ಯೂಟ್ಯೂಬ್‌ನಿಂದ ದೂರ ಉಳಿದಿದ್ದ ಕನ್ನಡಿಗರ ಕಣ್ಮಣಿ ಡಾ.ಬ್ರೋ, ಇದೀಗ ಮಾರಿಟೇನಿಯಾ ದೇಶದಿಂದ ಹೊಸ ವಿಡಿಯೋದೊಂದಿಗೆ ಮರಳಿದ್ದಾರೆ. ವಿಶ್ವದ ಅತಿ ಉದ್ದದ ಮತ್ತು ಅಪಾಯಕಾರಿ ಗೂಡ್ಸ್ ರೈಲಿನಲ್ಲಿ ಪ್ರಯಾಣಿಸಿ, ತಮ್ಮ ಜೀವವನ್ನೇ ಪಣಕ್ಕಿಟ್ಟು ಮಾಡಿದ ಈ ಸಾಹಸಮಯ ವಿಡಿಯೋ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
ಡಾ.ಬ್ರೋ ಎಂದರೆ ಯಾರಿಂದಲೂ ಸಾಧ್ಯವಾಗದ, ಅಸಾಧ್ಯ ಎನ್ನಿಸುವ ಜಾಗಗಳಿಗೆ ಹೋಗಿ ಅಲ್ಲಿಯ ವಿಡಿಯೋ ಮಾಡುತ್ತಾರೆ. ಯಾವ ದೇಶಕ್ಕೆ ಹೋದರೂ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಕಣ್ಮಣಿಯಾಗಿದ್ದಾರೆ ಗಗನ್.
27
ಕನ್ನಡಿಗರ ಕಣ್ಮಣಿ
ಡಾ.ಬ್ರೋ ತಮ್ಮದೇ ಆಗಿರುವ ಸ್ವಂತ ಪ್ರವಾಸಿ ಉದ್ಯಮವನ್ನು ಶುರು ಮಾಡಿ ಯುಟ್ಯೂಬ್ನಿಂದ ಸ್ವಲ್ಪ ದೂರವೇ ಉಳಿದಿದ್ದರು. ಯಾವ ದೇಶಕ್ಕೆ ಹೋದರೂ ಕನ್ನಡದಲ್ಲಿಯೇ ಮಾತನಾಡಿದ ಕನ್ನಡಿಗರ ಮನೆಮಗನಾಗಿ ಎಲ್ಲರ ಮೆಚ್ಚುಗೆ ಗಳಿಸಿದವರು ಡಾ.ಬ್ರೋ ಅರ್ಥಾತ್ ಗಗನ್.
37
ನಾಪತ್ತೆಯಾಗಿದ್ದ ಗಗನ್
ಆದರೆ, ಸ್ವಂತ ಉದ್ಯಮ ಶುರು ಮಾಡಿದ ಮೇಲೆ ಸ್ವಲ್ಪ ತಿಂಗಳು ನಾಪತ್ತೆಯಾಗಿದ್ದರು. ಕೊನೆಗೆ ಹಳೆಯ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದರು. ಒಂದಷ್ಟು ದಿನ ಜನರು ಡಾ.ಬ್ರೋ ವಿಡಿಯೋಗಾಗಿ ತಡಕಾಡಿ ಕೊನೆಗೆ ಸುಮ್ಮನಾಗಿಬಿಟ್ಟಿದ್ದರು.
ಇದಾಗಲೇ ಮಾರಿಟೇನಿಯಾ ದೇಶದ ಬಗ್ಗೆ ಕೆಲವು ಕುತೂಹಲದ ವಿಷಯಗಳನ್ನು ಡಾ.ಬ್ರೋ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಒಂದು ಅತ್ಯಂತ ಭಯಾನಕ ಎನ್ನುವ ರೈಲೊಂದರಲ್ಲಿ ಅವರು ಪ್ರಯಾಣ ಬೆಳೆಸಿರುವುದು.
57
ಶಿವನ ಪಾದ
ಇದು ಅದಿರನ್ನು ತುಂಬಿಕೊಂಡು ಹೋಗುವ ವಿಶ್ವದ ಅತಿ ಉದ್ದದ ಗೂಡ್ಸ್ ರೈಲು. ಇಲ್ಲಿ ಕುಳಿತು ವಿಡಿಯೋ ಮಾಡಲು ಹೋದ ಹಲವರು ಶಿವನ ಪಾದ ಸೇರಿದ್ದಾರೆ ಎನ್ನುತ್ತಲೇ ಅಲ್ಲಿಂದ ವಿಡಿಯೋ ಮಾಡುವ ಸಾಹಸ ಮಾಡಿದ್ದಾರೆ ಗಗನ್.
67
ವಿಶ್ವದ ಅತಿ ಉದ್ದದ ರೈಲು
ಅಂದಹಾಗೆ ಇದು ಮಾರಿಟೇನಿಯಾದಲ್ಲಿನ ವಿಶ್ವದ ಅತಿ ಉದ್ದದ ಗೂಡ್ಸ್ ರೈಲು (Train du Désert), ಕಲ್ಲಿದ್ದಲು ಸಾಗಿಸುವ ರೈಲು. ಅದು ಸುಮಾರು 2.5 ಕಿ.ಮೀ ಉದ್ದವಿದೆ. ಸುಮಾರು 200 ವ್ಯಾಪನ್ ಗಳು ಇವೆ, ಮತ್ತು ಇದನ್ನು ಗಿನ್ನಿಸ್ ವಿಶ್ವ ದಾಖಲೆಗಳು ಗುರುತಿಸಿವೆ.
77
ಅದಿರಿನ ಬಣ್ಣ
ಇಂಥ ಭಯಾನಕ ಜಾಗದಲ್ಲಿ ಕುಳಿತಿದ್ದರೂ ತಮ್ಮದೇ ಹಾಸ್ಯದ ಲೇಪನದಿಂದ ಆ ರೈಲಿನ ಬಗ್ಗೆ ವಿವರಿಸಿದ್ದಾರೆ. ಅದಿರಿನಿಂದ ತುಂಬಿದ ರೈಲಿನಲ್ಲಿ ಕುಳಿತುಕೊಂಡು ಡಾ.ಬ್ರೋ ಬಣ್ಣ ಅದಿರಿನದ್ದೇ ಆಗಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.