ಕನ್ಯಾಕುಮಾರಿಯಲ್ಲಿ ನೋಡಲೇಬೇಕಾದ ಸ್ಥಳಗಳು
ಟೆಕ್ಕಿಗಳ ನಗರ ಬೆಂಗಳೂರಿನಿಂದ ಕನ್ಯಾಕುಮಾರಿ, ರಾಮೇಶ್ವರ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಹೋಗೋರಿಗೆ ಐಆರ್‌ಸಿಟಿಸಿ ಒಂದು ಸೂಪರ್ ಟೂರ್ ಪ್ಯಾಕೇಜ್ ಕೊಡ್ತಿದೆ. ಇದರ ಬಗ್ಗೆ ವಿವರವಾಗಿ ನೋಡೋಣ.
ಪ್ರತಿ ಗುರುವಾರ ಬೆಂಗಳೂರಿನಿಂದ ಕನ್ಯಾಕುಮಾರಿಗೆ ಟೂರ್ ರೈಲು ಹೊರಡುತ್ತೆ. ಶುಕ್ರ, ಶನಿ, ಭಾನುವಾರ ಮೂರು ದಿನ ಟ್ರಿಪ್ ಮುಗಿಸಿ ಬೆಂಗಳೂರಿಗೆ ವಾಪಸ್ ಬರಬಹುದು. ಈ ಪ್ಯಾಕೇಜ್ ಪ್ರಕಾರ, ಪ್ರತಿ ಗುರುವಾರ ಸಂಜೆ 5 ಗಂಟೆಗೆ ಬೆಂಗಳೂರಿನಿಂದ ವಿಶೇಷ ರೈಲು (ರೈಲು ಸಂಖ್ಯೆ:17235) ಹೊರಡುತ್ತೆ.
ರಾಮೇಶ್ವರಂ ದೇವಾಲಯ
ಈ ರೈಲು ಮರುದಿನ ಬೆಳಗ್ಗೆ ಅಂದ್ರೆ ಶುಕ್ರವಾರ ಬೆಳಗ್ಗೆ 8.15ಕ್ಕೆ ನಾಗರಕೋವಿಲ್ ಜಂಕ್ಷನ್ ತಲುಪುತ್ತೆ. ಅಲ್ಲಿಂದ ಐಆರ್‌ಸಿಟಿಸಿ ವ್ಯವಸ್ಥೆ ಮಾಡಿರೋ ವಾಹನದಲ್ಲಿ ಕನ್ಯಾಕುಮಾರಿಗೆ ಕರ್ಕೊಂಡು ಹೋಗ್ತಾರೆ. ಹೋಟೆಲ್‌ನಲ್ಲಿ ರೂಮ್ ವ್ಯವಸ್ಥೆ ಇರುತ್ತೆ. ಭಗವತಿ ಅಮ್ಮನ್ ದೇವಸ್ಥಾನ, ವಿವೇಕಾನಂದರ ಶಿಲಾ ಸ್ಮಾರಕ, ತಿರುವಳ್ಳುವರ್, ಪ್ರತಿಮೆ, ಗಾಂಧಿ ಸ್ಮಾರಕಗಳನ್ನ ನೋಡಬಹುದು. ಸಾಯಂಕಾಲ ಸೂರ್ಯಾಸ್ತ ನೋಡಲು ಸನ್‌ಸೆಟ್ ಪಾಯಿಂಟ್ ಮತ್ತು ಮೇಣದ ವಸ್ತುಸಂಗ್ರಹಾಲಯ ನೋಡಬಹುದು.
ರಾತ್ರಿ ಹೋಟೆಲ್‌ನಲ್ಲಿ ಉಳ್ಕೊಂಡು, ಶನಿವಾರ ಬೆಳಗ್ಗೆ ಕಡಲತೀರದಲ್ಲಿ ಸೂರ್ಯೋದಯ ನೋಡಬಹುದು. ನಂತರ ರೈಲಿನಲ್ಲಿ ರಾಮೇಶ್ವರಂಗೆ ಹೋಗ್ತಾರೆ. ರಾತ್ರಿ ಹೋಟೆಲ್‌ನಲ್ಲಿ ಉಳ್ಕೊಳ್ಳೋ ವ್ಯವಸ್ಥೆ ಇರುತ್ತೆ. ಭಾನುವಾರ ಬೆಳಗ್ಗೆ ರಾಮನಾಥಸ್ವಾಮಿ ದೇವಸ್ಥಾನದಲ್ಲಿ ದರ್ಶನ ಮಾಡಬಹುದು. ರಾಮನ ಪಾದ,, ಪಂಚಮುಖಿ ಆಂಜನೇಯ ದೇವಸ್ಥಾನಗಳನ್ನೂ ನೋಡಬಹುದು.
ಕನ್ಯಾಕುಮಾರಿ ಪ್ರವಾಸಿ ತಾಣಗಳು
ನಂತರ ಹೋಟೆಲ್‌ನಿಂದ ಚೆಕ್ ಔಟ್ ಮಾಡಿ ರೈಲಿನಲ್ಲಿ ಮಧುರೈ ಹೋಗ್ತಾರೆ. ಮಧುರೆಯಲ್ಲಿ ತಿರುಪ್ಪರಂ ಮುರುಗನ್ ದೇವಸ್ಥಾನ, ತಿರುಮಲೈ ನಾಯಕರ್ ಮಹಲ್ ಮತ್ತು ಮೀನಾಕ್ಷಿ ಅಮ್ಮನ ದೇವಸ್ಥಾನ ನೋಡಬಹುದು. ರಾತ್ರಿ 11.50 ಕ್ಕೆ ಮಧುರೆಯಿಂದ ಹೊರಡುವ ರೈಲು ಸೋಮವಾರ ಬೆಳಗ್ಗೆ 9.20ಕ್ಕೆ ಬೆಂಗಳೂರು ತಲುಪುತ್ತೆ.
ಈ ಟೂರ್ ಪ್ಯಾಕೇಜ್‌ನಲ್ಲಿ ಕಂಫರ್ಟ್, ಸ್ಟ್ಯಾಂಡರ್ಡ್ ಅಂತ ಎರಡು ವಿಧಗಳಿವೆ. ಕಂಫರ್ಟ್ ಪ್ಯಾಕೇಜ್‌ನಲ್ಲಿ 3ಎಸಿ ರೈಲಿನಲ್ಲಿ ಪ್ರಯಾಣ. ಸ್ಟ್ಯಾಂಡರ್ಡ್ ಪ್ಯಾಕೇಜ್‌ನಲ್ಲಿ ಸಾಮಾನ್ಯ ಬೋಗಿಯಲ್ಲಿ ಪ್ರಯಾಣ. ಯಾವುದೇ ಪ್ಯಾಕೇಜ್ ಆದ್ರೂ ಕನ್ಯಾಕುಮಾರಿ, ರಾಮೇಶ್ವರಂನಲ್ಲಿ ರಾತ್ರಿ ಉಳ್ಕೊಳ್ಳೋ ವ್ಯವಸ್ಥೆ ಇರುತ್ತೆ.
ತಮಿಳುನಾಡು ಪ್ರವಾಸಿ ತಾಣಗಳು
ಹೋಟೆಲ್‌ನಲ್ಲಿ ಉಳ್ಕೊಂಡಾಗ ಬೆಳಗಿನ ಉಪಾಹಾರ ಉಚಿತ. ಮಧ್ಯಾಹ್ನ, ರಾತ್ರಿ ಊಟ ಪ್ರವಾಸಿಗರೇ ಮಾಡ್ಕೋಬೇಕು. ಸುತ್ತಾಡಲು ವಾಹನ ವ್ಯವಸ್ಥೆ ಇರುತ್ತೆ. ಪ್ರಯಾಣ ವಿಮೆ ಕೂಡ ಇದೆ. ಆದರೆ ಸ್ಮಾರಕಗಳ ಪ್ರವೇಶ ಶುಲ್ಕ, ಫೋಟೋ, ವಿಡಿಯೋ ಶುಲ್ಕ ಪ್ರವಾಸಿಗರದೇ.
ಈ ಟೂರ್ ಪ್ಯಾಕೇಜ್ ₹10,130 ರಿಂದ ಶುರು. ಜನರ ಸಂಖ್ಯೆ, ಪ್ಯಾಕೇಜ್ ಆಧರಿಸಿ ಶುಲ್ಕ ಬದಲಾಗುತ್ತೆ. https://www.irctctourism.com/ ಗೆ ಹೋಗಿ ಬುಕ್ ಮಾಡಬಹುದು. ಹೆಚ್ಚಿನ ಮಾಹಿತಿಗೆ ಬೆಂಗಳೂರು ನಗರ ರೈಲು ನಿಲ್ದಾಣ: 8595931292ಗೆ ಕರೆ ಮಾಡಿ.