ಕೇದಾರನಾಥ ಕ್ಷೇತ್ರದ ಕುರಿತು ಯಾರಿಗೂ ತಿಳಿಯದ ಅಚ್ಚರಿ ಮೂಡಿಸುವ ರಹಸ್ಯಗಳು

Published : May 03, 2025, 12:01 PM ISTUpdated : May 05, 2025, 12:37 PM IST

ಕೇದಾರನಥ ಕ್ಷೇತ್ರದ ಕುರಿತಾಗಿ ಅಚ್ಚರಿ ಮೂಡಿಸುವ ಕೆಲವೊಂದು ರಹಸ್ಯಗಳು ಇಲ್ಲಿವೆ. ಭಕ್ತರ ದರ್ಶನಕ್ಕಾಗಿ ಇದೀಗ ತೆರೆದಿರುವ ಕೇದಾರನಾಥ ಕ್ಷೇತ್ರದ ಬಗ್ಗೆ ನೀವು ತಿಳಿಯಿರಿ.   

PREV
18
ಕೇದಾರನಾಥ ಕ್ಷೇತ್ರದ ಕುರಿತು ಯಾರಿಗೂ ತಿಳಿಯದ ಅಚ್ಚರಿ ಮೂಡಿಸುವ ರಹಸ್ಯಗಳು

ಪ್ರತಿ ವರ್ಷ ಲಕ್ಷಾಂತರ ಭಕ್ತರು ಕೇದಾರನಾಥ (Kedarnath)ಧಾಮಕ್ಕೆ ಭೇಟಿ ನೀಡುತ್ತಾರೆ. ಈ ದೇವಾಲಯವು 6 ತಿಂಗಳು ಮುಚ್ಚಲ್ಪಟ್ಟಿರುತ್ತದೆ ಮತ್ತು ಉಳಿದ 6 ತಿಂಗಳು ಭಕ್ತರಿಗೆ ಬಾಗಿಲು ತೆರೆದಿರುತ್ತದೆ. ಈ ದೇವಾಲಯಕ್ಕೆ ಸಂಬಂಧಿಸಿದ ಹಲವು ನಿಗೂಢತೆಗಳು ನಿಮ್ಮನ್ನು ಅಚ್ಚರಿಗೊಳಿಸಬಹುದು.
 

28

ಕೇದಾರನಾಥ ಧಾಮದ ಬಾಗಿಲುಗಳು 6 ತಿಂಗಳ ಕಾಲ ಮುಚ್ಚಿರುತ್ತವೆ ಮತ್ತು ಈ ಸಮಯದಲ್ಲಿ ದೇವಾಲಯದ ಒಳಗೆ ಯಾವಾಗಲೂ ದೀಪ ಉರಿಯುತ್ತಲೇ ಇರುತ್ತೆ ಅನ್ನೋದು ಗೊತ್ತಾ? ಆರು ತಿಂಗಳ ನಂತರ ಬಾಗಿಲು ತೆರೆದಾಗ, ದೇವಾಲಯದ ಒಳಗೆ ಒಂದು ದೀಪ ಉರಿಯುತ್ತಿರುವುದು ಕಂಡುಬರುತ್ತದೆ.
 

38

ಮಹಾಭಾರತ ಯುದ್ಧದ (Mahabharat War) ನಂತರ ಪಾಂಡವರು ತಮ್ಮ ಪಾಪಗಳಿಗೆ ಪರಿಹಾರ ಪಡೆಯಲು ಕೇದಾರನಾಥ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರಂತೆ. ಕೇದಾರನಾಥ ಧಾಮದಲ್ಲಿ, ಶಿವನು ಪಾಂಡವರ ಮುಂದೆ ಗೂಳಿಯ ರೂಪದಲ್ಲಿ ಕಾಣಿಸಿಕೊಂಡನು ಮತ್ತು ಇದಾದ ನಂತರ ಭೂ-ಶಿವಲಿಂಗವು ಅಲ್ಲಿ ಹುಟ್ಟಿಕೊಂಡಿತು.
 

48
Photo by Alok Kumar

ಕೇದಾರನಾಥ ಧಾಮ ಶಿವನ ದೇಗುಲ ಆಗಿರೋದ್ರಿಂದ ಶೈವ ಸಮುದಾಯದ ಪುರೋಹಿತರು ಮಾತ್ರ ಇಲ್ಲಿ ಶಿವನಿಗೆ ಪೂಜೆ ಸಲ್ಲಿಸುತ್ತಾರೆ. ಇಲ್ಲಿ ಶಿವನ ದರ್ಶನ ಪಡೆಯುವುದೇ ಒಂದು ಪುಣ್ಯದ ಕೆಲಸ. 
 

58

ನೀವು ಬದರಿನಾಥಕ್ಕೆ (Badarinath) ಹೋದರೆ ಕೇದಾರನಾಥಕ್ಕೆ ಭೇಟಿ ನೀಡದೆ ನಿಮ್ಮ ಪ್ರವಾಸ ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಕಷ್ಟವಾದರೂ ಪರವಾಗಿಲ್ಲ, ಕೇದರನಾಥನ ದರ್ಶನ ಪಡೆಯೋದನ್ನು ಮರೆಯಬೇಡಿ. 
 

68

ಈ ದೇವಾಲಯವನ್ನು ಮೊದಲು ಪಾಂಡವರು ನಿರ್ಮಿಸಿದರು (Kedarnath built by Pandavas) ಎಂದು ಹೇಳಲಾಗುತ್ತದೆ ಆದರೆ ವಿನಾಶದಿಂದಾಗಿ ಆ ದೇವಾಲಯ ಮರೆಯಾಯಿತು ಎನ್ನಲಾಗಿದೆ. ನಂತರ ಆದಿ ಶಂಕರಾಚಾರ್ಯರು (Adi Shankaryacharya)ಇದನ್ನು ನಿರ್ಮಿಸಿದರು ಎನ್ನಲಾಗುತ್ತೆ. ಕೇದಾರನಾಥ ದೇವಾಲಯದಿಂದ ಅರ್ಧ ಕಿಲೋಮೀಟರ್ ದೂರದಲ್ಲಿರುವ ದೇವಾಲಯದಿಂದ ಭೈರವನಾಥನು ಕೇದಾರನಾಥವನ್ನು ರಕ್ಷಿಸುತ್ತಾನೆ ಎನ್ನುವ ನಂಬಿಕೆ ಸಹ ಇದೆ..
 

78

ಭವಿಷ್ಯದಲ್ಲಿ ಕೇದಾರನಾಥ ಮತ್ತು ಬದರಿನಾಥ ತೀರ್ಥಯಾತ್ರೆಗಳು ಕಣ್ಮರೆಯಾಗುತ್ತವೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ನಂತರ ಹೊಸ ತೀರ್ಥಯಾತ್ರೆ ಹೊರಹೊಮ್ಮುತ್ತೆ ಎನ್ನಲಾಗಿದೆ, ಹಾಗಾಗಿ ಶೀಘ್ರದಲ್ಲೇ ಕೇದಾರನಾಥ, ಬದರಿನಾಥಕ್ಕೆ ಭೇಟಿ ನೀಡಿ.
 

88

ಕೇದಾರನಾಥಕ್ಕೆ ಬರುವ ಗಾಳಿಯು ನೇರವಾಗಿ ಸ್ವರ್ಗದಿಂದ (breeze from heaven) ಬರುತ್ತದೆ ಎಂದು ಸಹ ಹೇಳಲಾಗುತ್ತದೆ. ಹಾಗಾಗಿ ನೀವು ಒಂದು ಬಾರಿಯಾದರೂ ಈ ಭೂಮಿ ಮೇಲಿರುವ ಸ್ವರ್ಗಕ್ಕೆ ಭೇಟಿ ನೀಡಲೇಬೇಕು. 
 

Read more Photos on
click me!

Recommended Stories