ಒಂದು ಆರ್ಡರ್ ಮಾಡಿದ್ರೆ ಮತ್ತೊಂದು ಕೊಡೋ ರೆಸ್ಟೋರೆಂಟ್, ಆದ್ರೂ ಜನ ಬರೋದು ನಿಲ್ಸೋಲ್ಲ!

First Published | Nov 14, 2023, 4:48 PM IST

ನೀವು ನೂಡಲ್ಸ್ ಆರ್ಡರ್ ಮಾಡಿದ್ದೀರಿ, ಆದ್ರೆ ನಿಮಗೆ ಸರ್ವ್ ಮಾಡಿರೋದು ಸೂಪ್ ಎಂದು ಊಹಿಸಿಕೊಳ್ಳಿ... ನಿಮಗೆ ಹೇಗೆ ಅನಿಸಬಹುದು? ಕೋಪ ಬರುತ್ತೆ ಅಲ್ವಾ?  ಆದರೆ ಟೋಕಿಯೊದಲ್ಲಿ ಒಂದು ರೆಸ್ಟೋರೆಂಟ್ ಇದೆ, ಅಲ್ಲಿ ನೀವು ಏನೋ ಆರ್ಡರ್ ಮಾಡಿದ್ರೆ, ಇನ್ನೇನೋ ಬರುತ್ತೆ, ಆದ್ರೆ ಜನರು ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. 
 

ಹೋಟೆಲ್ಸ್ ಮತ್ತು ರೆಸ್ಟೋರೆಂಟ್ಸ್ (restaurant) ಗ್ರಾಹಕರಿಗೆ ಸಂತೋಷ ಮತ್ತು ತೃಪ್ತಿ ನೀಡುವ ಆಹಾರ ಮತ್ತು ಸೇವೆಯನ್ನು ಒದಗಿಸುತ್ತೆ, ಒದಗಿಸಲೇಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಪ್ರತಿ ಹೋಟೆಲ್ ತಮ್ಮ ಗ್ರಾಹಕರು ಎಲ್ಲಕ್ಕಿಂತ ಹೆಚ್ಚಾಗಿ ನಮ್ಮಲ್ಲಿಗೆ ಬರಬೇಕು ಎಂಬ ನೀತಿಯನ್ನು ಹೊಂದಿದೆ. ಗ್ರಾಹಕರು ಸಂತೋಷವಾಗಿಲ್ಲದಿದ್ದರೆ, ಅವರು ಸಮಸ್ಯೆ ಎದುರಿಸಬೇಕಾಗುತ್ತೆ. ಒಂದು ವೇಳೆ ನೀವು ಮಾಡಿದ ಆರ್ಡರ್ ಬದಲು ನಿಮಗೆ ಬೇರೆ ತಿನಿಸು ಬಂದ್ರೆ, ಕೋಪ ಬರುತ್ತೆ ಅಲ್ವಾ? ಅದ್ರೆ ಜಪಾನ್ ನ ಹೊಟೇಲ್ (Hotel in Japan) ನಡೆಯೋ ರೀತಿನೇ ಇದು. 
 

ಟೋಕಿಯೊ ಜಪಾನ್ ನ ರೆಸ್ಟೋರೆಂಟ್ ತನ್ನ ಮಿಸ್ಟೇಕ್ ಆರ್ಡರ್ ಗಳಿಂದಾನೇ ವಿಶ್ವ ಪ್ರಸಿದ್ಧ. ಅಲ್ಲಿ ಜನರು ಕಳಪೆ ಸೇವೆಯನ್ನು ಪಡೆದ ನಂತರವೂ ತುಂಬಾ ಖುಷಿಯಾಗಿರ್ತಾರೆ. ತಮಗೆ ಬೇರೆ ಆರ್ಡರ್ ಸರ್ವ್ ಆದ್ರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳದೇ ತಿನ್ನುತ್ತಾರೆ. ಈ ರೆಸ್ಟೋರೆಂಟ್‌ನಲ್ಲಿ ನೀವು ಕೇಕ್ ಆರ್ಡರ್ ಮಾಡಿದರೆ, ನಿಮಗೆ ಮಿಸೊ ಸೂಪ್ ಸಿಗುತ್ತದೆ. ನೀವು ಸುಶಿಯನ್ನು ಆರ್ಡರ್ ಮಾಡಿದ್ರೆ, ನಿಮಗೆ ಗ್ರಿಲ್ಡ್ ಫಿಶ್ ಸಿಗುತ್ತದೆ. ಹೊಟೇಲ್‌ನಲ್ಲಿ ನಮ್ಮ ಆರ್ಡರ್ ಬರಲು ಗಂಟೆಗಟ್ಟಲೆ ಕಾದು, ಕೊನೆಗೆ ಬೇರೆಯದೇ ಆರ್ಡರ್ ಬಂದ್ರೆ, ಕೋಪ ಬರುತ್ತೆ ಅಲ್ವಾ? ಆದರೆ ಇಲ್ಲಿ ಅದಕ್ಕಾಗಿಯೇ ಸಾವಿರಾರು ಜನರು ಬಂದು, ತಿಂದು ಎಂಜಾಯ್ ಮಾಡ್ತಾರೆ. 
 

Tap to resize

ವಿಷ್ಯ ಏನಪ್ಪಾ ಅಂದ್ರೆ, ಟೋಕಿಯೊದಲ್ಲಿನ ಈ ರೆಸ್ಟೋರೆಂಟ್‌ನ ಹೆಸರೇ ‘ಮಿಸ್ಟೇಕ್ ಆರ್ಡರ್ ರೆಸ್ಟೋರೆಂಟ್' (Restaurant of Mistaken order) ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವ ಜನರಿಗಾಗಿ, ಜೊತೆಗೆ ಅಲ್ಝಮೈರ್ ಸಮಸ್ಯೆ ಹೊಂದಿರುವ ಜನರಿಗಾಗಿ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.  ಈ ರೆಸ್ಟೋರೆಂಟ್ ನ ವಿಶೇಷತೆ ಬಗ್ಗೆ ತಿಳಿಯೋಣ. 
 

ರೆಸ್ಟೋರೆಂಟ್ ಆಫ್ ಮಿಸ್ಸ್ಟೆಕನ್ ಆರ್ಡರ್ಸ್
ಟೋಕಿಯೊದ ಉಪನಗರ ಸೆಂಗ್ವಾದಲ್ಲಿ 12 ಆಸನಗಳ ಕೆಫೆ ಇದೆ, ಇದನ್ನು 'ರೆಸ್ಟೋರೆಂಟ್ ಆಫ್ ಮಿಸ್ಟೇಕ್ ಆರ್ಡರ್ಸ್' ಎಂದು ಹೆಸರಿಸಲಾಗಿದೆ. ಈ ರೆಸ್ಟೋರೆಂಟ್ ಬುದ್ಧಿಮಾಂದ್ಯತೆಯಿಂದ (dementia) ಬಳಲುತ್ತಿರುವ ವೃದ್ಧರನ್ನು ತಿಂಗಳಿಗೊಮ್ಮೆ ಸರ್ವರ್ ಗಳಾಗಿ ಕೆಲಸ ಮಾಡಲು ನೇಮಿಸಿಕೊಳ್ಳುತ್ತದೆ. ಕೆಫೆಯ ಮಾಜಿ ಮಾಲೀಕರ ಪೋಷಕರು ಸಹ ಈ ಕಾಯಿಲೆಯಿಂದ ಬಳಲುತ್ತಿದ್ದರು, ಆದ್ದರಿಂದ ಹೊಸ ಮಾಲೀಕರು ತಮ್ಮ ಕೆಫೆಯನ್ನು ಅದಕ್ಕಾಗಿಯೇ ಮುಂದುವರೆಸಿಕೊಂಡು ಹೋದರು. ಈ ರೆಸ್ಟೋರೆಂಟ್ ನ ಸಂಘಟಕರು ಈಗ ಸ್ಥಳೀಯ ಸರ್ಕಾರದೊಂದಿಗೆ ಈ ಪ್ರದೇಶದ ಬುದ್ಧಿಮಾಂದ್ಯತೆ ಹೊಂದಿರುವ ಜನರು ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡಲು ಸೌಲಭ್ಯ ಒದಗಿಸುತ್ತಾರೆ. ಬುದ್ಧಿಮಾಂದ್ಯ ರೋಗಿಗಳು ಹೊಸ ಜನರೊಂದಿಗೆ ಸಂವಹನ ನಡೆಸಲು ಮತ್ತು ಅವರೊಂದಿಗೆ ಬೆರೆಯಲು ಇದು ಸುರಕ್ಷಿತ ಸ್ಥಳ.
 

ಜಪಾನ್ ದೂರದರ್ಶನ ನಿರ್ದೇಶಕ ಶಿರೊ ಒಗುನಿ ರೋಗದ ಬಗ್ಗೆ ಜನರಿಗೆ ಅರಿವು ಮೂಡಿಸಲು ಬಯಸಿದ್ದರು, ಆದರೆ ಅವರು ಮೋಜಿನ ಮಾರ್ಗವನ್ನು ಪ್ರಯತ್ನಿಸಲು ಬಯಸಿದ್ದರು. ಒಂದು ಬಾರಿ ಅವರು ಹೊಟೇಲ್ ಒಂದಕ್ಕೆ ಹೋದಾಗ ಬರ್ಗರ್ ಬದಲಿಗೆ ಅವರಿಗೆ ಡಂಪ್ಲಿಂಗ್ ನೀಡಿದ್ದರು. ಅದನ್ನ ಮತ್ತೆ ರಿಟರ್ನ್ ಮಾಡಲು ಯೋಚಿಸಿದಾಗ, ಸರ್ವರ್‌ಗೆ ಬೇಸರವಾಗಬಹುದೆಂದು, ಅದನ್ನೇ ತಿಂದರಂತೆ. ಆದರೆ ಈ ಯೋಚನೆ ಅವರಿಗೆ ಇಷ್ಟವಾಯಿತು. ಇದರ ನಂತರ, ಅವರು ಈ ಕಂಪನಿ ಮತ್ತು ರೆಸ್ಟೋರೆಂಟ್ ಸ್ಥಾಪಿಸಿದರು.
 

ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವುದು ಹೇಗೆ?
ನೀವು ರೆಸ್ಟೋರೆಂಟ್ನ ಅಧಿಕೃತ ವೆವ್‌ಸೈಟಿಗೆ (offcial website) ವಿಸಿಟ್ ಮಾಡಿದರೆ, ಅವರು ತಮ್ಮ ಗ್ರಾಹಕರಿಗೆ ಬಹಳ ತಮಾಷೆ ಮತ್ತು ಉತ್ತಮ ಸಂದೇಶವನ್ನು ಬರೆದಿದ್ದಾರೆ. ರೆಸ್ಟೋರೆಂಟ್ ವೆಬ್ ಸೈಟಲ್ಲಿ 'ಇದು ವಿಚಿತ್ರ ಎಂದು ನೀವು ಯೋಚಿಸುತ್ತಿರಬಹುದು. ಯಾಕಂದ್ರೆ ನಿಮ್ಮ ಸರಿಯಾದ ಆರ್ಡರ್ ಸಹ ತೆಗೆದುಕೊಳ್ಳಲು ಸಾಧ್ಯವಾಗದ ರೆಸ್ಟೋರೆಂಟ್ ಇದು. ನಮ್ಮ ಎಲ್ಲಾ ಸರ್ವರ್ ಗಳು ಬುದ್ಧಿಮಾಂದ್ಯ ರೋಗಿಗಳು ಅಥವಾ ಅವರೊಂದಿಗೆ ವಾಸಿಸುತ್ತಿರುವವರು. ಅವರು ನಿಮ್ಮ ಆದೇಶವನ್ನು ಸರಿಯಾಗಿ ತೆಗೆದುಕೊಳ್ಳುತ್ತಾರೋ ಇಲ್ಲವೋ, ಆದರೆ ನಮ್ಮ ಮೆನುವಿನಲ್ಲಿ ಎಲ್ಲವೂ ಅತ್ಯುತ್ತಮವಾಗಿದೆ ಅನ್ನೋದು ನಿಜ. ನೀವು ತಪ್ಪು ಆರ್ಡರ್ ಪಡೆದರೂ, ನೀವು ನಿರಾಶೆಗೊಳ್ಳುವುದಿಲ್ಲ ಅನ್ನೋದಂತೂ ನಿಜ'. ಎಂದು ಬರೆದು ಕೊಂಡಿದ್ದಾರೆ. 

ರೆಸ್ಟೋರೆಂಟ್‌ನಲ್ಲಿ ಈ ಸರ್ವರ್ ಗಳ ಜೊತೆಗೆ ಇನ್ನೂ ಅನೇಕ ಜನರು ಸಹ ಇರುತ್ತಾರೆ.  ಅವರು ಆರ್ಡರ್ ಗಳನ್ನು ನೋಡುತ್ತಾರೆ ಮತ್ತು ಮಿಸ್ಟೇಕ್ ಇದ್ರೆ ಸರಿ ಮಾಡುತ್ತಾರೆ. ಈ ಸಂದರ್ಭದಲ್ಲಿ ಸರ್ವ್ ಮಾಡುವಾಗ ಮಾತ್ರ ಯಾರಿಗೋ, ಯಾವುದೋ ಆಹಾರ ಸರ್ವ್ ಆಗುತ್ತದೆ. ಆದರೆ ಇದರ ಬಗ್ಗೆ ಯಾರೂ ಸಹ ಬೇಸರ ವ್ಯಕ್ತಪಡಿಸೋದಿಲ್ಲ. ನಿಮ್ಮ ಖಾದ್ಯವನ್ನು ಆನಂದಿಸಿ ಮತ್ತು ಆಹಾರವನ್ನು ಹೊಗಳೋದನ್ನು ಮರೆಯಬೇಡಿ ಎಂದು ರೆಸ್ಟೋರೆಂಟ್ ಹೇಳಿಕೊಂಡಿದೆ. 
 

ರೆಸ್ಟೋರೆಂಟ್ ನ ಮೆನು ಹೇಗಿದೆ?
ಇಲ್ಲಿ ನೀವು ಸಸ್ಯಾಹಾರಿ, ನಾನ್-ವೆಜ್ ಮತ್ತು ಸಿಹಿತಿಂಡಿಯ ಇನ್ನೂ ಅನೇಕ ರುಚಿಕರವಾದ ಆಯ್ಕೆಗಳನ್ನು ಕಾಣಬಹುದು. ಸುಕುನಾ (ಚಿಕನ್ ಹ್ಯಾಂಬರ್ಗರ್), ಟೆಬಾಸಾಕಿ (chicken wings), ಸಾಸಮಿ ಕಯಾಮಿಸೊ (ಚಿಕನ್ ಚಿಲ್ಲಿ ಮಿಸೊ), ತರಕಾರಿ ಟೆಂಪುರಾ, ನ್ಯಾಟೊ ರೋಲ್, ಪ್ಲಮ್ ಮತ್ತು ಸೌತೆಕಾಯಿ ರೋಲ್ ಮುಂತಾದ ಆಹಾರಗಳು ಇಲ್ಲಿ ದೊರೆಯುತ್ತವೆ. ನಿಮ್ಮ ಮನಸ್ಸನ್ನು ಸಂತೋಷಪಡಿಸಲು ಇದು ಸಾಕು. ಇದು ಮಾತ್ರವಲ್ಲ, ರೆಸ್ಟೋರೆಂಟ್ ನಲ್ಲಿ ಖುಷಿ ಖುಷಿಯಾಗಿ ಓಡಾಡುವ ವಿಶೇಷಚೇತನರು ಸಹ ನಿಮ್ಮ ಮನಸಿಗೆ ಖುಷಿ ನೀಡುತ್ತಾರೆ. 

Latest Videos

click me!