www.irctctourism.com ನಲ್ಲಿ ಆನ್‌ಲೈನ್ ಬುಕಿಂಗ್ ಮಾಡಬಹುದು. ಪ್ಯಾಕೇಜ್‌ನಲ್ಲಿ ಇಂಡಿಗೋ ಏರ್‌ಲೈನ್ಸ್‌ನಲ್ಲಿ ವಿಮಾನ ಟಿಕೆಟ್ (ಬೆಂಗಳೂರು-ಪೋರ್ಟ್ ಬ್ಲೇರ್-ಬೆಂಗಳೂರು), 5 ರಾತ್ರಿ ಹೋಟೆಲ್‌ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ (ಪೋರ್ಟ್ ಬ್ಲೇರ್‌ನಲ್ಲಿ 3 ರಾತ್ರಿ, ಹ್ಯಾವ್ಲಾಕ್‌ನಲ್ಲಿ 1 ರಾತ್ರಿ ಮತ್ತು ನೀಲ್‌ನಲ್ಲಿ 1 ರಾತ್ರಿ), ಪ್ರವಾಸಿ ತಾಣಗಳಿಗೆ ಭೇಟಿ, ನೀಲ್ ದ್ವೀಪ, ಹ್ಯಾವ್ಲಾಕ್ ದ್ವೀಪಕ್ಕೆ ಹೋಗಿ ಬರಲು ದೋಣಿ ಚಾರ್ಜ್, ಪ್ರವಾಸಿ ತಾಣಗಳಿಗೆ ಎಂಟ್ರಿ ಟಿಕೆಟ್, ಐಆರ್‌ಸಿಟಿಸಿ ಟೂರ್ ಎಸ್ಕಾರ್ಟ್ ಸೇವೆಗಳು, ಪ್ರಯಾಣ ವಿಮೆ, ಡ್ರೈವರ್ ಭತ್ಯೆ, ಟೋಲ್, ಪಾರ್ಕಿಂಗ್ ಮತ್ತು ಎಲ್ಲಾ ತೆರಿಗೆಗಳು ಸೇರಿವೆ.