
ಜಗತ್ತಿನಲ್ಲಿ ಹಲವು ದೇಶಗಳಿದ್ದು, ಅವರ ಸಂಸ್ಕೃತಿ ಮತ್ತು ಜೀವನಶೈಲಿಯೂ ಸಹ ತುಂಬಾ ಭಿನ್ನವಾಗಿದೆ. ಆದರೆ ಕೆಲವು ಪದ್ಧತಿಗಳು ಮತ್ತು ಆಚರಣೆಗಳ ಬಗ್ಗೆ ಕೇಳಿದ ತಕ್ಷಣ ಹೃದಯವೇ ನಡುಗೆ ಹೋಗುತ್ತೆ. ಇದು ಏಕೆ ನಡೆಯುತ್ತಿದೆ ಎಂದು ಯೋಚಿಸುವಂತೆ ಮಾಡುತ್ತದೆ. ಅಂತಹ ಒಂದು ಸಂಸ್ಕೃತಿಯ ಬಗ್ಗೆ ಇಲ್ಲಿದೆ ಮಾಹಿತಿ.
ಬಹುತೇಕ ಎಲ್ಲಾ ಭಾರತೀಯ ಮನೆಗಳಲ್ಲಿ, ಹೆಣ್ಣುಮಕ್ಕಳು ತಮ್ಮ ತಂದೆಯ ಪ್ರೀತಿಯ ಹೆಣ್ಣುಮಕ್ಕಳಾಗಿರುತ್ತಾರೆ. ಅದು ತಮಾಷೆಯಾಗಿದ್ದರೂ ಸಹ, ಅವರಿಗೆ 'ಪಾಪಾ ಕಿ ಪರಿ' ಅಥವಾ ಡ್ಯಾಡ್ಸ್ ಲಿಟಲ್ ಪ್ರಿನ್ಸಸ್ ಎಂಬ ಟ್ಯಾಗ್ ನೀಡಲಾಗಿದೆ. ಏಕೆಂದರೆ ಒಬ್ಬ ತಂದೆ ತನ್ನ ಮಗಳನ್ನು ಹೆಚ್ಚು ಪ್ರೀತಿಸುತ್ತಾನೆ. ಜೀವನವಿಡೀ ಸ್ಟಿಕ್ಟ್ ಆಗಿ ಕಳೆಯುವ ವ್ಯಕ್ತಿ ತನ್ನ ಮಗಳನ್ನು ಮದುವೆ ಮಾಡಿ ಕೊಡುವಾಗ ಅಳುತ್ತಾನೆ. ಹೆಣ್ಣುಮಕ್ಕಳು ಯಾವಾಗಲೂ ತಮ್ಮ ತಂದೆಯ ಬಗ್ಗೆ ಗೌರವವನ್ನು ಹೊಂದಿರುತ್ತಾರೆ.
ಆದರೆ ತಂದೆ ತನ್ನ ಮಗಳನ್ನು ಮದುವೆಯಾಗುವ (father marries daughter) ಸಂಪ್ರದಾಯದ ಬಗ್ಗೆ ಕೇಳಿದಾಗ ಹೇಗನಿಸುತ್ತದೆ ಎಂದು ಊಹಿಸಿ ನೋಡಿ. ಕೆಲವರು ಅದನ್ನು ನಂಬದಿರಬಹುದು, ಆದರೆ ಒಂದು ದೇಶದಲ್ಲಿ ಅಂತಹ ಸಂಪ್ರದಾಯವಿದೆ. ಇದರ ಹಿಂದಿನ ಕಾರಣ ಇಚ್ಛೆಗಿಂತ ಬಲವಂತ ಎಂದು ತೋರುತ್ತದೆ. ಹಾಗಾದರೆ, ಈ ವಿಚಿತ್ರ ಸಂಪ್ರದಾಯದ ಎಲ್ಲಿದೆ ತಿಳಿಯೋಣ.
ಈ ಸಂಪ್ರದಾಯ ಎಲ್ಲಿಂದ ಬಂತು?
ಬಾಂಗ್ಲಾದೇಶದ ಆಗ್ನೇಯದಲ್ಲಿರುವ ಮಾಧೋಪುರ್ ಕಾಡಿನಲ್ಲಿ ವಾಸಿಸುವ ಬುಡಕಟ್ಟು ಸಮುದಾಯ 'ಮಂಡಿ' (Mandi Tribe)ಒಂದು ವಿಚಿತ್ರ ಸಂಪ್ರದಾಯವನ್ನು ಹೊಂದಿದೆ. ಅದರ ಪ್ರಕಾರ, ಒಬ್ಬ ಪುರುಷನು ವಿಧವೆ ಮಹಿಳೆಯನ್ನು (widow) ಮದುವೆಯಾದರೆ, ಆ ಮಹಿಳೆಗೆ ಮೊದಲ ಮದುವೆಯಿಂದ ಜನಿಸಿದ ಹೆಣ್ಣು ಮಗುವನ್ನು ಸಹ ಅವನು ಮದುವೆಯಾಗಬಹುದು.
ಅಂದರೆ, ತಾಯಿ ಮತ್ತು ಮಗಳು ಒಂದೇ ವ್ಯಕ್ತಿಯನ್ನು ಮದುವೆಯಾಗಬಹುದು. ಹುಡುಗಿ ಬಾಲ್ಯದಲ್ಲಿ ತನ್ನ ತಂದೆಯೆಂದು ಭಾವಿಸುವ ವ್ಯಕ್ತಿ, ಅವಳು ದೊಡ್ಡವಳಾದಾಗ, ಅವನು ತನ್ನ ಗಂಡ ಎಂದು ಅವಳಿಗೆ ತಿಳಿಯುತ್ತದೆ. ಅನೇಕ ಸಂದರ್ಭಗಳಲ್ಲಿ, ಈ ಪದ್ಧತಿಯಲ್ಲಿ, ವಿಧವೆಯ ವಿವಾಹದ ಜೊತೆಗೆ, ಅವಳ ಮಗಳು ಕೂಡ ಅದೇ ಪುರುಷನನ್ನು ಮದುವೆಯಾಗುತ್ತಾಳೆ.
ಈ ಪದ್ಧತಿಯ ಪರಿಣಾಮವೇನು?
ಮಂಡಿ ಬುಡಕಟ್ಟು ಜನಾಂಗದ ಈ ಸಂಪ್ರದಾಯವು (tradition of tribes) ನೈತಿಕತೆಯ ಮಿತಿಗಳನ್ನು ಮುರಿಯುವುದಲ್ಲದೆ, ಬಾಲ್ಯದಲ್ಲಿ ಪ್ರೀತಿ ಮತ್ತು ರಕ್ಷಣೆಯನ್ನು ಮಾತ್ರ ನಿರೀಕ್ಷಿಸುವ ಮುಗ್ಧ ಹುಡುಗಿಯರ ಮಾನಸಿಕ ಮತ್ತು ಭಾವನಾತ್ಮಕ ಶೋಷಣೆಗೆ ಕಾರಣವಾಗುತ್ತದೆ. ಹುಡುಗಿ ಬಾಲ್ಯದಿಂದಲೂ ತನ್ನ ತಂದೆಯೆಂದು ಅಂದುಕೊಂಡ ವ್ಯಕ್ತಿಯನ್ನು, ಅವಳು ದೊಡ್ಡವರಾದಾಗ ತನ್ನ ಗಂಡನಾಗಿ ಸ್ವೀಕರಿಸಬೇಕಾಗುತ್ತದೆ. ಆದರೆ, ಈ ಸಂಪ್ರದಾಯವು ಈಗ ಕೊನೆಗೊಂಡಿದೆ ಎಂದು ಹೇಳಲಾಗುತ್ತದೆ.
ಓರೋಲಾ ಡಾಲ್ಬೋಟ್ ಈ ಸಂಪ್ರದಾಯದ ಭಾಗವಾಗಿದ್ದ ಮಹಿಳೆ. ಆಕೆಯಿಂದಾಗಿ ಈ ಸಂಪ್ರದಾಯದ ಬಗ್ಗೆ ಜಗತ್ತಿಗೆ ತಿಳಿಯಿತು. ಮಾಧ್ಯಮ ವರದಿಗಳ ಪ್ರಕಾರ, ಓರೋಲಾ ತನ್ನ ತಾಯಿಯೊಂದಿಗೆ ಅದೇ ವ್ಯಕ್ತಿಯನ್ನು ಮದುವೆಯಾದಾಗ ಆಕೆಗೆ ಕೇವಲ 3 ವರ್ಷ. ಆದರೆ ಅವಳು ಬೆಳೆದು ಸತ್ಯವನ್ನು ತಿಳಿದುಕೊಂಡಾಗ, ಅವಳ ಮದುವೆಯ ಕನಸು ಭಗ್ನವಾಯಿತು. ತನ್ನ ತಂದೆಯನ್ನು ತನ್ನ ಗಂಡನಂತೆ ನೋಡುವುದು ಸಹ ಭಯಾನಕವಾಗಿತ್ತು. ಆದರೆ ಕುಟುಂಬದ ಜೀವನಕ್ಕೆ ಮದುವೆ ಅಗತ್ಯವಾಗಿತ್ತು.
ಮಹಿಳೆಯರೇ ಕುಟುಂಬವನ್ನು ಆಳೋದು
ಈ ಬುಡಕಟ್ಟು ಸಮುದಾಯದಲ್ಲಿ ಮಹಿಳೆಯರೇ ಮನೆಯನ್ನು ಆಳುತ್ತಾರೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಹಾಗಿದ್ರೂ ಸಹ ಈ ರೀತಿಯ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ. ನಾವು ನಮ್ಮ ಪ್ರೀತಿಪಾತ್ರರ ಆಸ್ತಿಯನ್ನು ಉಳಿಸಬೇಕು ಮತ್ತು ಮಹಿಳೆಯರನ್ನು ಸಹ ಉಳಿಸಬೇಕು ಅದಕ್ಕಾಗಿ ಇದನ್ನು ಮಾಡಲಾಗುತ್ತೆ ಎನ್ನುತ್ತಾರೆ. ಅಷ್ಟೇ ಅಲ್ಲ ಮಗಳು ತನ್ನ ತಂದೆಯೊಂದಿಗೆ ಮದುವೆಯಾಗುವುದು ಈ ವ್ಯವಸ್ಥೆಯ ಒಂದು ಭಾಗವಾಗಿದೆ ಎನ್ನುತ್ತಾರೆ. ಆದರೆ, ಆಧುನಿಕ ಹುಡುಗಿಯರು ಈ ಆಚರಣೆಯನ್ನು ಅನುಸರಿಸುತ್ತಿಲ್ಲ.