ಭಾರತದ ಏಕೈಕ ಖಾಸಗಿ ರೈಲು ನಿಲ್ದಾಣ ಎಲ್ಲಿದೆ ಗೊತ್ತಾ? ಯಾವುದೇ ಏರ್‌ಪೋರ್ಟಿಗೆ ಇದು ಕಡಿಮೆ ಇಲ್ಲ!

Published : May 02, 2025, 08:18 PM ISTUpdated : May 02, 2025, 08:47 PM IST

ಭಾರತದಲ್ಲಿ 7,308ಕ್ಕೂ ಅಧಿಕ ರೈಲು ನಿಲ್ದಾಣಗಳಿವೆ. ಆದರೆ ಒಂದೇ ಒಂದು ಖಾಸಗಿ ರೈಲು ನಿಲ್ದಾಣವಿದೆ. ಅದು ಯಾವುದು ಮತ್ತು ಅದರ ವಿಶೇಷತೆ ಏನು ಎಂಬುದರ ಮಾಹಿತಿ ಇಲ್ಲಿದೆ.

PREV
19
ಭಾರತದ ಏಕೈಕ ಖಾಸಗಿ ರೈಲು ನಿಲ್ದಾಣ ಎಲ್ಲಿದೆ ಗೊತ್ತಾ? ಯಾವುದೇ ಏರ್‌ಪೋರ್ಟಿಗೆ ಇದು ಕಡಿಮೆ ಇಲ್ಲ!

ನಮ್ಮ ಭಾರತೀಯ ರೈಲ್ವೆ ಪ್ರಪಂಚದ ಐದು ದೊಡ್ಡ ರೈಲು ಜಾಲತಾಣಗಳಲ್ಲಿ ಒಂದಾಗಿದೆ. ಭಾರತದಲ್ಲಿ7,308ಕ್ಕೂ ಅಧಿಕ ರೈಲು ನಿಲ್ದಣಗಳು ಕಾರ್ಯ ನಿರ್ವಹಿಸುತ್ತುವೆ. ಪ್ರತಿದಿನ 13,000ಕ್ಕೂ ಹೆಚ್ಚು ರೈಲುಗಳಲ್ಲಿ 2 ಕೋಟಿಗೂ ಅಧಿಕ ಪ್ರಯಾಣಿಕರು ಪ್ರಯಾಣಿಸುತ್ತಾರೆ. 

29

ಅತ್ಯಧಿಕ ಪ್ರಯಾಣಿಕರು ಪ್ರಯಾಣಿಸುವ ಹಿನ್ನೆಲೆ ಭಾರತ ಸರ್ಕಾರದ ಅತ್ಯಧಿಕ ಆದಾಯದ ಮೂಲವಾಗಿದೆ. ಭಾರತೀಯ ರೈಲ್ವೆ ಭಾರತದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ದೇಶದ ಅತ್ಯಂತ ಜನಪ್ರಿಯ ಮತ್ತು ಅಗ್ಗದ ಸಾರಿಗೆಯಾಗಿದೆ.

39

ಭಾರತೀಯ ರೈಲ್ವೆ ನಿರ್ವಹಣೆಯನ್ನು ಭಾರತ ಸರ್ಕಾರವೇ ನೋಡಿಕೊಳ್ಳುತ್ತದೆ. ದೇಶದ ಎಲ್ಲಾ ರೈಲುಗಳು ಭಾರತ ಸರ್ಕಾರದ ಅಧೀನದಲ್ಲಿಯೇ ಬರುತ್ತವೆ. ಆದ್ರೆ ಭಾರತದಲ್ಲಿ ಒಂದು ಖಾಸಗಿ ರೈಲು ನಿಲ್ದಾಣವಿದೆ. ಅದು ಯಾವುದೇ ಗೊತ್ತಾ ಎಂಬುದರ ಮಾಹಿತಿ ಇಲ್ಲಿದೆ.

49

ಈ ರೈಲು ನಿಲ್ದಾಣ ಅಂತರಾಷ್ಟ್ರೀಯಮಟ್ಟದ ಸೌಲಭ್ಯಗಳನ್ನು ಹೊಂದಿದೆ. ಈ ರೈಲು ನಿಲ್ದಾಣದ ಹೆಸರು ರಾಣಿ ಕಮಲಪತಿ. ಈ ಹಿಂದೆ ಇದನ್ನು ಹಬಿಬ್‌ಗಂಜ್  ರೈಲು ನಿಲ್ದಾಣ ಎಂದು ಕರೆಯಲಾಗುತ್ತಿತ್ತು. 2021 ನವೆಂಬರ್‌ನಲ್ಲಿ ರಾಣಿ ಕಮಲಪತಿ ರೈಲು ನಿಲ್ದಾಣ ಎಂದು ಮರುನಾಮಕರಣ ಮಾಡಲಾಯ್ತು. 

59

ಈ ರೈಲು ನಿಲ್ದಾಣದಲ್ಲಿ ಏನೆಲ್ಲ ಸೌಲಭ್ಯಗಳಿವೆ?

ಅತಿದೊಡ್ಡ ಪಾರ್ಕಿಂಗ್ ನಿಲ್ದಾಣ, 24*7 ವಿದ್ಯುತ್ ಸಂಪರ್ಕ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಹವಾ ನಿಯಂತ್ರಿತ ಕೊಠಡಿಗಳು, ಕಚೇರಿ, ಅಂಗಡಿಗಳು, ಹೈ ಸ್ಪೀಡ್ ಎಸ್ಕಲೇಟರ್, ಲಿಫ್ಟ್, ಆಂಕರ್ ಸ್ಟೋರ್, ಆಟೋಮೊಬೈಲ್ ಶೋರೂಮ್‌ಗಳು, ಕನ್ವೇಷನನ್ ಸೆಂಟರ್, ಹೋಟೆಲ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು

69

ಎಲ್ಲಿದೆ ಈ ರೈಲು ನಿಲ್ದಾಣ?

ರಾಣಿ ಕಮಲಪತಿ ರೈಲು ನಿಲ್ದಾಣ ಮಧ್ಯಪ್ರದೇಶದ ಹಬಿಬ್‌ಗಂಜ್‌ನಲ್ಲಿದೆ. ಇದು ಸಬ್‌ಅರ್ಬ್ ಭೋಪಾಲ್‌ನಲ್ಲಿದೆ. ಈ ನಿಲ್ದಾಣ ನವದೆಹಲಿ ಮತ್ತು ಚೆನ್ನೈ ನಡುವೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಜೂನ್-2007ರಲ್ಲಿ ಈ ನಿಲ್ದಾಣವನ್ನು ಖಾಸಗೀಕರಣಗೊಳಿಸಲಾಯ್ತು. ಸಾರ್ವಜನಿಕ-ಖಾಸಗಿ ಸಹಭಾಗೀತ್ವದಲ್ಲಿ ಈ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗಿದೆ. ಸರ್ಕಾರ ಮತ್ತು ಖಾಸಗಿ ಜೊತೆಯಾಗಿ ಈ ರೈಲು ನಿಲ್ದಾಣವನ್ನು ಉನ್ನತ ದರ್ಜೆಗೆ ತೆಗೆದುಕೊಂಡು ಹೋಗಲಾಗಿದೆ.

79

ಬನ್ಸಲ್ ಗ್ರೂಪ್ ಪ್ರೈವೇಟ್ ಇನ್‌ಫ್ರಾಸ್ಟ್ರಕ್ಚರ್ ಫರ್ಮ್ (Bansal Group, a private infrastructure firm) ಮತ್ತು Indian Railway Stations Development Corporation -IRSDC ಜೊತೆಯಾಗಿ ಕೆಲಸ ಮಾಡುತ್ತಿವೆ. ನವೆಂಬರ್ 15, 2021ರಂದು ಪ್ರಧಾನಿ ನರೇಂದ್ರ ಮೋದಿ ಈ ರೈಲು ನಿಲ್ದಾಣವನ್ನು ಉದ್ಘಾಟಿಸಿದ್ದರು.ಈ ನಿಲ್ದಾಣದ ನಿರ್ವಹಣೆಯನ್ನು ಖಾಸಗಿ ಕಂಪನಿ ಮಾಡುತ್ತಿದ್ದು, ಆದ್ರೆ ಭಾರತ ಸರ್ಕಾರದ ಒಡೆತನದಲ್ಲಿದೆ.

89

ರಾಣಿ ಕಮಲಪತಿ ರೈಲು ನಿಲ್ದಾಣ  ಮರು ಅಭಿವದ್ಧಿಗೆ ಬರೋಬ್ಬರಿ 450  ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಈ ಮೂಲಕ ಎಲ್ಲಾ ಮೂಲಸೌಕರ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಒದಗಿಸಲಾಗಿದೆ. 

99

ಜನರ ದಟ್ಟಣೆ ನಿಯಂತ್ರಿಸಲು ಪ್ರತ್ಯೇಕ ಪ್ರವೇಶ ದ್ವಾರ ಹಾಗೂ ನಿರ್ಗಮನ ದ್ವಾರಗಳನ್ನು ಇಡಲಾಗಿದೆ.18ನೇ ಶತಮಾನದ ಗೊಂಡಾದ ರಾಣಿ, ಧೈರ್ಯಶಾಲಿ ಹಾಗೂ ಹೋರಾಟಗಾರ್ತಿ ರಾಣಿ ಕಮಲಪತಿ ಹೆಸರನ್ನು ನವೀಕರಿಸಿದ ರೈಲು ನಿಲ್ದಾಣಕ್ಕೆ ಇಡಲಾಗಿದೆ. 

Read more Photos on
click me!

Recommended Stories