ದಕ್ಷಿಣ ಕರ್ನಾಟಕದ ಐದು ಜಿಲ್ಲೆಗಳ ಶ್ರೀವಾರಿ ಭಕ್ತರಿಗಾಗಿ ಚಾಮರಾಜನಗರದಿಂದ ತಿರುಪತಿಗೆ ನೇರ ರೈಲು ಸೇವೆ ಲಭ್ಯವಿದೆ. ಈ ರೈಲು ಪ್ರತಿದಿನ ಸಂಚರಿಸಲಿದ್ದು, ಸುಮಾರು 12 ಗಂಟೆಗಳಲ್ಲಿ ತಿರುಪತಿ ತಲುಪುತ್ತದೆ ಮತ್ತು ರಾಜ್ಯದ 20 ಪ್ರಮುಖ ನಿಲ್ದಾಣಗಳಲ್ಲಿ ನಿಲ್ಲುತ್ತದೆ.
ದಕ್ಷಿಣ ಕರ್ನಾಟಕದ ಐದು ಜಿಲ್ಲೆಗಳಿಂದ ಶ್ರೀವಾರಿಯ ದರ್ಶನಕ್ಕೆ ಹೋಗಲು ಬಯಸುವ ಭಕ್ತರಿಗೆ ಒಂದು ವಿಶೇಷ ರೈಲು ಪ್ರತಿದಿನ ಸಂಚರಿಸುತ್ತದೆ. ದಕ್ಷಿಣ ಕರ್ನಾಟಕದ ಪ್ರಮುಖ ಐದು ಜಿಲ್ಲೆಗಳನ್ನು ಈ ರೈಲು ಸಂಪರ್ಕಿಸುತ್ತೆ ಮತ್ತು ರಾಜ್ಯ ಪ್ರಮುಖ 20 ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿದೆ.
25
12 ಗಂಟೆಯಲ್ಲಿ ತಿರುಪತಿ ನಿಲ್ದಾಣ
ಚಾಮರಾಜನಗರದಿಂದ ಪ್ರಯಾಣ ಆರಂಭಿಸುವ ಈ ರೈಲು ಸುಮಾರು 12 ಗಂಟೆಯಲ್ಲಿ ತಿರುಪತಿ ನಿಲ್ದಾಣ ತಲುಪಲಿದೆ. ಈ ನಡುವೆ ರಾಜ್ಯದ ಹಲವು ಜಿಲ್ಲೆಗಳನ್ನು ಈ ರೈಲು ಸಂಪರ್ಕಿಸುತ್ತದೆ. ವಾರದ ಎಲ್ಲಾ ದಿನಗಳಂದು ಈ ರೈಲು ಸಂಚರಿಸುತ್ತದೆ. ಈ ರೈಲಿನ ಕುರಿತ ಹೆಚ್ಚಿನ ಮಾಹಿತಿಯನ್ನು ನೋಡೋಣ ಬನ್ನಿ.
35
ಚಾಮರಾಜನಗರ To ತಿರುಪತಿ ಎಕ್ಸ್‌ಪ್ರೆಸ್ (Chamarajanagar - Tirupati Express/16219)
ಚಾಮರಾಜನಗರದಿಂದ ಮಧ್ಯಾಹ್ನ 3.50ಕ್ಕೆ ಪ್ರಯಾಣ ಆರಂಭಿಸಿ, ಮರದಿನ ಬೆಳಗಿನ ಜಾವ 4 ಗಂಟೆ 5 ನಿಮಿಷಕ್ಕೆ ತಲುಪಲಿದೆ. ಈ ರೈಲು ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲುಗಡೆಯನ್ನು ಹೊಂದಿದೆ. 5 ಜಿಲ್ಲೆಯ ಬಾಲಾಜಿಯ ಭಕ್ತರು ನೇರವಾಗಿ ಈ ರೈಲಿನ ಮೂಲಕ ತಿರುಪತಿಗೆ ತೆರಳಬಹುದಾಗಿದೆ. ರಾತ್ರಿ 8 ಗಂಟೆ 10 ನಿಮಿಷಕ್ಕೆ KSR ಬೆಂಗಳೂರಿನಲ್ಲಿರಲಿದೆ.
ತಿರುಪತಿ To ಚಾಮರಾಜನಗರ ಎಕ್ಸ್‌ಪ್ರೆಸ್ (Tirupati - Chamarajanagar Express/16220)
ಪ್ರತಿದಿನ ತಿರುಪತಿ ನಿಲ್ದಾಣದಿಂದ ರಾತ್ರಿ 9.40ಕ್ಕೆ ತನ್ನ ಪ್ರಯಾಣ ಆರಂಭಿಸುತ್ತದೆ. ಮರುದಿನ ಬೆಳಗ್ಗೆ 9.20ಕ್ಕೆ ಅಂತಿಮ ನಿಲ್ದಾಣವನ್ನು ಚಾಮರಾಜನಗರವನ್ನು ತಲುಪುತ್ತದೆ. KSR ಬೆಂಗಳೂರಿನಲ್ಲಿ ಬೆಳಗಿನ ಜಾವ 4.25ಕ್ಕೆ ಇರಲಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.