ಲಂಡನ್‌ನಿಂದ ಭಾರತಕ್ಕೆ ಬರಬೇಕು ಅಂದ್ರೆ ಫ್ಲೈಟ್ ಹತ್ತಲೇಬೇಕು ಅನ್ನೋದು ನಮಗೆಲ್ಲಾ ಗೊತ್ತು. ಆದ್ರೆ, ಒಂದು ಕಾಲದಲ್ಲಿ ಈ ಎರಡು ದೇಶಗಳ ಮಧ್ಯೆ ಬಸ್ ಓಡಾಡ್ತಿತ್ತು ಅಂದ್ರೆ ನಂಬ್ತೀರಾ? ಪ್ರಪಂಚದ ಅತಿ ಉದ್ದದ ಬಸ್ ಪ್ರಯಾಣ ಅಂತಲೇ ಫೇಮಸ್ ಆಗಿದ್ದ ಈ ಐತಿಹಾಸಿಕ ಜರ್ನಿ ಬಗ್ಗೆ ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ.
ಇವತ್ತಿನ ಯೂಟ್ಯೂಬರ್‌ಗಳು ಕಾರು, ಬೈಕ್‌ಗಳಲ್ಲಿ ದೇಶ ಸುತ್ತೋದನ್ನ ನಾವು ನೋಡ್ತೀವಿ. ಆದ್ರೆ ದಶಕಗಳ ಹಿಂದೆಯೇ ಇಂಥದ್ದೊಂದು ಸಾಹಸಕ್ಕೆ ಬಸ್ ಸರ್ವೀಸ್ ಇತ್ತು. 1957ರಲ್ಲಿ ಲಂಡನ್‌ನ ವಿಕ್ಟೋರಿಯಾ ಕೋಚ್ ಸ್ಟೇಷನ್‌ನಿಂದ ಈ ಸ್ಪೆಷಲ್ ಬಸ್ ಜರ್ನಿ ಶುರುವಾಯ್ತು. 'ಆಲ್ಬರ್ಟ್' (Albert) ಹೆಸರಿನ ಈ ಡಬಲ್ ಡೆಕ್ಕರ್ ಬಸ್ ಲಂಡನ್‌ನಿಂದ ಭಾರತದ ಕಲ್ಕತ್ತಾವರೆಗೆ ಬರುತ್ತಿತ್ತು. ವಾಪಸ್ ಕೂಡ ಇದೇ ರೂಟ್‌ನಲ್ಲಿ ಹೋಗುತ್ತಿತ್ತು.
ಈ ಜರ್ನಿಗೆ ಬರೋಬ್ಬರಿ 110 ದಿನ ಬೇಕಿತ್ತು. ಅಂದ್ರೆ ಸುಮಾರು 4 ತಿಂಗಳು ಬಸ್‌ನಲ್ಲೇ ಇರಬೇಕಿತ್ತು! 20 ಸಾವಿರ ಕಿ.ಮೀ.ಗೂ ಹೆಚ್ಚು ದೂರವನ್ನು ಕ್ರಮಿಸುತ್ತಿದ್ದ ಈ ಬಸ್, ಆ ಕಾಲದಲ್ಲಿ ಪ್ರಪಂಚದ ಅತಿ ಉದ್ದದ ಬಸ್ ರೂಟ್ ಅನ್ನೋ ಹೆಗ್ಗಳಿಕೆ ಪಡೆದಿತ್ತು. 1960 ಹಾಗೂ 70ರ ದಶಕದಲ್ಲಿ ಪ್ರವಾಸಿಗರಿಗೆ ಇದೊಂದು ಅದ್ಭುತ ಅನುಭವ ಕೊಡ್ತಿತ್ತು.
25
11 ದೇಶಗಳನ್ನು ದಾಟಿ ಬರುತ್ತಿದ್ದ ಆಲ್ಬರ್ಟ್ ಬಸ್
ಲಂಡನ್‌ನಿಂದ ಕಲ್ಕತ್ತಾವರೆಗಿನ ಈ ಬಸ್ ಜರ್ನಿಯಲ್ಲಿ ಒಟ್ಟು 11 ದೇಶಗಳು ಸಿಗುತ್ತಿದ್ದವು. ಲಂಡನ್‌ನಿಂದ ಹೊರಡುತ್ತಿದ್ದ ಆಲ್ಬರ್ಟ್ ಬಸ್, ಬೆಲ್ಜಿಯಂ, ಪಶ್ಚಿಮ ಜರ್ಮನಿ, ಆಸ್ಟ್ರಿಯಾ, ಯುಗೊಸ್ಲಾವಿಯಾ, ಬಲ್ಗೇರಿಯಾ, ಟರ್ಕಿ, ಇರಾನ್, ಅಫ್ಘಾನಿಸ್ತಾನ, ಪಾಕಿಸ್ತಾನ ದಾಟಿ ಭಾರತಕ್ಕೆ ಎಂಟ್ರಿ ಕೊಡ್ತಿತ್ತು. ಭಾರತಕ್ಕೆ ಬಂದ ಮೇಲೆ ದೆಹಲಿ, ಆಗ್ರಾ, ಅಲಹಾಬಾದ್, ವಾರಣಾಸಿ ಮೂಲಕ ಕೊನೆಗೆ ಕಲ್ಕತ್ತಾ ತಲುಪುತ್ತಿತ್ತು. ಈ ಪ್ರಯಾಣದಲ್ಲಿ ಬೇರೆ ಬೇರೆ ದೇಶಗಳ ಸಂಸ್ಕೃತಿ, ಜನಜೀವನವನ್ನು ಹತ್ತಿರದಿಂದ ನೋಡುವ ಚಾನ್ಸ್ ಪ್ರಯಾಣಿಕರಿಗೆ ಸಿಗುತ್ತಿತ್ತು.
ಭಾರತದ ರೂಟ್ ಕೂಡ ಬಹಳ ಸ್ಪೆಷಲ್ ಆಗಿತ್ತು. ತಾಜ್‌ಮಹಲ್, ದೆಹಲಿಯ ರಾಜಪಥ್, ವಾರಣಾಸಿಯ ಗಂಗಾ ಘಾಟ್‌ಗಳನ್ನು ನೋಡುವ ಅವಕಾಶ ಇತ್ತು. ಭಾರತದೊಳಗಿನ ಪ್ರಯಾಣಕ್ಕೆ 5 ದಿನ ಬೇಕಿತ್ತು. 110 ದಿನಗಳ ಒಟ್ಟು ಪ್ರಯಾಣಕ್ಕೆ ಹೋಲಿಸಿದರೆ ಇದು ಬಹಳ ಕಡಿಮೆ ಸಮಯ.
35
ಊಟ, ವಸತಿ ಫ್ರೀ! ಟಿಕೆಟ್ ರೇಟ್ ಎಷ್ಟಿತ್ತು ಗೊತ್ತಾ?
ಈ ಬಸ್ ಜರ್ನಿ ಬಗ್ಗೆ ಕೇಳಿದಾಗ ಎಲ್ಲರಿಗೂ ಅಚ್ಚರಿಯಾಗುವ ಇನ್ನೊಂದು ವಿಚಾರ ಅಂದ್ರೆ ಟಿಕೆಟ್ ರೇಟ್. ಲಂಡನ್‌ನಿಂದ ಕಲ್ಕತ್ತಾಗೆ ಒನ್-ವೇ ಟಿಕೆಟ್‌ಗೆ ಆ ಕಾಲದಲ್ಲಿ 85 ಪೌಂಡ್ ಚಾರ್ಜ್ ಮಾಡ್ತಿದ್ರು. ರಿಟರ್ನ್ ಜರ್ನಿಗೆ 65 ಪೌಂಡ್ ಕೊಡಬೇಕಿತ್ತು. ಅಂದ್ರೆ ಹೋಗಿ ಬರೋದಕ್ಕೆ ಒಟ್ಟು 145 ಪೌಂಡ್ ಖರ್ಚಾಗ್ತಿತ್ತು. ಈ ಟಿಕೆಟ್ ದುಡ್ಡಿನಲ್ಲಿ ಬರೀ ಪ್ರಯಾಣ ಮಾತ್ರ ಅಲ್ಲ, ಊಟ ಹಾಗೂ ಉಳಿದುಕೊಳ್ಳುವ ವ್ಯವಸ್ಥೆ ಕೂಡ ಸೇರಿತ್ತು. ಅಂದ್ರೆ ಪ್ರಯಾಣಿಕರು ಬೇರೆ ಹೋಟೆಲ್ ಹುಡುಕುವ ಟೆನ್ಷನ್ ಇರಲಿಲ್ಲ. 4 ತಿಂಗಳ ಕಾಲ ಹಲವು ದೇಶಗಳನ್ನು ಸುತ್ತುವ ಅವಕಾಶ ಇದ್ದಿದ್ದರಿಂದ, ಇದನ್ನೊಂದು ಐಷಾರಾಮಿ ಟ್ರಿಪ್ ಅಂತಲೇ ಜನ ಭಾವಿಸಿದ್ರು.
ಆಲ್ಬರ್ಟ್ ಬಸ್ ನೋಡೋಕೆ ನಾರ್ಮಲ್ ಬಸ್ ತರ ಇರಲಿಲ್ಲ. ಪ್ರಯಾಣಿಕರ ಕಂಫರ್ಟ್‌ಗಾಗಿ ಇದರಲ್ಲಿ ಸ್ಪೆಷಲ್ ವ್ಯವಸ್ಥೆ ಇತ್ತು. ಬಸ್‌ನ ಕೆಳಗಿನ ಫ್ಲೋರ್‌ನಲ್ಲಿ ಓದಲು ಹಾಗೂ ಊಟ ಮಾಡಲು ಪ್ರತ್ಯೇಕ ಲಾಂಜ್ ಇತ್ತು. ಮೇಲಿನ ಫ್ಲೋರ್‌ನ ಮುಂಭಾಗದಲ್ಲಿ ಅಬ್ಸರ್ವೇಶನ್ ರೂಮ್ ಇತ್ತು. ಅಲ್ಲಿ ಕೂತು ಹೊರಗಿನ ಪ್ರಕೃತಿ ಸೌಂದರ್ಯ ಎಂಜಾಯ್ ಮಾಡಬಹುದಿತ್ತು.
ಅಷ್ಟೇ ಅಲ್ಲ, ಬಸ್‌ನಲ್ಲೇ ಒಂದು ಅಡುಗೆಮನೆ ಕೂಡ ಇತ್ತು. ಪ್ರಯಾಣಿಕರಿಗೆ ಬಿಸಿ ಬಿಸಿ ಊಟ ಮಾಡಿಕೊಡ್ತಿದ್ರು. ರೇಡಿಯೋದಲ್ಲಿ ಹಾಡುಗಳನ್ನು ಹಾಕ್ತಿದ್ರು. ಆಗಾಗ ಬಸ್‌ನಲ್ಲೇ ಪಾರ್ಟಿ ಕೂಡ ಮಾಡ್ತಿದ್ರು. ಇಂಟರ್ನೆಟ್, ಸ್ಮಾರ್ಟ್‌ಫೋನ್ ಇಲ್ಲದ ಆ ಕಾಲದಲ್ಲಿ ಜನ ಒಬ್ಬರಿಗೊಬ್ಬರು ಮಾತನಾಡುತ್ತಾ ಟೈಮ್ ಪಾಸ್ ಮಾಡ್ತಿದ್ರು. ಈ ಜರ್ನಿಯಲ್ಲಿ ಕೇವಲ ಪ್ರಯಾಣ ಮಾತ್ರವಲ್ಲ, ಪ್ರವಾಸಿ ತಾಣಗಳ ಭೇಟಿಗೂ ಅವಕಾಶ ಇತ್ತು.
ತಾಜ್‌ಮಹಲ್, ಪೀಕಾಕ್ ಥ್ರೋನ್, ರಾಜಪಥ್, ವಾರಣಾಸಿ ಘಾಟ್‌ಗಳನ್ನು ಜನ ನೋಡ್ತಿದ್ರು. ಟರ್ಕಿಯ ಗೋಲ್ಡನ್ ಹಾರ್ನ್, ಬಲ್ಗೇರಿಯಾದ ಕಮ್ಯುನಿಸ್ಟ್ ಲೈಫ್, ಅಫ್ಘಾನಿಸ್ತಾನದ ಬುಡಕಟ್ಟು ಜನ, ಕ್ಯಾಸ್ಪಿಯನ್ ಸಮುದ್ರ, ಬ್ಲೂ ಡ್ಯಾನ್ಯೂಬ್ ನದಿ, ರೈನ್ ಕಣಿವೆ ಹೀಗೆ ಹಲವು ಅದ್ಭುತಗಳನ್ನು ಈ ಜರ್ನಿಯಲ್ಲಿ ನೋಡಬಹುದಿತ್ತು.
55
21 ವರ್ಷಗಳ ಬಳಿಕ ನಿಂತುಹೋದ ಐತಿಹಾಸಿಕ ಜರ್ನಿ
ಲಂಡನ್-ಕಲ್ಕತ್ತಾ ಬಸ್ ಸರ್ವೀಸ್ ಸುಮಾರು 21 ವರ್ಷಗಳ ಕಾಲ ನಡೆಯಿತು. ಆದರೆ ಮಧ್ಯಪ್ರಾಚ್ಯ ದೇಶಗಳಲ್ಲಿ ಶುರುವಾದ ರಾಜಕೀಯ ಅಸ್ಥಿರತೆ ಹಾಗೂ ಭದ್ರತಾ ಸಮಸ್ಯೆಗಳಿಂದಾಗಿ ಈ ರೂಟ್‌ನಲ್ಲಿ ಓಡಾಡುವುದು ಕಷ್ಟವಾಯ್ತು. ಇದೇ ಗ್ಯಾಪ್‌ನಲ್ಲಿ ಬಸ್‌ನ ಹಿಂಭಾಗ ಡ್ಯಾಮೇಜ್ ಆಗಿದ್ದರಿಂದ ಅದನ್ನ ಸರ್ವೀಸ್‌ನಿಂದ ತೆಗೆದುಹಾಕಲಾಯಿತು. 1968ರ ಮೇ ತಿಂಗಳಲ್ಲಿ ಆಂಡಿ ಸ್ಟೀವರ್ಟ್ (Andy Stewart) ಅನ್ನೋ ಬ್ರಿಟಿಷ್ ಪ್ರಯಾಣಿಕ ಈ ಬಸ್ ಅನ್ನು ಖರೀದಿಸಿದ. ಲಂಡನ್‌ಗೆ ವಾಪಸ್ ಹೋಗುವ ಉದ್ದೇಶದಿಂದ ಆತ ಇದನ್ನು ಬಳಸಲು ಮುಂದಾಗಿದ್ದ.
ಕಾಲಕ್ರಮೇಣ ವೀಸಾ ರೂಲ್ಸ್, ಗಡಿ ಸಮಸ್ಯೆಗಳು, ಭದ್ರತಾ ಕಾರಣಗಳಿಂದಾಗಿ ಇಂಥದ್ದೊಂದು ಲಾಂಗ್ ಬಸ್ ಜರ್ನಿ ಮತ್ತೆ ಸಾಧ್ಯವಾಗಲೇ ಇಲ್ಲ. ಈ ಐತಿಹಾಸಿಕ ಪ್ರಯಾಣದ ಹಳೆಯ ಫೋಟೋಗಳು, ಟಿಕೆಟ್‌ಗಳು ಇಂದಿಗೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.