ಹೊಟೇಲ್ ಕೊಂಡಷ್ಟೇ ಇಲ್ಲಿಯ ಫುಡ್ ಬೆಲೆ! ಮತ್ತೊಂದು ದೇಶದಲ್ಲಿ ಪ್ರಯಾಣಿಸುವುದು ದುಬಾರಿ!

Published : Nov 24, 2023, 03:09 PM IST

ಪ್ರಪಂಚದಲ್ಲಿ ಅನೇಕ ದೇಶಗಳಲ್ಲಿ ನೀವು ಆಹಾರ ತಿನ್ನಲು ಬರೋಬ್ಬರಿ 10 ಸಾವಿರ ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಹೌದು, ನೀವು ಸರಿಯಾಗಿಯೇ ಓದಿದ್ದೀರಿ, ಕೆಲವು ದೇಶಗಳಲ್ಲಿ ಕೃಷಿಯ ಕೊರತೆಯಿಂದಾಗಿ, ಎಲ್ಲಾ ಸರಕುಗಳು ಇತರ ದೇಶಗಳಿಂದ ಬರುತ್ತವೆ, ಇದರಿಂದಾಗಿ ಇಲ್ಲಿ ಪ್ರತಿ ವಸ್ತುಗಳ ಬೆಲೆಯೂ ಹೆಚ್ಚಾಗಿದೆ.   

PREV
17
ಹೊಟೇಲ್ ಕೊಂಡಷ್ಟೇ ಇಲ್ಲಿಯ ಫುಡ್ ಬೆಲೆ! ಮತ್ತೊಂದು ದೇಶದಲ್ಲಿ ಪ್ರಯಾಣಿಸುವುದು ದುಬಾರಿ!

ವಿದೇಶದಲ್ಲಿ ಎಲ್ಲವೂ ಎಷ್ಟು ದುಬಾರಿ (expensive) ಎಂದು ನಮಗೆಲ್ಲರಿಗೂ ತಿಳಿದಿದೆ, ಅಲ್ಲಿ ಬಟ್ಟೆ ಖರೀದಿಸಿದ್ರೆ ಜೇಬು ಖಾಲಿಯಾಗುತ್ತೆ, ಆದರೆ ಆಹಾರಕ್ಕಾಗಿ ಹತ್ತು ಸಾವಿರ ರೂಪಾಯಿಗಳ ಬಿಲ್ ಪಾವತಿಸಬೇಕಾದ ಒಂದು ದೇಶದ ಬಗ್ಗೆ ನಿಮಗೆ ತಿಳಿದಿದೆಯೇ? ಇದನ್ನು ಕೇಳಿ ನಿಮಗೆ ಶಾಕ್ ಆಗಬಹುದು, ಆದರೆ ಇದು ನಿಜ, ಹೊಟೇಲ್ ಗೆ ಹೋಗಿ ಆಹಾರ ಸೇವಿಸಿದ್ರೆ ಸಾವಿರಾರು ರೂಪಾಯಿ ನೀಡಬೇಕಾದ ಒಂದು ದೇಶವಿದೆ. ಇಂದು ಆ ದೇಶದ ಬಗ್ಗೆ ತಿಳಿಯೋಣ. 

27

ಹೌದು ನಾವು ಹೇಳ್ತಿರೋದು ನಾರ್ವೆ ದೇಶದ ಬಗ್ಗೆ. ನಾರ್ವೇ ಪ್ರಕೃತಿ ಸೌಂದರ್ಯ, ಬೆಟ್ಟ ಗುಡ್ಡಗಳು, ನದಿ, ಸಮುದ್ರಗಳು, ಹಿಮಚ್ಚಾದ್ಧಿತ ಪ್ರದೇಶಗಳು (snow filled places) ಇವೆಲ್ಲವುದಕ್ಕೆ ಫೇಮಸ್ ಆದಂತಹ ಪ್ರದೇಶ. ಜನರು ಇಲ್ಲಿಗೆ ಪ್ರವಾಸ ಹೋಗಲು ಸಹ ಇಷ್ಟಪಡ್ತಾರೆ. ಆದರೆ, ಈ ದೇಶ ಎಷ್ಟೊಂದು ದುಬಾರಿ ಅಂದ್ರೆ, ನಮ್ಮ ನಿಮ್ಮಂತೋರು ಯೋಚ್ನೆ ಮಾಡೋದಿಕ್ಕೂ ಸಾಧ್ಯವಿಲ್ಲ. 
 

37

ದುಬಾರಿ ದೇಶ ನಾರ್ವೆ
ನಾರ್ವೆ (Norway) ದೇಶ ಎಷ್ಟು ದುಬಾರಿ ಅಂದ್ರೆ, ಕೇಳಿದ್ರೆ ನೀವು ತಲೆ ಚಚ್ಚಿಕೊಳ್ಳುತ್ತೀರಿ. ಇಲ್ಲಿ 25% ವ್ಯಾಟ್ ಮತ್ತು ಆಹಾರ ಪದಾರ್ಥಗಳ ಮೇಲೆ 15% ತೆರಿಗೆ ವಿಧಿಸಲಾಗುತ್ತದೆ. ಈ ದೇಶವು ಪ್ರಪಂಚದ ದುಬಾರಿ ದೇಶಗಳಲ್ಲಿ ಒಂದಾಗಿದೆ.  ಈ ದೇಶವು ಇಡೀ ವಿಶ್ವದ ಅತ್ಯಂತ ದುಬಾರಿ ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

47

ಇಲ್ಲಿ ನೀವು ಜೋರು ಹಸಿವಾಗಿದೆ ಎಂದು ರೆಸ್ಟೋರೆಂಟ್ ಗೆ ಹೋಗಿ ತಿಂದ್ರೆ ಬಿಲ್ ಬರೋವಾಗ ನಾನೇನು ಹೋಟೇಲ್ ಖರೀದಿಸಿದೇನೆ ಎಂದು ಅನಿಸಬಹುದು. ಯಾಕಂದ್ರೆ ಬಿಲ್ ಮೊತ್ತ ಕಡಿಮೆ ಅಂದ್ರೂ ಹತ್ತಿ ಸಾವಿರದಷ್ಟು ಬಂದೇ ಬರುತ್ತೆ. ಯಾಕಂದ್ರೆ ಈ ದೇಶ ಎಲ್ಲಾದಕ್ಕೂ ಇನ್ನಿತರ ದೇಶಗಳನ್ನು ಅವಲಂಬಿಸಿದೆ. 
 

57

ಬರ್ಮುಡಾ ಕೂಡ ದುಬಾರಿ ದೇಶ
ಹಣದುಬ್ಬರ ಮತ್ತು ಜೀವನಶೈಲಿಯ (lifestyle) ವಿಷಯದಲ್ಲಿ ಬರ್ಮುಡಾ ಅಮೆರಿಕಕ್ಕೆ ಕಠಿಣ ಸ್ಪರ್ಧೆಯನ್ನು ನೀಡುತ್ತದೆ. ಆದರೆ ಇಲ್ಲಿ ವಾಸಿಸುವ ಜನರು ಸಾಕಷ್ಟು ಹಣವನ್ನು ಪಾವತಿಸಬೇಕಾಗುತ್ತದೆ. ಆದ್ದರಿಂದ, ಈ ದೇಶವು ಸಾಮಾನ್ಯ ಜನರಿಗೆ ಪ್ರಯಾಣಿಸಲು ತುಂಬಾ ದುಬಾರಿಯಾಗಿದೆ.

67

ಕೃಷಿಯ ಕೊರತೆಯಿಂದಾಗಿ ದರಗಳು ಹೆಚ್ಚಾಗಿವೆ
ಏಕೆಂದರೆ ಇಲ್ಲಿ ಸಮುದ್ರಗಳೇ ಇರೋದರಿಂದ ಕೃಷಿ ಸಾಧ್ಯವಿಲ್ಲ. ಹಾಗಾಗಿ ಅಗತ್ಯ ವಸ್ತುಗಳು ಇತರ ದೇಶಗಳಿಂದ ಬರುತ್ತವೆ, ಹೆಚ್ಚಿನ ವಸ್ತುಗಳು ಅಮೆರಿಕದಿಂದ ಬರುತ್ತವೆ ಮತ್ತು ಅದಕ್ಕಾಗಿಯೇ ಜೀವನ ಮತ್ತು ಬಟ್ಟೆಯ ದರಗಳು ಇಲ್ಲಿ ತುಂಬಾ ದುಬಾರಿ.

77

ನಾರ್ವೆ ವಿಶ್ವದ ಅತ್ಯಂತ ದುಬಾರಿ ದೇಶಗಳಲ್ಲಿ ಒಂದಾಗಿದೆ.
ವಿಶ್ವಬ್ಯಾಂಕ್ (World Bank) ವರದಿಯ ಪ್ರಕಾರ, ಕೇಮನ್ ದ್ವೀಪಗಳು, ಸ್ವಿಟ್ಜರ್ಲೆಂಡ್, ರಾಮುಡಾ, ಬಹಾಮಾಸ್, ಐಸ್ಲ್ಯಾಂಡ್, ಬಾರ್ಬಡೋಸ್, ನಾರ್ವೆ, ಆಸ್ಟ್ರೇಲಿಯಾ ಮತ್ತು ಡೆನ್ಮಾರ್ಕ್ ವಿಶ್ವದ ಮೊದಲ 10 ಅತ್ಯಂತ ದುಬಾರಿ ದೇಶಗಳ ಲ್ಲಿಸ್ಟ್ ನಲ್ಲಿವೆ. 

Read more Photos on
click me!

Recommended Stories