹಾಮಾಸ್ ಹೂಡಿಕೆದಾರರಿಗೆ ಸುಲಭವಾದ ತಾತ್ಕಾಲಿಕ ನಿವಾಸವನ್ನು ನೀಡುತ್ತದೆ. ಬಹ್ರೇನ್ ಒಂದು ಗಲ್ಫ್ ದೇಶ. ಇಲ್ಲಿ ಕಚ್ಚಾ ತೈಲ ಕಂಡುಬರುತ್ತದೆ. ಈ ದೇಶ ತೆರಿಗೆ ರಹಿತವಾಗಿದೆ. ಪೌರತ್ವ ಪಡೆಯುವುದು ಕಷ್ಟಕರವಾದರೂ, ಗೋಲ್ಡನ್ ರೆಸಿಡೆನ್ಸಿ ಪ್ರೋಗ್ರಾಂ 10 ವರ್ಷಗಳ ನವೀಕರಿಸಬಹುದಾದ ವೀಸಾವನ್ನು ನೀಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.