ಇದು ರೈಲ್ವೆ ಪ್ರಯಾಣಿಕರ ಗಮನಕ್ಕೆ, ಇನ್ಮುಂದೆ IRCTC ಬಂದ್ ಮಾಡಲಿದೆ ಈ ಸರ್ವಿಸ್, ನಿಮ್ಮ ಹಣಕ್ಕೆ ನೀವೇ ಜವಾಬ್ದಾರರು!

Published : Dec 26, 2024, 12:29 PM ISTUpdated : Dec 26, 2024, 06:22 PM IST

ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ನೀಡುತ್ತಿದ್ದ ಮಹತ್ವದ ಸೇವೆಯನ್ನು ಸ್ಥಗಿತಗೊಳಿಸಿದೆ.ಈ ಮಾಹಿತಿ ಆರ್‌ಟಿಐನಲ್ಲಿ ಬಹಿರಂಗವಾಗಿದೆ. ಹಾಗಾಗಿ ಪ್ರಯಾಣಿಕರ ತಮ್ಮ ಹಣಕ್ಕೆ ಅವರೇ ಜವಾಬ್ದಾರರಾಗಿರುತ್ತಾರೆ.

PREV
18
ಇದು ರೈಲ್ವೆ ಪ್ರಯಾಣಿಕರ ಗಮನಕ್ಕೆ, ಇನ್ಮುಂದೆ IRCTC ಬಂದ್ ಮಾಡಲಿದೆ ಈ ಸರ್ವಿಸ್, ನಿಮ್ಮ ಹಣಕ್ಕೆ ನೀವೇ ಜವಾಬ್ದಾರರು!
ಭಾರತೀಯ  ರೈಲ್ವೆ

ಭಾರತೀಯ  ರೈಲ್ವೆ ಇಲಾಖೆ  ತನ್ನ ಪ್ರಯಾಣಿಕರಿಗೆ ನೀಡುತ್ತಿದ್ದ ಮಹತ್ವಪೂರ್ಣ ಸೇವೆಯನ್ನು ಸ್ಥಗಿತಗೊಳಿಸಿದೆ. ಹಾಗಾಗಿ ಈ ಸೇವೆ ಯಾವುದು ಎಂಬುದರ ಮಾಹಿತಿ ಇಲ್ಲಿದೆ.

28
ಆರ್‌ಟಿಐ

ಆರ್‌ಟಿಐ ಅಡಿ ಈ ಸಂಬಂಧ ಮಾಹಿತಿ ಕೇಳಲಾಗಿತ್ತು. ಇದಕ್ಕೆ ರೈಲ್ವೆ ಅಧಿಕಾರಿಗಳು ಉತ್ತರಿಸಿದ್ದು, ಅಚ್ಚರಿಯ ಮಾಹಿತಿ ಹೊರ ಬಂದಿದೆ. ಹಾಗಾದ್ರೆ Indian Railway Catering and Tourism Corporation ನೀಡಿದ ಉತ್ತರ ಏನು ಗೊತ್ತಾ? 

38

ರೈಲುಗಳು ನಿಗಧಿತ ಸಮಯಕ್ಕಿಂತ ವಿಳಂಬವಾದ್ರೆ ಟಿಕೆಟ್ ಹಣ ರಿಫಂಡ್ ಮಾಡಲಾಗುತ್ತಾ? ಈ ಸೇವೆ ಇನ್ನು ಚಾಲ್ತಿಯಲ್ಲಿದೆಯಾ ಎಂದು ಆರ್‌ಟಿಐ ಅಡಿಯಲ್ಲಿ ಕೇಳಲಾಗಿತ್ತು. ಈ ಪ್ರಶ್ನೆಗೆ IRCTC ನೀಡಿದ ಉತ್ತರ ಏನು ಎಂಬುದನ್ನು ನೋಡೋಣ ಬನ್ನಿ.

48

ಆರ್‌ಟಿಐ ಅಡಿಯಲ್ಲಿ ಕೇಳಲಾದ ಪ್ರಶ್ನೆಗೆ ಐಆರ್‌ಸಿಟಿಸಿ ನೀಡಿದ ಉತ್ತರ ಹೀಗಿತ್ತು.

ಕೆಲವು ದಿನಗಳ ಹಿಂದೆ ಖಾಸಗಿ ರೈಲುಗಳ ವಿಳಂಬಕ್ಕಾಗಿ ರೀಫಂಡ್‌ ಸೌಲಭ್ಯವನ್ನು ನಿಲ್ಲಿಸಲಾಗಿದೆ. ಇನ್ನುಳಿದಂತೆ  IRCTC ಟಿಕೆಟ್ ಬುಕಿಂಗ್ ಮತ್ತು ಖಾಸಗಿ ರೈಲುಗಳ ಎಲ್ಲಾ ಸೌಲಭ್ಯಗಳನ್ನು ನಿರ್ವಹಿಸುತ್ತದೆ. ಸರ್ಕಾರಿ ರೈಲುಗಳ ವಿಳಂಬದ ರೈಲು ಟಿಕೆಟ್‌ಗಳಿಗೆ ಮಾತ್ರ ರೀಫಂಡ್ ಸೌಲಭ್ಯವಿದೆ.  ಆದರೆ ಖಾಸಗಿ ರೈಲುಗಳ ವಿಳಂಬದ ಸಂದರ್ಭದಲ್ಲಿ ಯಾವುದೇ ಮರುಪಾವತಿಯನ್ನು ನೀಡಲಾಗುವುದಿಲ್ಲ ಎಂದು IRCTC ತಿಳಿಸಿದೆ.

58

ಅಕ್ಟೋಬರ್ 4, 2019 ರಿಂದ ಫೆಬ್ರವರಿ 16, 2024 ರ ನಡುವೆ IRCTC ಸುಮಾರು 26 ಲಕ್ಷ ರೂಪಾಯಿ ಹಣವನ್ನು ರೀಫಂಡ್ ಮಾಡಿದೆ. 2023-24ರಲ್ಲಿ  15.65 ಲಕ್ಷ ರೂಪಾಯಿ  ರೀಫಂಡ್ ಮಾಡಲಾಗಿದೆ.  ಫೆಬ್ರವರಿ 15, 2024 ರಿಂದ ಖಾಸಗಿ ರೈಲುಗಳ ವಿಳಂಬಕ್ಕೆ ನೀಡಲಾಗುವ ರೀಫಂಡ್ ಸ್ಥಗಿತಗೊಳಿಸಲಾಗಿದೆ. ಆದ್ರೆ ಈ ಸೇವಯಲ್ಲಿ ಆಕೆ ನಿಲ್ಲಿಸಲಾಗಿದೆ ಎಂಬುದನ್ನು IRCTC ತಿಳಿಸಿಲ್ಲ. 

68

ಸದ್ಯ ಭಾರತೀಯ ರೈಲ್ವೇ  ತೇಜಸ್ ಹೆಸರಿನಲ್ಲಿ ಎರಡು ಖಾಸಗಿ ರೈಲುಗಳನ್ನು ನಡೆಸುತ್ತಿದೆ. ಅಕ್ಟೋಬರ್ 4, 2019 ರಿಂದ ಪ್ರಾರಂಭವಾದ ರೈಲು ನವದೆಹಲಿಯಿಂದ ಲಕ್ನೋಗೆ, ಮತ್ತೊಂದು ರೈಲು ಜನವರಿ 17, 2020 ರಿಂದ  ಅಹಮದಾಬಾದ್ ಮತ್ತು ಮುಂಬೈ ನಡುವೆ ಚಲಿಸುತ್ತಿದೆ.

78

ಯಾವ ವರ್ಷದಲ್ಲಿ ಎಷ್ಟು ರೀಫಂಡ್?

2019-20ರಲ್ಲಿ 1.78 ಲಕ್ಷ ರೂಪಾಯಿ, 2021-22ರಲ್ಲಿ 96,000 ರೂಪಾಯಿ, 2022-23ರಲ್ಲಿ 7.74 ಲಕ್ಷ ರೂಪಾಯಿ, 2023-24ರ ಇಲ್ಲಿಯಯವರೆಗೆ 15.65 ಲಕ್ಷ ರೂಪಾಯಿ ರೀಫಂಡ್ ನೀಡಲಾಗಿದೆ. ಆದ್ರೆ 2020-21 ರಲ್ಲಿ ಯಾವುದೇ ರೀಫಂಡ್ ಆಗಿಲ್ಲ. 

88

ರಿಫಂಡ್ ಲೆಕ್ಕ ಹೇಗೆ?
ರೈಲು 1 ರಿಂದ 2 ಗಂಟೆ ವಿಳಂಬವಾದ್ರೆ 100 ರೂಪಾಯಿ
ರೈಲು 2 ರಿಂದ 4 ಗಂಟೆ ವಿಳಂಬವಾದ್ರೆ 250 ರೂಪಾಯಿ
ರೈಲು ವಿಳಂಬ ಕಾರಣ ನೀಡಿ ಟಿಕೆಟ್ ರದ್ದುಗೊಳಿಸಿದ್ರೆ ಸಂಪೂರ್ಣ ಮೊತ್ತ ರೀಫಂಡ್ ನೀಡಲಾಗುತ್ತಿತ್ತು. 

Read more Photos on
click me!

Recommended Stories