ಬೆಂಗಳೂರಿನಿಂದ ಹೊರಡುವ ಈ ರೈಲು 1900 ಕಿ.ಮೀ ದೂರವನ್ನು ಕೇವಲ 29-30 ಗಂಟೆಗಳಲ್ಲಿ ಕ್ರಮಿಸುತ್ತದೆ, ಈ ಮಧ್ಯೆ ಕೇವಲ ಆರು ನಿಲ್ದಾಣಗಳಲ್ಲಿ ಮಾತ್ರ ನಿಲ್ಲುತ್ತದೆ. ಈ ಲೇಖನವು ರೈಲಿನ ವೇಳಾಪಟ್ಟಿ ಮತ್ತು ನಿಲುಗಡೆಗಳ ಬಗ್ಗೆ ಮಾಹಿತಿ ನೀಡುತ್ತದೆ.
ಭಾರತದಲ್ಲಿ ಪ್ರತಿನಿತ್ಯ ಸಾವಿರಾರು ರೈಲುಗಳು ಓಡಾಡುತ್ತವೆ. ಹಾಗೆಯೇ ಕೋಟ್ಯಂತರ ಜನರು ರೈಲು ಮಾರ್ಗವನ್ನೇ ತಮ್ಮ ಪ್ರಯಾಣಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. ಇಂದು ನಾವು ನಿಮಗೆ ಬೆಂಗಳೂರಿನಿಂದ ಹೊರಡುವ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಮಾಹಿತಿಯನ್ನು ನೀಡುತ್ತಿದ್ದೇವೆ. ಯಾವುದು ಈ ರೈಲು ಎಂದು ನೋಡೋಣ ಬನ್ನಿ.
24
ಬೆಂಗಳೂರಿನ SMVT ನಿಲ್ದಾಣ
ಬೆಂಗಳೂರಿನ SMVT ನಿಲ್ದಾಣದಿಂದ ಪ್ರಯಾಣ ಆರಂಭಿಸಿ ಬರೋಬ್ಬರಿ 1900 ಕಿ.ಮೀ ಪ್ರಯಾಣವನ್ನು ಕೇವಲ 29 ರಿಂದ 30 ಗಂಟೆಯಲ್ಲಿ ಅಂತ್ಯಗೊಳಿಸುತ್ತದೆ. ಈ ದೀರ್ಘ ಪ್ರಯಾಣದಲ್ಲಿ ಸೂಪರ್ ಫಾಸ್ಟ್ ರೈಲು ಕೇವಲ ಆರು ನಿಲ್ದಾಣಗಳಲ್ಲಿ ಮಾತ್ರ ನಿಲುಗಡೆಯನ್ನು ಹೊಂದಿರುತ್ತದೆ. ಈ ರೈಲು ಬೆಂಗಳೂರಿನಿಂದ ಯಾವ ನಗರಕ್ಕೆ ಹೋಗುತ್ತೆ ಎಂಬುದನ್ನು ನೋಡೋಣ ಬನ್ನಿ.
34
ರೈಲು ಸಂಖ್ಯೆ 12246 (ದುರಂತೋ ಎಕ್ಸ್‌ಪ್ರೆಸ್) (SMVT Bengaluru To Howra Junction)
ದುರಂತೋ ಎಕ್ಸ್‌ಪ್ರೆಸ್ ಬೆಂಗಳೂರಿನಿಂದ ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ ಮತ್ತು ಭಾನುವಾರ ಮಾತ್ರ ಸಂಚರಿಸುತ್ತದೆ. ಬೆಳಗ್ಗೆ 11.15ಕ್ಕೆ SMVT ನಿಲ್ದಾಣದಿಂದ ಪ್ರಯಾಣ ಆರಂಭಿಸಿ, ಮರುದಿನ ಸಂಜೆ 5.5 ನಿಮಿಷಕ್ಕೆ ಹೌರಾ ನಿಲ್ದಾಣವನ್ನು ತಲಪುತ್ತದೆ. ಈ ನಡುವೆ ರಾಯಗುಂಟ ಜಂಕ್ಷನ್, ವಿಜಯವಾಡ ಜಂಕ್ಷನ್, ವಿಶಾಖಪಟ್ಟಣಂ, ಭುವನೇಶ್ವರ ನಿಲ್ದಾಣಗಳಲ್ಲಿ ನಿಲುಗಡೆಯಾಗುತ್ತದೆ.
ರೈಲು ಸಂಖ್ಯೆ 12245 (ದುರಂತೋ ಎಕ್ಸ್‌ಪ್ರೆಸ್) (Howra Junction To SMVT Bengaluru)
ಇದೇ ರೈಲು ಹೌರಾ ಜಂಕ್ಷನ್ ನಿಲ್ದಾಣದಿಂದ ಮಂಗಳವಾರ, ಬುಧವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ದಿನಗಳಂದು ಪ್ರಯಾಣ ಆರಂಭಿಸುತ್ತದೆ. ಬೆಳಗ್ಗೆ 10.40ಕ್ಕೆ ತನ್ನ ಪ್ರಯಾಣ ಆರಂಭಿಸಿ ಮರುದಿನ ಮಧ್ಯಾಹ್ನ 3.45ಕ್ಕೆ ಎಸ್‌ಎಂವಿಟಿ ನಿಲ್ದಾಣ ತಲುಪುವ ಮೂಲಕ ಜರ್ನಿಯನ್ನು ಮುಕ್ತಾಯಗೊಳಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.