Sun Set ಆನಂದಿಸಲು ಈ ಸ್ಥಳಗಳಿಗೆ ಹೋಗ್ಲೇಬೇಕು…!

First Published Jun 6, 2023, 2:30 PM IST

ಅದು ಅಮೆರಿಕವಾಗಿರಲಿ ಅಥವಾ ಭಾರತವಾಗಿರಲಿ ಸೂರ್ಯಾಸ್ತದ ಸ್ಥಳಗಳು ಹೆಚ್ಚಾಗಿ ಪ್ರಯಾಣದ ತಾಣಗಳಲ್ಲಿ ಅತ್ಯಂತ ಪ್ರಸಿದ್ಧ. ನೀವು ಸೂರ್ಯಾಸ್ತವನ್ನು ಎಂಜಾಯ್ ಮಾಡಲು ಬಯಸುತ್ತೀರಿ ಅನ್ನೋದಾದ್ರೆ ಖಂಡಿತವಾಗಿ ಈ ಸುಂದರವಾದ ಸ್ಥಳಗಳಿಗೆ ಭೇಟಿ ನೀಡಿ. 

ಭಾರತವು ಅನೇಕ ಸುಂದರ ಪ್ರಾಕೃತಿಕ ದೃಶ್ಯಗಳನ್ನು ಅನುಭವಿಸಬಹುದಾದ ದೇಶ. ಅದು ಎತ್ತರದ ಪರ್ವತಗಳು, ಸಮುದ್ರಗಳು, ನದಿಗಳು ಅಥವಾ ಸೂರ್ಯಾಸ್ತ ಆಗಿರಬಹುದು. ಇಲ್ಲಿ ಎಲ್ಲವೂ ಅದ್ಭುತ ಸೊಬಗನ್ನು ನೀಡುತ್ತೆ. ಭಾರತದಲ್ಲಿ ನೀವು ಸೂರ್ಯಾಸ್ತಮಾನದ (sunset) ಸೊಬಗನ್ನು ಎಲ್ಲಿಂದಲಾದರೂ ನೋಡಬಹುದು. ಆದಾಗ್ಯೂ, ಈ ದೃಶ್ಯ ನೋಡುವ ಅದ್ಭುತ ಅನುಭವ ಪಡೆಯಬೇಕು ಅನ್ನೋದಾದ್ರೆ ನೀವು ಈ ಸ್ಥಳಗಳಿಗೆ ಭೇಟಿ ನೀಡಬಹುದು.

ಅಲೆಪ್ಪಿ ಬ್ಯಾಕ್ ವಾಟರ್, ಕೇರಳ (Alleppey Kerala)
ಅಲೆಪ್ಪಿಯ ಸುಂದರವಾದ ಹಿನ್ನೀರು ಸ್ವತಃ ಹೃದಯಸ್ಪರ್ಶಿ ಅನುಭವ ನೀಡುತ್ತೆ, ಇಂತಹ ಸ್ಥಳದಲ್ಲಿ ನೀವು ಸೂರ್ಯಾಸ್ತದ ನೋಟವನ್ನು ಪಡೆದರೆ, ನಿಮ್ಮ ಪ್ರಯಾಣವು ಯಶಸ್ವಿಯಾಗುತ್ತದೆ. ನೀವು ಹೌಸ್ ಬೋಟ್ ಅನ್ನು ಆನಂದಿಸಬಹುದು ಅಥವಾ ಹಿನ್ನೀರಿನಲ್ಲಿ ಎಲ್ಲೋ ಒಂದು ಸ್ಥಳವನ್ನು ಕಂಡುಕೊಂಡು ಅಲ್ಲಿ ಸನ್ ಸೆಟ್ ಎಂಜಾಯ್ ಮಾಡಬಹುದು. 

ವಾರಣಾಸಿ, ಉತ್ತರ ಪ್ರದೇಶ (Varanasi, Uttarpradesh)
ವಾರಣಾಸಿ ಪವಿತ್ರ ಗಂಗಾ ನದಿಯ ದಡದಲ್ಲಿರುವ ನಗರವಾಗಿದ್ದು, ಸೂರ್ಯಾಸ್ತದ ಸಮಯದಲ್ಲಿ ನೀವು ವಿಶಿಷ್ಟ ಆಧ್ಯಾತ್ಮಿಕ ಅನುಭವವನ್ನು ಪಡೆಯಬಹುದು. ಘಾಟ್ ಗೆ ಅಂದರೆ ನದಿಗೆ ಹೋಗುವ ಮೆಟ್ಟಿಲುಗಳಲ್ಲಿ ವಿವಿಧ ಆಚರಣೆಗಳು, ಪ್ರಾರ್ಥನೆಗಳು ನಡೆಯುತ್ತವೆ, ಜೊತೆಗೆ ತೇಲುವ ದೀಪಗಳು, ದೋಣಿಗಳು ಇವೆಲ್ಲವೂ ಪ್ರಶಾಂತ ಮತ್ತು ನಿಗೂಢ ವಾತಾವರಣ ಸೃಷ್ಟಿಸುತ್ತದೆ.

ರನ್ ಆಫ್ ಕಚ್, ಗುಜರಾತ್ (Rann of Kutch, Gujarat)
ರನ್ ಆಫ್ ಕಚ್ ನ ಬಿಳಿ ಉಪ್ಪು ಮರುಭೂಮಿ ಸೂರ್ಯಾಸ್ತವನ್ನು ವೀಕ್ಷಿಸಲು ಅತ್ಯಂತ ಸುಂದರವಾದ ಸ್ಥಳವಾಗಿದೆ. ಸೂರ್ಯ ಮುಳುಗುತ್ತಿದ್ದಂತೆ, ಈ ಮರುಭೂಮಿ ಅನೇಕ ಬಣ್ಣಗಳೊಂದಿಗೆ ಮ್ಯಾಜಿಕಲ್ ಅನುಭವ ನೀಡುತ್ತೆ.

ಜೈಸಲ್ಮೇರ್, ರಾಜಸ್ಥಾನ (Jaisalmer, Rajasthan)
ಭವ್ಯವಾದ ಮರಳು ದಿಬ್ಬಗಳು ಮತ್ತು ಕೋಟೆಗಳನ್ನು ಹೊಂದಿರುವ ಚಿನ್ನದ ನಗರವಾದ ಜೈಸಲ್ಮೇರ್ ಸೂರ್ಯಾಸ್ತದ ಅತ್ಯಂತ ಸುಂದರವಾದ ನೋಟಕ್ಕೆ ಹೆಸರುವಾಸಿಯಾಗಿದೆ. ನಿಮ್ಮ ಜೀವನದುದ್ದಕ್ಕೂ ಜೈಸಲ್ಮೇರ್ ನಲ್ಲಿ ಸೂರ್ಯಾಸ್ತಮಾನವನ್ನು ನೋಡಿದ್ದನ್ನು ನೀವು ನೆನಪಿಸಿಕೊಳ್ಳುತ್ತೀರಿ.
 

ಮೌಂಟ್ ಅಬು, ರಾಜಸ್ಥಾನ (Mount Abu, Rajastan)
ಅರಾವಳಿ ಶ್ರೇಣಿಯ ಮಧ್ಯದಲ್ಲಿರುವ ಮೌಂಟ್ ಅಬು ರಾಜಸ್ಥಾನ ರಾಜ್ಯದ ಏಕೈಕ ಗಿರಿಧಾಮವಾಗಿದೆ. ನೀವು ಸೂರ್ಯಾಸ್ತವನ್ನು ನೋಡಲು ಬಯಸಿದರೆ, ನೀವು ಖಂಡಿತವಾಗಿಯೂ ಈ ಸ್ಥಳಕ್ಕೆ ಹೋಗಬೇಕು. ಈ ಸ್ಥಳದ ನೈಸರ್ಗಿಕ ಸೌಂದರ್ಯ ಮತ್ತು ಪರ್ವತದ ಮೇಲ್ಭಾಗದ ನೋಟಗಳು ಸೂರ್ಯಾಸ್ತವನ್ನು ನೋಡಲು ಉತ್ತಮ ಸ್ಥಳ.

ಗೋವಾ (Goa)
ಗೋವಾ ತನ್ನ ಕಡಲತೀರಗಳು, ಬೀಚ್ ಕೆಫೆಗಳು ಮತ್ತು ಪಾರ್ಟಿ ಸ್ಥಳಗಳಿಗೆ ಹೆಸರುವಾಸಿ. ನೀವು ಗೋವಾಕ್ಕೆ ಹೋದರೆ, ಬೀಚ್ ಅಥವಾ ಕೋಟೆಯಿಂದ ಸುಂದರ ಸೂರ್ಯಾಸ್ತವನ್ನು ನೋಡಬಹುದು. ಸೂರ್ಯ ಸಮುದ್ರದಲ್ಲಿ ಮುಳುಗುತ್ತಿರುವ ದೃಶ್ಯ ನೋಡಲು ಕಣ್ಣುಗಳು ಸಾಲೋದಿಲ್ಲ.. 

ಕನ್ಯಾಕುಮಾರಿ, ತಮಿಳುನಾಡು (Kanyakumari, Tamilnadu)
ಭಾರತದ ದಕ್ಷಿಣದ ತುದಿಯಲ್ಲಿರುವ ಕನ್ಯಾಕುಮಾರಿ ಅದ್ಭುತ ಸೂರ್ಯಾಸ್ತದ ನೋಟಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ, ನೀವು ಅರೇಬಿಯನ್ ಸಮುದ್ರ, ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರದ ಸಂಗಮದ ವಿಶಿಷ್ಟ ನೋಟವನ್ನು ಪಡೆಯುತ್ತೀರಿ. ಇಲ್ಲಿ ಸೂರ್ಯಾಸ್ತ ಮತ್ತು ಸೂರ್ಯೋದಯ ನೋಡುವುದೇ ಕಣ್ಣಿಗೆ ಹಬ್ಬ. 

click me!