Indian Railways: ಭಾರತೀಯ ರೈಲ್ವೆಯಲ್ಲಿ ರಾತ್ರಿ ಪ್ರಯಾಣಿಸುವಾಗ ಪ್ರಯಾಣಿಕರು ಕೆಲವು ನಿರ್ದಿಷ್ಟ ನಿಯಮಗಳನ್ನು ಪಾಲಿಸಬೇಕು. ಆರಾಮದಾಯಕ ಪ್ರಯಾಣಕ್ಕಾಗಿ ಅಗತ್ಯ ವಸ್ತುಗಳನ್ನು ಇಟ್ಟುಕೊಳ್ಳುವುದು ಉತ್ತಮ.
ಭಾರತದಲ್ಲಿ ಜನರು ಪ್ರಯಾಣಕ್ಕಾಗಿ ಹೆಚ್ಚಾಗಿ ರೈಲುಗಳನ್ನು ಅವಲಂಬಿಸಿದ್ದಾರೆ. ಇತರ ಸಾರಿಗೆ ವ್ಯವಸ್ಥೆಗಳಿಗೆ ಹೋಲಿಸಿದರೆ ರೈಲು ಪ್ರಯಾಣವು ಆರಾಮದಾಯಕವಾಗಿದೆ. ಹಾಗಾಗಿ ದೇಶದ ಎಲ್ಲಾ ಮಾರ್ಗಗಳಲ್ಲಿ ಸಂಚರಿಸುವ ರೈಲುಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುತ್ತವೆ.
26
ಪಾಲಿಸಬೇಕಾದ ನಿಯಮಗಳು
ದೇಶಾದ್ಯಂತ ಪ್ರತಿದಿನ ಅಸಂಖ್ಯಾತ ಜನರು ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ರಾತ್ರಿ ರೈಲಿನಲ್ಲಿ ಪ್ರಯಾಣಿಸುವವರು ಪಾಲಿಸಬೇಕಾದ ಕೆಲವು ವಿಷಯಗಳಿವೆ. ಈ ನಿಯಮಗಳನ್ನು ಪ್ರಯಾಣಿಕರು ತಿಳಿದುಕೊಂಡಿರಬೇಕಾಗುತ್ತದೆ.
36
ಸೈಲೆನ್ಸ್ ಪ್ಲೀಸ್
ರಾತ್ರಿಯಲ್ಲಿ, ವಿಶೇಷವಾಗಿ 10 ಗಂಟೆಯ ನಂತರ, ರೈಲಿನಲ್ಲಿ ಗಟ್ಟಿಯಾಗಿ ಮಾತನಾಡಬೇಡಿ ಅಥವಾ ಫೋನ್‌ನಲ್ಲಿ ಜೋರಾಗಿ ಹಾಡುಗಳನ್ನು ಹಾಕಬೇಡಿ. ಮೌನವನ್ನು ಕಾಪಾಡಲು ಗಮನಹರಿಸಿ. ರಾತ್ರಿ ಶಬ್ಧ ಮಾಡೋದರಿಂದ ಸಹ ಪ್ರಯಾಣಿಕರಿಗೆ ತೊಂದರೆಯುಂಟಾಗುತ್ತದೆ. ಒಂದು ವೇಳೆ ಪ್ರಯಾಣಿಕರು ದೂರು ನೀಡಿದ್ರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
ರಾತ್ರಿ ಪ್ರಯಾಣದ ವೇಳೆ ಪ್ರಯಾಣಿಕರು ಕೆಲವೊಂದು ವಸ್ತುಗಳನ್ನು ಇರಿಸಿಕೊಳ್ಳಲು ಸಲಹೆ ನೀಡಲಾಗುತ್ತದೆ. ಇದು ನಿಮ್ಮ ಆರಾಮದಾಯಕ ಪ್ರಯಾಣಕ್ಕೆ ಸಹಾಯ ಮಾಡುತ್ತವೆ. ಕೆಲವೊಮ್ಮೆ ದೀರ್ಘ ಪ್ರಯಾಣದ ರೈಲುಗಳು ನಿಲುಗಡೆ ನಿಲ್ದಾಣಗಳ ಅಂತರ ಹೆಚ್ಚಾಗಿರುತ್ತದೆ. ಹಾಗಾಗಿ ಮುಂಜಾಗ್ರತ ಕ್ರಮವಾಗಿ ನೀರು, ಆಹಾರ ಇರಿಸಿಕೊಳ್ಳಬೇಕು. ಹಾಗೆಯೇ ಮೊಬೈಲ್ ಚಾರ್ಜ್ ಮಾಡಿಕೊಳ್ಳಿ, ಹೆಚ್ಚುವರಿ ಬಟ್ಟೆ, ಹೊದಿಕೆಯನ್ನು ಸಹ ಇರಿಸಿಕೊಳ್ಳಬೇಕು.