ರಸ್ತೆಯಲ್ಲಿ ವೇಗವಾಗಿ ವಾಹನ ಚಲಾಯಿಸಿದ್ದಕ್ಕಾಗಿ ಅಥವಾ ಹೆಲ್ಮೆಟ್ (helmate) ಧರಿಸದಿದ್ದಕ್ಕಾಗಿ ನಿಮಗೆ ಅನೇಕ ಬಾರಿ ದಂಡ ವಿಧಿಸಿರಬಹುದು, ಆದರೆ ರಸ್ತೆಯ ಮಧ್ಯದಲ್ಲಿ ಕಾರಿನ ಇಂಧನ ಖಾಲಿಯಾದರೆ, ಅದಕ್ಕೂ ಸಹ ಶಿಕ್ಷೆ ಅನುಭವಿಸಬೇಕಾಗಿ ಬರುತ್ತೆ ಎಂದು ನೀವು ಎಂದಾದರೂ ಕೇಳಿದ್ದೀರಾ? ಹೌದು, ನೀವು ಸರಿಯಾಗಿ ಕೇಳಿದ್ದೀರಿ, ಮಾರ್ಗ ಮಧ್ಯದಲ್ಲಿ ಗಾಡಿಯ ಇಂಧನ ಖಾಲಿಯಾದರೆ, ದಂಡದೊಂದಿಗೆ ನಿಮ್ಮನ್ನು ಜೈಲಿಗೆ ಕಳುಹಿಸುವ ದೇಶವಿದೆ.
ಇದನ್ನು ಕೇಳಿದ ನಂತರ ಪೆಟ್ರೋಲ್ ಖಾಲಿಯಾದ್ರೆ (empty fuel) ಜೈಲಿಗೆ ಹಾಕೋ ದೇಶ ಇದೆಯೇ ಎಂದು ನೀವು ಅಂದು ಕೊಂಡಿರಬಹುದು. ನಿಮ್ಮನ್ನು ನೇರವಾಗಿ ಜೈಲಿಗೆ ಕಳುಹಿಸುವ ನಿಯಮ ಯಾವ ದೇಶದಲ್ಲಿದೆ ಎಂದು ಯೋಚಿಸುತ್ತಿರಬಹುದು. ಈ ದೇಶದಲ್ಲಿ ಅಂತಹ ಹಲವಾರು ಕುತೂಹಲಕಾರಿಯಾದ ಅಂಶಗಳಿವೆ, ಅವುಗಳ ಬಗ್ಗೆ ತಿಳಿಯೋಣ.
ಈ ಕಾನೂನು ಯಾವ ದೇಶದಲ್ಲಿದೆ ಗೊತ್ತಾ?
ನೀವು ಜರ್ಮನಿಯ (Germany) ಹೆಸರನ್ನು ಅನೇಕ ಬಾರಿ ಕೇಳಿರಬಹುದು, ಆದರೆ ಒಂದು ಕಾಲದಲ್ಲಿ ಹಿಟ್ಲರ್ ಸರ್ವಾಧಿಕಾರಿಯಾಗಿದ್ದ ದೇಶ ಅದು,, ಈ ಕಾರಣದಿಂದಾಗಿ ಜಗತ್ತಿನಲ್ಲಿ ಎರಡನೇ ಮಹಾಯುದ್ಧ ನಡೆಯಿತು. ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನಿ ಸಂಪೂರ್ಣವಾಗಿ ಬಡವಾಗಿದ್ದರೂ, ಇಂದು ಈ ದೇಶವನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ದೇಶಗಳಲ್ಲಿ ಪರಿಗಣಿಸಲಾಗಿದೆ. ಎಂಜಿನಿಯರಿಂಗ್ ಕ್ಷೇತ್ರದಲ್ಲಿ, ಈ ದೇಶದ ಹೆಸರು ಅಗ್ರಸ್ಥಾನದಲ್ಲಿದೆ.
ತೈಲ ಖಾಲಿಯಾದಾಗ ಶಿಕ್ಷೆ
ಹಾಗಾದರೆ ಕಾರಿನಲ್ಲಿ ತೈಲ ಖಾಲಿಯಾದಾಗ ಇಲ್ಲಿ ಶಿಕ್ಷೆ ಏಕೆ? ಉತ್ತರ ಇಲ್ಲದಿದ್ದರೂ, ನೀವು ಇಲ್ಲಿ ಹೆಚ್ಚಿನ ವೇಗದಲ್ಲಿ ಚಾಲನೆ ಮಾಡಿದರೆ, ಅದಕ್ಕಾಗಿ ನಿಮಗೆ ಶಿಕ್ಷೆ ಸಿಗುವುದಿಲ್ಲ, ಆದರೆ, ಅರ್ಧ ದಾರಿಯಲ್ಲಿ ಇಂಧನ ಖಾಲಿಯಾದ್ರೆ ಮಾತ್ರ ದಂಡ ಮತ್ತು ಶಿಕ್ಷೆ (Jail) ಎರಡೂ ಖಚಿತ..
ಇಲ್ಲಿ ಇನ್ನೇನು ವಿಶೇಷ ನಿಯಮಗಳಿವೆ ಅನ್ನೋದರ ಬಗ್ಗೆ ನೋಡೋಣ…
ಅಡ್ವಾನ್ಸ್ ಬರ್ತ್ ಡೇ ವಿಶ್ ಮಾಡೋದಿಲ್ಲ
ಸಾಮಾನ್ಯವಾಗಿ, ಭಾರತದಲ್ಲಿ ಮತ್ತು ಅನೇಕ ದೇಶಗಳಲ್ಲಿ ಜನರು ಅಡ್ವಾನ್ಸ್ ಆಗಿ ಬರ್ತ್ ಡೇ ವಿಶ್ (advance birthday wishes) ಮಾಡುತ್ತಾರೆ, ಆದರೆ ಜರ್ಮನಿಯಲ್ಲಿ, ಹಾಗೆ ಮಾಡುವುದರಿಂದ ದುರಾದೃಷ್ಟ ಉಂಟಾಗುತ್ತದೆ ಅನ್ನೋದು ಇಲ್ಲಿನ ಜನರ ನಂಬಿಕೆ, ಅದಕ್ಕಾಗಿಯೇ ಜನರು ಹುಟ್ಟುಹಬ್ಬದ ದಿನದಂದು ಮಾತ್ರ ವಿಶ್ ಮಾಡ್ತಾರೆ.
ಇಲ್ಲಿನ ಜನರು ಕಾಲ್ ಮಾಡಿದ್ರೆ, ಹಲೋ ಹೇಳೋದಿಲ್ಲ
ಸಾಮಾನ್ಯವಾಗಿ, ನಾವು ಯಾರಿಗಾದರೂ ಕರೆ ಮಾಡಿದಾಗ ಅಥವಾ ಯಾರಾದರೂ ಕರೆ ಮಾಡಿದಾಗ ಫೋನ್ ತೆಗೆದುಕೊಂಡಾಗ, ನಾವು ಮೊದಲು 'ಹಲೋ' ಎಂದು ಹೇಳುತ್ತೇವೆ. ಆದರೆ ಇಲ್ಲಿನ ಜನರು ಫೋನ್ ನಲ್ಲಿ ಹಲೋ ಬದಲು ನೇರವಾಗಿ ತಮ್ಮ ಹೆಸರನ್ನು ಹೇಳುತ್ತಾರೆ , ನಂತರ ಮಾತನಾಡಲು ಪ್ರಾರಂಭಿಸುತ್ತಾರೆ.
ವಿಶ್ವದ ಅತಿದೊಡ್ಡ ಚರ್ಚ್ ಇದೆ (Largest church)
ವಿಶ್ವದ ಅತಿ ಎತ್ತರದ ಚರ್ಚ್ ಜರ್ಮನಿಯಲ್ಲಿದೆ. ಈ ಚರ್ಚ್ ನ ಹೆಸರು 'ಉಲ್ಮ್ ಮಿನಿಸ್ಟರ್'. ಚರ್ಚ್ ನ ಉದ್ದ ಸುಮಾರು 530 ಅಡಿಗಳು, ಈ ಚರ್ಚ್ ನಲ್ಲಿ ಸುಮಾರು 2000 ಜನರು ಒಟ್ಟಿಗೆ ಪ್ರಾರ್ಥಿಸಬಹುದು. ಅಷ್ಟೇ ಅಲ್ಲ, ಜರ್ಮನಿಯು ವಿಶ್ವದ ಅತಿದೊಡ್ಡ ಮೃಗಾಲಯವನ್ನು ಸಹ ಒಳಗೊಂಡಿದೆ. ನೀವು ಭೇಟಿ ನೀಡಲು ಹೋಗುತ್ತಿದ್ದರೆ, ಈ ಚರ್ಚ್ ಅನ್ನು ನೋಡಲು ಮರೆಯಬೇಡಿ.